ನಾನು ಚನ್ನಪಟ್ಟಣದ ಶಾಸಕನಾಗಿರುವುದಕ್ಕೆ ನನ್ನ ವಿರುದ್ಧ ಮಾತನಾಡ್ತಾರೆ; ಸಿಪಿ ಯೋಗೇಶ್ವರ್​ಗೆ ಕುಮಾರಸ್ವಾಮಿ ತಿರುಗೇಟು

ನಾನು ಚನ್ನಪಟ್ಟಣದಲ್ಲಿ ಶಾಸಕನಾಗಿ ಅವರಿಗೆ ಮುಳುವಾದೆ, ಹಾಗಾಗಿ ಸದಾ ನನ್ನ ಬಗ್ಗೆ ಮಾತನಾಡುತ್ತಾರೆ. ನನ್ನ ಬಗ್ಗೆ, ಯಡಿಯೂರಪ್ಪ ಬಗ್ಗೆ ಮಾತನಾಡೋದೆ ಅವರಿಗೆ ಪ್ರಿಯ ಅಂತಾ ಯೋಗೇಶ್ವರ್ ಗೆ ಕುಮಾರಸ್ವಾಮಿ ಟಾಂಗ್ ನೀಡಿದರು.‌

ಮಾಜಿ ಸಿಎಂ ಎಚ್​​ಡಿ ಕುಮಾರಸ್ವಾಮಿ.

ಮಾಜಿ ಸಿಎಂ ಎಚ್​​ಡಿ ಕುಮಾರಸ್ವಾಮಿ.

  • Share this:
ರಾಮನಗರ(ಜು.24) : ಪರಿಜ್ಞಾನವಿಲ್ಲದ ವ್ಯಕ್ತಿಯ ಬಗ್ಗೆ ನಾನು ಮಾತನಾಡುವುದಿಲ್ಲವೆಂದು ಮಾಜಿ ಸಿಎಂ ಹೆಚ್.ಡಿ. ಕುಮಾರಸ್ವಾಮಿ ಪ್ರವಾಸೋದ್ಯಮ ಇಲಾಖೆ ಸಚಿವ ಸಿ.ಪಿ.ಯೋಗೇಶ್ಬರ್ ವಿರುದ್ಧ ವಾಗ್ಧಾಳಿ ನಡೆಸಿದರು. ರಾಮನಗರದ ಡಿಹೆಚ್ಓ ಕಚೇರಿ ಬಳಿ ಕನ್ನಡ ಕೂಟ ನ್ಯೂಯಾರ್ಕ್ ಮತ್ತು ಅಮ್ಮಾ ಫೌಂಡೇಶನ್ ಸಹಯೋಗದೊಂದಿಗೆ ಸುಮಾರು 43 ಲಕ್ಷ ರೂ.‌ವೆಚ್ಚದ ಅಗತ್ಯ ವೈದ್ಯಕೀಯ ಉಪಕರಣ ವಿತರಿಸಿದ ನಂತರ ಸುದ್ದಿಗಾರರ ಮಾತನಾಡಿದರು.

ಆ ವ್ಯಕ್ತಿಗೆ ಏನು ಮಾತನಾಡಬೇಕು ಎನ್ನುವ ಪರಿಜ್ಞಾನ ಇಲ್ಲ. ಅಂತಹವರ ಬಗ್ಗೆ ನಾನೇನು ಮಾತನಾಡಲಿ. ನಾನು ಮಂಡ್ಯ ಮೈಶುಗರ್ ವಿಚಾರವಾಗಿ ಸಿಎಂ ಭೇಟಿ ಮಾಡಿದ್ದೆ. ಖಾಸಗಿಯವರಿಗೆ ಕೊಡಬೇಡಿ ಎಂದು ಮನವಿ ಮಾಡಲು ಹೋಗಿದ್ದೆ. ನಾನೇನು ನನ್ನ ಸ್ವಂತ ಕೆಲಸಕ್ಕೆ ಹೋಗಿದ್ನಾ ಎಂದು ಯೋಗೇಶ್ವರ್ ಆರೋಪಕ್ಕೆ ತಿರುಗೇಟು ನೀಡಿದರು.

ಸರಕಾರದ ಕೆಲಸಕ್ಕಾಗಿ ನಾನು ಸಿಎಂ ಅವರನ್ನ ಭೇಟಿ ಮಾಡಿದ್ದೆ. ಜನಪ್ರತಿನಿಧಿಯಾಗಿ ನನ್ನ ಜವಾಬ್ದಾರಿ ನಿರ್ವಹಿಸಿದ್ದೇನೆ. ರಾಮನಗರದ ರೇಷ್ಮೆ ಮಾರ್ಕೆಟ್ ವಿಚಾರವಾಗಿ ವಿಧಾನಸೌಧದಲ್ಲಿ ಸಭೆಗೂ ಹೋಗಿದ್ದೆ. ಆದ್ರೆ ನಾನು ವೈಯಕ್ತಿಕ ಕೆಲಸಕ್ಕಾಗಿ ಯಾವ ಸಿಎಂ ಹತ್ತಿರ ಹೋಗಿಲ್ಲ. ನಾನು ಯಾರ ಬಳಿಯೂ ರಾಜಿ ಆಗಿಲ್ಲ. ಇಂತಹ ವ್ಯಕ್ತಿಗಳಿಂದ ರಾಜಕೀಯದಲ್ಲಿ ನಾನು ಪಾಠ ಕಲಿಯಬೇಕಿಲ್ಲ. ನಾನು ಚನ್ನಪಟ್ಟಣದಲ್ಲಿ ಶಾಸಕನಾಗಿ ಅವರಿಗೆ ಮುಳುವಾದೆ, ಹಾಗಾಗಿ ಸದಾ ನನ್ನ ಬಗ್ಗೆ ಮಾತನಾಡುತ್ತಾರೆ. ನನ್ನ ಬಗ್ಗೆ, ಯಡಿಯೂರಪ್ಪ ಬಗ್ಗೆ ಮಾತನಾಡೋದೆ ಅವರಿಗೆ ಪ್ರಿಯ ಅಂತಾ ಯೋಗೇಶ್ವರ್ ಗೆ ಕುಮಾರಸ್ವಾಮಿ ಟಾಂಗ್ ನೀಡಿದರು.‌ ಸರ್ಕಾರ ಧರ್ಮಕ್ಕೆ ಕೆಲಸ ಮಾಡುತ್ತಿದೆ, ಸಾರ್ವಜನಿಕರ ಕೆಲಸಕ್ಕಾಗಿ ಸರ್ಕಾರ ಇದೇ ಎಂದರು.

ಇದನ್ನೂ ಓದಿ:Karnataka Unlock: ನಾಳೆಯಿಂದ ರಾಜ್ಯದಲ್ಲಿ ಧಾರ್ಮಿಕ ಕೇಂದ್ರಗಳನ್ನು ತೆರೆಯಲು ಅನುಮತಿ; ಜಾತ್ರೆ, ಉತ್ಸವಕ್ಕಿಲ್ಲ ಅವಕಾಶ...!

ಚನ್ನಪಟ್ಟಣ ಕ್ಷೇತ್ರ ಕಳೆದುಕೊಂಡ ನೋವಲ್ಲಿ ಸಿ.ಪಿ.ಯೋಗೇಶ್ವರ್

ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ವಿರುದ್ಧ ಸಚಿವ ಸಿ.ಪಿ.ಯೋಗೇಶ್ವರ್ ಪದೇ ಪದೇ ವಾಗ್ದಾಳಿ ನಡೆಸುತ್ತಲೇ ಇದ್ದಾರೆ. ಈ ವಿಚಾರವಾಗಿ ಹೆಚ್.ಡಿ.ಕುಮಾರಸ್ವಾಮಿಯವರನ್ನ ಪ್ರಶ್ನೆ ಮಾಡಿದರೆ ಚನ್ನಪಟ್ಟಣ ಕ್ಷೇತ್ರದಲ್ಲಿ ನಾನು ಗೆದ್ದಿದ್ದೇನೆ. ಅದಕ್ಕಾಗಿ ಪದೇಪದೇ ನನ್ನ ವಿರುದ್ಧ ಮಾತನಾಡ್ತಾರೆ ಎಂದು ವ್ಯಂಗ್ಯವಾಡಿದ್ದಾರೆ. ಆದರೆ ಯೋಗೇಶ್ವರ್ ಸಹ ಯಾವುದೇ ವಿಚಾರ ಇಲ್ಲದಿದ್ದರೂ ಸಹ ಕುಮಾರಸ್ವಾಮಿ ವಿಚಾರವಾಗಿ ಟೀಕೆ ಮಾಡುವಲ್ಲಿ ಸದಾ ಮುಂದಿರುತ್ತಾರೆ.

ಬಿಜೆಪಿ ಸರ್ಕಾರ ರಚನೆಯಾದ ದಿನದಿಂದಲೂ ಸಹ ಸಿಎಂ ಯಡಿಯೂರಪ್ಪ ವಿರುದ್ಧವಾಗಿ ಮಾತನಾಡುತ್ತಿದ್ದ ಯೋಗೇಶ್ವರ್ ಜೊತೆಗೆ ಕುಮಾರಸ್ವಾಮಿಗೂ ಸಹ ಟಾಂಗ್ ಕೊಡುತ್ತಿದ್ದರು. ಸಿಎಂ ಯಡಿಯೂರಪ್ಪ ನವರ ಸರ್ಕಾರ ಮೂರು ಪಾರ್ಟಿ ಸರ್ಕಾರ ಎಂದು ಟೀಕೆ ಮಾಡಿದ್ದ ಯೋಗೇಶ್ವರ್ ರಾಜ್ಯ ಬಿಜೆಪಿ ನಾಯಕರ ಕೆಂಗಣ್ಣಿಗೆ ಗುರಿಯಾಗಿದ್ದರು. ಸಿಎಂ ಯಡಿಯೂರಪ್ಪ ವಿರುದ್ಧ ಇಷ್ಟೆಲ್ಲ ಮಾತನಾಡುತ್ತಿದ್ದರೂ ಸಹ ಪಕ್ಷದ ಹೈಕಮಾಂಡ್ ಮಾತ್ರ ಯೋಗೇಶ್ವರ್ ವಿರುದ್ಧ ಯಾವುದೇ ಕ್ರಮವಹಿಸಲಿಲ್ಲ. ಯಾಕೆಂದರೆ ಹೈಕಮಾಂಡ್ ಗೂ ಸಹ ಇದೇ ಬೆಳವಣಿಗೆಯ ಅನಿವಾರ್ಯವಿತ್ತು.

ಇದನ್ನೂ ಓದಿ:Cow Dung: ಅಮೆಜಾನ್‌ನಲ್ಲಿ ಸಗಣಿ ಬೆರಣಿಯನ್ನು ಮಾರಿ ದುಡ್ಡು ಸಂಪಾದಿಸುತ್ತಿದ್ದಾರೆ ಈ ಯುವಕರು..!

ಇನ್ನು ನಮ್ಮ ಸರ್ಕಾರದ ಜೊತೆಗೆ ಕುಮಾರಸ್ವಾಮಿ ಬಹಳ ಒಳ್ಳೆಯ ಸಂಪರ್ಕ ಹೊಂದಿದ್ದಾರೆ. ಅವರು ಹೇಳಿದ ರೀತಿ ಎಲ್ಲಾ ನಡೆಯುತ್ತದೆ, ನನ್ನ ಮಾತು ನಡೆಯಲ್ಲ ಎಂದಿದ್ದ ಯೋಗೇಶ್ವರ್, ಈಗ ಕುಮಾರಸ್ವಾಮಿಯಿಂದ ಯಡಿಯೂರಪ್ಪ ದೂರ ಇದ್ದಿದ್ದರೇ ಸರ್ಕಾರ ಉಳಿಯುತ್ತಿತ್ತು ಎಂಬ ದ್ವಂದ್ವಾರ್ಥದಲ್ಲಿ ಹೇಳಿಕೆ ನೀಡಿದ್ದಾರೆ.

ಒಟ್ಟಾರೆ ಚನ್ನಪಟ್ಟಣ ಕ್ಷೇತ್ರದಲ್ಲಿ ಹೆಚ್.ಡಿ.ಕುಮಾರಸ್ವಾಮಿ ಅಭಿವೃದ್ಧಿ ಕೆಲಸ ಕಾರ್ಯಗಳಲ್ಲಿ ಮುಂದಿದ್ದಾರೆ. ಜೊತೆಗೆ ಕ್ಷೇತ್ರದಲ್ಲಿ ಜನಪರವಾದ ಕೆಲಸಗಳು ಹೆಚ್ಚಾಗಿ ನಡೆಯುತ್ತಿವೆ. 2023 ರ ಸಾರ್ವತ್ರಿಕ ಚುನಾವಣೆ ಕೂಡ ಹತ್ತಿರವಾಗುತ್ತಿದ್ದು, ಕುಮಾರಸ್ವಾಮಿ ವಿರುದ್ಧ ಮಾತನಾಡಿ ತನ್ನ ಅಸ್ತಿತ್ವ ಉಳಿಸಿಕೊಳ್ಳುವ ಪ್ರಯತ್ನದಲ್ಲಿ ಯೋಗೇಶ್ವರ್ ಇದ್ದಾರೆ. ಆದರೆ ಅವರ ಈ ಪ್ರಯತ್ನ ಎಷ್ಟು ಸಫಲವಾಗಲಿದೆ ಎಂದು ಕಾಲವೇ ಉತ್ತರಿಸಬೇಕಿದೆ.

(ವರದಿ : ಎ.ಟಿ.ವೆಂಕಟೇಶ್)
Published by:Latha CG
First published: