ನಾನ್ ಕೋವಿಡ್ ಸಾವಿನ ಕುರಿತು ರಾಜ್ಯ ಸರಕಾರ ಆಡಿಟ್ ಮಾಡಿಸಬೇಕು: ಮಾಜಿ ಸಚಿವ ಶಿವಾನಂದ ಪಾಟೀಲ ಆಗ್ರಹ

ಅಧಿಕಾರಕ್ಕೆ ಬರುವ ಎಲ್ಲ ಸಿಎಂ ಗಳು ಅಲ್ಪಾವಧಿ ಗುರಿ ಇಟ್ಟುಕೊಂಡು ಬಂದಿರುತ್ತಾರೆ. ಜನರ ಕಲ್ಯಾಣಕ್ಕಾಗಿ ದೀರ್ಘಾವಧಿ ಕನಸುಗಳನ್ನು ಹೊಂದಿರುವುದಿಲ್ಲ

ಮಾಜಿ ಆರೋಗ್ಯ ಸಚಿವ ಶಿವಾನಂದ ಎಸ್. ಪಾಟೀಲ

ಮಾಜಿ ಆರೋಗ್ಯ ಸಚಿವ ಶಿವಾನಂದ ಎಸ್. ಪಾಟೀಲ

  • Share this:
ವಿಜಯಪುರ(ಅಕ್ಟೋಬರ್​. 24): ಆರೋಗ್ಯ ಇಲಾಖೆ ವಿರುದ್ಧ ಮಾಜಿ ಆರೋಗ್ಯ ಸಚಿವ ಶಿವಾನಂದ ಎಸ್. ಪಾಟೀಲ ತೀವ್ರ ವಾಗ್ದಾಳಿ ನಡೆಸಿದ್ದಾರೆ. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನಾನ್ ಕೋವಿಡ್ ಸಾವಿನ ಸಂಖ್ಯೆಯ ಕುರಿತು ರಾಜ್ಯ ಸರಕಾರ ಆಡಿಟ್ ಮಾಡಿಸಬೇಕು ಎಂದು ಆಗ್ರಹಿಸಿದ್ದಾರೆ. ಆರೋಗ್ಯ ಇಲಾಖೆ ಕೋವಿಡ್ ನೆಪದಲ್ಲಿ ಇತರ ರೋಗಿಗಳಿಗೆ ಚಿಕಿತ್ಸೆ ಕೊಡಿಸುವಲ್ಲಿ ಸಂಪೂರ್ಣ ವಿಫಲವಾಗಿದೆ. ಕೋವಿಡ್ ಒಂದನ್ನೆ ಮುಂದಿಟ್ಟುಕೊಂಡು ಉಳಿದ ರೋಗಿಗಳಿಗೆ ಈ ಸಂದರ್ಭದಲ್ಲಿ ಚಿಕಿತ್ಸೆ ಸಿಗುತ್ತಿಲ್ಲ. ಸರಕಾರಿ ಮತ್ತು ಖಾಸಗಿ ಆಸ್ಪತ್ರೆಗಳಿಗೆ ಈ ಮುಂಚೆ 1300 ರಿಂದ 1500 ಜನ ಓಪಿಡಿಗೆ ಬರುತ್ತಿದ್ದರು. ಈಗ 200 ಜನ ಕೂಡ ಜಿಲ್ಲಾಸ್ಪತ್ರೆಗೆ ಬರುತ್ತಿಲ್ಲ ಎಂದು ತಿಳಿಸಿದರು. ನಾನ್ ಕೋವಿಡ್ ನಿಂದ ಅತೀ ಹೆಚ್ಚು ಜನ ಪ್ರಾಣ ಕಳೆದುಕೊಂಡಿದ್ದಾರೆ. ಆರೋಗ್ಯ ಇಲಾಖೆಯ ದೊಡ್ಡ ನಿರ್ಲಕ್ಷ ವಹಿಸಿದೆ. ಕೋವಿಡ್ ನೆಪದಲ್ಲಿ ಇತರ ರೋಗಿಗಳನ್ನು ಕೇಳುವವರೇ ಗತಿ ಇಲ್ಲದಂತಾಗಿದೆ.

ಕ್ಯಾನ್ಸರ್, ಕಿಡ್ನಿ, ಮತ್ತು ಡಯಾಬಿಟೀಸ್ ನವರು ಎಲ್ಲಿಗೆ ಹೋಗಬೇಕು ಗೊತ್ತಾಗುತ್ತಿಲ್ಲ.  ಎಲ್ಲ ಆಸ್ಪತ್ರೆಗಳನ್ನೂ ಕೋವಿಡ್ ಆಸ್ಪತ್ರೆಗಳನ್ನು ಮಾಡಿದ್ದಾರೆ. ಆದರೆ, ನಿರೀಕ್ಷಿತ ಸಂಖ್ಯೆಯಲ್ಲಿ ರೋಗಿಗಳು ಬರುತ್ತಿಲ್ಲ. ಅಗತ್ಯಕ್ಕೆ ತಕ್ಕಷ್ಟು ಮಾತ್ರ ಕೋವಿಡ್ ಆಸ್ಪತ್ರೆ ಮಾಡಬೇಕಿತ್ತು. ಖಾಸಗಿ, ಸರಕಾರಿ ಆಸ್ಪತ್ರೆಯಲ್ಲಿಯೂ ಕೊರೋನಾ ರೋಗಿಗಳು ಚಿಕಿತ್ಸೆ ಪಡೆಯುತ್ತಿಲ್ಲ ಎಂದು ಅವರು ಆರೋಪಿಸಿದರು.

ಕೊರೋನಾ ಟೆಸ್ಟ್ ಎಷ್ಟು ಆಗಿವೆ ನಾನ್ ಕೋವಿಡ್ ಎಷ್ಟಾಗಿವೆ ಎಂಬುದನ್ನು ಸರಕಾರ ಸ್ಪಷ್ಟಪಡಿಸಬೇಕು. ಖಾಸಗಿ ಆಸ್ಪತ್ರೆಗಳು ರೋಗಿಗಳಿಗೆ ಕೋವಿಡ್ ಟೆಸ್ಚ್ ಮಾಡಿಸಿಕೊಂಡು ಬನ್ನಿ ಎನ್ನುತ್ತಿದ್ದಾರೆ.ಸೂಕ್ತ ಚಿಕಿತ್ಸೆ ಸಿಗದೇ ಬಹಳಷ್ಟು ಜನ ಸಾವಿಗೀಡಾಗುತ್ತಿದ್ದಾರೆ.  ಆರೋಗ್ಯ ವ್ಯವಸ್ಥೆ ಅದೋಗತಿಗೆ ಹೋಗುತ್ತಿದೆ. ಈ ಪರಿಸ್ಥಿತಿ ನಿರೀಕ್ಷಿಸಿರಲಿಲ್ಲ ಎಂದು ಶಿವಾನಂದ ಎಸ್. ಪಾಟೀಲ ವಾಗ್ದಾಳಿ ನಡೆಸಿದರು.

ಇಲಾಖೆಗಳ ವಿಭಜನೆ ಸರಿಯಲ್ಲ :

ಇದೇ ವೇಳೆ ಇಲಾಖೆಗಳ ವಿಭಜನೆ ಕುರಿತು ಪ್ರತಿಕ್ರಿಯೆ ನೀಡಿದ ಅವರು, ಅಧಿಕಾರ ಹಂಚಿಕೆಗಾಗಿ ಇಲಾಖೆ ವಿಭಜನೆ ಸರಿಯಲ್ಲ. ಸರಕಾರ ಹಾರನಹಳ್ಳಿ ರಾಮಸ್ವಾಮಿ ಅವರ ಆಡಳಿತ ಸುಧಾರಣೆ ವರದಿಯನ್ನು ಜಾರಿಗೆ ತರಬೇಕು. ಯಾವೊಬ್ಬ ಸಿಎಂ ಕೂಡ ಈ ನಿಟ್ಟಿನಲ್ಲಿ ಯೋಚಿಸುವುದಿಲ್ಲ. ಸಚಿವರಿಗೆ ಸ್ಥಾನ ನೀಡಲು ಇಲಾಖೆಗಳನ್ನು ವಿಭಜನೆ ಸರಿಯಲ್ಲ. ಈ ಮೊದಲು ಆರೋಗ್ಯ ಇಲಾಖೆಯಲ್ಲಿಯೇ ವೈದ್ಯಕೀಯ ಶಿಕ್ಷಣವಿತ್ತು.  ಸಹಕಾರಿ ಇಲಾಖೆಯನ್ನು ವಿಭಜಿಸಿ ಕೃಷಿ ಮಾರುಕಟ್ಟೆ, ಸಕ್ಕರೆ ಇಲಾಖೆಯನ್ನು ಬೇರೆ ಮಾಡಿದರು. ಇಲಾಖೆಗಳನ್ನು ಹೆಚ್ಚಿಸಿದರೇ ವಿನಃ ಇದರಿಂದ ಜನರಿಗೆ ಯಾವುದೇ ಅನುಕೂಲವಾಗಲಿಲ್ಲ.  ಕೇವಲ ಸೆಕ್ರೆಟರಿಗಳನ್ನು ಮತ್ತು ಮಂತ್ರಿಗಳನ್ನು ಹೆಚ್ಚಿಸಿದರೆ ಜನರಿಗಾಗುವ ಲಾಭಗಳು ಏನು ಎಂದು ಪ್ರಶ್ನಿಸಿದರು.

ಇದನ್ನೂ ಓದಿ : ಪಶ್ಚಿಮ ಪದವೀಧರರ ಕ್ಷೇತ್ರದ ಚುನಾವಣಾ ಕಣದಿಂದ ಹಿಂದೆ ಸರಿದ ಜೆಡಿಎಸ್ ಅಭ್ಯರ್ಥಿ ಶಿವಶಂಕರ್ ಕಲ್ಲೂರು

500 ಕೋಟಿ ರೂ ಹಣ ಮೀಸಲಿಟ್ಟು ಒಂದು ಇಲಾಖೆ ಆರಂಭಿಸಿದರೇ ಏನು ಉಪಯೋಗವಿಲ್ಲ. 12 ಸಾವಿರ ಕೋಟಿ ರೂ ನೀಡಿ ನೀರಾವರಿ ಇಲಾಖೆ ಮಾಡಿ ಮತ್ತೊಂದು ಇಲಾಖೆಗೆ ಕೇವಲ 500 ಕೋಟಿ ರೂ ಬಜೆಟ್ ನೀಡಿದರೆ ಪ್ರಯೋಜನವಾದರೂ ಏನು ಈಗಲಾದರೂ ಎಚ್ಚೆತ್ತುಕೊಳ್ಳಿ ಎಂದು ಶಿವಾನಂದ ಎಸ್. ಪಾಟೀಲ ಕಿವಿಮಾತು ಹೇಳಿದರು.

ಇದೇ ವೇಳೆ ಈವರೆಗೆ ಅಧಿಕಾರಿ ನಡೆಸಿದ ಮತ್ತು ನಡೆಸುತ್ತಿರುವ ಮುಖ್ಯಮಂತ್ರಿಗಳ ಕಾರ್ಯ ವೈಖರಿಯನ್ನೂ ಟೀಕಿಸಿದ ಅವರು, ಅಧಿಕಾರಕ್ಕೆ ಬರುವ ಎಲ್ಲ ಸಿಎಂ ಗಳು ಅಲ್ಪಾವಧಿ ಗುರಿ ಇಟ್ಟುಕೊಂಡು ಬಂದಿರುತ್ತಾರೆ. ಜನರ ಕಲ್ಯಾಣಕ್ಕಾಗಿ ದೀರ್ಘಾವಧಿ ಕನಸುಗಳನ್ನು ಹೊಂದಿರುವುದಿಲ್ಲ.  ಐದು ವರ್ಷ ಅಧಿಕಾರ ಮುಗಿಸಿದರೆ ಸಾಕು ಎಂಬ ಭಾವನೆಯಲ್ಲಿರುವುದು ಇದಕ್ಕೆ ಕಾರಣವಾಗಿದೆ ಎಂದು ತಿಳಿಸಿದರು.
Published by:G Hareeshkumar
First published: