Press meet: ‘ಎಂಥಾ ಪಕ್ಷಕ್ಕೆ ದುಡಿದೆವು ಅಲ್ಲಿ ವಿಷ ಸರ್ಪವಿದೆ’, ಕುಮಾರಸ್ವಾಮಿ ವಿರುದ್ಧ ಮಾಜಿ JDS ಕಾರ್ಯಕರ್ತರ ಕಿಡಿ

‘ಜೆಡಿಎಸ್ ಪಕ್ಷದಲ್ಲಿ ಇರುವಾಗ ನನ್ನ ಕಾರ್ಯಕರ್ತರು ಬಲವಾಗಿದ್ದಾರೆ, ನಿಷ್ಠಾವಂತರು ಎನ್ನುವ ಕುಮಾರಸ್ವಾಮಿ, ಬೇರೆ ಪಕ್ಷಕ್ಕೆ ಹೋದಾಗ ಅವರನ್ನು ಭ್ರಷ್ಟರು ಎನ್ನುತ್ತಾರೆ.’

ಮಾಜಿ ಸಿಎಂ ಹೆಚ್​.ಡಿ. ಕುಮಾರಸ್ವಾಮಿ

ಮಾಜಿ ಸಿಎಂ ಹೆಚ್​.ಡಿ. ಕುಮಾರಸ್ವಾಮಿ

 • Share this:
  ಚನ್ನಪಟ್ಟಣ (ಫೆ.25): ಮಾಜಿ ಸಿಎಂ ಹಾಗೂ ಚನ್ನಪಟ್ಟಣದ ಶಾಸಕರಾದ ಹೆಚ್.ಡಿ.ಕುಮಾರಸ್ವಾಮಿ (H D Kumaraswamy) ವಿರುದ್ಧ ಬಿಜೆಪಿ ಮುಖಂಡರಾದ ಕೂರಣಗೆರೆ ರವಿ (Cooranagere Ravi), ಜಯಕುಮಾರ್ (Jayakumar), ಜಯಕುಮಾರ್ ಜೆ.ಪಿ ಜಂಟಿ ಸುದ್ದಿಗೋಷ್ಠಿ (Press meet) ನಡೆಸಿ ಆಕ್ರೋಶ  ಹೊರಹಾಕಿದ್ದಾರೆ. ನಗರದ ಪ್ರವಾಸಿ ಮಂದಿರದಲ್ಲಿ ಸುದ್ದಿಗೋಷ್ಠಿ ನಡೆಸಿ ಕಿಡಿಕಾರಿದ ಅವರು ಕುಮಾರಸ್ವಾಮಿ ಎರಡು ಬಾರಿ ಸಿಎಂ ಆಗಿದ್ದಾರೆ. ಆದರೆ ಜವಾಬ್ದಾರಿಯುತವಾಗಿ ಮಾತನಾಡುವುದನ್ನ ಕಲಿತಿಲ್ಲ. ಜೆಡಿಎಸ್ ಪಕ್ಷದಲ್ಲಿ ಇರುವಾಗ ನನ್ನ ಕಾರ್ಯಕರ್ತರು ಬಲವಾಗಿದ್ದಾರೆ, ನಿಷ್ಠಾವಂತರು ಎನ್ನುವ ಕುಮಾರಸ್ವಾಮಿ ಅವರು ಬೇರೆ ಪಕ್ಷಕ್ಕೆ ಹೋದಾಗ ಅವರನ್ನು ಭ್ರಷ್ಟರು ಎನ್ನುತ್ತಾರೆ. ಇದು ಯಾವ ನ್ಯಾಯ ಎಂದು ನೊಂದ ಕಾರ್ಯಕರ್ತರು ಪ್ರಶ್ನೆ ಮಾಡಿದ್ದಾರೆ.

  ‘ಕಿತ್ತೋದ ಪಕ್ಷಕ್ಕೆ ದುಡಿದೆವು, ವಿಷಸರ್ಪ ಇದೇ’

  ಸುದ್ದಿಗೋಷ್ಟಿ ನಡೆಸಿ ಮಾತನಾಡಿದ ಕೂರಣಗೆರೆ ರವಿ ಅವರು ಮಾಜಿ ಸಿಎಂ ಕುಮಾರಸ್ವಾಮಿಗೆ ಖಡಕ್ ಆಗಿಯೇ ಎಚ್ಚರಿಕೆ ನೀಡಿದ್ದಾರೆ. ಕುಮಾರಸ್ವಾಮಿ ಅವರೇ ನಾನು ಯಾವತ್ತು ಸಹ ನಿಮ್ಮ ಬಳಿ ಬಂದು ನನಗೆ ಸಾಲ ಇದೇ ಎಂದು ಕೈಚಾಚಿಲ್ಲ. ನನ್ನ ವೈಯಕ್ತಿಕ ವಿಚಾರವಾಗಿ ಯಾವತ್ತು ಸಹ ನಿಮ್ಮ ಬಳಿ ಬಂದಿಲ್ಲ. ಕೇವಲ ಅಭಿವೃದ್ಧಿ ವಿಚಾರವಾಗಿ ಮಾತ್ರ ನಾನು ನಿಮ್ಮನ್ನ ಸಂಪರ್ಕ ಮಾಡಿದ್ದೇನೆ. ಆದರೆ ಯಾರೋ ಹೇಳಿದ ಮಾತನ್ನ ಕೇಳಿಕೊಂಡ ನೀವು, ನನ್ನ ವಿರುದ್ಧ ಆಪಾದನೆ ಮಾಡ್ತೀರಾ , ಇದು ನಿಮ್ಮ ಘನತೆಗೆ ಸರಿ ಹೊಂದುವುದಿಲ್ಲ.

  ಇದನ್ನೂ ಓದಿ: ಮಾನ್ಯ ಸಿದ್ದರಾಮಯ್ಯನವರೇ ಅವರು ನಿಮ್ಮನ್ನು ಬಿಡೋಲ್ಲ.. Pramod Muthalik ಎಚ್ಚರಿಸ್ತಿರೋದು ಯಾರ ಬಗ್ಗೆ?

  ನಾನು ಒಂದು ಕ್ಲಬ್ ನಲ್ಲಿ ಸದಸ್ಯನಾಗಿದ್ದೇನೆ. ಆದರೆ 3 ವರ್ಷದಿಂದ ಅಲ್ಲಿಗೂ ಸಹ ಹೋಗ್ತಿಲ್ಲ ಸ್ವಾಮಿ. ನಾನು ಜೂಜಾಡಿ ಹಣ ಕಳೆದಿದ್ದರೆ ಅದು ನನ್ನ ಜವಾಬ್ದಾರಿಯಾಗಲಿದೆ. ನನ್ನ ಕುಟುಂಬದ ಜವಾಬ್ದಾರಿ ಆಗಲಿದೆ. ನೀವೇಕೆ ಅದರ ಬಗ್ಗೆ ಚಿಂತೆ ಮಾಡ್ತೀರಿ ಎಂದು ಪ್ರಶ್ನೆ ಮಾಡಿದರು. ಮಾತು ಮುಂದುವರೆಸಿದ ರವಿ ನಾವು ಇಷ್ಟು ದಿನ ಎಂತಹ ಕಿತ್ತೋದ ಪಕ್ಷಕ್ಕೆ ದುಡಿದೆವು, ಅಲ್ಲಿ ಮಾನವೀಯತೆ, ಮನುಷ್ಯತ್ವ ಇಲ್ಲದ ವಿಷ ಸರ್ಪ ಇದೇ ಎಂದು ತಿಳಿದಿರಲಿಲ್ಲ ಎಂದರು.

  ‘ಕಾರ್ಯಕರ್ತರಿಗೆ ಏನು ಮಾಡಿದ್ದೀರಾ?’

  ನೀವು ಎರಡು ಬಾರಿ ಈ ರಾಜ್ಯದ ಮುಖ್ಯಮಂತ್ರಿ ಆಗಿ ಕಾರ್ಯನಿರ್ವಹಿಸಿದ್ದೀರಿ. ಆದರೆ ನಿಮ್ಮನ್ನ ನಂಬಿದ ಕಾರ್ಯಕರ್ತರಿಗೆ ಎಷ್ಟು ಅನುಕೂಲ ಮಾಡಿದ್ದೀರಿ. ಅಧಿಕಾರ ಇಲ್ಲದ ಸಮಯದಲ್ಲಿ ನನಗೆ ಅಧಿಕಾರ ಕೊಡಿ ಎನ್ನುವ ನೀವು ಅಧಿಕಾರ ಇದ್ದಾಗ ಕಾರ್ಯಕರ್ತರು, ಮುಖಂಡರ ಬಗ್ಗೆ ಗಮನವೇ ಇರುವುದಿಲ್ಲ ಎಂದು ಕಿಡಿಕಾರಿದರು. ಇನ್ನು ಚನ್ನಪಟ್ಟಣದ ಜನತೆ ಸ್ವಾಭಿಮಾನದಿಂದ ನಿಮಗೆ ಮತ ನೀಡಿ ವಿಧಾನಸೌಧಕ್ಕೆ ಕಳುಹಿಸಿದರು. ಆದರೆ ಕ್ಷೇತ್ರದಲ್ಲಿ ಎಷ್ಟು ಸಭೆಗಳನ್ನ ನಡೆಸಿದ್ದೀರಾ ಅಂತ ಪ್ರಶ್ನೆ ಮಾಡಿದ್ರು.

  ಇದನ್ನೂ ಓದಿ: Congress: ಸಿದ್ದರಾಮಯ್ಯ, ಡಿಕೆಶಿ ಜಂಟಿ ಸುದ್ದಿಗೋಷ್ಠಿ: ಫೆ. 27ರಿಂದ ಮೇಕೆದಾಟು ಪಾದಯಾತ್ರೆ: ಈಶ್ವರಪ್ಪ ವಿರುದ್ಧ ಕಿಡಿ

  ‘ನನ್ನ ಜೊತೆ ಬಹಿರಂಗ ಚರ್ಚೆಗೆ ಬನ್ನಿ’

  ಮುಖ್ಯಮಂತ್ರಿ ಆದ ಬಳಿಕ ಕ್ಷೇತ್ರದ ಕಡೆಗೆ ಬಾರದ ನೀವು ಅಭಿವೃದ್ಧಿ ಮಾಡಿದ್ದೇನೆ ಅಂತೀರಾ, ಆದರೆ ಅಭಿವೃದ್ಧಿ ಮಾಡುವುದು ಜನಪ್ರತಿನಿಧಿಯಾದವನ ಕರ್ತವ್ಯ, ಆದರೆ ಸಾಮಾನ್ಯ ಜನರಿಗೆ ಎಲ್ಲಿ ಸಿಕ್ತಿದ್ದೀರಿ ಎಂದು ತಿಳಿಸಿದರು. ನಾನು ಜೂಜಾಡಿದೆ ಎನ್ನುವ ನೀವು ನಮ್ಮೂರಿಗೆ ಬನ್ನಿ, ನಮ್ಮನೆಗೆ ಬನ್ನಿ ಬಹಿರಂಗವಾಗಿ ಚರ್ಚೆಗೆ ಬನ್ನಿ ಅಂತ ಸವಾಲು ಹಾಕಿದ್ರು.

  ‘ನಮ್ಮನ್ನು ದುಡ್ಡು ಕೊಟ್ಟು ಕೊಂಡುಕೊಂಡಿಲ್ಲ’

  ಯಾರದ್ದೋ ಮಾತು ಕೇಳಿ ಮಾತನಾಡಿ ನಿಮ್ಮ ತನವನ್ನ ಪ್ರದರ್ಶನ ಮಾಡಬೇಡಿ. ಹಣಕ್ಕೆ ಹೋಗಿದ್ದಾರೆ  ಎಂದು ನೀವು ಆರೋಪಿಸಿದ್ದೀರಾ. ನಾವು ನಿಮ್ಮ ಜೆಡಿಎಸ್ ನಲ್ಲಿದ್ದೆವು ಆಗ ನಿಮಗೆ ಒಳ್ಳೆಯವರಾಗಿದ್ವಾ, ಈಗ ನಿಮ್ಮ ಪಕ್ಷ ಬಿಟ್ಟ ಮೇಲೆ ನಾವು ಭ್ರಷ್ಟರು ಆಗಿಬಿಟ್ವಾ. ನಾವು ಎಂಎಲ್ಎ ಗಳಲ್ಲ, ನಮಗೆ ಹಣ ಕೊಟ್ಟು ಖರೀದಿ ಮಾಡಿ ಬೊಮ್ಮಾಯಿ ಸರ್ಕಾರ ಕೆಡವಿ ನಿಮ್ಮನ್ನ ಕೂರಿಸಲು. ನಾವು ಸಾಮಾನ್ಯ ಕಾರ್ಯಕರ್ತರು ಅದನ್ನ ಅರ್ಥ ಮಾಡಿಕೊಳ್ಳಿ ಎಂದು ತೀಕ್ಷ್ಣವಾಗಿ ಪ್ರತಿಕ್ರಿಯೆ ನೀಡಿದರು. ಇನ್ನು ಜಯಕುಮಾರ್ - ಜಯಪ್ರಕಾಶ್ ಮಾತನಾಡಿ ನಿಷ್ಠಾವಂತ ಕಾರ್ಯಕರ್ತರು ಇದ್ದಾರೆ, ಅವರಿಗೆ ಬೆಲೆ ಕೊಡಿ. ಇಲ್ಲದಿದ್ದರೆ ಭವಿಷ್ಯದಲ್ಲಿ ಕಷ್ಟಕರವಾಗಲಿದೆ ಎಂದು ಕುಮಾರಸ್ವಾಮಿಗೆ ಎಚ್ಚರಿಗೆ ನೀಡಿದ್ದಾರೆ.

  ವರದಿ : ಎ.ಟಿ.ವೆಂಕಟೇಶ್
  Published by:Pavana HS
  First published: