Forest Clean: ಅರಣ್ಯ ಪ್ರದೇಶದ ಸ್ವಚ್ಛತೆಗೆ ಇಳಿದ್ರು ಅರಣ್ಯಾಧಿಕಾರಿಗಳು, ‘ಕಾಡಲ್ಲಿ ಗಾಜು, ಪ್ಲಾಸ್ಟಿಕ್ ಬಿಸಾಡಬೇಡಿ’

ಅರಣ್ಯ ಪ್ರದೇಶದಲ್ಲಿ ಹಾದು ಹೋಗುವ ಜನ್ರು ಅರಣ್ಯದಲ್ಲೇ ಕಸ  ಪ್ಲಾಸ್ಟಿಕ್​ ಎಸೆಯುತ್ತಿದ್ದಾರೆ. ಅರಣ್ಯಾಧಿಕಾರಿಗಳೇ ಕಾಡು ಕ್ಲೀನ್ ಮಾಡಲು ಮುಂದಾಗಿದ್ದಾರೆ

ಅರಣ್ಯ ಸ್ವಚ್ಛತೆ

ಅರಣ್ಯ ಸ್ವಚ್ಛತೆ

 • Share this:
  ಬೀದರ್ (ಮಾ.6) : ಅದು ಕರ್ನಾಟಕದ ಭೂಶಿರ ಬೀದರ್(Bidar) ಜಿಲ್ಲೆಯು ಅತಿ ಹೆಚ್ಚು  ಅರಣ್ಯ (Forest) ಪ್ರದೇಶವನ್ನು ಹೊಂದಿದೆ. ಈ ಭಾಗದ ಜನರಿಗೆ ತಂಪಾದ ಗಾಳಿಯನ್ನು ನೀಡುವ ಪ್ರದೇಶವಿದೆ. ಆದ್ರೆ ಪ್ರದೇಶದಲ್ಲಿ ಈಗ ಎಲ್ಲಿ ನೋಡಿದರೂ ಪ್ಲಾಸ್ಟಿಕ್‌ನಂತಹ ಘನತ್ಯಾಜ್ಯ ವಸ್ತುಗಳು ಮಣ್ಣಲ್ಲಿ ಕರಗದಂತಹ ತ್ಯಾಜ್ಯಗಳನ್ನು ಹಾಕಲಾಗಿದೆ. ಇದರಿಂದ ಮಣ್ಣು ಕೂಡಾ ಕಲುಷಿತವಾಗುತ್ತದೆ. ಇದರಿಂದ ಜೀವಜಂತುಗಳ ಮೇಲೂ ತೀವ್ರ ದುಷ್ಪರಿಣಾಮ ಬೀರುತ್ತದೆ. ಮತ್ತು ಕಾಡಿನ ಪರಿಸರದಲ್ಲಿ ಅಸಮತೋಲನ ಸೃಷ್ಟಿಯಾಗುತ್ತದೆಂದುಕೊಂಡು ಸ್ವತಃ ಅರಣ್ಯಾಧಿಕಾರಿಗಳು (Forest officer) ಕಾಡಿನ ಸ್ವಚ್ಛತೆಗೆ (Cleaning) ಮುಂದಾಗಿದ್ದಾರೆ.

  ಅದು ಕಲ್ಯಾಣ ಕರ್ನಾಟಕ ಭಾಗದ ಅತಿ ದೊಡ್ಡ ಅರಣ್ಯ ಪ್ರದೇಶ.  ಅರಣ್ಯ ಪ್ರದೇಶದಲ್ಲಿ ಈಗ ಕುಡಿದು ಬಿಸಾಡುವ ಬಾಟಲಿಗಳ ಗಾಜಿನ ಚೂರು ಅಲ್ಲಲ್ಲೇ ಬಿದ್ದಿದೆ.  ಮಂಗ, ಮೊಲ, ಕಾಡು ಹಂದಿ, ಜಿಂಕೆಯಂತಹ ಪ್ರಾಣಿಗಳಿಗೆ ಹಾನಿ ಮಾಡುತ್ತದೆ. ಗಾಜಿನ ಚೂರುಗಳು ಪ್ರಾಣಿಗಳಿ ತಾಗಿದಾಗ ರಕ್ತಸ್ರಾವವಾಗುವ ಘಟನೆ ಸಂಭವಿಸುತ್ತವೆ. ಅವುಗಳ ಅಂಗಾಂಗಗಳ ಮೇಲೆ ಪರಿಣಾಮ ಬೀರಬಹುದು. ಇಂಥವುಗಳಿಗೆ ಆರೈಕೆ ಇಲ್ಲದೇ ಕೆಲವೊಮ್ಮೆ ಪ್ರಾಣಿಗಳು ಮರಣವನ್ನು  ಹೊಂದುತ್ತವೆ. ಪ್ಲಾಸ್ಟಿಕ್‌ನಲ್ಲಿ ಜನ್ರು  ತಿಂದು ಬಿಟ್ಟ ಆಹಾರವನ್ನು ಎಸೆಯುವುದರಿಂದ ಅದು ಪ್ರಾಣಿಗಳ ಹೊಟ್ಟೆ ಸೇರುತ್ತವೆ. ಹೀಗಾಗಿ ಸ್ವತಃ ಬೀದರ್  ವಲಯ ಅರಣ್ಯಾಧಿಕಾರಿಗಳು ಸ್ವಚ್ಛತಾ ಕಾರ್ಯಕ್ಕೆ ಮುಂದಾಗಿದ್ದಾರೆ.

  ಅರಣ್ಯ ಪ್ರದೇಶದಲ್ಲಿ ಏಲ್ಲಿ ನೋಡಿದರಲ್ಲಿ ಕಸದ ರಾಶಿ..!

  ಬೀದರ್ ಪ್ರಾದೇಶಿಕ ಅರಣ್ಯ ವಿಭಾಗದಿಂದ ಘನತ್ಯಾಜ್ಯ ಸ್ವಚ್ಛತಾ ಕಾರ್ಯವನ್ನು ಅರಣ್ಯ ಪ್ರದೇಶದಲ್ಲಿ ಬಿದ್ದಿರುವ ಘನತ್ಯಾಜ್ಯ ವಸ್ತುಗಳನ್ನು ಬೀದರ್ ನ ಪ್ರಾದೇಶಿಕ ಅರಣ್ಯ ವಿಭಾಗದಿಂದ ಅರಣ್ಯ ಪ್ರದೇಶದಲ್ಲಿ ಬೇಕಾ ಬಿಟ್ಟಿಯಾಗಿ ಎಸೆದಿರುವ ಪ್ಲಾಸ್ಟಿಕ್ ಗಳು ಸ್ವಚ್ಛತೆ ಮಾಡಲಾಗುತ್ತಿದೆ.  ಅರಣ್ಯ ಪ್ರದೇಶದಲ್ಲಿ ಎಲ್ಲಿ ನೋಡಿದರಲ್ಲಿ ಕಸದ ರಾಶಿಗಳು. ಹಚ್ಚ ಹಸಿರಾದ ಕಾಡಿನಲ್ಲಿ ಪ್ಲಾಸ್ಟಿಕ್‌ ಎಸೆದು ಅರಣ್ಯ ಪ್ರದೇಶದ ವಾತಾವರಣ ಹಾಳು ಮಾಡಲಾಗುತ್ತಿದೆ. ಅರಣ್ಯ ಪ್ರದೇಶದಲ್ಲಿ ಪ್ಲಾಸ್ಟಿಕ್‌ ಎಸೆಯುವುದರಿಂದ  ಮಣ್ಣಿನಲ್ಲಿ ಕೊಳೆಯದೆ ಹಾಗೆ ಉಳಿದ ಘನತ್ಯಾಜ್ಯ. ಅರಣ್ಯ ಪ್ರದೇಶದಲ್ಲಿ ಹುಟ್ಟುವ ಸಸಿಗಳಿಗೆ ತೊಂದರೆಯನ್ನುಂಟುಮಾಡುತ್ತದೆ.

  ಇದನ್ನೂ ಓದಿ: Russia-Ukraine War: ಹಿಮದ ಗಡ್ಡೆ ಕರಗಿಸಿ ನೀರು ಕುಡಿದು ಬಂಕರ್​ನಲ್ಲಿ ಬದುಕು; ಉಕ್ರೇನ್​ ಸುಮಿ ನಗರದಲ್ಲಿ ವಿದ್ಯಾರ್ಥಿಗಳ ಪರದಾಟ

  ಅಧಿಕಾರಿ, ಸಿಬ್ಬಂದಿಗಳಿಂದ ಸ್ವಚ್ಛತಾ ಕಾರ್ಯ

  ಹೀಗಾಗಿ ಅಧಿಕಾರಿಗಳು  ಅರಣ್ಯ ಪ್ರದೇಶವನ್ನು ಸ್ವಚ್ಛತೆ ಮುಂದಾಗಿದೆ. ಮಾರ್ಚ 21 ರಂದು ಅರಣ್ಯ ಪ್ರದೇಶ ದಿನಾಚರಣೆ ಇರುವ ಹಿನ್ನಲೆಯಲ್ಲಿ ಅರಣ್ಯ ಪ್ರದೇಶ ಸ್ವಚ್ಛತಾ ಕಾರ್ಯ ಹಮ್ಮಿಕೊಂಡಿದ್ದಾರೆ. ಅರಣ್ಯ ಇಲಾಖೆ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು. ಅರಣ್ಯ ಪ್ರದೇಶದಲ್ಲಿ ಪ್ಲಾಸ್ಟಿಕ್‌ ಕಸ ಎಸೆಯುವುದರಿಂದ ಅರಣ್ಯ ಪ್ರದೇಶದಕ್ಕೆ ತೊಂದರೆ ಆಗುತ್ತಿದೆಂದು ತಿಳಿದಿದ್ರು ಸಹ ಜನ್ರು ಪ್ಲಾಸ್ಟಿಕ್ ಎಸೆಯುತ್ತಿದ್ದಾರೆ. ಅರಣ್ಯದಲ್ಲಿ ಕಸ ಎಸೆಯಬೇಡಿ ಎಂದು ಹಲವು ಬಾರಿ ವಲಯ ಅರಣ್ಯ ಅಧಿಕಾರಿಗಳಿಂದ ಮನವಿಯನ್ನು ಮಾಡಿದ್ದಾರೆ.

  ಅರಣ್ಯದಲ್ಲಿ ಕಸ ಎಸೆಯಬೇಡಿ ಎಂದು ಮನವಿ

  ಅರಣ್ಯ ಪ್ರದೇಶದಲ್ಲಿ ಹಾದು ಹೋಗುವ ಜನ್ರು ಅರಣ್ಯದಲ್ಲೇ ಕಸ  ಪ್ಲಾಸ್ಟಿಕ್​ ಎಸೆಯುತ್ತಿದ್ದಾರೆ. ಇದು ಹೀಗೆ ಮುಂದುವರಿದರೆ ಅರಣ್ಯ ಪ್ರದೇಶಕ್ಕೆ ತೊಂದರೆಯಾಗುತ್ತದೆ. ಅರಣ್ಯ ಪ್ರದೇಶದಲ್ಲಿ ಹುಟ್ಟುವ ಸಸಿಗಳಿಗೂ ಗಿಡಗಳಿಗೆ ತೊಂದರೆ ಯಾಗುತ್ತದೆ. ಅರಣ್ಯ ಇಲಾಖೆ ಅಧಿಕಾರಿಗಳು ಖಡಕ್‌ ಎಚ್ಚರಿಕೆಯನ್ನು ನೀಡಿದ್ದಾರೆ ಕಸ ಎಸೆಯುವವರ ಮೇಲೆ ಕಾನೂನು ಕ್ರಮಕೈಗೊಳ್ಳಲಾಗುವುದೆಂದು.

  ಕಾಡಂಚಿನ ಗ್ರಾಮಗಳಲ್ಲಿ ಜಾಗೃತಿ

  ಇನ್ನು ಇಂಥ ಕೃತ್ಯಗಳಿಗೆ ಕಡಿವಾಣ ಹಾಕಲು ಅರಣ್ಯ ಇಲಾಖೆಯೂ ಪ್ರಯತ್ನಿಸುತ್ತಿದೆ. ಕಾಡಂಚಿನ ಗ್ರಾಮಸ್ಥರಿಗೆ, ಸುತ್ತಲಿನ ಶಾಲಾ ಮಕ್ಕಳಲ್ಲಿ ಅರಣ್ಯದ ಬಗ್ಗೆ ಜಾಗೃತಿ ಮೂಡಿಸುತ್ತಿದ್ದಾರೆ. ‘ಕಾಡು ನೋಡಲು ಬಂದವರಿಗೆ ತಿಳಿವಳಿಕೆ ನೀಡುತ್ತಿದ್ದೇವೆ. ಅಲ್ಲಲ್ಲಿ ಸೂಚನಾ ಫಲಕಗಳನ್ನೂ ಕೂಡಾ ಹಾಕಲಾಗುತ್ತಿದೆ ಜನರಿಗೆ ಅರಣ್ಯದ ಬಗ್ಗೆ ಪ್ರೀತಿ ಮೂಡಿಸವ ಕೆಲಸವನ್ನು ಮಾಡಲಾಗುತ್ತಿದೆ.ಮತ್ತು ಕಾಡು ನಮ್ಮದು ಅದನ್ನು ರಕ್ಷಿಸುವುದು ನಮ್ಮ ಜವಾಬ್ದಾರಿ ಎಂಬುದನ್ನು ಅರಿತಾಗ ಮಾತ್ರ, ಇಂಥ ಕೃತ್ಯಗಳಿಗೆ ಕಡಿವಾಣ ಬೀಳಲು ಸಾಧ್ಯವಾಗುತ್ತದೆ.

  ಇದನ್ನೂ ಓದಿ: Kalaburagi: ಹಾಲು ಕುಡಿದ ಕಲ್ಲಿನ ಬಸವ, ನಂದಿ ವಿಗ್ರಹದ ಪವಾಡ ನೋಡಲು ಹರಿದು ಬರ್ತಿದೆ ಜನ ಸಾಗರ

  ಇನ್ನು ಬೀದರ್ ಜಿಲ್ಲೆಯು ಅತಿ ಹೆಚ್ಚು ಅರಣ್ಯ ಪ್ರದೇಶವನ್ನು ಹೊಂದಿದೆ.  ಒಂದು ಕಡೆ ಕಾಡು ಮಲಿನ ಮಾಡುವವರಿದ್ದಾರೆಂದು ಬೇಸರದ ನಡುವೆ, ಕೂಡಾ ಕಾಡನ್ನು ಸ್ವಯಂ ಪ್ರೇರಣೆಯಿಂದ ಸ್ವಚ್ಛಗೊಳಿಸುವವರೂ ಇದ್ದಾರೆ ಎಂಬ ಸಮಾಧಾನವೂ ಇದೆಯಲ್ಲಾ ನಿಜಕ್ಕೂ  ಅದ್ಬುತ ಸಂಗತಿ.

  ವರದಿ: ಚಮನ್ ಹೊಸಮನಿ
  Published by:Pavana HS
  First published: