ಜಾತಿ ಪ್ರಮಾಣಪತ್ರಕ್ಕಾಗಿ ಉಪವಾಸ ಸತ್ಯಾಗ್ರಹಕ್ಕೆ ಕುಳಿತ ಗ್ರಾಮ ಪಂಚಾಯತಿ ಮಾಜಿ ಸದಸ್ಯೆ!

ಈ ಹಿಂದೆ 5 ವರ್ಷದ ಅವಧಿಗೆ ಎಸ್.ಟಿ ಕೆಟಗೇರಿಯಲ್ಲೆ ಸದಸ್ಯೆಯಾಗಿದ್ದೆ. ಅವಾಗ ಬಿಜೆಪಿಯಲ್ಲಿ ಇದ್ದೆ. ಆಗ ಯಾವುದೇ ಸಮಸ್ಯೆ ಇರಲಿಲ್ಲ. ನನ್ನ ಜಾತಿಯ ಬಗ್ಗೆ ತಕರಾರು ಇರಲಿಲ್ಲ. ಆದರೆ ಈಗ  ಬಿಜೆಪಿಯಿಂದ ಕಾಂಗ್ರೆಸ್​ಗೆ ಹೋಗಿದ್ದಕ್ಕೆ ಅಧಿಕಾರಿಗಳ ಮೂಲಕ ಕಿರುಕುಳ ನೀಡಲಾಗುತ್ತಿದೆ. ನನಗೆ ನನ್ನ ಜಾತಿ ಪ್ರಮಾಣಪತ್ರ ನೀಡಬೇಕು. ಚುನಾವಣೆಗೆ ಸ್ಪರ್ಧಿಸಲು ಅವಕಾಶ ಕಲ್ಪಿಸಬೇಕು. ನನಗೆ ನ್ಯಾಯ ಸಿಗುವವರೆಗೂ ಉಪವಾಸ ಕೈ ಬಿಡಲ್ಲಾ ಎನ್ನುತ್ತಿದ್ದಾರೆ ಲಕ್ಷ್ಮೀಬಾಯಿ.

ಜಾತಿ ಪ್ರಮಾಣಪತ್ರಕ್ಕಾಗಿ ಉಪವಾಸ ಸತ್ಯಾಗ್ರಹ ನಡೆಸುತ್ತಿರುವ ಮಹಿಳೆ.

ಜಾತಿ ಪ್ರಮಾಣಪತ್ರಕ್ಕಾಗಿ ಉಪವಾಸ ಸತ್ಯಾಗ್ರಹ ನಡೆಸುತ್ತಿರುವ ಮಹಿಳೆ.

  • Share this:
ಚಿಕ್ಕೋಡಿ: ಗ್ರಾಮ ಪಂಚಾಯತಿ ಚುನಾವಣೆ ಅಂದ್ರೆನೆ ಹಾಗೆ. ಗ್ರಾಮೀಣ ಭಾಗದಲ್ಲಿ ತಮ್ಮ ಪಾರಪತ್ಯ ಸಾಧಿಸಲು ಸಣ್ಣ ಸಣ್ಣ ನಾಯಕರು ಇದೆ ಚುನಾವಣೆಯನ್ನು  ಪ್ರತಿಷ್ಠೆಯಾಗಿ ತೆಗೆದುಕೊಂಡು ತಮ್ಮ ತಾಕತ್ತು ತೋರಿಸಲು ಮುಂದಾಗುತ್ತಾರೆ. ಆದರೆ ಇಲ್ಲೊಂದು ಗ್ರಾಮ ಪಂಚಾಯತಿಯಲ್ಲಿ ಓರ್ವ ಮಹಿಳೆಯನ್ನು ಚುನಾವಣೆಯಿಂದ ದೂರ ಇಡಲು ಇಲ್ಲಿನ ಶಾಸಕಿ ಸಚಿವೆ ಶಶಿಕಲಾ ಜೊಲ್ಲೆ ಹಾಗೂ ಸಂಸದ ಅಣ್ಣಾಸಾಬ ಜೊಲ್ಲೆ ಅಧಿಕಾರ ದುರುಪಯೋಗ ಮಾಡಿಕೊಂಡು ತಹಸೀಲ್ದಾರ್ ಮೂಲಕ ನನಗೆ ಅನ್ಯಾಯ ಮಾಡಿದ್ದಾರೆ ಎಂದು ಆರೋಪಿಸಿ ಗ್ರಾಮ ಪಂಚಾಯತಿಯ ಮಾಜಿ ಸದಸ್ಯೆ ಒಬ್ಬರು ಉಪವಾಸ ಸತ್ಯಾಗ್ರಹ ನಡೆಸುತ್ತಿದ್ದಾರೆ.

ಹೌದು, ಇಂತಹದೊಂದು ಘಟನೆ ನಡೆದಿದ್ದು ಬೆಳಗಾವಿ ಜಿಲ್ಲೆಯ ನಿಪ್ಪಾಣಿ ತಾಲೂಕಿನ ಮಮದಾಪೂರ ಗ್ರಾಮದಲ್ಲಿಗ್ರಾಮದ ವಾರ್ಡ್ ನಂಬರ್ ಎರಡರ ಮಾಜಿ ಸದಸ್ಯೆ ಲಕ್ಷ್ಮೀಬಾಯಿ ಚೋಪಡೆ ಎಂಬುವವರು ಪಂಚಾಯತಿ ಎದುರು ಉಪವಾಸ ಧರಣಿ ಸತ್ಯಾಗ್ರಹ ನಡೆಸುತ್ತಿದ್ದಾರೆ‌. ಇದಕ್ಕೆ ಕಾರಣವಾಗಿದ್ದು ಜಾತಿ ಪ್ರಮಾಣ ಪತ್ರ. ಲಕ್ಷ್ಮೀಬಾಯಿ ಈ ಹಿಂದೆ ಬಿಜೆಪಿ ಬೆಂಬಲಿತ ಸದಸ್ಯೆಯಾಗಿದ್ದರು. 2015 ರಿಂದ 2020 ರ ವರೆಗೆ ಬಿಜೆಪಿ ಬೆಂಬಲಿತ ಅಭ್ಯರ್ಥಿಯಾಗಿ ಆಯ್ಕೆಯು ಆಗಿದ್ದರು 5 ವರ್ಷ ಯಾವುದೇ ಸಮಸ್ಯೆ ಇಲ್ಲದೆ ಲಕ್ಷ್ಮೀಬಾಯಿ ವಾರ್ಡ್‌ ನಂಬರ್ ಎರಡರಿಂದ ಎಸ್‌.ಟಿ ಕೆಟಗೇರಿ ಮೂಲಕ ಚುನಾಯಿತರಾಗಿ ಅಧಿಕಾರ ನಡೆಸಿದ್ದಾರೆ. ಪಂಚಾಯತಿ ಅವದಿ ಮುಗಿದ ಹಿನ್ನಲೆ. 2020 ರ ಡಿಸೆಂಬರ್ ನಲ್ಲಿ ಚುನಾವಣೆ ಘೋಷಣೆ ಆಗುತ್ತೆ ಲಕ್ಷ್ಮೀಬಾಯಿ ಅವರು ಬಿಜೆಪಿ ತೊರೆದು ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಯಾಗಿ ಚುನಾವಣೆ ಕಣಕ್ಕೆ ಇಳಿಯುತ್ತಾರೆ. ಲಕ್ಷ್ಮೀಬಾಯಿ ಕಾಂಗ್ರೆಸ್ ನಿಂದ ಸ್ಪರ್ಧೆ ಮಾಡಿದ್ದಾರೆ ಎಂಬ ಹಿನ್ನಲೆ ಬಿಜೆಪಿ ನಾಯಕರು ತಹಸೀಲ್ದಾರ್ ಮೇಲೆ ಒತ್ತಡ ಹೇರಿ ನಾಮಪತ್ರ ಸಲ್ಲಿಸುವ ವೇಳೆ ಅಭ್ಯರ್ಥಿಯ ಜಾತಿ ಪ್ರಮಾಣ ಪತ್ರವನ್ನೆ ಹಿಂದೆ ಪಡೆಯುವಂತೆ ಮಾಡಿದ್ದಾರೆ ಎಂಬ ಆರೋಪವಿದೆ.

ಇದನ್ನು ಓದಿ: ಡಿಎಂಕೆ ಕನಸು ನನಸಾಗಲ್ಲ, ಎಐಎಡಿಎಂ ನೇತೃತ್ವದ ಎನ್​ಡಿಎ ಮೈತ್ರಿ ಅಧಿಕಾರಕ್ಕೆ ಬರಲಿದೆ; ಸಿ.ಟಿ. ರವಿ

13/12/20 ರಲ್ಲಿ ಎಸ್.ಟಿ ಜಾತಿ ಪ್ರಮಾಣ ಪತ್ರ ನೀಡಿ ಮೂರು ದಿನದಲ್ಲಿ 16/12/20 ವಾಪಸ್ ಪಡೆಯಲಾಗುತ್ತದೆ. ಇದರಿಂದ ಲಕ್ಷ್ಮೀಬಾಯಿ ಚುನಾವಣಾ ಕಣದಿಂದ ದೂರ ಉಳಿಯುವಂತಾಗುತ್ತದೆ. ಆದರೆ ಲಕ್ಷ್ಮೀಬಾಯಿ ಬಾಯಿ ಮಾತ್ರ ಸುಮ್ಮನೆ ಇರದೆ ತಹಸೀಲ್ದಾರ್ ಕ್ರಮದ ವಿರುದ್ದ ಕೋರ್ಟ್ ಮೆಟ್ಟಿಲೇರಿ ವಾರ್ಡ್‌ ಗೆ ಚುನಾವಣೆ ನಡೆಯದಂತೆ ತಡೆಯೊಡ್ಡಿದ್ದರು. ಇನ್ನು ಅಂದು ಡಿಸೆಂಬರ್ ನಲ್ಲಿ ನಡೆದ ಚುನಾವಣೆ ಸಂದರ್ಭದಲ್ಲಿ 10 ಸದಸ್ಯರ ಪೈಕಿ ಬಿಜೆಪಿ ಬೆಂಬಲಿತ 5 ಹಾಗೂ ಕಾಂಗ್ರೆಸ್ ಬೆಂಬಲಿತ 4 ಸದಸ್ಯರು ಜಯ ಸಾಧಿಸಿದ್ದರು ಒಂದು ವಾರ್ಡ್​ಗೆ ಮಾತ್ರ ಚುನಾವಣಾ ನಡೆಸಿರಲಿಲ್ಲ.
ಸದ್ಯ ಈಗ ಮತ್ತೊಮ್ಮೆ ಅದೇ ವಾರ್ಡ್ ಗೆ ಉಪ ಚುನಾವಣೆ ಘೋಷಣೆ ಆಗಿದೆ. ಲಕ್ಷ್ಮೀಬಾಯಿ ಮತ್ತೊಮ್ಮೆ ಎಸ್.ಟಿ ಕೆಟಗೇರಿಯಲ್ಲಿ ಚುನಾವಣೆಗೆ ಸ್ಪರ್ಧಿಸಲು ಮುಂದಾಗಿದ್ದಾರೆ. ಆದರೆ ಈಗ ಮತ್ತೆ ತಹಸೀಲ್ದಾರ್ ನಮಗೆ ಜಾತಿ ಪ್ರಮಾಣ ಪತ್ರವನ್ನೇ ನೀಡುತ್ತಿಲ್ಲ. ಸುಳ್ಳು ಹೇಳಿ ನಿಮ್ಮ ಜಾತಿ ಪ್ರಮಾಣಪತ್ರಕ್ಕಾಗಿ ತಕರಾರು ಅರ್ಜಿ ಸಲ್ಲಿಸಿದ್ದಾರೆ ಎಂದು ಹೇಳಿ ನನಗೆ ಮೋಸ ಮಾಡುತ್ತಿದ್ದಾರೆ. ಸಚಿವೆ ಶಶಿಕಲಾ ಜೊಲ್ಲೆ ಹಾಗೂ ಸಂಸದ ಅಣ್ಣಾಸಾಬ ಜೊಲ್ಲೆ ಮಾತು ಕೇಳಿ ನನಗೆ ನಿಪ್ಪಾಣಿ ತಹಸೀಲ್ದಾರ್ ಜಾತಿ ಪ್ರಮಾಣದ ಪತ್ರ ನೀಡುತ್ತಿಲ್ಲ ಎಂದು ಆರೋಪಿಸಿದ್ದಾರೆ.

ಈ ಹಿಂದೆ 5 ವರ್ಷದ ಅವಧಿಗೆ ಎಸ್.ಟಿ ಕೆಟಗೇರಿಯಲ್ಲೆ ಸದಸ್ಯೆಯಾಗಿದ್ದೆ. ಅವಾಗ ಬಿಜೆಪಿಯಲ್ಲಿ ಇದ್ದೆ. ಆಗ ಯಾವುದೇ ಸಮಸ್ಯೆ ಇರಲಿಲ್ಲ. ನನ್ನ ಜಾತಿಯ ಬಗ್ಗೆ ತಕರಾರು ಇರಲಿಲ್ಲ. ಆದರೆ ಈಗ  ಬಿಜೆಪಿಯಿಂದ ಕಾಂಗ್ರೆಸ್​ಗೆ ಹೋಗಿದ್ದಕ್ಕೆ ಅಧಿಕಾರಿಗಳ ಮೂಲಕ ಕಿರುಕುಳ ನೀಡಲಾಗುತ್ತಿದೆ. ನನಗೆ ನನ್ನ ಜಾತಿ ಪ್ರಮಾಣಪತ್ರ ನೀಡಬೇಕು. ಚುನಾವಣೆಗೆ ಸ್ಪರ್ಧಿಸಲು ಅವಕಾಶ ಕಲ್ಪಿಸಬೇಕು. ನನಗೆ ನ್ಯಾಯ ಸಿಗುವವರೆಗೂ ಉಪವಾಸ ಕೈ ಬಿಡಲ್ಲಾ ಎನ್ನುತ್ತಿದ್ದಾರೆ ಲಕ್ಷ್ಮೀಬಾಯಿ.
Published by:HR Ramesh
First published: