• Home
  • »
  • News
  • »
  • district
  • »
  • ಐಎಂಎ ಪ್ರಕರಣದಲ್ಲಿ ಜೈಲು ಪಾಲಾದ ರೋಷನ್ ಬೇಗ್; ಕ್ವಾರಂಟೈನ್ ಕೊಠಡಿಯಲ್ಲಿ ಬಳಲಿದ ಮಾಜಿ ಸಚಿವ

ಐಎಂಎ ಪ್ರಕರಣದಲ್ಲಿ ಜೈಲು ಪಾಲಾದ ರೋಷನ್ ಬೇಗ್; ಕ್ವಾರಂಟೈನ್ ಕೊಠಡಿಯಲ್ಲಿ ಬಳಲಿದ ಮಾಜಿ ಸಚಿವ

ಮಾಜಿ ಸಚಿವ ರೋಷನ್ ಬೇಗ್.

ಮಾಜಿ ಸಚಿವ ರೋಷನ್ ಬೇಗ್.

ಒಟ್ನಲ್ಲಿ ಕಳೆದೊಂದು ವರ್ಷದಿಂದ ಐಎಂಎ ಕೇಸ್ ವಿಚಾರಣೆ ಎದುರಿಸುತ್ತಿದ್ದ ರೋಷನ್ ಬೇಗ್ ಸಿಬಿಐ ನೀಡಿದ ದಿಢೀರ್ ಶಾಕ್​ನಿಂದ ಕಂಗಾಲಾಗಿದ್ದು, ಆನಾರೋಗ್ಯದ ನೆಪವೊಡ್ಡಿ ಜಾಮೀನಿಗೆ ಅರ್ಜಿ ಹಾಕುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ.

  • Share this:

ಆನೇಕಲ್: ಪ್ರಾರಂಭದಿಂದಲೂ ಬಹುಕೋಟಿ ವಂಚನೆ ಕೇಸ್ ಐಎಂಎ ಪ್ರಕರಣದಲ್ಲಿ ಮಾಜಿ ಸಚಿವ ರೋಷನ್ ಬೇಗ್ ಹೆಸರು ಥಳಕು ಹಾಕಿಕೊಂಡಿತ್ತು. ಈ ಬಗ್ಗೆ ವಿಚಾರಣೆ ನಡೆಸಿದ್ದ ಸಿಬಿಐ ನಿನ್ನೆ ರೋಷನ್ ಬೇಗ್ ರನ್ನು ಬಂಧಿಸಿ ಪರಪ್ಪನ ಅಗ್ರಹಾರ ಜೈಲಿಗೆ ಕಳುಹಿಸಿದ್ದು, ಮಾಜಿ ಸಚಿವ ಇದೀಗ ಜೈಲು ಪಾಲಾಗುವಂತಾಗಿದೆ. ಅಲ್ಲದೆ, ಒಂದು ದಿನ ಜೈಲಿನಲ್ಲಿ ಕಳೆದಂತಾಗಿದೆ. ಸ್ವತಃ ರೋಷನ್ ಬೇಗ್ ರವರು ಸಹ ಪರಪ್ಪನ ಅಗ್ರಹಾರ ಜೈಲು ವಾಸದ ಬಗ್ಗೆ ಯೋಚನೆ ಕೂಡ ಮಾಡಿರಲಿಕ್ಕಿಲ್ಲ. ಹೌದು ಬಹುಕೋಟಿ ವಂಚನೆ ಕೇಸ್ ಐಎಂಎ ಪ್ರಕರಣದಲ್ಲಿ ಜೈಲು ವಾಸ ಅನುಭವಿಸುತ್ತಿರುವ ರೋಷನ್ ಬೇಗ್ ತಡರಾತ್ರಿವರೆಗೂ ನಿದ್ರೆಗೆ ಜಾರಿರಲಿಲ್ಲ. ಚಿಂತೆಯಲ್ಲಿ ಮಗ್ನರಾಗಿದ್ದ ಅವರು ಸ್ನೇಹಿತರು ಕಳುಹಿಸಿದ್ದ ಕುಷ್ಕಾ ಮತ್ತು ಬ್ರೇಡ್ ತಿಂದು ಔಷಧಿ ಸೇವಿಸಿ ರಾತ್ರಿ ಒಂದು ಗಂಟೆಗೆ ಚಾಪೆ ಮೇಲೆ ದಿಂಬಿಗೆ ತಲೆ ಹೊರಗಿಸಿ ಬೆಡ್ ಶೀಟ್ ಹೊದ್ದು ನಿದ್ರೆಗೆ ಜಾರಿದ್ದರು. ಸೊಳ್ಳೆಗಳ ಕಾಟದಿಂದ ಸರಿಯಾಗಿ‌ ನಿದ್ರಿಸದ ಅವರು ಮುಂಜಾನೆ 6 ಗಂಟೆಗೆ ಎಚ್ಚರಗೊಂಡಿದ್ದಾರೆ ಎನ್ನಲಾಗಿದೆ.


ಇನ್ನೂ ನಿತ್ಯ ಪೇಪರ್ ಓದುವ ಹವ್ಯಾಸ ಇದ್ದ ಬೇಗ್ ತನಗೆ ನ್ಯೂಸ್ ಪೇಪರ್ ನೀಡುವಂತೆ ಜೈಲು ಸಿಬ್ಬಂದಿ ಬಳಿ ಬೇಡಿಕೆಯಿಟ್ಟಿದ್ದರು. 8 ಗಂಟೆ ಸುಮಾರಿಗೆ ಜೈಲಿನ ಮೇನು ಪ್ರಕಾರ ಸಿಬ್ಬಂದಿ ನೀಡಿದ ಉಪ್ಪಿಟ್ಟು ಸೇವಿಸಿದ ಬೇಗ್ ಔಷದಿ ಪಡೆದು ವಿಶ್ರಾಂತಿ ಪಡೆದುಕೊಂಡಿದ್ದಾರೆ. 11 ಗಂಟೆ ಸುಮಾರಿಗೆ ಮತ್ತು ಸಂಜೆ 4 ಗಂಟೆ ಸುಮಾರಿಗೆ ಜೈಲು ಆಸ್ಪತ್ರೆ ವೈದ್ಯರು ಆರೋಗ್ಯ ತಪಾಸಣೆ ನಡೆಸಿದ್ದು, ಬಿಪಿ ಶುಗರ್ ಗೆ ಸದ್ಯ ತೆಗೆದುಕೊಳ್ಳುತ್ತಿರುವ ಮಾತ್ರೆಗಳನ್ನು ಮುಂದುವರಿಸುವಂತೆ ತಿಳಿಸಿದ್ದಾರೆ ಎನ್ನಲಾಗಿದೆ. ಇದಕ್ಕೂ ಮೊದಲು ಮಧ್ಯಾಹ್ನದ ಊಟಕ್ಕೆ ಸ್ವಲ್ಪ ಮುದ್ದೆ ಮತ್ತು ಅನ್ನ ಸೇವಿಸಿದ ರೋಷನ್ ಬೇಗ್ ಕೆಲ ಹೊತ್ತು ನಿದ್ರೆಗೆ ಜಾರಿದ್ದಾರೆ.


ಇದನ್ನೂ ಓದಿ : ಐಎಂಎ ಬಹುಕೋಟಿ ವಂಚನೆ ಪ್ರಕರಣ; ರೋಷನ್ ಬೇಗ್ ನಿವಾಸದ ಮೇಲೆ ಸಿಬಿಐ ದಾಳಿ


ಒಟ್ನಲ್ಲಿ ಕಳೆದೊಂದು ವರ್ಷದಿಂದ ಐಎಂಎ ಕೇಸ್ ವಿಚಾರಣೆ ಎದುರಿಸುತ್ತಿದ್ದ ರೋಷನ್ ಬೇಗ್ ಸಿಬಿಐ ನೀಡಿದ ದಿಢೀರ್ ಶಾಕ್​ನಿಂದ ಕಂಗಾಲಾಗಿದ್ದು, ಆನಾರೋಗ್ಯದ ನೆಪವೊಡ್ಡಿ ಜಾಮೀನಿಗೆ ಅರ್ಜಿ ಹಾಕುವ ಸಾಧ್ಯತೆ ಇದ್ದು, ನ್ಯಾಯಾಲಯ ಬೇಗ್ ಗೆ ಬೇಲ್ ನೀಡುವುದಾ ಅಥವಾ ಇನ್ನೂ 13 ದಿನ ಜೈಲೇ ಗತಿಯಾಗುವುದೋ? ಎಂಬುದನ್ನು ಕಾದು ನೋಡಬೇಕಿದೆ.

Published by:MAshok Kumar
First published:

ಸುದ್ದಿ 18ಕನ್ನಡ ಟ್ರೆಂಡಿಂಗ್

ಮತ್ತಷ್ಟು ಓದು