ಬಿಜೆಪಿ ಸೇರ್ಪಡೆ ಕೇವಲ ಊಹಾಪೋಹ - ನನ್ನ ಜನರನ್ನ ಕೇಳಿಯೇ ನಿರ್ಧಾರ ತೆಗೆದುಕೊಳ್ತೇನೆ ; ವಿನಯ್ ಕುಲಕರ್ಣಿ

ವಿಧಾನ  ಪರಿಷತ್​ ಸದಸ್ಯ ಸಿ.ಪಿ.ಯೋಗೇಶ್ವರ್​ ಅವರು ಕುದುರೆ ಖರೀದಿಗೆ ಬಂದಿದ್ದರು. ನನ್ನಿಂದ ಆರು ಕುದುರೆ ಖರೀದಿಸಿದ್ದಾರೆ. ನಾನು ಯಾರ ಜೊತೆಯೂ ಹೋಗಿ ಮಾತನಾಡಿಲ್ಲ ಎಂದು ಸ್ಪಷ್ಟ ಪಡಿಸಿದರು

ಮಾಜಿ ಸಚಿವ ವಿನಯ್ ಕುಲಕರ್ಣಿ

ಮಾಜಿ ಸಚಿವ ವಿನಯ್ ಕುಲಕರ್ಣಿ

  • Share this:
ಧಾರವಾಡ(ಅಕ್ಟೋಬರ್​. 08): ನಾನು ಬಿಜೆಪಿಯ ಯಾವುದೇ ನಾಯಕರನ್ನು ಭೇಟಿಯಾಗಿಲ್ಲ. ಯಾವುದೇ ಪ್ರಸ್ತಾಪವೂ ನನಗೆ ಬಂದಿಲ್ಲ. ಬಿಜೆಪಿ ಸೇರ್ಪಡೆ ಮಾಧ್ಯಮಗಳ ಊಹಾಪೋಹ ಎಂದು ಮಾಜಿ ಸಚಿವ ವಿನಯ್ ಕುಲಕರ್ಣಿ ಸ್ಪಷ್ಟಪಡಿಸಿದ್ದಾರೆ. ಬಿಜೆಪಿ ಸೇರ್ಪಡೆ ವದಂತಿ ವಿಚಾರವಾಗಿ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದ ಅವರು, ನಾನು ಬೆಳೆದ ದಾರಿಯೇ ಬೇರೆ. ಮೊದಲು ನಾನು ಪಕ್ಷೇತರ ಶಾಸಕ ಹೀಗಾಗಿ ಕಾರ್ಯಕರ್ತರು, ಎಲ್ಲ ಸಮಾಜದ ಜನ ನನ್ನ ಜೊತೆಗಿದ್ದು, ಅವರನ್ನು ಕೇಳಿಯೇ ನಿರ್ಧಾರ  ಕೈಗೊಳ್ಳುವುದಾಗಿ ತಿಳಿಸಿದರು. ವಿಧಾನ  ಪರಿಷತ್​ ಸದಸ್ಯ ಸಿ.ಪಿ.ಯೋಗೇಶ್ವರ್​ ಅವರು ಕುದುರೆ ಖರೀದಿಗೆ ಬಂದಿದ್ದರು. ನನ್ನಿಂದ ಆರು ಕುದುರೆ ಖರೀದಿಸಿದ್ದಾರೆ. ನಾನು ಯಾರ ಜೊತೆಯೂ ಹೋಗಿ ಮಾತನಾಡಿಲ್ಲ ಎಂದು ಸ್ಪಷ್ಟ ಪಡಿಸಿದರು. ಇನ್ನೂ ಮಾಧ್ಯಮಗಳು ಯಾವುದೇ ದಾಖಲೆಗಳು ಇಲ್ಲದೇ, ನಿಮ್ಮ ಲೆಕ್ಕಚಾರದಲ್ಲಿಯೇ ಸುದ್ದಿ ಮಾಡದಂತೆ ಕೋರಿದ ಅವರು,  ನಾನು ದೊಡ್ಡ ನಾಯಕ ಅಲ್ಲ. ಯಾವುದೇ ಸ್ವಾಮೀಜಿಗಳು ಮಾತನಾಡಿಲ್ಲ ಎಂದರು.

ಸಿಬಿಐನಿಂದ ತಪ್ಪಿಸಿಕೊಳ್ಳಲು ಬಿಜೆಪಿ ಸೇರ್ಪಡೆ ಅಂತಾ ಸುದ್ದಿ ಆಗುತ್ತಿದೆ. ಸಿಬಿಐ ಏನು ಬಿಜೆಪಿ ಕೆಳಗಡೆ ಕೆಲಸ ಮಾಡುತ್ತದೆಯಾ ? ನಾನು ಬಿಜೆಪಿ ಹೋಗಿ ಬಿಟ್ಟರೇ ಬಿಡುತ್ತಾರೆಯೇ ಎಂದು ಪ್ರಶ್ನಿಸಿದರು.

ಈ ಕೇಸ್‌ಗಳು ಇರುವುದು ಇದ್ದದ್ದೇ. ಈಗಾಗಲೇ ಆರು ನೂರು ಜನರ ವಿಚಾರಣೆ ಮಾಡಿದ್ದಾರೆ. ಒಂದು ವರ್ಷ ಮೂರು ತಿಂಗಳಿನಿಂದ ಸಿಬಿಐ ವಿಚಾರಣೆ ನಡೆದಿದೆ. ಅದರ ಬಗ್ಗೆ ನನಗೇನು ವಿಚಾರ ಇಲ್ಲ ಎಂದರು.

ಬಿಜೆಪಿ ಅಭ್ಯರ್ಥಿಗಳ ಗೆಲವು ಖಚಿತ : ಕಟೀಲ್​​

ರಾಜ್ಯದಲ್ಲಿ ಎರಡು ವಿಧಾನಸಭೆಗೆ ಉಪಚುನಾವಣೆ ಹಾಗೂ ನಾಲ್ಕು ವಿಧಾನ ಪರಿಷತ್‌ಗೆ ಚುನಾವಣೆ ನಡೆಯಲಿದ್ದು, ಸ್ಪರ್ಧಿಸಿರುವ ಬಿಜೆಪಿ ಅಭ್ಯರ್ಥಿಗಳ ಗೆಲವು ಖಚಿತ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್​ ಕುಮಾರ್ ಕಟೀಲ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಧಾರವಾಡದಲ್ಲಿ ಪಶ್ಚಿಮ ವಿಧಾನ ಪರಿಷತ್ ಚುನಾವಣೆಗೆ ಬಿಜೆಪಿ ಅಭ್ಯರ್ಥಿ ಎಸ್.ವಿ.ಸಂಕನೂರು ನಾಮಪತ್ರ‌ ಸಲ್ಲಿಕೆಯಲ್ಲಿ ಭಾಗಿ ಬಳಿಕ ಮಾತನಾಡಿದ ಅವರು, ಜನರ ಒಲವು ಬಿಜೆಪಿ ಪರವಾಗಿದೆ.  ಪ್ರಧಾನಿ ನರೇಂದ್ರ ಮೋದಿ ಹಾಗೂ ಸಿಎಂ ಬಿ ಎಸ್ ಯಡಿಯೂರಪ್ಪನವರ ಆಡಳಿತದ ಸಾಧನೆ ಗೆಲುವಿಗೆ ವರದಾನವಾಗಲಿವೆ. ಬಿಜೆಪಿ ಅಲೆ ಇಲ್ಲದ ಕ್ಷೇತ್ರದ ಮತದಾರರನ್ನು ಪಕ್ಷದ ಕಡೆಗೆ ವಾಲುವಂತೆ ಮಾಡಿದೆ ಎಂದರು.

ಶಿರಾ ಹಾಗೂ ಆರ್.ಆರ್ ನಗರ ವಿಧಾನಸಭೆ ಕ್ಷೇತ್ರದಲ್ಲಿ ಬಿಜೆಪಿ ಪ್ರಭಾವ ಕಡಿಮೆ ಇದೆ. ಕಳೆದ ಚುನಾವಣೆಯಲ್ಲಿ ಬಿಜೆಪಿಗೆ 14 ಸಾವಿರ ಮತಗಳು ಬಂದಿವೆ. ಈ ಬಾರಿ ಮುಖ್ಯಮಂತ್ರಿ ಹಾಗೂ ನಾನು ವಿಶೇಷ ಪ್ರವಾಸದ ಮೂಲಕ ಮತದರಾರ ಸೆಳೆಯುವ ಪ್ರಯತ್ನ ಮಾಡಿದ್ದಾಗಿ ತಿಳಿಸಿದರು.

ಇದನ್ನೂ ಓದಿ : ಕೊರೋನಾ ನಿಯಂತ್ರಿಸಲಾಗದ ಯಡಿಯೂರಪ್ಪ ಸಿಎಂ ಕುರ್ಚಿ ಖಾಲಿ ಮಾಡಲಿ: ವಾಟಾಳ್ ನಾಗರಾಜ್​​ ಆಗ್ರಹ

ಜೆಡಿಎಸ್ ಹಾಗೂ ಕಾಂಗ್ರೆಸ್‌ನ ಸ್ಥಳೀಯ ಸಂಸ್ಥೆಗಳ ಸದಸ್ಯರು ಅಲ್ಲಿನ ಆಂತರಿಕ ಕಿತ್ತಾಟದಿಂದ ಭ್ರಮನಿರಸಗೊಂಡು ಬಿಜೆಪಿ ಪಕ್ಷ ಸೇರ್ಪಡೆಗೊಂಡಿದ್ದು, ಅಲ್ಲಿ ಬಿಜೆಪಿ ಪರ ಅಲೆ ಸೃಷ್ಠಿಯಾಗಿದೆ. ಗೆಲವು ನಮ್ಮದೆ ಎಂದರು.

ಇದೇ ಸಂದರ್ಭದಲ್ಲಿ ಮಾಜಿ ಸಚಿವ ವಿನಯ್ ಕುಲಕರ್ಣಿ ಬಿಜೆಪಿ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಕಟೀಲ್, ಅವರು ಬಿಜೆಪಿ ಸೇರುವ ಬಗ್ಗೆ ಸಮಯ ಬಂದಾಗ ನೋಡೋಣ, ಆದರೆ, ಈ ವಿಚಾರವಾಗಿ ನನಗಂತೂ ಸಂಕರ್ಪ ಮಾಡಿಲ್ಲ, ಇದು ಊಹಾಪೋಹ. ವಿಧಾನ ಪರಿಷತ್​ ಸದಸ್ಯ ಸಿಪಿ ಯೋಗೇಶ್ವರ್ ನೇತೃತ್ವದಲ್ಲಿ ದೆಹಲಿ ಮುಖಂಡರ ಬಾಗಿ ವಿಚಾರ ಇದ್ದರು ಇರಬಹುದು ಆ ವಿಚಾರ ಬಂದಾಗ ನೋಡೋಣ ಎಂದರು.
Published by:G Hareeshkumar
First published: