ಮನಸ್ಸಿಗೆ ಬಂದಲ್ಲಿ ಕೊರೋನಾ ಚಿಕಿತ್ಸೆ ನೀಡಲು ಜನ ಜಾನುವಾರುಗಳಲ್ಲ ; ಹೆಚ್.ಕೆ.ಪಾಟೀಲ್ ಗುಡುಗು

ಎಲ್ಲಡೆ ಕೋವಿಡ್ ಆಸ್ಪತ್ರೆಗಳು ತುಂಬಿವೆ. ಹೆಚ್ಚಿನ ಬೆಡ್ ಗಳ ವ್ಯವಸ್ಥೆ ಮಾಡಲು ಸರ್ಕಾರ ಗಂಭಿರ ಚಿಂತನೆ ಮಾಡುತ್ತಿಲ್ಲ ಎಂದು ಆರೋಪಿಸಿದರು.

ಹೆಚ್ ಕೆ ಪಾಟೀಲ್​

ಹೆಚ್ ಕೆ ಪಾಟೀಲ್​

  • Share this:
ಗದಗ(ಜೂ.28): ಕೊರೋನಾ ಚಿಕಿತ್ಸೆಗೆ ಮೈದಾನ ಹಾಗೂ ಬಯಲು ಪ್ರದೇಶಗಳಲ್ಲಿ ವ್ಯವಸ್ಥೆ ಮಾಡುವುದಕ್ಕೆ ಜನರು ಜಾನುವಾರು ಅಲ್ಲ ಎನ್ನುವುದನ್ನ ಸರ್ಕಾರ ಅರ್ಥ ಮಾಡಿಕೊಳ್ಳಲಿ ಎಂದು ಸರ್ಕಾರದ ವಿರುದ್ಧ ಮಾಜಿ ಸಚಿವ ಹೆಚ್.ಕೆ. ಪಾಟೀಲ್ ಗುಡುಗಿದ್ದಾರೆ.

ಗದಗನಲ್ಲಿ ಮಾತನಾಡಿದ ಅವರು, ಯುದ್ದೋಪಾದಿಯಲ್ಲಿ ಸರ್ಕಾರ ಕೆಲಸ ಮಾಡುತ್ತಿಲ್ಲ. ಸಾರ್ವಜನಿಕರಿಗೆ ಸರ್ಕಾರದ ಗುಣಮಟ್ಟದ ಸೇವೆ ಲಭ್ಯವಾಗುತ್ತಿಲ್ಲ. ಎಲ್ಲಡೆ ಕೋವಿಡ್ ಆಸ್ಪತ್ರೆಗಳು ತುಂಬಿವೆ. ಹೆಚ್ಚಿನ ಬೆಡ್ ಗಳ ವ್ಯವಸ್ಥೆ ಮಾಡಲು ಸರ್ಕಾರ ಗಂಭಿರ ಚಿಂತನೆ ಮಾಡುತ್ತಿಲ್ಲ ಎಂದು ಆರೋಪಿಸಿದರು.

ಬಯಲು, ಮೈದಾನ ಬಿಡಿ, ಸ್ಟಾರ್ ಹೋಟೆಲ್ ಗಳನ್ನ ವಶಕ್ಕೆ ಪಡೆದು ಕೋವಿಡ್-19 ಕಾಳಜಿ ಕೇಂದ್ರ ಮಾಡಲಿ. ಅಂತ್ಯಕ್ರಿಯೆಗೆ ಜಮೀನು ಸ್ಥಳ ಹುಡುಕುತ್ತೇವೆ ಅಂತಿದ್ದರಲ್ಲಾ ನಾಚಿಕೆಯಾಗಬೇಕು ನಿಮಗೆ. ಶ್ರೀಮಂತರಿಗೆ ಜಮೀನು ಕೊಡಿಸಲು ಸುಗ್ರಿವಾಜ್ಞೆ ಮಾಡುತ್ತೀರಿ. ಜನ ಸಾಮಾನ್ಯರ ಕಾಳಜಿಗೆ ಭೂಮಿ ಹುಡುಕಲು ಹಿಂದೆಟು ಹಾಕುತ್ತೀರಾ? ಕರ್ನಾಟಕ, ಬೆಂಗಳೂರನ್ನು ನ್ಯೂಯಾರ್ಕ್, ಇಟಲಿ, ಅಮೇರಿಕಾ ಆಗುವುದಕ್ಕೆ ಯಾವತ್ತು ಬಿಡಲ್ಲ. ಇನ್ನು ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ನಿಗದಿ ಪಡಿಸಿದ ದರಕ್ಕೆ ಆಕ್ಷೇಪ ಹಿನ್ನಲೆ, ಖಾಸಗಿ ವೈದ್ಯರ ಜೊತೆ ಸಮಾಲೋಚಿಸಿ ರಾಜಿ ಸಂಧಾನ ಮಾಡಬೇಕು ಹೊರತು, ಇದು ಸಂಘರ್ಷದ ಕಾಲವಲ್ಲ ಎಂದರು.

ಇದನ್ನೂ ಓದಿ : ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕೊರೋನಾ ಆರ್ಭಟ ; ಒಂದೇ ದಿನ ಮೂರು ಸಾವು, 97 ಪ್ರಕರಣ ದಾಖಲು

ಕೋವಿಡ್-19 ತುರ್ತು ಸೇವೆಗೆ ನೇಮಕಾತಿ ಪ್ರಾರಂಭಿಸಿ. 33 ಸಾವಿರ ವೆಂಟಿಲೇಟರ್ ಬೇಕು ಅಂತ ಕೇಂದ್ರ ಸರ್ಕಾರಕ್ಕೆ ಪೂರೈಕೆ ಪತ್ರ ಬರೆದಿದ್ದರಲ್ಲಾ ಎಷ್ಟು ಬಂದಿವೆ? ಬಂದಿದ್ದು ಕೇವಲ 90 ಮಾತ್ರ. ಇದರ‌ ಮೇಲೆ ಗೊತ್ತಾಗುತ್ತೆ ನಿಮ್ಮ ಸಾಮರ್ಥ್ಯ ಎಷ್ಟು ಅಂತ ಎಂದು ಹೆಚ್ ಕೆ ಪಾಟೀಲ್ ವ್ಯಂಗ್ಯವಾಡಿದರು.

ಪಿಪಿಇ, ಮಾಸ್ಕ್ ಇಲ್ಲದಕ್ಕೆ ವೈದ್ಯರಿಗೆ ಸೋಂಕು ಹರಡುತ್ತಿದೆ ಎಚ್ಚರ ವಿರಲಿ. ಎಸ್.ಡಿ.ಆರ್.ಎಫ್, ಎನ್.ಡಿ.ಆರ್.ಎಫ್, ಎನ್.ಹೆಚ್.ಎಂ ನಿಂದ ಒಂದು ರೂಪಾಯಿ ಕೂಡ ಬರದೇ ಇರುವುದು ವಿಪರ್ಯಾಸ ಅಂತ ಸರ್ಕಾರದ ವಿರುದ್ಧ ಮಾಜಿ ಸಚಿವ ಹೆಚ್ ಕೆ ಪಾಟೀಲ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.
First published: