ಬೆಳಗಾವಿ(ನವೆಂಬರ್. 06): ಧಾರವಾಡ ಜಿಲ್ಲಾ ಪಂಚಾಯತ್ ಸದಸ್ಯ ಯೋಗೇಶ್ ಗೌಡ ಕೊಲೆ ಪ್ರಕರಣ ಸಂಬಂಧಿಸಂತೆ ಮಾಜಿ ಸಚಿವ ವಿನಯ್ ಕುಲಕರ್ಣಿ ಅವರನ್ನು ಬಂಧಿಸಲಾಗಿದೆ. ಬಂಧಿತ ವಿನಯ್ ಕುಲಕರ್ಣಿ ಬೆಳಗಾವಿ ಹಿಂಡಲಗಾ ಜೈಲಿಗೆ ರವಾನೆ ಮಾಡಲಾಗಿದೆ. ಜೈಲಿನಲ್ಲಿ ಕುಲಕರ್ಣಿ ಸಾಮಾನ್ಯ ಆರೋಪಿಯಂತೆ ಇದ್ದು, ತಮ್ಮ 55ನೇ ಹುಟ್ಟು ಹಬ್ಬವನ್ನು ಕುಲಕರ್ಣಿ ಜೈಲಿನಲ್ಲಿ ಕಳೆಯುವ ಸ್ಥಿತಿ ನಿರ್ಮಾಣವಾಗಿದೆ. ಇಡೀ ರಾಜ್ಯದಲ್ಲಿಯೇ ಬಿಜೆಪಿ ಜಿಲ್ಲಾ ಪಂಚಾಯತ್ ಸದಸ್ಯ ಯೋಗೇಶ ಗೌಡ ಕೊಲೆ ಪ್ರಕರಣ ಸದ್ದು ಮಾಡಿತ್ತು. ಜಿಮ್ ನಲ್ಲಿ ಬೆಳ್ಳಂ ಬೆಳಗ್ಗೆ ನಡೆದ ಭೀಕರ ಹತ್ಯೆ ಪ್ರಕರಣ ಧಾರವಾಡ ನಗರವನ್ನು ಬೆಚ್ಚಿ ಬಳಿಸಿತ್ತು. ಇದೀಗ ಪ್ರಕರಣದ ವಿಚಾರಣೆಯಲ್ಲಿ ಸಿಬಿಐ ಅಧಿಕಾರಿಗಳ ನಡೆಸುತ್ತಿದ್ದು, ನಿನ್ನೆ ಬೆಳಗ್ಗೆ ಮಾಜಿ ಸಚಿವ, ಕಾಂಗ್ರೆಸ್ ಮುಖಂಡ ವಿನಯ್ ಕುಲರ್ಣಿಯನ್ನು ಬಂಧಿಸಲಾಗಿತ್ತು. ಬಂಧಿತ ಕುಲಕರ್ಣಿ ಬೆಳಗಾವಿ ಹಿಂಡಲಗಾ ಜೈಲಿನಲ್ಲಿ ಇದ್ದಾರೆ.
ಧಾರವಾಡ ನ್ಯಾಯಾಲಯ ಇಂದು ವಿನಯ್ ಕುಲಕರ್ಣಿ ವಿಚಾರಣೆಗಾಗಿ 3 ಮೂರು ದಿನ ಸಿಬಿಐ ವಶಕ್ಕೆ ನೀಡುವ ಆದೇಶ ನೀಡಿತ್ತು. ಆದರೆ, ಸಮಯದ ಅಭಾವದಿಂದ ಸಿಬಿಐ ಅಧಿಕಾರಿಗಳು ಬೆಳಗಾವಿಗೆ ಬರಲಿಲ್ಲ. ಸಂಜೆ 6.30ರ ಒಳಗೆ ಬಂದು ದಾಖಲೆ ನೀಡಿದ್ರೆ, ಜೈಲಿನಿಂದ ವಿನಯ್ ಕುಲಕರ್ಣಿಯನ್ನು ಸಿಬಿಐಗೆ ಹಸ್ತಾಂತರ ನಡೆಸಬಹುದು ಇತ್ತು. ಆದರೆ, ಇದ್ಯಾವುದು ಆಗಲೇ ಇಲ್ಲ. ಇದೀಗ ಈ ಪ್ರಕ್ರಿಯೆ ನಾಳೆ ಬೆಳಗ್ಗೆ ನಡೆಯಲಿದ್ದು, ಕುಲಕರ್ಣಿ ವಿಚಾರಣೆ ಧಾರವಾಡಲ್ಲಿ ನಡೆಯುವ ಸಾಧ್ಯತೆ ಇದೆ.
ಇದನ್ನೂ ಓದಿ : Vinay Kulkarni: ಮಾಜಿ ಸಚಿವ ವಿನಯ್ ಕುಲಕರ್ಣಿ ಮೂರು ದಿನ ಸಿಬಿಐ ಕಸ್ಟಡಿಗೆ
ನಿನ್ನೆ ಸಂಜೆ ಹಿಂಡಲಗಾ ಜೈಲಿ ಸೇರಿ ವಿನಯ್ ಕುಲಕರ್ಣಿಯನ್ನು ವಿಚಾರಣಾಧಿನ ಆರೋಪಿಗಳ ಇರುವ ಸಾಮಾನ್ಯ ಸೆಲ್ ನಲ್ಲಿ ಇರಿಸಲಾಗಿದೆ. ಜತೆಗೆ ಬೆಳಗ್ಗೆ 7.30 ಉಪ್ಪಿಟ್ಟು ಹಾಗೂ ಚಹಾವನ್ನು ಜೈಲಿನ ಅಧಿಕಾರಿಗಳು ನೀಡಿದ್ದಾರೆ. ಆದರೆ, ಸೊಳ್ಳೆಗಳ ಕಾಟದಿಂದ ಇಡೀ ರಾತ್ರಿ ಕುಲಕರ್ಣಿ ನಿದೆ ಮಾಡಿಲ್ಲ, ಬೆಳಗ್ಗೆ 4ಕ್ಕೆ ಎದ್ದು ಕುಳಿತುಕೊಂಡಿದ್ದಾರೆ. ಮಧ್ಯಾಹ್ನದ ಊಟವನ್ನು ಸಹ ಸಾಮಾನ್ಯ ಆರೋಪಿಗಳ ನೀಡುವ ಆಹಾರವನ್ನೇ ನೀಡಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ