HOME » NEWS » District » FORMER MINISTER PRIYANK KHARGE QUIP ON OPENING SURAKSHA HELPLINE BY KKRDB KARNATAKA GOVERNMENT HK

ಐದು ತಿಂಗಳ ನಂತರ ಕೋವಿಡ್ ಸಹಾಯವಾಣಿ – ಸರ್ಕಾರದ ದೂರದೃಷ್ಟಿಗೆ ಸಲಾಂ ; ಪ್ರಿಯಾಂಕ್ ಖರ್ಗೆ ವ್ಯಂಗ್ಯ

ದಿನದ 24 ತಾಸುಗಳ ಕಾಲ ಈ ಕೇಂದ್ರ ಕಾರ್ಯನಿರ್ವಹಿಸಲಿರುವ ಈ ಸಹಾಯವಾಣಿ ಕೇಂದ್ರ ಸದ್ಯಕ್ಕೆ ಕಲಬುರ್ಗಿಯಲ್ಲಿ ಪ್ರಯೋಗಿಕವಾಗಿ ಆರಂಭಿಸಲಾಗಿದೆ. ಮುಂದಿನ ದಿನಗಳಲ್ಲಿ ಕೆ.ಕೆ.ಆರ್.ಡಿ.ಬಿ. ವ್ಯಾಪ್ತಿಯಲ್ಲಿ ಬರುವ ಇತರೆ ಜಿಲ್ಲೆಗಳಿಗೂ ವಿಸ್ತರಿಸಿಲು ಉದ್ದೇಶಿಸಲಾಗಿದೆ

news18-kannada
Updated:August 13, 2020, 4:44 PM IST
ಐದು ತಿಂಗಳ ನಂತರ ಕೋವಿಡ್ ಸಹಾಯವಾಣಿ – ಸರ್ಕಾರದ ದೂರದೃಷ್ಟಿಗೆ ಸಲಾಂ ; ಪ್ರಿಯಾಂಕ್ ಖರ್ಗೆ ವ್ಯಂಗ್ಯ
ಮಾಜಿ ಸಚಿವ ಪ್ರಿಯಾಂಕ್ ಖರ್ಗೆ
  • Share this:
ಕಲಬುರ್ಗಿ(ಆಗಸ್ಟ್​.13): ಕೊರೋನಾ ಹಾಟ್ ಸ್ಪಾಟ್ ಎನಿಸಿಕೊಂಡಿರುವ ಕಲಬುರ್ಗಿಯಲ್ಲಿ ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ದಿ ಮಂಡಳಿ ವತಿಯಿಂದ ಕೋವಿಡ್ ಸಹಾಯವಾಣಿ ಆರಂಭಿಸಿರುವುದಕ್ಕೆ ಸರ್ಕಾರದ ದೂರದೃಷ್ಟಿಗೆ ಸಲಾಂ ಎಂದು ಮಾಜಿ ಸಚಿವ ಪ್ರಿಯಾಂಕ್​​ ಖರ್ಗೆ ವ್ಯಂಗ್ಯವಾಡಿದ್ದಾರೆ.

ಕೆಕೆಆರ್​ಡಿಬಿ ಕಲಬುರ್ಗಿಯಲ್ಲಿ ಪ್ರಾಯೋಗಿಕವಾಗಿ ಕೋವಿಡ್ ಸುರಕ್ಷಾ ಚಕ್ರ ಸಹಾಯವಾಣಿ ಆರಂಭಿಸಿದ್ದು, ನಿನ್ನೆ ಅದನ್ನು ಮಂಡಳಿ ಅಧ್ಯಕ್ಷ ದತ್ತಾತ್ರೇಯ ಪಾಟೀಲ ರೇವೂರ ಚಾಲನೆ ನೀಡಿದ್ದರು. ತಡವಾಗಿ ಸಹಾಯವಾಣಿ ಆರಂಭಿಸಲಾಗಿದೆ ಎಂದು ಪ್ರಿಯಾಂಕ್ ಖರ್ಗೆ ಆಕ್ಷೇಪ ವ್ಯಕ್ತಪಡಿಸಿದ್ದಾರೆ.

ಸರ್ಕಾರದ ವರ್ತನೆ ಹೇಗಿದೆ ಎಂದರೆ, ಬೇಸಿಗೆ ಕಳೆದು ಮಳೆಗಾಲ ಬಂದಂತಾಗಿದೆ ಎಂದು ವ್ಯಂಗ್ಯವಾಡಿದ್ದಾರೆ. ದೇಶದ ಮೊದಲ ಕೋವಿಡ್ ಪ್ರಕರಣ ಪತ್ತೆಯಾಗಿದ್ದು ಕಲಬುರ್ಗಿಯಲ್ಲಿ.  ಕೋವಿಡ್ ಮೊದಲ ಪ್ರಕರಣ ಕಂಡುಬಂದು ಐದು ತಿಂಗಳಾಗಿದೆ. ಇದುವರೆಗೂ 7600ಕ್ಕೂ ಹೆಚ್ಚು ಜನರಿಗೆ ಸೋಂಕು ದೃಢಪಟ್ಟಿದೆ. 142ಕ್ಕೂ ಹೆಚ್ಚು ಜನ ಸೋಂಕಿತರು ಪ್ರಾಣ ಕಳೆದುಕೊಂಡಿದ್ದಾರೆ. ಕೆಲವರು ಸೂಕ್ತ ಚಿಕಿತ್ಸೆ ಸಿಗದೆ ರಸ್ತೆಯಲ್ಲಿಯೇ ಪ್ರಾಣ ಬಿಟ್ಟಿದ್ದಾರೆ. ಇಷ್ಟೆಲ್ಲಾ ಘಟಿಸಿದಾಗ ಸುಮ್ಮನಿದ್ದು ಜಾಣ ಕುರುಡುತನ ಪ್ರದರ್ಶಿಸಿ ಸರ್ಕಾರ ವಿಳಂಬ ನೀತಿ ಅನುಸರಿಸಿತು. ಇದೀಗ ಸಹಾಯವಾಣಿ ಆರಂಭಿಸಿ ಸರ್ಕಾರ ದೂರದೃಷ್ಟಿ ಮೆರೆದಿದೆ ಎಂದು ಪ್ರಿಯಾಂಕ್ ಖರ್ಗೆ ವ್ಯಂಗ್ಯವಾಡಿದ್ದಾರೆ.ಸಹಾಯವಾಣಿ ನಿರ್ವಹಣೆಗೆ ತಗಲುವ ಒಂದು ಲಕ್ಷ ರೂಪಾಯಿ ವೆಚ್ಚವನ್ನು ಕೆಕೆಆರ್​ಡಿಬಿ ಅನುದಾನದಿಂದ ಬಳಕೆ ಮಾಡಿಕೊಳ್ಳಲಾಗುತ್ತಿದೆ. ಇಷ್ಟು ಸಣ್ಣ ಮೊತ್ತವೂ ಕಲಬುರ್ಗಿ ಜಿಲ್ಲಾಡಳಿತದ ಬಳಿ ಇಲ್ಲವೆ. ಸಹಾಯವಾಣಿ ಬದಲಿಗೆ ಕೆಕೆಆರ್​ಡಿಬಿ ಯ ಮೈಕ್ರೋ ಅನುದಾನದಿಂದ ಆರೋಗ್ಯ ಮೂಲ ಸೌಕರ್ಯ ಕಲ್ಪಿಸಬಹುದಲ್ಲವೆ ಎಂದು ಟ್ವೀಟ್ ಮೂಲಕ ಪ್ರಿಯಾಂಕ್ ಖರ್ಗೆ ಸರ್ಕಾರವನ್ನು ಪ್ರಶ್ನಿಸಿದ್ದಾರೆ.

ಆ್ಯಂಬುಲೆನ್ಸ್ ಸೌಲಭ್ಯ, ಥ್ರೋಟ್ ಸ್ಯಾಂಪಲ್ ಟೆಸ್ಟ್, ಬೆಡ್ ಲಭ್ಯತೆ, ಎಲ್ಲಿ ಚಿಕಿತ್ಸೆ ಸಿಗುವುದೆಂಬ ಇತ್ಯಾದಿ ಮಾಹಿತಿಯನ್ನು ಪಡೆದುಕೊಳ್ಳಲು ಸುರಕ್ಷಾ ಸಹಾಯವಾಣಿ ಆರಂಭಿಸಲಾಗಿದೆ. ಈ ಸಹಾಯವಾಣಿಗೆ ಕರೆ ಮಾಡಿದ ಅರ್ಧ ಗಂಟೆಯೊಳಗೆ ಅಗತ್ಯ ಮಾಹಿತಿ ಜೊತೆಗೆ, ಅಗತ್ಯ ಸೌಕರ್ಯ ನೀಡುವ ಉದ್ದೇಶ ಹೊಂದಲಾಗಿದೆ.

ಇದನ್ನೂ ಓದಿ : ರಾಮ ಮಂದಿರ ಟ್ರಸ್ಟ್ ಅಧ್ಯಕ್ಷ ಮಹಾಂತ್ ನೃತ್ಯ ಗೋಪಾಲದಾಸ್​​ಗೆ ಕೊರೋನಾ ಪಾಸಿಟಿವ್

ದಿನದ 24 ತಾಸುಗಳ ಕಾಲ ಈ ಕೇಂದ್ರ ಕಾರ್ಯನಿರ್ವಹಿಸಲಿರುವ ಈ ಸಹಾಯವಾಣಿ ಕೇಂದ್ರ ಸದ್ಯಕ್ಕೆ ಕಲಬುರ್ಗಿಯಲ್ಲಿ ಪ್ರಯೋಗಿಕವಾಗಿ ಆರಂಭಿಸಲಾಗಿದೆ. ಮುಂದಿನ ದಿನಗಳಲ್ಲಿ ಕೆ.ಕೆ.ಆರ್.ಡಿ.ಬಿ. ವ್ಯಾಪ್ತಿಯಲ್ಲಿ ಬರುವ ಇತರೆ ಜಿಲ್ಲೆಗಳಿಗೂ ವಿಸ್ತರಿಸಿಲು ಉದ್ದೇಶಿಸಲಾಗಿದೆ. ಆದರೆ ಇದನ್ನು ಮುಂಚಿತವಾಗಿಯೇ ಆರಂಭಿಸಿದ್ದರೆ ಹಲವಾರು ಸೋಂಕಿತರಿಗೆ ಸಹಾಯವಾಗುತ್ತಿತ್ತು

ಎಲ್ಲ ಮುಗಿದ ಮೇಲೆ ಈ ಸಹಾಯವಾಣಿ ಆರಂಭಿಸಿರುವುದರಿಂದ ಏನು ಪ್ರಯೋಜನ. ಸೋಂಕು ವ್ಯಾಪಕ ಸ್ವರೂಪ ಪಡೆದುಕೊಂಡಾಗ ಸುಮ್ಮನಿದ್ದ ಸರ್ಕಾರ ಇಷ್ಟು ವಿಳಂಬವಾಗಿ ಆರಂಭಿಸಿ ತಾನೇನೋ ಹೊಸದನ್ನು ಮಾಡಿತ್ತಿರುವುದಾಗಿ ಪ್ರದರ್ಶಿಸಲು ಹೊರಟಿದೆ ಎಂದು ಪ್ರಿಯಾಂಕ್ ಖರ್ಗೆ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಈಗಲಾದರೂ ಸೋಂಕಿತರಿಗೆ ಸರಿಯಾದ ಚಿಕಿತ್ಸೆ ಸಿಗುವಂತಾಗಲಿ ಎಂದು ಆಶಿಸಿದ್ದಾರೆ.
Published by: G Hareeshkumar
First published: August 13, 2020, 4:33 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories