Chamarajanagar: ಮುಂದಿನ ಬಾರಿಯೂ ನಮ್ದೆ ಸರ್ಕಾರ ಎಂದ್ರು BSY: ’ರಾಜ್ಯ ರಾಜಕೀಯದಲ್ಲಿ ಯಡಿಯೂರಪ್ಪ ಶ್ರೀಕೃಷ್ಣನಿದ್ದಂತೆ’

ಯಾರು ಏನೇ ಹೇಳದರು  ಬಿಜೆಪಿ 130 ರಿಂದ 140 ಸೀಟು ಗೆಲ್ಲೋದು ನಿಶ್ಚಿತವಾಗಿದೆ ನಾನು ಸೇರಿದಂತೆ ಸಿಎಂ ಬೊಮ್ಮಾಯಿ‌, ರಾಜ್ಯಾಧ್ಯಕ್ಷ ನಳೀನ್‌ಕುಮಾರ್ ಕಟೀಲ್ ಹಾಗು ಇತರ ನಾಯಕರು ಏಪ್ರಿಲ್‌ 1 ರಿಂದ ರಾಜ್ಯಾದ್ಯಂತ ಪ್ರವಾಸ ಮಾಡ್ತೇವೆ ಎಂದು ಯಡಿಯೂರಪ್ಪ ಹೇಳಿದ್ದಾರೆ.

ಬಿಎಸ್ ಯಡಿಯೂರಪ್ಪ.

ಬಿಎಸ್ ಯಡಿಯೂರಪ್ಪ.

  • Share this:
ಚಾಮರಾಜನಗರ (ಮಾ.30) ಇನ್ನು ಮುಂದೆ ಜಿಲ್ಲಾ ಹಾಗು ತಾಲೂಕು ಕೇಂದ್ರಗಳ ಬದಲು ಹೋಬಳಿ ಹಾಗು ಗ್ರಾಮ ಪಂಚಾಯ್ತಿ (Gram Panchati) ಕೇಂದ್ರಗಳಿಗೆ ಪ್ರವಾಸ (Tour) ಮಾಡುವುದಾಗಿ ಮಾಜಿ ಸಿಎಂ ಯಡಿಯೂರಪ್ಪ (B.S Yediyurappa) ಹೇಳಿದ್ದಾರೆ ಚಾಮರಾಜನಗರ (Chamarajanagar) ಜಿಲ್ಲೆ ಗೌಡಹಳ್ಳಿಯಲ್ಲಿ ನಡೆದ ಧಾರ್ಮಿಕ ಸಭೆಯ ನಂತರ ಮಾತನಾಡಿದ ಅವರು ಇನ್ನು ಮುಂದೆ ಗ್ರಾಮಾಂತರ ಜನರ ಸಮಸ್ಯೆ (Problem) ಆಲಿಸಿ ಅವರ ಭಾವನೆಗಳಿಗೆ ಸ್ಪಂದಿಸಿ‌ ಕೆಲಸ ಮಾಡ್ತೇನೆ‌ ಎಂದರು

ರಾಜ್ಯದಲ್ಲಿ ನೂರಕ್ಕೆ ನೂರಷ್ಟು  ಬಿಜೆಪಿ ಸರ್ಕಾರ ಮತ್ತೆ ಅಧಿಕಾರಕ್ಕೆ ಬರುವುದು ಖಚಿತವಾಗಿದೆ. ಯಾರು ಏನೇ ಹೇಳದರು  ಬಿಜೆಪಿ 130 ರಿಂದ 140 ಸೀಟು ಗೆಲ್ಲೋದು ನಿಶ್ಚಿತವಾಗಿದೆ ನಾನು ಸೇರಿದಂತೆ ಸಿಎಂ ಬೊಮ್ಮಾಯಿ‌, ರಾಜ್ಯಾಧ್ಯಕ್ಷ ನಳೀನ್‌ಕುಮಾರ್ ಕಟೀಲ್ ಹಾಗು ಇತರ ನಾಯಕರು ಏಪ್ರಿಲ್‌ 1 ರಿಂದ ರಾಜ್ಯಾದ್ಯಂತ ಪ್ರವಾಸ ಮಾಡ್ತೇವೆ ಸರ್ಕಾರದ ಕಾರ್ಯಕ್ರಮಗಳ ಬಗ್ಗೆ ಜನರಿಗೆ ಜಾಗೃತಿ ಮೂಡಿಸುವ ಮೂಲಕ ಪಕ್ಷ ಸಂಘಟಿಸುತ್ತೇವೆ ಎಂದರು

ಸಚಿವ ಸಂಪುಟ  ವಿಸ್ತರಣೆ  ಬಗ್ಗೆ ಪ್ರತಿಕ್ರಿಯಿಸಿದ ಅವರು , ಅಮಿತ್ ಶಾ ಏಪ್ರಿಲ್ 1 ರಂದು ರಾಜ್ಯಕ್ಕೆ  ಬರುತ್ತಾರೆ. ಅವರು ಜೊತೆಗೆ ಚರ್ಚೆ ಮಾಡ್ತೇವೆ. ಅಮಿತ್ ಶಾ ಏನ್ ಸಲಹೆ ಕೊಡ್ತಾರೆ ಆ ರೀತಿ ನಡೆದುಕೊಳ್ತೇವೆ  ಎಂದರು. ರಾಜ್ಯದಲ್ಲಿ ಹಿಜಾಬ್, ಸಲಾಂ ಆರತಿ, ಮುಸ್ಲಿಂ ವ್ಯಾಪಾರ ಬಾಯ್ಕಾಟ್ ವಿವಾದಗಳ  ಬಗ್ಗೆ ಉತ್ತರಿಸಿದ  ಅವರು ಆ ವಿವಾದಗಳು ಅದು ಸಹಜವಾಗಿ ಒಂದು ಹಂತಕ್ಕೆ ಬರುತ್ತವೆ. ಎಲ್ಲಾ ವಿವಾದಗಳನ್ನು ಕೊನೆ ಮಾಡುವ ಪ್ರಯತ್ನ ಮಾಡ್ತೇವೆ ಎಂದು ಹೇಳಿದರು

ಕೊಳ್ಳೇಗಾಲ ಕ್ಷೇತ್ರಕ್ಕೆ ಎನ್ ಮಹೇಶ್ ಅಭ್ಯರ್ಥಿ!

ಕೊಳ್ಳೇಗಾಲ ವಿಧಾನಸಭಾ ಕ್ಷೇತ್ರಕ್ಕೆ ಎನ್ ಮಹೇಶ್  ಅವರೇ ಬಿಜೆಪಿ ಅಭ್ಯರ್ಥಿ  ಎಂದು ಮಾಜಿ ಸಿಎಂ ಯಡಿಯೂರಪ್ಪ ಇದೇ ಸಂದರ್ಭದಲ್ಲಿ ಘೋಷಿಸಿದರು. ಬಿಎಸ್ಪಿಯಿಂದ ಉಚ್ಛಾಟನೆಗೊಂಡು ಬಿಜೆಪಿ ಸೇರ್ಪಡೆಗೊಂಡ  ಎನ್ ಮಹೇಶ್  ಅವರ ಕಾರ್ಯವೈಖರಿ ಬಗ್ಗೆ ಹೊಗಳಿದ ಅವರು  ಎನ್ ಮಹೇಶ್  ಬಗ್ಗೆ ನನಗೆ ಹೆಮ್ಮೆಯಿದೆ ವಿಧಾನಸಭೆಯಲ್ಲಿ ಅವರ ಮಾತು ಕೇಳಲು  ಇಡೀ ಸದನ ಪಕ್ಷ ಭೇದ ಮರೆತು  ಕಾತುರತೆಯಿಂದ  ಇರುತ್ತದೆ ಎನ್ ಮಹೇಶ್ ರಂತಹ ಜವಾಬ್ದಾರಿಯುತ ಶಾಸಕನನ್ನು ಆಯ್ಕೆ ಮಾಡಿದ್ದೀರಿ, ಮುಂದಿನ ಬಾರಿಯು ಸಹ ಎನ್ ಮಹೇಶ್ ರನ್ನು ಆಶೀರ್ವದಿಸಿ ಶಾಸನ ಸಭೆಗೆ ಕಳುಹಿಸಿ ನಿಮಲ್ಲಿ ಕೈ ಮುಗಿದು ಪ್ರಾರ್ಥಿಸುತ್ತೇನೆ ಎಂದು ಯಡಿಯೂರಪ್ಪ ಮನವಿ ಮಾಡಿದರು.

ಇದನ್ನೂ ಓದಿ: ಮಂಗಳೂರು ವಿವಿಯಲ್ಲಿ ಲಾಠಿ ಚಾರ್ಜ್; ಹಿಂದೂ ಧರ್ಮದ ಬಗ್ಗೆ ಮಾತನಾಡುವುದು ಕೋಮು ಪ್ರಚೋದನೆಯಾ: Kalladka Prabhakar Bhat

ರಾಜ್ಯ ರಾಜಕೀಯ ದಲ್ಲಿ ಬಿಎಸ್​ವೈ ಶ್ರೀಕೃಷ್ಣನ ಪಾತ್ರ

ರಾಜ್ಯ ರಾಜಕೀಯದಲ್ಲಿ ಇನ್ನು ಮುಂದೆ ಯಡಿಯೂರಪ್ಪ ಶ್ರೀಕೃಷ್ಣನ ಪಾತ್ರ ವಹಿಸಲಿದ್ದಾರೆ ಎಂದು ಕೊಳ್ಳೇಗಾಲ ಶಾಸಕ ಎನ್ ಮಹೇಶ್  ಇದೇ ಸಂದರ್ಭದಲ್ಲಿ  ಹೇಳಿದರುರಾಜಕೀಯ ಯುದ್ದ ಭೂಮಿಯಲ್ಲಿ ಬಿಎಸ್ವೈ ಇದುವರೆಗೆ ಅರ್ಜುನನ ಪಾತ್ರ ನಿರ್ವಹಿಸಿ ಕೆಳಗಿಳಿದಿದ್ದಾರೆ,  ಅವರು ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡಿದ ನಂತರ  ವಿಪಕ್ಷಗಳು ಅವರ ಕಥೆ ಮುಗಿಯಿತು ಎಂದು ನಿರೀಕ್ಷೆ ಮಾಡಿದ್ದವು. ಆದರೆ ಅವರು ಇನ್ನು ಮುಂದೆ ರಾಜ್ಯ ರಾಜಕೀಯ ದಲ್ಲಿ ಶ್ರೀಕೃಷ್ಣ ಪಾತ್ರ ವಹಿಸಲಿದ್ದಾರೆ ಎಂದರು.

ಯಡಿಯೂರಪ್ಪ ಈಗ ಚಿಟ್ಟೆಯಾಗಿ  ಬದಲಾಗಿದ್ದಾರೆ

ಯಡಿಯೂರಪ್ಪ ಬದಲಾವಣೆ ಆಗಿದ್ದಾರೆ ರಾಜ್ಯದಲ್ಲಿ ದೊಡ್ಡ ಪ್ರಮಾಣದಲ್ಲಿ ಬದಲಾವಣೆ ಆಗಲು  ಅವರು ಬದಲಾವಣೆ ಆಗಿದ್ದಾರೆ, ಕಂಬಳಿ ಹುಳುವಾಗಿದ್ದ ಯಡಿಯೂರಪ್ಪ ಈಗ ಚಿಟ್ಟೆಯಾಗಿ  ಬದಲಾಗಿದ್ದಾರೆ ಎಂದು ಎನ್ ಮಹೇಶ್ ಹೇಳಿದರು. ಯಡಿಯೂರಪ್ಪ ಅವರು ತಾಯಿ ಹೃದಯ ಹೊಂದಿರುವ  ಇರುವ ವ್ಯಕ್ತಿಯಾಗಿದ್ದಾರೆ , ನಂಬಿದವರನ್ನು ಎಂದಿಗು ಅವರು  ಕೈ  ಬಿಟ್ಟಿಲ್ಲ ಅವರನ್ನು ಎಲ್ಲಿಗೆ ತಲುಪಿಸಬೇಕಿತ್ತೋ ಅಲ್ಲಿಗೆ ತಲುಪಿಸಿದ್ದಾರೆ ಎಂದು ಯಡಿಯೂರಪ್ಪ ಅವರನ್ನು  ಶಾಸಕ ಎನ್ ಮಹೇಶ್ ಹಾಡಿ ಹೊಗಳಿದರು

ಇದನ್ನೂ ಓದಿ:Tipu Sultan: ಮತಾಂತರವಾಗು, ಶರಣಾಗು, ಇಲ್ಲವೇ ಪ್ರಾಣತ್ಯಾಗ ಮಾಡು ಎಂಬುದು ಟಿಪ್ಪು ರಾಜನೀತಿ: ಬಿಜೆಪಿ

ಯಡಿಯೂರಪ್ಪ ಮಾತು ಬೆಳ್ಳಿ ಮೌನ ಬಂಗಾರ

ಇದೇ ಸಂದರ್ಭದಲ್ಲಿ ಸುತ್ತೂರು ಶ್ರೀಗಳು ಸಹ ಬಿಎಸ್ವೈ ಕಾರ್ಯವೈಖರಿ ಬಗ್ಗೆ ಮೆಚ್ಚುಗೆಯ ಮಾತುಗಳನ್ನಾಡಿದರು ಯಡಿಯೂರಪ್ಪ ಹೆಚ್ಚು ಮಾತನಾಡುವುದಿಲ್ಲ, ಅವರದ್ದು ಮಾತು ಬೆಳ್ಳಿ ಮೌನ ಬಂಗಾರ,   ಏನು ಮಾಡಬೇಕೋ ಅದನ್ನು ಮಾಡಿಯೇ ತೀರುತ್ತಾರೆ  ಎಂದ ಅವರು  ಚಾಮರಾಜನಗರ ಜಿಲ್ಲೆಯ ಕೆರೆಗಳಿಗೆ ನದಿಮೂಲದಿಂದ ನೀರು ತುಂಬಿಸುವ ವಿಚಾರದಲ್ಲಿ ಹಿಂದೆ ಜಲಸಂಪನ್ಮೂಲ ಸಚಿವರಾಗಿದ್ದ ಬಸವರಾಜಬೊಮ್ಮಾಯಿ ಕಾವೇರಿ ವಿವಾದ ಇರುವುದರಿಂದ ಇದು ಸಾಧ್ಯವಿಲ್ಲ ಎಂದಿದ್ದರು. ಆದರೆ ಯಡಿಯೂರಪ್ಪ ನಾನು ತಾನೆ ಜೈಲಿಗೆ ಹೋಗೋದು ಮಾಡು ಎಂದಿದ್ದರು, ಇದು  ಯಡಿಯೂರಪ್ಪ ಅವರ ಬದ್ಧತೆಗೆ ಸಾಕ್ಷಿಯಾಗಿದೆ ಎಂದರು
Published by:Pavana HS
First published: