ಮತದಾರರ ಪಟ್ಟಿಯಿಂದ ಕೈಬಿಟ್ಟ ಹೆಸರು: ಸಹಕಾರ ಸಂಘ ಅಧಿಕಾರಿ ವಿರುದ್ಧ ಹೆಚ್.ಡಿ. ರೇವಣ್ಣ ಆರೋಪ

ಅಧಿಕಾರ ದುರ್ಬಳಕೆ ಮಾಡಿಕೊಳ್ಳುತ್ತಿರುವ ಸಹಕಾರಿ ಅಭಿವೃದ್ಧಿ ಅಧಿಕಾರಿ ಸುನೀಲ್ ಎಂಬುವವರು ತರಾತುರಿಯಲ್ಲಿ ನಗರದ ಸಂಜೀವಿನಿ ಸಹಕಾರ ಆಸ್ಪತ್ರೆಯ ಚುನಾವಣೆಯನ್ನು ಮಾಡಲು ಹೊರಟಿದ್ದಾರೆ

ಮಾಜಿ ಸಚಿವ ಹೆಚ್.ಡಿ. ರೇವಣ್ಣ

ಮಾಜಿ ಸಚಿವ ಹೆಚ್.ಡಿ. ರೇವಣ್ಣ

  • Share this:
ಹಾಸನ(ಅಕ್ಟೋಬರ್​. 19): ಹಾಸನ ಸಹಕಾರ ಸಂಘಗಳ ಮತದಾರರ ಪಟ್ಟಿಯಿಂದ ಮತದಾರ ಹೆಸರು ತೆಗೆದು ಹಾಕಿದ್ದಾರೆ ಎಂದು ಸಹಕಾರ ಸಂಘಗಳ ಉಪನಿಬಂಧಕ ಸುನೀಲ್ ವಿರುದ್ದ ಮಾಜಿ ಸಚಿವ ಹೆಚ್ ಡಿ ರೇವಣ್ಣ ಆರೋಪಿಸಿದ್ದಾರೆ. ಹಾಸನದಲ್ಲಿ ಮಾತನಾಡಿದ ಅವರು ಜಿಲ್ಲಾ ಸಹಕಾರ ಸಂಘಗಳ ಉಪನಿಬಂಧಕ ಸುನೀಲ್ ವಿರುದ್ದ ಆಕ್ರೋಶ ವ್ಯಕ್ತಪಡಿಸಿದರು. ನನ್ನ ಹೆಂಡತಿ ಲೋಕಾಯುಕ್ತ ಸರ್ಕಲ್ ಇನ್ಸ್ ಪೆಕ್ಟರ್ ಎಂದು ಸಹಕಾರ ಸಂಘಗಳ ಉಪನಿಬಂಧಕ ಸುನೀಲ್ ಹೇಳುತ್ತಿದ್ದಾನೆ. ಬಿಜೆಪಿ ಸರ್ಕಾರ ಇದೆ ಎನು ಮಾಡುವುದಕ್ಕಾಗಲ್ಲ ಎಂದು ಉಪನಿಂಬಧಕರು ಹೇಳುತ್ತಿದ್ದಾರೆ. ಹಾಸನದ ಸಂಜೀವಿನಿ ಸಹಕಾರ ಆಸ್ಪತ್ರೆ ಮತ್ತು ಜನತಾ ಬಜಾರ್ ಸಹಕಾರ ಸಂಘಗಳ ಮತದಾರರ ಪಟ್ಟಿಯಿಂದ ಸಹಕಾರ ಸಂಘಗಳ ನಿಬಂಧಕ ಸುನೀಲ್ ಎಂಬುವರೇ ಮತದಾರ ಪಟ್ಟಿಯಿಂದ ಹೆಸರು ತೆಗೆದುಹಾಕಿದ್ದಾರೆ ಎಂದು ಕಿಡಿ ಕಾರಿದರು. ಚಿಕ್ಕಮಗಳೂರು ಡಿಸಿಸಿ ಬ್ಯಾಂಕ್, ಹಾಸನದ ಸಂಜೀವಿನಿ ಆಸ್ಪತ್ರೆ, ಜನತಾ ಬಜಾರ್, ಸಕಲೇಶಪುರ ಉಪನಿಭಂದಕ ಮತ್ತು ಡಿಸಿಸಿ ಬ್ಯಾಂಕ್ ಗೂ ಈತ ಒಬ್ಬರೇ ಉಪನಿಬಂಧಕರಿದ್ದಾರೆ. ಈ ಎಲ್ಲಾ ಇಲಾಖೆಗಳಿಗೆ ಇವರೊಬ್ಬರೇ ಉಸ್ತುವಾರಿ ಇದ್ದಾನೆ ಎಂದು ತಿಳಿಸಿದರು.

ತರಾತುರಿಯಲ್ಲಿ ಸಹಕಾರ ಸಂಘಗಳ ಚುನಾವಣೆ ನಡೆಸಲು ಹೊರಟಿದ್ದಾರೆ. ಈ ಉಪನಿಬಂಧಕ ಸುನೀಲ್ ವಿರುದ್ದ ಕ್ರಮ ಕೈಗೊಳ್ಳಬೇಕು ಇಲ್ಲದಿದ್ದರೆ ಎಲ್ಲಾ ಶಾಸಕರು ಹೋರಾಟ ಮಾಡುತ್ತೇವೆ ಎಂದು ಹೆಚ್ ಡಿ ರೇವಣ್ಣ ಎಚ್ಚರಿಸಿದ್ದಾರೆ.

ಅಧಿಕಾರ ದುರ್ಬಳಕೆ ಮಾಡಿಕೊಳ್ಳುತ್ತಿರುವ ಸಹಕಾರಿ ಅಭಿವೃದ್ಧಿ ಅಧಿಕಾರಿ ಸುನೀಲ್ ಎಂಬುವವರು ತರಾತುರಿಯಲ್ಲಿ ನಗರದ ಸಂಜೀವಿನಿ ಸಹಕಾರ ಆಸ್ಪತ್ರೆಯ ಚುನಾವಣೆಯನ್ನು ಮಾಡಲು ಹೊರಟಿದ್ದಾರೆ ಎಂದು ಮಾಜಿ ಸಚಿವ ಎಚ್.ಡಿ. ರೇವಣ್ಣ ಆರೋಪಿಸಿದರು .

ಸಹಕಾರ ಸಂಘಗಳ ಉಪನಿಬಂಧಕ ಸುನೀಲ್


ಸಂಜೀವಿನಿ ಸಹಕಾರಿ ಸಂಘವು ಹಲವು ವರ್ಷಗಳ ಇತಿಹಾಸ ಹೊಂದಿದೆ ಮಾಜಿ ಶಾಸಕ ದಿವಂಗತ ಹೆಚ್. ಎಸ್ .ಪ್ರಕಾಶ್, ಸಮಾಜ ಸೇವಕರಾದ ಡಾ,ಗುರುರಾಜ್ ಹೆಬ್ಬಾರ್ ಸೇರಿದಂತೆ ಹಲವರ ಪರಿಶ್ರಮದಿಂದ ಕಟ್ಟಲಾಗಿದೆ. ಆದರೆ, ಪ್ರಕಾಶ್ ಅವರ ಮಗ ಜಿಲ್ಲಾ ಪಂಚಾಯತ್ ಉಪಾಧ್ಯಕ್ಷರಾದ ಸ್ವರೂಪ್ ಅವರ ಹೆಸರನ್ನೇ ಕೈಬಿಡಲಾಗಿದ್ದು ಇದರಲ್ಲಿ ಯಾರ ಹಸ್ತಕ್ಷೇಪ ಇದೆ ಎಂದು ತಿಳಿಯುತ್ತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ ಅವರು, ಜಿಲ್ಲಾಧಿಕಾರಿಗಳು ಇಂತಹ ಪ್ರಕರಣಗಳನ್ನು ಗಂಭೀರವಾಗಿ ಪರಿಗಣಿಸದೆ ಇದ್ದರೆ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಲಾಗುವುದು ಎಂದು ರೇವಣ್ಣ ತಿಳಿಸಿದರು.

ಇದನ್ನೂ ಓದಿ : ಕಂದಾಯ ಸಚಿವರ ಕಾಟಾಚಾರದ ಭೇಟಿ ; ರಸ್ತೆ ಮೇಲೆಯೇ ಸಮೀಕ್ಷೆ ಮಾಡಿ ವಾಪಸ್ಸಾದ ಸಚಿವ ಅಶೋಕ್

ಸಹಕಾರಿ ಅಭಿವೃದ್ಧಿ ಅಧಿಕಾರಿಯಾದ ಸುನಿಲ್ ಚಿಕ್ಕಮಗಳೂರು -ಸಕಲೇಶಪುರ -ಹಾಸನ ಸೇರಿದಂತೆ 15 ಕಡೆ ಜನತಾ ಬಜಾರ್ ಸಹಕಾರ ಸಂಘಗಳ ಚುನಾವಣಾ ಅಧಿಕಾರಿಯಾಗಿ ನೇಮಕಗೊಂಡಿದ್ದು ತಮ್ಮ ಅಧಿಕಾರ ದುರ್ಬಳಕೆ ಮಾಡಿಕೊಂಡು ಬೇಕಾ ಬಿಟ್ಟಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ ಎಂದು ದೂರಿದರು.

ಈತನ ಹೆಂಡತಿ ಲೋಕಾಯುಕ್ತ ಇನ್ಸ್​​ಪೆಕ್ಟರ್ ಆಗಿ ಕಾರ್ಯನಿರ್ವಹಿಸುತ್ತಿದ್ದು, ಆಕೆಯ ಹೆಸರು ಹೇಳಿಕೊಂಡು ದುರಾಡಳಿತ ನಡೆಸುತ್ತಿದ್ದಾರೆ ಎಂದು ಅವರು ಇತ್ತೀಚೆಗೆ ಸುನೀಲ್ ತಮ್ಮ ಹೆಂಡತಿಯನ್ನು ಕೊರೋನಾ ಚಿಕಿತ್ಸೆಗೆ ಸಂಜೀವಿನಿ ಸಹಕಾರ ಆಸ್ಪತ್ರೆಯಲ್ಲಿ ದಾಖಲು ಮಾಡಿದ್ದರು. ಲಕ್ಷ ರೂಪಾಯಿ ಆಸ್ಪತ್ರೆ ಬಿಲ್ ಪಾವತಿಸಿಲ್ಲ. ಇದರ ವಿರುದ್ಧ ಜಿಲ್ಲಾಧಿಕಾರಿಗೆ ದೂರು ಸಲ್ಲಿಸಲಾಗಿದೆ. ಆದರೆ, ಇದುವರೆಗೆ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಆಪಾದಿಸಿದರು.
Published by:G Hareeshkumar
First published: