ಬಿಜೆಪಿಗೆ ಕಮಿಷನ್, ಜೆಡಿಎಸ್ ಪಕ್ಷಕ್ಕೆ ಕುಟುಂಬ ರಾಜಕೀಯವೇ ಮುಖ್ಯ: ಮಾಜಿ ಸಚಿವ ಕೃಷ್ಣಬೈರೇಗೌಡ

ಕೋಲಾರದ ಮಾಲೂರು ಪಟ್ಟಣದಲ್ಲಿ ಕಾಂಗ್ರೆಸ್ ಶಾಸಕ ನಂಜೇಗೌಡ ಆಯೋಜಿಸಿದ್ದ ಪರಿಷತ್ ಚುನಾವಣಾ ಸಮಾವೇಶದಲ್ಲಿ ಕೋಲಾರ ಹಾಗೂ ಚಿಕ್ಕಬಳ್ಳಾಪುರ ಜಿಲ್ಲೆಯ ಕಾಂಗ್ರೆಸ್ ಶಾಸಕರು, ಮಾಜಿ ಶಾಸಕರು ಹಾಗು ಮುಖಂಡರು ಭಾಗಿಯಾಗಿದ್ದರು.

ಕೃಷ್ಣಬೈರೇಗೌಡ

ಕೃಷ್ಣಬೈರೇಗೌಡ

  • Share this:
ಸ್ಥಳೀಯ ಸಂಸ್ಥೆಗಳಿಂದ ವಿಧಾನ ಪರಿಷತ್ ಗೆ ನಡೆಯುತ್ತಿರುವ ಚುನಾವಣೆಯ (MLC Election) ಅಖಾಡ ದಿನೇ ದಿನೇ ರಂಗೇರುತ್ತಿದೆ,  ಚುನಾವಣೆ ಹಿನ್ನೆಲೆ ಕೋಲಾರ ಕಾಂಗ್ರೆಸ್ ಅಭ್ಯರ್ಥಿ ಎಮ್ ಎಲ್ ಅನಿಲ್‍ಕುಮಾರ್ (ML Anik Kumar)ಪರವಾಗಿ, ಕೋಲಾರ ಹಾಗೂ ಚಿಕ್ಕಬಳ್ಳಾಪುರ )Kolar, Chikkaballapur) ಜಿಲ್ಲೆಯ ಕಾಂಗ್ರೆಸ್ ಶಾಸಕರು ಒಗ್ಗೂಡಿ ಮಾಲೂರಿನಲ್ಲಿ  (Maluru)ಮತಯಾಚನೆ ನಡೆಸಿದರು, ಮಾಲೂರಿನ ಶ್ರೀರಂಗಂ ಕಲ್ಯಾಣ ಮಂಟಪದಲ್ಲಿ ಶಾಸಕ ನಂಜೇಗೌಡ ಆಯೋಜಿಸಿದ್ದ ಪ್ರಚಾರ ಸಭೆಯಲ್ಲಿ, ಕಾಂಗ್ರೆಸ್ ಹಿರಿಯ ಮುಖಂಡರಾದ ಬಿಕೆ ಹರಿಪ್ರಸಾದ್, ರಮೇಶ್‍ಕುಮಾರ್, ಮಾಜಿ ಸಚಿವರಾದ ಶಿವಶಂಕರ ರೆಡ್ಡಿ, ಕೃಷ್ಣಬೈರೇಗೌಡ, ಶಾಸಕರಾದ ನಂಜೇಗೌಡ, ನಾರಾಯಣಸ್ವಾಮಿ, ನಾಸಿರ್ ಅಹಮದ್, ಮಾಜಿ ಶಾಸಕರಾದ ಸುಧಾಕರ ರೆಡ್ಡಿ, ಕೊತ್ತೂರು ಮಂಜುನಾಥ್ ಹಾಗೂ ಕೈ ಅಭ್ಯರ್ಥಿ ಅನಿಲ್‍ಕುಮಾರ್ ಸೇರಿದಂತೆ ಹಲವು ಮುಖಂಡರು ಹಾಗು ನೂರಾರು ಕಾಂಗ್ರೆಸ್ ಕಾರ್ಯಕರ್ತರು, ಗ್ರಾಮ ಪಂಚಾಯ್ತಿ ಸದಸ್ಯರು ಭಾಗಿಯಾಗಿದ್ದರು.

ಸಭೆಯಲ್ಲಿ ಮಾಜಿ ಸಂಸದ ಕೆಎಚ್ ಮುನಿಯಪ್ಪ ಹಾಗೂ  ಕೆಜಿಎಫ್ ಶಾಸಕಿ ರೂಪ ಶಶಿಧರ್ ಭಾಗಿಯಾಗದೇ ಪರೋಕ್ಷವಾಗಿ ಅಭ್ಯರ್ಥಿ ಅನಿಲ್ ಕುಮಾರ್ ವಿರುದ್ದ ತಮ್ಮ ಅಸಮಾಧಾನವನ್ನ ಸೂಚಿಸಿದರು, ಕಾಂಗ್ರೆಸ್ ಅಭ್ಯರ್ಥಿ ಘೋಷಣೆಯಾದಗಲಿಂದ ಕೋಲಾರದ ಕಡೆಗೆ ಮುಖಮಾಡದ ಕೆಎಚ್ ಮುನಿಯಪ್ಪ ಸದ್ಯ ಜಿಲ್ಲೆಯ ರಾಜಕೀಯದಿಂದ ದೂರು ಉಳಿದು ಕುತೂಹಲಕ್ಕೆ ಕಾರಣವಾಗಿದೆ‌. ಆದರೆ ಇದೆಲ್ಲದರ ಮಧ್ಯೆ ಅನಿಲ್ ಕುಮಾರ್ ಗೆ ಜಿಲ್ಲೆಯ ಎಲ್ಲಾ ಕಾಂಗ್ರೆಸ್ ಶಾಸಕರು ಬೆಂಬಲ ನೀಡಿದ್ದು ಕಾಂಗ್ರೆಸ್ ಪಕ್ಷಕ್ಕೆ ಬಲ ತಂದುಕೊಟ್ಟಿದೆ.

ವಿಧಾನ ಪರಿಷತ್ ಚುನಾವಣೆ ಕೇವಲ ನಾಮಕಾವಸ್ಥೆ ಅಷ್ಟೆ

ಮಾಲೂರಿನಲ್ಲಿ ಆಯೋಜಿಸಿದ್ದ  ಪ್ರಚಾರ ಸಭೆಯಲ್ಲಿ ಮಾತನಾಡಿದ ಮಾಜಿ ಸ್ಪೀಕರ್ ರಮೇಶ್‍ಕುಮಾರ್, ಪ್ರಧಾನಿ ನರೇಂದ್ರ ಮೋದಿಯವರ ವಿರುದ್ದ ತೀವ್ರ ವಾಗ್ದಾಳಿ ನಡೆಸಿದರು, ನೋಟ್ ಬ್ಯಾನ್ ನಿಂದ ಯಾವ ಉಪಯೋಗ ಆಗಿದೆ ಎಂದು ಈಗಲಾದರು ಮೋದಿಯವರು ಹೇಳಲಿ ಎಂದು ಎರಡು ಕೈ ಮುಗಿದು ವ್ಯಂಗ್ಯವಾಡಿದರು.

ಇದನ್ನೂ ಓದಿ:  ಕೊಲೆ ಮಾಡಿಲ್ಲ, ರೇಪ್ ಮಾಡಿಲ್ಲ, ಆಸ್ತಿ ಹೊಡೆದಿಲ್ಲ: ಹಾಸನದಲ್ಲಿ ಗರಂ ಆದ ಡಿಕೆ ಸುರೇಶ್

ಜನಾಕ್ರೋಶಕ್ಕೆ ಕಾರಣವಾದ ಕಾಯ್ದೆಗಳನ್ನ ಕೇಂದ್ರ ಜಾರಿಗೆ ತರುತ್ತಿದೆ,  ರಾಜ್ಯದಲ್ಲಿ ಮುಂದೆ ಕಾಂಗ್ರೆಸ್ ಸರ್ಕಾರ ಬರುವುದು ಖಚಿತ, ಈ ವಿಧಾನಪರಿಷತ್ ಚುನಾವಣೆ ಕೇವಲ ನಾಮಕಾವಸ್ತೆ ಮಾತ್ರ ಅಷ್ಟೆ,  2023 ರ ವಿಧಾನಸಭೆ ಚುನಾವಣೆ ಮುಖ್ಯವಾಗಿದೆ, ವಿಧಾನ ಪರಿಷತ್ ಚುನಾವಣೆಯಿಂದಲೇ ಕಾಂಗ್ರೆಸ್ ಗೆಲುವು  ಆರಂಭವಾಗಲಿ ಎಂದು ರಮೇಶ್ ಕುಮಾರ್ ಭವಿಷ್ಯ ನುಡಿದರು.

ಬಿಜೆಪಿಗೆ ಕಮಿಷನ್ ಮುಖ್ಯ, ಜೆಡಿಎಸ್ ಗೆ ಕುಟುಂಬ ರಾಜಕೀಯವೇ ಮುಖ್ಯ 

ಜೆಡಿಎಸ್ ಪಕ್ಷಕ್ಕೆ ಕುಟುಂಬ ರಾಜಕಾರಣವೇ ಮುಖ್ಯ ಎಂದು ಮಾಜಿ ಸಚಿವ ಕೃಷ್ಣಬೈರೇಗೌಡ ವಾಗ್ದಾಳಿ ನಡೆಸಿದ್ದಾರೆ, ಕೋಲಾರ ಕಾಂಗ್ರೆಸ್ ಪರಿಷತ್ ಅಭ್ಯರ್ಥಿ ಅನಿಲ್ ಕುಮಾರ್ ಪರವಾಗಿ ಮಾಲೂರಿನಲ್ಲಿ ಆಯೋಜಿಸಿದ್ದ ಪ್ರಚಾರ ಸಭೆಯಲ್ಲಿ ಮಾತನಾಡಿದ ಮಾಜಿ ಸಚಿವ ಕೃಷ್ಣಬೈರೇಗೌಡ ಅವರು, ನೇರವಾಗಿ ಜೆಡಿಎಸ್ ಹಾಗೂ ಬಿಜೆಪಿ ವಿರುದ್ದ ಕಿಡಿಕಾರಿದರು.

ರಾಜ್ಯ ಹಾಗು ಜಿಲ್ಲೆಗಳಿಗೆ ಬಿಜೆಪಿ ಹಾಗು ಜೆಡಿಎಸ್ ಕೊಡುಗೆ ಏನೆಂದು ಪ್ರಶ್ನಿಸಿದ ಅವರು, ಕೋಲಾರ ಸೇರಿದಂತೆ ಹಲವು ಜಿಲ್ಲೆಗಳನ್ನ ಎರಡೂ ಪಕ್ಷಗಳು ನಿರ್ಲಕ್ಷ್ಯ ಮಾಡಿದೆ, ನೀರಾವರಿ ಯೋಜನೆಗಳನ್ನ ಜಾರಿಗೆ ಮಾಡಿದ್ದು ಕಾಂಗ್ರೆಸ್ ಸರ್ಕಾರ, ರಾಜ್ಯದಲ್ಲಿ ಅಧಿಕಾರದಲ್ಲಿರೊ ಬಿಜೆಪಿ ಸರ್ಕಾರ ಕಮೀಷನ್ ಪಡೆಯುವುದರಲ್ಲಿ ತಲ್ಲೀನವಾಗಿದೆ.

ಇದನ್ನೂ ಓದಿ: ರಾಜ್ಯದಲ್ಲಿ 16 ಓಮಿಕ್ರಾನ್ ಪ್ರಕರಣಗಳಿವೆ: ಎಚ್ ಕೆ ಪಾಟೀಲ್ ಸ್ಫೋಟಕ ಹೇಳಿಕೆ

ಇನ್ನು  ಜೆಡಿಎಸ್ ನವರು ತಮ್ಮ ಕುಟುಂಬದ ಅಭಿವೃದ್ದಿಯ ಹಿಂದೆ ಬಿದ್ದಿದ್ದಾರೆ, ಕಳೆದ ಸಮ್ಮಿಶ್ರ ಸರ್ಕಾರದಲ್ಲಿ ಜೆಡಿಎಸ್‍ಗೆ ಅಧಿಕಾರ ಸಿಕ್ಕಿತ್ತು, ಆಗಲೂ ಅವರಿಂದ ಏನೂ ಕೊಡುಗೆ ಸಿಕ್ಕಿಲ್ಲ, ಮುಂದೆಯು  ಇಂತಹವರಿಂದ ರಾಜ್ಯದ ಅಭಿವೃದ್ದಿ ಸಾಧ್ಯವಿಲ್ಲ, ರಾಜ್ಯದಲ್ಲಿ ಏನಾದರು ಒಂದು ಅಭಿವೃದ್ದಿ ಆಗಬೇಕಿದ್ದರು ಅದು ಕಾಂಗ್ರೆಸ್ ಪಕ್ಷದಿಂದ ಮಾತ್ರ ಸಾಧ್ಯ ಎಂದು ಬಿಜೆಪಿ ಹಾಗು ಜೆಡಿಎಸ್ ವಿರುದ್ದ ವಾಗ್ದಾಳಿ ನಡೆಸಿದರು.
Published by:Mahmadrafik K
First published: