HOME » NEWS » District » FOREST DEPARTMENT SUCCESSFULLY CAPTURE MONKEY IN HONNALI RHHSN

ಆಪರೇಷನ್ ಮುಷ್ಯ ಸಕ್ಸಸ್; ಐದಾರು ತಿಂಗಳಿಂದ ಹೊನ್ನಾಳಿ ಜನರ ನಿದ್ದೆಗೆಡಿಸಿದ್ದ ಪ್ರಾಣಿ ಕೊನೆಗೂ ಸೆರೆ!

ಇದೇ ಮುಷ್ಯ ಕಳೆದ ಐದು ತಿಂಗಳ ಹಿಂದೆಯೂ ಹೊನ್ನಾಳಿ ಪಟ್ಟಣದಲ್ಲಿ ಕಾಟ ಕೊಡುತಿತ್ತು. ಪುರಸಭೆ ಅಧಿಕಾರಿಗಳು, ಹಾಗೂ ಹೊನ್ನಾಳಿ ಶಾಸಕ ಎಂ. ಪಿ. ರೇಣುಕಾಚಾರ್ಯರ ಮೇಲೂ ದಾಳಿ ಮಾಡಿದ್ದ ಮುಷ್ಯ 40 ಜನರಿಗೆ ಕಚ್ಚಿ ಗಾಯಗೊಳಿಸಿತ್ತು. ಇದೀಗ ಆ ಮುಷ್ಯ ನನ್ನು ಸೆರೆ ಹಿಡಿಯುವಲ್ಲಿ ಅರಣ್ಯ ಇಲಾಖೆ ಸಿಬ್ಬಂದಿ ಯಶಸ್ವಿಯಾಗಿದ್ದಾರೆ.

HR Ramesh | news18-kannada
Updated:May 3, 2021, 5:31 PM IST
ಆಪರೇಷನ್ ಮುಷ್ಯ ಸಕ್ಸಸ್; ಐದಾರು ತಿಂಗಳಿಂದ ಹೊನ್ನಾಳಿ ಜನರ ನಿದ್ದೆಗೆಡಿಸಿದ್ದ ಪ್ರಾಣಿ ಕೊನೆಗೂ ಸೆರೆ!
ಮುಷ್ಯನನ್ನು ಸೆರೆ ಹಿಡಿದಿರುವುದು.
  • Share this:
ದಾವಣಗೆರೆ: ಹೊನ್ನಾಳಿ ಪಟ್ಟಣದಲ್ಲಿ ಜನರ ಮೇಲೆ ಪದೇ ಪದೇ ಅಟ್ಯಾಕ್ ಮಾಡ್ತಿದ್ದ ಮುಷ್ಯ ಕಾಟದಿಂದ ಬೇಸತ್ತು ಹೋಗಿದ್ದ ಜನರು ಈಗ ನೆಮ್ಮದಿಯ ನಿಟ್ಟುಸಿರು ಬಿಟ್ಟಿದ್ದಾರೆ. ಕಳೆದ ಐದಾರು ತಿಂಗಳಿಂದ  ಮುಷ್ಯ ದ ಕಾಟ ಹೆಚ್ಚಾಗಿತ್ತು. ಇದರ ಹುಚ್ಚಾಟಕ್ಕೆ ಇದುವರೆಗೆ ಸುಮಾರು 30ಕ್ಕೂ ಹೆಚ್ಚು ಮಂದಿಗೆ ದಾಳಿ ಮಾಡಿ ಗಾಯಗೊಳಿಸಿತ್ತು. ಮನೆಯಿಂದ ಹೊರ ಬಂದವರ ಮೇಲೆ ದಾಳಿ ಮಾಡಿ ಕಚ್ಚಿ ಗಾಯಗೊಳಿಸುತಿತ್ತು. ಹಲವು ದಿನಗಳಿಂದ ಈ ಮುಷ್ಯವನ್ನು ಹಿಡಿಯಲು ಪ್ರಯತ್ನ ಮಾಡಿದ್ದರು ಸಿಕ್ಕಿರಲಿಲ್ಲ. ಆದರೆ ಮುಷ್ಯ ಬಂದ ಕೊಡಲೇ ಕೆಲವರು ಎದ್ನೋ ಬಿದ್ನೋ ಅಂತಾ ತಪ್ಪಿಸಿಕೊಂಡು ಓಡಿ ಹೋದ ಸಾಕಷ್ಟು ನಿದರ್ಶನಗಳು ಇವೆ.

ಮಕ್ಕಳು ಹೊರಗಡೆ ಇದ್ದರೆ ಮಕ್ಕಳ ತಂದೆ ತಾಯಂದಿರಿಗೆ ಭಯ ಆಗುತ್ತಿತ್ತು.ಎಲ್ಲಿ ಮುಷ್ಯ ಕಚ್ಚಿ ಗಾಯಗೊಳಿಸಿ ಬಿಡುತ್ತೋ ಎಂಬ ಆತಂಕದಲ್ಲಿ ದಿನ ನಿತ್ಯ ಹೊನ್ನಾಳಿ ಪಟ್ಟಣದ  ಜನರು ಕಾಲ ಕಳೆಯುತ್ತಿದ್ದರು. ಈ ಹುಚ್ಚಾಟದ ಮುಷ್ಯ ಹಿಡಿಯುವಂತೆ ಸ್ಥಳೀಯರು ಸಾಕಷ್ಟು ಬಾರಿ ಮನವಿ ಮಾಡಿದ್ದರು. ಆದರೂ ಪ್ರಯೋಜನವಾಗಿರಲಿಲ್ಲ. ಮುಷ್ಯ ಮಾತ್ರ ಯಾರಾದರೂ ಅದನ್ನು ಸೆರೆ ಹಿಡಿಯಲು ಬರುತ್ತಾರೆ ಅಂದ ದಿನ ಅದು ಯಾರ ಕಣ್ಣಿಗೂ ಕಾಣುತ್ತಿರಲ್ಲಿಲ್ಲ. ಆಟವಾಡಿಸ್ತಾ ತಪ್ಪಿಸಿಕೊಳ್ಳುತ್ತಿದ್ದ ಮುಷ್ಯ ಜನರಲ್ಲಿ ಆತಂಕವನ್ನು ದಿನೇ ದಿನೇ ಹೆಚ್ಚಿಸುತಿತ್ತು.‌

ಇದನ್ನು ಓದಿ: ಚಾಮರಾಜನಗರ ದುರಂತ ಘಟನೆ ನ್ಯಾಯಾಂಗ ತನಿಖೆಗೆ ವಿಪಕ್ಷ ನಾಯಕ ಸಿದ್ದರಾಮಯ್ಯ ಒತ್ತಾಯ

ಈ ಹಿನ್ನೆಲೆಯಲ್ಲಿ ಅರಣ್ಯ ಇಲಾಖೆಯ ಅಧಿಕಾರಿಗಳ ಗಮನಕ್ಕೆ ತರಲಾಯಿತು. ಇಲಾಖೆಯ ಐವರು ಅಧಿಕಾರಿಗಳ ತಂಡ, ಪುರಸಭೆಯ ಅಧಿಕಾರಿಗಳು ಹಾಗೂ ಸಿಬ್ಬಂದಿ ಕಾರ್ಯಾಚರಣೆ ಮಾಡಿ ಅದನ್ನು ಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ. ಸುಮಾರು ಆರು ತಿಂಗಳಿಂದ ಕಾಟ ಕೊಟ್ಟಿದ್ದ ಮುಷ್ಯ ವನ್ನು ಹಿಡಿಯುವುದು ಅಷ್ಟು ಸುಲಭದ ಮಾತಾಗಿರಲಿಲ್ಲ. ಮುಷ್ಯ ಕಾರ್ಯಾಚರಣೆಗೆ ಅರಣ್ಯ ಇಲಾಖೆ ಎಲ್ಲಾ ರೀತಿಯ ತಯಾರಿ ಮಾಡಿಕೊಂಡಿತು. ಜೀವಸಹಿತವಾಗಿ ಈ ಮುಷ್ಯ ಹಿಡಿಯಲು ಬೋನು ಸಮೇತ ಸಿಬ್ಬಂದಿ ಬಂದಿದ್ದರು. ಅಲ್ಲಿಂದ ಇಲ್ಲಿಗೆ, ಇಲ್ಲಿಂದ ಅಲ್ಲಿಗೆ ಮರಗಳಲ್ಲಿ ನೆಗೆಯುತ್ತಿದ್ದ ಮುಷ್ಯ ಅರಣ್ಯ ಇಲಾಖೆಯ ಅಧಿಕಾರಿಗಳು ಬೆವರು ಸುರಿಸುವಂತೆ ಮಾಡಿತು. ಅರವಳಿಕೆ ತಜ್ಞರು ಮದ್ದನ್ನು ಮುಷ್ಯಕ್ಕೆ ಚುಚ್ಚುವಂತೆ ಮಾಡಿ ಅದರ ಪ್ರಜ್ಞೆ ತಪ್ಪಿಸಿ ಹಿಡಿದು ಬಳಿಕ ಮುಷ್ಯ ವನ್ನು ಶಿವಮೊಗ್ಗದ ಲಯನ್ ಸಫಾರಿಗೆ ಬಿಡಲಾಗಿದೆ.

ಇದೇ ಮುಷ್ಯ ಕಳೆದ ಐದು ತಿಂಗಳ ಹಿಂದೆಯೂ ಹೊನ್ನಾಳಿ ಪಟ್ಟಣದಲ್ಲಿ ಕಾಟ ಕೊಡುತಿತ್ತು. ಪುರಸಭೆ ಅಧಿಕಾರಿಗಳು, ಹಾಗೂ ಹೊನ್ನಾಳಿ ಶಾಸಕ ಎಂ. ಪಿ. ರೇಣುಕಾಚಾರ್ಯರ ಮೇಲೂ ದಾಳಿ ಮಾಡಿದ್ದ ಮುಷ್ಯ 40 ಜನರಿಗೆ ಕಚ್ಚಿ ಗಾಯಗೊಳಿಸಿತ್ತು. ಇದೀಗ ಆ ಮುಷ್ಯ ನನ್ನು ಸೆರೆ ಹಿಡಿಯುವಲ್ಲಿ ಅರಣ್ಯ ಇಲಾಖೆ ಸಿಬ್ಬಂದಿ ಯಶಸ್ವಿಯಾಗಿದ್ದಾರೆ.

ವರದಿ: ಸಂಜಯ್. ಎ.ಪಿ. ಕುಂದುವಾಡ
Published by: HR Ramesh
First published: May 3, 2021, 5:31 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories