ವನ್ಯಜೀವಿಗಳ ದೃಶ್ಯ ಮತ್ತು ಮಾಹಿತಿ ಹಂಚಿಕೆ ಆರೋಪ ; ಅರಣ್ಯ ಅಧಿಕಾರಿಗಳಿಂದ ನೋಟೀಸ್

ಬನ್ನೇರುಘಟ್ಟ ಅರಣ್ಯದಂಚಿನ ಗ್ರಾಮ ಜೈಪುರದೊಡ್ಡಿ ವಾಸಿಯಾದ ವಿಷ್ಣು ನಾರಾಯಣ್ ಎಂಬುವವರಿಗೆ ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನವನ ವ್ಯಾಪ್ತಿಯ ಉಪ ಅರಣ್ಯ ಸಂರಕ್ಷಣಾಧಿಕಾರಿ ನೋಟೀಸ್ ನೀಡಿ ಎಚ್ಚರಿಕೆ ನೀಡಿದ್ದಾರೆ

news18-kannada
Updated:August 14, 2020, 9:29 PM IST
ವನ್ಯಜೀವಿಗಳ ದೃಶ್ಯ ಮತ್ತು ಮಾಹಿತಿ ಹಂಚಿಕೆ ಆರೋಪ ; ಅರಣ್ಯ ಅಧಿಕಾರಿಗಳಿಂದ ನೋಟೀಸ್
ಸಾಂದರ್ಭಿಕ ಚಿತ್ರ
  • Share this:
ಆನೇಕಲ್(ಆಗಸ್ಟ್​.14): ತಮ್ಮ ತೋಟದ ಬಳಿ ಸುಳಿದಾಡಿದ್ದ ಹುಲಿ ಮತ್ತು ಕರಡಿಗಳ ದೃಶ್ಯಗಳು ಮತ್ತು ಮಾಹಿತಿಯನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದ ವ್ಯಕ್ತಿಯ ವಿರುದ್ದ ಅರಣ್ಯ ಇಲಾಖೆ ಅಧಿಕಾರಿಗಳು ಎಚ್ಚರಿಕೆ ನೋಟೀಸ್ ನೀಡಿರುವ ಘಟನೆ ಬೆಂಗಳೂರು ಹೊರವಲಯ ಆನೇಕಲ್ ತಾಲೂಕಿನ ಬನ್ನೇರುಘಟ್ಟ ಬಳಿ ನಡೆದಿದೆ. 

ಬನ್ನೇರುಘಟ್ಟ ಅರಣ್ಯದಂಚಿನ ಗ್ರಾಮ ಜೈಪುರದೊಡ್ಡಿ ವಾಸಿಯಾದ ವಿಷ್ಣು ನಾರಾಯಣ್ ಎಂಬುವವರಿಗೆ ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನವನ ವ್ಯಾಪ್ತಿಯ ಉಪ ಅರಣ್ಯ ಸಂರಕ್ಷಣಾಧಿಕಾರಿ ನೋಟೀಸ್ ನೀಡಿ ಎಚ್ಚರಿಕೆ ನೀಡಿದ್ದಾರೆ. ಇದೇ ತಿಂಗಳ 10 ನೇ ರಂದು ವಿಷ್ಣು ನಾರಾಯಣ್ ಎಂಬುವವರು ತಮ್ಮ ತೋಟದಲ್ಲಿ ಅಳವಡಿಸಿದ್ದ ಸಿಸಿ ಕ್ಯಾಮೆರಾಗಳಲ್ಲಿ ಸೆರೆಯಾಗಿದ್ದ ಹುಲಿ ಮತ್ತು ಕರಡಿ ಚಲನವಲನದ ದೃಶ್ಯಗಳು ಮತ್ತು ಮಾಹಿತಿಯನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.

ಮಾಹಿತಿ ತಿಳಿದ ಕೂಡಲೇ ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನವನ ಅಧಿಕಾರಿಗಳು ವನ್ಯಜೀವಿಗಳ ದೃಶ್ಯಗಳು ಮಾಹಿತಿಯನ್ನು ಯಾರಿಗೂ ಹಂಚಿಕೊಳ್ಳಬಾರದು ಎಂದು ಎಚ್ಚರಿಕೆ ನೀಡಿದ್ದಾರೆ.

ಅರಣ್ಯ ಅಧಿಕಾರಿಗಳ ಎಚ್ಚರಿಕೆ ನಡುವೆಯು Wildlife activities ಎಂಬ ವಾಟ್ಸಾಪ್ ಗ್ರೂಪ್​​ನ ಲ್ಲಿ ವಿಷ್ಣು ನಾರಾಯಣ್ ಎಂಬುವವರು ಹುಲಿ ಮತ್ತು ಕರಡಿ ದೃಶ್ಯಗಳು ಮತ್ತು ಅವುಗಳು ಕಾಣಿಸಿಕೊಂಡ ಪ್ರದೇಶದ ಬಗ್ಗೆ ಮಾಹಿತಿ ಹಂಚಿಕೊಂಡಿದ್ದಾರೆ ಎಂದು ನೋಟೀಸ್ ನೀಡಲಾಗಿದೆ. ವನ್ಯಜೀವಿಗಳ ದೃಶ್ಯ, ಪೋಟೋ ಮತ್ತು ಸ್ಥಳದ ಮಾಹಿತಿ ಹಂಚಿಕೊಳ್ಳುವುದು ವನ್ಯಜೀವಿ ವನ್ಯಸಂರಕ್ಷಣಾ ಕಾಯ್ದೆ- 1972 ಷೆಡ್ಯೂಲ್ 1 ಪ್ರಕಾರ ಅಪರಾಧ ಮತ್ತು ಕಾನೂನು ಉಲ್ಲಂಘನೆಯಾಗಿದೆ.

ಇದನ್ನೂ ಓದಿ : ಇನ್ನೂ ಬಣ್ಣ ಹಚ್ಚದ ಗಣಪ ; ಸಾರ್ವಜನಿಕ ಸ್ಥಳಗಳಲ್ಲಿ ಗಣೇಶ ಪ್ರತಿಷ್ಠಾಪನೆಗೆ ಸಂಘಟನೆಗಳ ಪಟ್ಟು

ಮಾತ್ರವಲ್ಲದೆ ಈ ರೀತಿಯ ಮಾಹಿತಿ ವನ್ಯಜೀವಿಗಳ ಕಳ್ಳ ಬೇಟೆಯಾಡುವವರಿಗೆ ನೆರವಾಗುವ ಸಾಧ್ಯತೆಯೇ ಹೆಚ್ಚು. ಹಾಗಾಗಿ ದೃಶ್ಯಗಳು ಹಂಚಿಕೆಯಾಗಿರುವ ಪ್ರಾಣಿಗಳಾದ ಹುಲಿ ಮತ್ತು ಕರಡಿಯನ್ನು ವನ್ಯಜೀವಿಗಳ ಕಳ್ಳರು ಬೇಟೆಯಾಡಿದರೆ ನಿಮ್ಮ ಮೇಲೂ ಮೊಕದ್ದಮೆ ದಾಖಲಿಸುವ ಎಚ್ಚರಿಕೆ ನೀಡಿ ಬನ್ನೇರುಘಟ್ಟ ಅರಣ್ಯ ಉಪ ಸಂರಕ್ಷಣಾಧಿಕಾರಿ ವಿಷ್ಣು ನಾರಾಯಣ್ ಎಂಬುವವರಿಗೆ  ನೋಟೀಸ್ ನೀಡಿದ್ದಾರೆ.
ಜೊತೆಗೆ ಕಳೆದ ಎರಡು ದಿನಗಳ ಹಿಂದೆ ಅಪರಿಚಿತ ವಾಹನ ಡಿಕ್ಕಿಯಾಗಿ ಐದಾರು ತಿಂಗಳ ಚಿರತೆ ಮರಿ ಸಹ ಮೃತಪಟ್ಟಿದ್ದು, ಅರಣ್ಯ ಅಧಿಕಾರಿಗಳು ವನ್ಯಜೀವಿಗಳ ಬಗ್ಗೆ ಮುಂಜಾಗ್ರತಾ ಕ್ರಮಗಳನ್ನು ವಹಿಸಬೇಕಿದೆ ಎಂದು ಪ್ರಾಣಿ ಪ್ರಿಯರ ಒತ್ತಾಯಿಸಿದ್ದಾರೆ.
Published by: G Hareeshkumar
First published: August 14, 2020, 9:07 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading