HOME » NEWS » District » FORMER CM FAN WHO NAMED HIS CHILD SIDDARAMAIAH SBR MAK

ಕೊಪ್ಪಳ; ತನ್ನ ಮಗುವಿಗೆ ಸಿದ್ದರಾಮಯ್ಯ ಎಂದು ನಾಮಕರಣ ಮಾಡಿದ ಮಾಜಿ ಸಿಎಂ ಅಭಿಮಾನಿ!

ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿ ಮಾಡಿರುವ ಜನರ ಕಲ್ಯಾಣ ಯೋಜನೆಗಳಿಂದ ಅವರ ಅಭಿಮಾನಿಗಳು ಹಲವರು ಇದ್ದಾರೆ. ಸಿದ್ದರಾಮಯ್ಯ ನವರ ಮೇಲಿನ ಅಭಿಮಾನವನ್ನು ಈ ರೀತಿಯಾಗಿ ವ್ಯಕ್ತಪಡಿಸುತ್ತಿದ್ದಾರೆ ಎಂದು ಮಂಜುನಾಥನ ಸ್ನೇಹಿತರು ಹೇಳಿದ್ದಾರೆ.

news18-kannada
Updated:June 24, 2021, 7:20 AM IST
ಕೊಪ್ಪಳ; ತನ್ನ ಮಗುವಿಗೆ ಸಿದ್ದರಾಮಯ್ಯ ಎಂದು ನಾಮಕರಣ ಮಾಡಿದ ಮಾಜಿ ಸಿಎಂ ಅಭಿಮಾನಿ!
ಮಗುವಿನ ನಾಮಕರಣ ಕಾರ್ಯಕ್ರಮ.
  • Share this:
ಕೊಪ್ಪಳ: ಕಾಂಗ್ರೆಸ್ ಪಕ್ಷದಲ್ಲಿ ಈಗ ಮುಂದಿನ‌ ಮುಖ್ಯಮಂತ್ರಿ ಸಿದ್ದರಾಮಯ್ಯ ಆಗ್ತಾರೆ ಎಂಬ ಬಗ್ಗೆ ತೀವ್ರ ಚರ್ಚೆ ನಡೆಯುತ್ತಿದೆ. ಇದೇ ಸಂದರ್ಭದಲ್ಲಿ ನಾಡಿನ ಜನತೆ ತಮ್ಮ ನೆಚ್ಚಿನ ನಾಯಕ ಸಿದ್ದರಾಮಯ್ಯ ನವರನ್ನು ಆರಾಧಿಸುತ್ತಿದ್ದಾರೆ. ತಮ್ಮ ನಾಯಕರಾದ ಸಿದ್ದರಾಮಯ್ಯ ಹೆಸರನ್ನು ತಮ್ಮ ಮಗನಿಗೆ ನಾಮಕರಣ ಮಾಡಿ ಅಭಿಮಾನ ಮೆರೆದಿದ್ದಾರೆ. ಸಿದ್ದರಾಮಯ್ಯ ನಾಡಿನ ಜನ ಸಾಮಾನ್ಯರಲ್ಲಿ ಮನೆ ಮಾತಾಗಿರುವುದಕ್ಕೆ ಸಾಕ್ಷಿಯಾಗಿದೆ. ಇಲ್ಲಿ ಸಂಭ್ರಮ ಮನೆ ಮಾಡಿತ್ತು, ಹುಟ್ಟಿದ ಮಗನಿಗೆ ನಾಮಕರಣ ಮಾಡುವ ಸಂದರ್ಭ, ತೊಟ್ಟಿಲಿನಲ್ಲಿ 21 ದಿನದ ಮಗನನ್ನು ಹಾಕಿ ಮಗುವಿನ ಅತ್ತೆ ಮಗುವಿನ ಕಿವಿಯಲ್ಲಿ ಮೂರು ಬಾರಿ ಸಿದ್ದರಾಮಯ್ಯ, ಸಿದ್ದರಾಮಯ್ಯ, ಸಿದ್ದರಾಮಯ್ಯ ಎಂದು ಹೇಳಿ ನಾಮಕರಣ ಮಾಡಿದ್ದು, ಇಡೀ ಜೀವನ ಈ ಮಗು ಇದೇ ಹೆಸರಿನಿಂದ ಕರೆಸಿಕೊಳ್ಳುತ್ತದೆ.

ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಕಟ್ಟಾಭಿಮಾನಿಯಾಗಿರುವ ಕೊಪ್ಪಳ ಜಿಲ್ಲೆಯ ಕುಕನೂರು ತಾಲೂಕಿನ ದ್ಯಾಂಪುರದ ರೈತ ಮಂಜುನಾಥ ಹಾಗು ಪತ್ನಿ ನೇತ್ರಾವತಿಯವರ ಮೊದಲು ಮಗುವಿಗೆ ಸಿದ್ದರಾಮಯ್ಯ ಎಂದು ಶಾಸ್ತ್ರೋಕ್ತವಾಗಿ ನಾಮಕರಣ ಮಾಡಿದರು. ಮಂಜುನಾಥನಿಗೆ ಸಿದ್ದರಾಮಯ್ಯ ಬಗ್ಗೆ ಎಲ್ಲಿಲ್ಲದ ಅಭಿಮಾನ, ಅವರ ಅನ್ನಭಾಗ್ಯ, ಸೇರಿದಂತೆ ವಿವಿಧ ಕಲ್ಯಾಣ ಯೋಜನೆಗಳಿಂದಾಗಿ ಅವರ ಅಭಿಮಾನಿಯಾಗಿರುವ ಅವರು ತಮಗೆ ಮಗನಿಗೆ ಸಿದ್ದರಾಮಯ್ಯ ಎಂಬ ಹೆಸರಿಡಬೇಕೆಂದು ನಿಶ್ಚಿಯಿಸಿಕೊಂಡಿದ್ದು, ಅದರಂತೆ ಮಗನಿಗೆ ಸಿದ್ದರಾಮಯ್ಯ ಎಂದು ನಾಮಕರಣ ಮಾಡಿದ್ದಾರೆ.

ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿ ಮಾಡಿರುವ ಜನರ ಕಲ್ಯಾಣ ಯೋಜನೆಗಳಿಂದ ಅವರ ಅಭಿಮಾನಿಗಳು ಹಲವರು ಇದ್ದಾರೆ. ಸಿದ್ದರಾಮಯ್ಯ ನವರ ಮೇಲಿನ ಅಭಿಮಾನವನ್ನು ಈ ರೀತಿಯಾಗಿ ವ್ಯಕ್ತಪಡಿಸುತ್ತಿದ್ದಾರೆ ಎಂದು ಮಂಜುನಾಥನ ಸ್ನೇಹಿತರು ಹೇಳಿದ್ದಾರೆ.

ಇದನ್ನೂ ಓದಿ: ಕೋಲ್ಕತ್ತಾ| ತಲೆ ಬೋಳಿಸಿ ಗಂಗಾ ಜಲದಿಂದ ಪ್ರಾಯಶ್ಚಿತ್ತ ಮಾಡಿ ಬಿಜೆಪಿಯಿಂದ ಟಿಎಂಸಿಗೆ ಮರಳಿದ 200 ಕಾರ್ಯಕರ್ತರು!

ಸಿದ್ದರಾಮಯ್ಯ ಎಂಬ ಹೆಸರನ್ನು ನಾಮಕರಣ ಮಾಡಿದ ಮಂಜುನಾಥ ದಂಪತಿಗಳು ಇಂದು ಬಂದು ಭಾಂದವರಿಗೆ ಭರ್ಜರಿ ಊಟ ಹಾಕಿಸಿದರು, ಸಾಮಾನ್ಯವಾಗಿ ಬಹುತೇಕರು ತಮ್ಮ ಮಕ್ಕಳಿಗೆ ದೇವರು ಹೆಸರಿಡುತ್ತಾರೆ. ಇನ್ನೂ ಕೆಲವರು ಮಾತಿಗೆ ಇಂಥವರ ಹೆಸರು ನಮ್ಮ ಮಕ್ಕಳಿಗೆ ಹೆಸರಿಡಬೇಕು ಎನ್ನುತ್ತಾರೆ ಅದೇ ರೀತಿ ಮಂಜುನಾಥ ತಮ್ಮ ಮೊದಲು ಮಗನಿಗೆ ಸಿದ್ದರಾಮಯ್ಯ ಎಂದು ಹೆಸರಿಟ್ಟು ಅಭಿಮಾನ ಮೆರೆದಿದ್ದಾರೆ.

ಸಿದ್ದರಾಮಯ್ಯಗೂ ಕೊಪ್ಪಳ ಜಿಲ್ಲೆಗೆ ಮೊದಲಿನಿಂದಲೂ ಬಾಂಧವ್ಯವಿದೆ, 1991 ರಲ್ಲಿ ಜನತಾದಳದಿಂದ ಕೊಪ್ಪಳ ಲೋಕಸಭೆಗೆ ಸ್ಪರ್ಧಿಸಿದ್ದರು, ಆದರೆ ಆಗ ಅವರು ಇಲ್ಲಿ ಸೋಲು ಅನುಭವಿಸಿದರೂ ಆಗಾಗ ಕೊಪ್ಪಳಕ್ಕೆ ಬರುವ ಸಿದ್ದರಾಮಯ್ಯ ಮೊದಲಿ ನಿಂದಲೂ ಜಿಲ್ಲೆಯ ಬಗ್ಗೆ ಅಭಿಮಾನ ವ್ಯಕ್ತಪಡಿಸುತ್ತಲೆ ಇದ್ದಾರೆ. ಈ ಭಾಗಕ್ಕೆ ಬಂದಾಗ ತಾವು ಇಲ್ಲಿ ಸ್ಪರ್ಧಿಸಿದ್ದರ ಬಗ್ಗೆ ಹೇಳುತ್ತಲೆ ಇರುತ್ತಾರೆ. ಅಲ್ಲದೆ ಸಿದ್ದರಾಮಯ್ಯ ಕೊಪ್ಪಳ ವಿಧಾನಸಭಾ ಕ್ಷೇತ್ರಕ್ಕೆ ಸ್ಪರ್ಧಿಸುತ್ತಾರೆ ಎಂಬ ಚರ್ಚೆ ಯೂ ಹಿಂದೆ ನಡೆದಿತ್ತು.

ಇದನ್ನೂ ಓದಿ: Delta Plus Variant| ಬೆಂಗಳೂರಿಗೂ ಕಾಲಿಟ್ಟ ಡೆಲ್ಟಾ ಪ್ಲಸ್​ ಸೋಂಕು; ಓರ್ವ ವೃದ್ಧನಲ್ಲಿ ವೈರಸ್​ ಪತ್ತೆ!ಸಿದ್ದರಾಮಯ್ಯ ಸಿಎಂ ಆಗಿದ್ದಾಗ ನೀಡಿದ ಅನ್ನಭಾಗ್ಯ, ಇಂದಿರಾ ಕ್ಯಾಂಟಿನ್, ಕ್ಷೀರಭಾಗ್ಯ, ಶಾದಿ ಭಾಗ್ಯಗಳಿಂದ ಸಾಕಷ್ಟು ಬಡವರ ಪರ ಯೋಜನೆ ರೂಪಿಸಿದ್ದಾರೆ ಎನ್ನುವ ಕಾರಣಕ್ಕೆ ನಾಡಿನಲ್ಲಿ ಅವರದೇ ಆದ ಫ್ಯಾನ ಫಾಲೋವರ್ ಇದೆ, ಇಂಥ ಫಾಲೋವರ್ ಗಳಲ್ಲೊಬ್ಬರಾದ ಮಂಜುನಾಥ ತಮ್ಮ ಅಭಿಮಾನಕ್ಕಾಗಿ ಮಗನಿಗೆ ಸಿದ್ದರಾಮಯ್ಯ ಹೆಸರಿಟ್ಟಿದ್ದಾರೆ. ನಾಮಕರಣಗೊಂಡ ಮಗ ಮುಂದಿನ ಸಿದ್ದರಾಮಯ್ಯ ಹೆಸರು ಮುಂದುವರಿಯುವಂತೆ ಮಾಡಿದೆ.
Youtube Video

ನ್ಯೂಸ್​​​18 ಕನ್ನಡ ಕಳಕಳಿ: ಕೊರೋನಾ ಪಾಸಿಟಿವ್​ ಕೇಸ್​ಗಳ ಸಂಖ್ಯೆ ರಾಜ್ಯದಲ್ಲಿ ತಗ್ಗಿದೆಯಾದರೂ ಸೋಂಕಿನ ಅಪಾಯದಿಂದ ಸಂಪೂರ್ಣವಾಗಿ ಇನ್ನೂ ಯಾರೂ ಸುರಕ್ಷಿತರಲ್ಲ. ಹೀಗಾಗಿ ಪ್ರತಿಯೊಬ್ಬರು ಕೋವಿಡ್​​ ನಿಯಮಗಳಾದ ಮಾಸ್ಕ್​​ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಮರೆಯಬಾರದು. ಆದಷ್ಟು ಶೀಘ್ರವೇ ಲಸಿಕೆ ಪಡೆದು ಸೋಂಕಿನ ವಿರುದ್ಧದ ಯುದ್ಧದಲ್ಲಿ ಪ್ರತಿಯೊಬ್ಬರು ಕೈ ಜೋಡಿಸಬೇಕು. ಲಾಕ್​​ಡೌನ್​ ನಿಯಮಗಳನ್ನು ಕಟ್ಟುನಿಟ್ಟಿನಿಂದ ಪಾಲಿಸಿ ಸೋಂಕಿನಿಂದ ತಮ್ಮನ್ನು ತಾವು ಕಾಪಾಡಿಕೊಳ್ಳುವ ಪ್ರತಿಜ್ಞೆ ತೆಗೆದುಕೊಳ್ಳಬೇಕು. ನಾವು ಸುರಕ್ಷಿತವಾಗಿ ಇದ್ದು, ನಮ್ಮಿಂದ ಇತರರಿಗೆ ಸೋಂಕು ಹಬ್ಬದಂತೆ ಜವಾಬ್ದಾರಿಯುತವಾಗಿ ನಡೆದುಕೊಳ್ಳಬೇಕು.
Published by: MAshok Kumar
First published: June 24, 2021, 7:20 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories