ಸೋಂಕು ನಿಯಂತ್ರಣಕ್ಕೆ ಸರ್ಕಾರದ ನಿರಾಸಕ್ತಿ - ಕೊರೋನಾ ನೆಪದಲ್ಲಿ ಲೂಟಿಯಲ್ಲಿ ಆಸಕ್ತಿ ; ಪ್ರಿಯಾಂಕ್ ಖರ್ಗೆ ಕಿಡಿ

ಕೋವಿಡ್ ಹೆಸರಲ್ಲಿ ದೊಡ್ಡ ಭ್ರಷ್ಟಾಚಾರ ನಡೆದಿದೆ. ರಾಜ್ಯ ಸರ್ಕಾರಕ್ಕೇ ಸೋಂಕು ತಗುಲಿದೆ. ಇದೊಂದು ಭ್ರಷ್ಟಾಚಾರ ಸೋಂಕಿತ ಸರ್ಕಾರ. ಈಗಲಾದರೂ ಸರ್ಕಾರ ಎಚ್ಚೆತ್ತುಕೊಳ್ಳಬೇಕು

news18-kannada
Updated:August 2, 2020, 1:28 PM IST
ಸೋಂಕು ನಿಯಂತ್ರಣಕ್ಕೆ ಸರ್ಕಾರದ ನಿರಾಸಕ್ತಿ - ಕೊರೋನಾ ನೆಪದಲ್ಲಿ ಲೂಟಿಯಲ್ಲಿ ಆಸಕ್ತಿ ; ಪ್ರಿಯಾಂಕ್ ಖರ್ಗೆ ಕಿಡಿ
ಮಾಜಿ ಸಚಿವ ಪ್ರಿಯಾಂಕ್​​​ ಖರ್ಗೆ
  • Share this:
ಕಲಬುರ್ಗಿ(ಆಗಸ್ಟ್​ .02): ಕೊರೋನಾ ಸಚಿವರಾಗಲು ಎಲ್ಲಿಲ್ಲದ ಆಸಕ್ತಿ ತೋರುತ್ತಿದ್ದಾರೆ. ಕೊರೊನಾ ಹೆಸರಲ್ಲಿ ವ್ಯಾಪಕ ಲೂಟಿ ನಡೆದಿದೆ. ಕೊರೋನಾ ನಿಯಂತ್ರಿಸಬೇಕಾದ ಸರ್ಕಾರಕ್ಕೆ ಸೋಂಕು ತಗುಲಿದೆ ಎಂದು ಮಾಜಿ ಸಚಿವ ಪ್ರಿಯಾಂಕ್ ಖರ್ಗೆ ಲೇವಡಿ ಮಾಡಿದ್ದಾರೆ.

ಕಲಬುರ್ಗಿಯಲ್ಲಿ ಮಾತನಾಡಿದ ಅವರು, ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ವಿರುದ್ಧ ಹರಿಹಾಯ್ದಿದ್ದಾರೆ. ಪ್ರಧಾನಿ ನರೇಂದ್ರ ಮೋದಿಯವರು ಕೊರೋನಾ ನಿರ್ಮೂಲನೆಗೆ 21 ದಿನ ಕೊಡಿ ಅಂದ್ರು. ದೇಶದಲ್ಲಿ ನಾಲ್ಕು ಲಾಕ್ ಡೌನ್, ಮೂರು ಅನ್ ಲಾಕ್ ಪ್ರಕ್ರಿಯೆ ಪೂರ್ಣಗೊಂಡಿವೆ. 150 ದಿನ ಸಮೀಪಿಸಿದರೂ ನಿಯಂತ್ರಣಕ್ಕೆ ಬಂದಿಲ್ಲ. ಸೋಂಕಿತರ ಪಟ್ಟಿಯಲ್ಲಿ ವಿಶ್ವದಲ್ಲಿ ಭಾರತ ಮೂರನೇ ಸ್ಥಾನದಲ್ಲಿದೆ. ಸಾವಿನ ಸಂಖ್ಯೆಯಲ್ಲಿ ರಾಜ್ಯ ದೇಶದಲ್ಲಿ 2 ನೇ ಸ್ಥಾನದಲ್ಲಿದೆ. ಇಷ್ಟಾದರು ರಾಜ್ಯ ಸರ್ಕಾರ ಕೊರೋನಾ ನಿಯಂತ್ರಿಸಲು ಶ್ರಮಿಸುತ್ತಿಲ್ಲ. ಬದಲಿಗೆ ಕೊರೋನಾ ಮಿನಿಸ್ಟರ್ ಆಗಲು ಎಲ್ಲರು ಆಸಕ್ತಿ ತೋರಿಸುತ್ತಿದ್ದಾರೆ. ಬೆಂಗಳೂರಿಗೆ ಎಂಟೆಂಟು ಕೋವಿಡ್ ಸಚಿವರಿದ್ದಾರೆ ಎಂದರು.

ಸರ್ಕಾರ ಬೆಂಗಳೂರು ಕೇಂದ್ರೀಕೃತವಾಗಿದೆ. ಕೋವಿಡ್ ಹೆಸರಲ್ಲಿ ದೊಡ್ಡ ಭ್ರಷ್ಟಾಚಾರ ನಡೆದಿದೆ. ರಾಜ್ಯ ಸರ್ಕಾರಕ್ಕೇ ಸೋಂಕು ತಗುಲಿದೆ. ಇದೊಂದು ಭ್ರಷ್ಟಾಚಾರ ಸೋಂಕಿತ ಸರ್ಕಾರ. ಈಗಲಾದರೂ ಸರ್ಕಾರ ಎಚ್ಚೆತ್ತುಕೊಳ್ಳಬೇಕು. ಸೋಂಕಿತರಿಗೆ ಅಗತ್ಯ ಔಷಧಿಗಳನ್ನು ಸಿಗುವಂತೆ ಮಾಡಬೇಕು, ಬ್ಲಾಕ್ ಮಾರ್ಕೆಟ್ ನಿಯಂತ್ರಿಸಬೇಕು, ತಾಲೂಕು ಮಟ್ಟದಲ್ಲಿಯೂ ಕೋವಿಡ್ ಕೇರ್ ಸೆಂಟರ್ ಆರಂಭಿಸಬೇಕು, ಇ.ಎಸ್.ಐ. ಆಸ್ಪತ್ರೆಯಲ್ಲಿ ಉಸಿರಾಟದ ತೊಂದರೆಯಿಂದ ಎಂಟು ಜನ ಸಾವನ್ನಪ್ಪಿರುವುದರ ತನಿಖಾ ವರದಿ ಬಹಿರಂಗಪಡಿಬೇಕು, ಕಲ್ಯಾಣ ಕರ್ನಾಟಕದ ನೇರ ನೇಮಕಾತಿ ಪ್ರಿಕ್ರಿಯೆ ರದ್ದನ್ನು ವಾಪಸ್ ಪಡೀಬೇಕೆಂದು ಆಗ್ರಹಿಸಿದರು.

ನೋಟೀಸ್ ನೀಡಲು ರವಿಕುಮಾರ್ ಸರ್ಕಾರದ ಪ್ರತಿನಿಧಿಯೇ :

ಕೋವಿಡ್ ಭ್ರಷ್ಟಾಚಾರಕ್ಕೆ ಸಂಬಂಧಿಸಿ ವಿರೋಧ ಪಕ್ಷದ ನಾಯಕ ಸಿದ್ಧರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಆರೋಪಗಳ ಸಂಬಂಧ ಲೀಗಲ್ ನೋಟೀಸ್ ನೀಡಿರುವುದಕ್ಕೆ ಮಾಜಿ ಸಚಿವ ಪ್ರಿಯಾಂಕ್ ಖರ್ಗೆ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಲೀಗಲ್ ನೋಟೀಸ್ ಕೊಡೋಕೆ ರವಿಕುಮಾರ್ ಯಾರು. ರವಿಕುಮಾರ್ ಏನಾದರು ರಾಜ್ಯ ಸರ್ಕಾರದ ಪ್ರಧಾನ ಕಾರ್ಯದರ್ಶಿಯೇ ಎಂದು ಪ್ರಶ್ನಿಸಿದ್ದಾರೆ.

ಸರ್ಕಾರದಲ್ಲಿ ಭ್ರಷ್ಟಾಚಾರ ನಡೆದಿದೆ ಎಂದು ಸಿದ್ಧರಾಮಯ್ಯು ಮತ್ತು ಡಿಕೆ ಶಿವಕುಮಾರ್​​ ಆರೋಪಿಸಿದ್ದಾರೆ. ಅದಕ್ಕೆ ಪೂರಕವಾದ ದಾಖಲೆಗಳನ್ನೂ ನೀಡಿದ್ದಾರೆ. ಹಾಗೊಂದು ವೇಳೆ ಲೀಗಲ್ ನೋಟೀಸ್ ಕಳಿಸುವುದಾರೆ ಸರ್ಕಾರ, ಸಂಬಂಧಪಟ್ಟ ಸಚಿವರು ಅಥವಾ ಸಂಬಂಧಪಟ್ಟ ಅಧಿಕಾರಿಗಳು ನೋಟೀಸ್ ನೀಡಬಹುದು. ಆದರೆ, ರವಿಕುಮಾರ್ ಲೀಗಲ್ ನೋಟೀಸ್ ಕಳಿಸಿದ್ದು, ಬಿಜೆಪಿ ಪ್ರಧಾನ ಕಾರ್ಯದರ್ಶಿಗೂ ಇದಕ್ಕೂ ಏನು ಸಂಬಂಧ. ಇವರು ನಮ್ಮನ್ನು ಹೆದರಿಸಲು ಪಕ್ಷದ ಮೂಲಕ ನೋಟೀಸ್ ನೀಡಿದ್ದಾರೆ. ಅಷ್ಟು ಧೈರ್ಯ ಇತ್ತೆಂದರೆ ಸರ್ಕಾರವೇ ಲೀಗಲ್ ನೋಟೀಸ್ ಕೊಡಲಿ ಎಂದು ಪ್ರಿಯಾಂಕ್ ಖರ್ಗೆ ಸವಾಲು ಹಾಕಿದ್ದರೆ.

ಜಾಧವ್ ಮನವಿ ಸಂಸದ:ಕಲಬುರ್ಗಿ ಸಂಸದ ಉಮೇಶ್ ಜಾಧವ್ ವಿರುದ್ಧವೂ ಪ್ರಿಯಾಂಕ್ ಖರ್ಗೆ ಕಿಡಿಕಾರಿದ್ದಾರೆ. ಇಷ್ಟು ದಿನ ಎಲ್ಲಿಯೂ ಕಾಣಿಸದ ಜಾಧವ್, ಈಗ ತಾವು ಇಎಸ್ಐ ಬಗ್ಗೆ ಆರೋಪ ಮಾಡಿದ ಕೂಡಲೇ ಎಚ್ಚೆತ್ತವರಂತೆ ಮಾತನಾಡುತ್ತಿದ್ದಾರೆ. ಇಎಸ್ಐ ಆಸ್ಪತ್ರೆಯಲ್ಲಿ ಉಸಿರಾಟದ ವ್ಯವಸ್ಥೆಯಲ್ಲಿನ ಲೋಪದಿಂದಾಗಿ ಎಂಟು ಜನ ಸಾವನ್ನಪ್ಪಿರುವುದನ್ನು ಅಲ್ಲಗಳೆಯುತ್ತಾರೆ.

ಇದನ್ನೂ ಓದಿ : ಒಂದೇ ಗ್ರಾಮದಲ್ಲಿ 72 ಮಂದಿ ಕೊರೋನಾ ಸೋಂಕಿತರು : ಆತಂಕದಲ್ಲಿ ಗ್ರಾಮದ ಜನರು

ಇವರಿಗೆ ಹೇಗೆ ಮಾಹಿತಿ ಸಿಕ್ಕಿತೆಂದು ಪ್ರಶ್ನಿಸುತ್ತಾರೆ. ಆದರೆ ನಮಗೆ ಹೇಗೆ ಮಾಹಿತಿ ಸಿಕ್ಕಿತು ಎನ್ನುವುದಕ್ಕಿಂತ, ಅಲ್ಲಿಯ ಅವ್ಯವಸ್ಥೆಗಳನ್ನು ಸರಿಪಡಿಸುವುದು ಅವರ ಮೊದಲ ಕರ್ತವ್ಯ. ಇಎಸ್ಐ ಆಸ್ಪತ್ರೆಯಲ್ಲಿ ಇದುವರೆಗೂ ಕೊರೋನಾ ಟೆಸ್ಟಿಂಗ್ ಲ್ಯಾಬ್ ಪ್ರಾರಂಭಗೊಂಡಿಲ್ಲ.ವೈದ್ಯಕೀಯ ಕಾಲೇಜು ಇದ್ದರೂ ಆರಂಭಗೊಳಿಸಲಾಗಿಲ್ಲ. ನಾವು ಈ ಕುರಿತು ಪ್ರಶ್ನಿಸುತ್ತಿದ್ದಂತೆಯೇ ಸಂಸದ ಉಮೇಶ್ ಜಾಧವ್ ಅವರು ಕೇಂದ್ರ ಸಚಿವರನ್ನು ಭೇಟಿಯಾಗಿ ಮನವಿ ಕೊಟ್ಟು ಪುಕ್ಕಟೆ ಪ್ರಚಾರ ತೆಗೆದುಕೊಳ್ಳುತ್ತಿದ್ದಾರೆ. ಬರೀ ಮನವಿಗಳನ್ನು ಕೊಟ್ಟು ಪ್ರಚಾರ ತೆಗೆದುಕೊಳ್ಳೋದಾದ್ರೆ, ಕೆಲಸ ಮಾಡುವವರು ಯಾರು ಎಂದು ಪ್ರಶ್ನಿಸಿದ್ದಾರೆ.
Published by: G Hareeshkumar
First published: August 2, 2020, 1:15 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading