ಬೆಂಗಳೂರು (ಅಕ್ಟೋಬರ್ 13); ಮಾಗಡಿ ಮಾಜಿ ಶಾಸಕ ಬಾಲಕೃಷ್ಣ ವಿರುದ್ದ ಪದೇ ಪದೆ ಭೂ ಕಬಳಿಕೆ ಆರೋಪ ಕೇಳಿ ಬರುತ್ತಿದೆ. 2007ರಲ್ಲಿ ಶಾಸಕರಾಗಿದ್ದಾಗ ತಾವೇ ಅಧ್ಯಕ್ಷರಾಗಿರುವ ಜನತಾ ಎಜುಕೇಷನ್ ಸೊಸೈಟಿ ಹೆಸರಿನಲ್ಲಿ ಕೋಟಿ ಕೋಟಿ ಬೆಲೆ ಬಾಳುವ ಗೋಮಾಳ ಜಮೀನನ್ನು ಹರಾಜು ಪ್ರಕ್ರಿಯೆಯಲ್ಲಿ ಖರೀದಿಸಿದ್ದು, ನಮಗೆ ಅನ್ಯಾಯ ಆಗಿದೆ. ನ್ಯಾಯ ಒದಗಿಸಿ ಎಂದು ರೈತರು ಮನವಿ ಮಾಡಿದ್ರು ಪೋಲಿಸರ ನೆರವು ಪಡೆದು ಸ್ವಾಧೀನಕ್ಕೆ ಬರಲು ಯತ್ನಿಸಿದ್ದಾರೆ. ಬೆಂಗಳೂರು ನಗರದಲ್ಲಿ ಹೇಳಿ ಕೇಳಿ ಭೂಮಿಯ ಬೇಲೆ ಗಗನ ಕುಸುಮವಾಗಿದೆ. ಇಂತಹ ಜಮೀನನ್ನು ಸ್ವಾಧೀನದಲ್ಲಿರುವ ರೈತರಿಗೆ ತಿಳಿಯದೇ ಹರಾಜು ಪ್ರಕ್ರಿಯಯಲ್ಲಿ ಅಕ್ರಮವಾಗಿ ಜನತಾ ಎಜುಕೇಷನ್ ಸೊಸೈಟಿಯವರು ಖರೀದಿಸಿದ್ದಾರೆ ಎಂದು ರೈತರು ಆರೋಪ ಮಾಡುತ್ತಿದ್ದಾರೆ.
ಬೆಂಗಳೂರು ಉತ್ತರ ತಾಲೂಕು ಲಕ್ಷ್ಮೀಪುರ ಗ್ರಾಮದ ಸರ್ವೆ ನಂಬರ್ 52ರ 6 ಎಕರೆ 17 ಕುಂಟೆ ಜಮೀನು ಈ ವಿವಾದಕ್ಕೆ ಕಾರಣವಾಗಿದೆ. 2007ರಲ್ಲಿ ಕುಮಾರಸ್ವಾಮಿ ಮುಖ್ಯಮಂತ್ರಿಯಾಗಿದ್ದಾಗ ಸರ್ಕಾರಿ ಗೋಮಾಳಗಳ ಹರಾಜು ಪ್ರಕ್ರಿಯಲ್ಲಿ ಪ್ರಭಾವ ಬಳಿಸಿ ಮಾಗಡಿ ಮಾಜಿ ಶಾಸಕ ಬಾಲಕೃಷ್ಣ ಅಧ್ಯಕ್ಷರಾಗಿರುವ ಜನತಾ ಎಜುಕೇಷನ್ ಸೊಸೈಟಿ 2 ಕೋಟಿಗೆ ಹೆಚ್ಚಿನ ಬಿಡ್ ಮಾಡಿ ಜಮೀನು ಖರೀದಿ ಮಾಡಿತ್ತು.
ಅದರೆ, ಇದುವರೆಗೂ ಸ್ವಾಧೀನಕ್ಕೆ ಬಂದಿರುವುದಿಲ್ಲ. ಜಮೀನನ್ನು ಕುದ್ದು ಜಿಲ್ಲಾಡಳಿತ ಮುಂದೆ ನಿಂತು ಜಮೀನನ್ನು ಸೊಸೈಟಿಗೆ ಗುರುತಿಸಿ ನೀಡಿರುತ್ತಾರೆ. ನ್ಯಾಯಾಲಯದ ಆದೇಶದ ಪ್ರಕಾರ ಸ್ವಾಧೀನಕ್ಕೆ ಮುಂದಾದ ವೇಳೆ ಜಮೀನು ಅನುಭವದಲ್ಲಿದ್ದ ರೈತರು ತಡೆದಿದ್ದಾರೆ.
ಸುಮಾರು 60 ವರ್ಷದಿಂದ ಸ್ವಾಧೀನದಲ್ಲಿದ್ದ ಹನುಮನರಸಯ್ಯ ಹಾಗೂ ಇತರೆ ನಾಲ್ಕೈದು ರೈತ ಕುಟುಂಬಗಳಿಗೆ ಇದೆಲ್ಲದರ ಬಗ್ಗೆ ಮಾಹಿತಿ ಇಲ್ಲದೆ, ಏಕಾ ಏಕಿ ಜಮೀನು ಪರರ ಪಾಲಾಗುತ್ತಿದೆ ಎಂದು ಗಾಬರಿಗೊಂಡು ಕಳೆದ ಕೆಲ ದಿನಗಳ ಹಿಂದೆ ರೈತರ ಕುಟುಂಬದವರು ಜಿಲ್ಲಾ ನ್ಯಾಯಾಲಯದಲ್ಲಿ ದಾವೆ ಹೂಡಿದ್ದರು. ಆದರೆ, ಈಗ ಮತ್ತೆ ಹೈ ಕೋರ್ಟ್‌ನಲ್ಲಿ ತಡೆಯಾಜ್ಞೆಗೆ ಅರ್ಜಿ ಸಲ್ಲಿಸಿದ್ದು, ಕೋವಿಡ್ ಕಾರಣ ನ್ಯಾಯಾಲಯದಲ್ಲಿ ಅರ್ಜಿ ವಿಲೇವಾರಿ ತಡವಾಗಿದೆ.
ನಮಗೆ ಸಮಯ ಕೊಡಿ ಎಂದು ಮನವಿ ಮಾಡಿದರು ಸಮಯಾವಕಾಶ ನೀಡುತ್ತಿಲ್ಲ. ನಮಗೆ ನ್ಯಾಯ ಕೊಡಿಸಿ ಎಂದು ರೈತರು ಮನವಿ ಮಾಡಿಕೊಂಡರು. ನಾವು ಭೂಮಿಗೆ ಕಂದಾಯ ಕಟ್ಟಿದ್ದೇವೆ, ಉಳುಮೆ ಚೀಟಿ ಪಡೆದಿದ್ದೀವೆ, ಗ್ರಾಂಟ್ ಸರ್ಟಿಫಿಕೇಟ್ ಸಹ ಕೊಟ್ಟಿದ್ದಾರೆ ಆದ್ರೆ ನಮ್ಮ ಬಳಿ ಹಣ ಇಲ್ಲದ ಕಾರಣ ನಮ್ಮ ಹೆಸರಿಗೆ ಜಮೀನು ಮಾಡಿಕೊಳ್ಳಲು ಆಗಿಲ್ಲ ಎಂದಿದ್ದಾರೆ. ಅಲ್ಲದೆ ಪ್ರಭಾವಿಗಳು ತಮ್ಮ ಪ್ರಭಾವ ಬೆಳಿಸಿ ಅಕ್ರಮವಾಗಿ ಜಮೀನು ಖರೀದಿಸಿದ್ದಾರೆ ಎಂದು ಮಾಜಿ ಶಾಸಕ ಬಾಲಕೃಷ್ಣ ವಿರುದ್ದ ಕಿಡಿ ಕಾರಿದರು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ