• Home
  • »
  • News
  • »
  • district
  • »
  • ಮೈಸೂರಿನಲ್ಲಿ ಹೆಲಿ ಟೂರಿಸರಂ: ಆಕ್ಷೇಪಣಾ ಅರ್ಜಿ ಆಹ್ವಾನಿಸಿದ ಅರಣ್ಯ ಇಲಾಖೆ, ಇತ್ತ ಸಾರ್ವಜನಿಕರಿಂದ ಸೇವ್ ಮೈಸೂರು ಅಭಿಯಾನ

ಮೈಸೂರಿನಲ್ಲಿ ಹೆಲಿ ಟೂರಿಸರಂ: ಆಕ್ಷೇಪಣಾ ಅರ್ಜಿ ಆಹ್ವಾನಿಸಿದ ಅರಣ್ಯ ಇಲಾಖೆ, ಇತ್ತ ಸಾರ್ವಜನಿಕರಿಂದ ಸೇವ್ ಮೈಸೂರು ಅಭಿಯಾನ

ಹೆಲಿಪ್ಯಾಡ್ ನಿರ್ಮಿಸಲು ಕಡಿಯಬೇಕಿರುವ ಮರಗಳನ್ನು ಸಾಂದರ್ಭಿಕವಾಗಿ ತೋರಿಸಿರುವುದು.

ಹೆಲಿಪ್ಯಾಡ್ ನಿರ್ಮಿಸಲು ಕಡಿಯಬೇಕಿರುವ ಮರಗಳನ್ನು ಸಾಂದರ್ಭಿಕವಾಗಿ ತೋರಿಸಿರುವುದು.

ಸಾರ್ವಜನಿಕರ ಅಭಿಪ್ರಾಯ ಒಂದೆಯಾಗಿದೆ. ನೀವು ಅಭಿವೃದ್ಧಿ ಕೆಲಸ ಮಾಡಿ. ಆದರೆ ಪರಿಸರ ನಾಶ‌ಮಾಡಿ ಅಭಿವೃದ್ಧಿ ಮಾಡುವುದಕ್ಕೆ ನಮ್ಮ ವಿರೋಧ ಅಂತಿದ್ದಾರೆ. ಇಷ್ಟೆಲ್ಲ ವಿರೋಧದ ನಡುವೆಯು ಸರ್ಕಾರ ಯೋಜನೆ ರೂಪಿಸುತ್ತ, ಇಲ್ಲ ಕೈ ಬಿಡುತ್ತ ಎಂಬುದನ್ನು ಕಾದು ನೋಡಬೇಕಿದೆ.

  • Share this:

ಮೈಸೂರು: ಮೈಸೂರಿನಲ್ಲಿ ಇಗ ಹೆಲಿಟೂರಿಸಂ ಚರ್ಚೆ ಜೋರಾಗಿದೆ. ಪ್ರವಾಸೋದ್ಯಮ ಸಚಿವ ಸಿ.ಪಿ.ಯೋಗೇಶ್ವರ್ ಉತ್ಸುಕರಾಗಿ ಹೆಲಿಟೂರಿಸಂ ಮಾಡಲು ಮುಂದಾಗಿದ್ದಾರೆ.‌ ಆದರೆ‌ ಸದ್ಯ ಸಚಿವರ ನಡೆಗೆ ಸಾಕಷ್ಟು ವಿರೋಧ ವ್ಯಕ್ತವಾಗಿದ್ದು, ಯೋಜನೆ ವಿರುದ್ಧ ಸೇವ್ ಮೈಸೂರು ಅಭಿಯಾನ‌ ಪ್ರಾರಂಭವಾಗಿದೆ. ಯೋಜನೆ ಬಗ್ಗೆ ಜನ ಟ್ರೋಲ್ ಕೂಡ ಮಾಡ್ತಿದ್ದು.‌ ಭಾರಿ ವಿರೋಧದ‌ ನಡುವೆ ಅರಣ್ಯ ಇಲಾಖೆ ಸಾರ್ವಜನಿಕ ಆಕ್ಷೇಪಣೆಗೆ ಆಹ್ವಾನ ನೀಡಿದ್ದಾರೆ. ಸೇವ್ ಮೈಸೂರು ಕ್ಯಾಂಪೈನ್‌ಗೆ ಮಾಜಿ ಸಿಎಂ ಸಿದ್ದರಾಮಯ್ಯ ಸಹ ಸಾಥ್ ನೀಡಿದ್ದಾರೆ.


ಹೆಲಿಟೂರಿಸಂ ವಿಚಾರ ಮೈಸೂರಿನಲ್ಲಿ ಈಗ‌ ದೊಡ್ಡ ಚರ್ಚೆಗೆ ಕಾರಣವಾಗಿದೆ. ಇದಕ್ಕೆಲ್ಲ‌ ಕಾರಣ ನೂರಾರು ಮರಗಳ‌ ಹನನ. ಹೌದು, ಉದ್ದೇಶಿತ ಹೆಲಿಟೂರಿಸಂಗೆ ಲಲಿತ ಮಹಲ್ ಹೋಟೆಲ್ ಬಳಿ ನೂತನ‌ ಹೆಲಿಪ್ಯಾಡ್ ನಿರ್ಮಾಣ ಮಾಡಬೇಕು ಅಂತ ಪ್ರವಾಸೋದ್ಯಮ ಇಲಾಖೆ‌ ನಿರ್ಧಾರ ಮಾಡಿದೆ. ಇದಕ್ಕೆ‌ ಹೆಲಿಪ್ಯಾಡ್ ಬಳಿ‌ 150ಕ್ಕೂ ಹೆಚ್ವು ಮರಗಳನ್ನು ಹನನ‌ ಮಾಡಲು ಇಲಾಖೆ ಮುಂದಾಗಿದೆ. ಸದ್ಯ ಈ ವಿಚಾರಕ್ಕೆ ಸಾರ್ವಜನಿಕ ವಲಯದಲ್ಲಿ ಸಾಕಷ್ಟು ಚರ್ಚೆಗೆ ಕಾರಣವಾಗಿದೆ. ‌ಅದರಲ್ಲೂ ಮೈಸೂರಿನ ನಾಗರೀಕರು ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ವಿರೋಧ ವ್ಯಕ್ತಪಡಿಸುತ್ತಿದ್ದಾರೆ. ಈ ಬಗ್ಗೆ ಟ್ರೋಲ್ ಪೇಜ್ ಗಳಲ್ಲೂ ಕೂಡ ಟ್ರೋಲ್‌ ಮಾಡಿ ತರಾಟೆ ತೆಗೆದುಕೊಂಡಿದ್ದಾರೆ. ಸದ್ಯ ಈ ವಿಚಾರವಾಗಿ ಮಾಜಿ‌ ಸಿಎಂ ಸಿದ್ದರಾಮಯ್ಯ, ಬಿಜೆಪಿ ಸಂಸದ ಪ್ರತಾಪ್ ಸಿಂಹ‌ ಕೂಡ‌ ವಿರೋಧ ವ್ಯಕ್ತಪಡಿಸಿದ್ದಾರೆ.


ಇನ್ನು ಪರಿಸರ ಪ್ರೇಮಿಗಳು ಮರಗಳ ಕಡಿಯಲು ಗುರುತು‌ ಮಾಡಿ ಮರಗಳ ಮೇಲೆ ಹಾಕಿರುವ ನಂಬರ್ ಮೇಲೆ ಕಪ್ಪು ಬಣ್ಣ ಬಳಿದು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಸದ್ಯ ದಿನೇ ದಿನೇ ಈ ವಿಚಾರ ದೊಡ್ಡ ಚರ್ಚೆಗೆ ಕಾರಣವಾಗಿದ್ದು, 10 ಮೀಟರ್ ದೂರದಲ್ಲೆ ರಾಜಮನೆತನಕ್ಕೆ ಸೇರಿದ್ದ ಹೆಲಿಪ್ಯಾಡ್ ಇದ್ದು, ಹೊಸ ಹೆಲಿಪ್ಯಾಡ್ ಏಕೆ ಬೇಕು ಅಂತ ಜನ ಪ್ರಶ್ನೆ ಮಾಡ್ತಿದ್ದಾರೆ.


ಇದನ್ನು ಓದಿ: ಅಧಿಕಾರ ದುರುಪಯೋಗ; ಲೋಕಾಯುಕ್ತ ವರದಿ ಬಳಿಕ ಕೇರಳ ಸಚಿವ ಕೆ.ಟಿ. ಜಲೀಲ್ ರಾಜೀನಾಮೆ


ಇನ್ನು ಅರಣ್ಯ ಇಲಾಖೆ ಇಷ್ಟು ದಿನ ಮೌನವಾಗಿದ್ದು, ಯಾವಾಗ ವಿರೋಧ ವ್ಯಕ್ತವಾಯಿತು ಸದ್ಯ ಎಚ್ಚೆತ್ತುಕೊಂಡಂತಿದೆ.‌ ಮರಗಳ ಹನನಕ್ಕೆ ಮರಗಳನ್ನು ಗುರುತು ಮಾಡಿದ್ದ ಅರಣ್ಯ ಇಲಾಖೆ, ಇದೀಗಾ ಸಾರ್ವಜನಿಕ ಆಕ್ಷೇಪಣೆಗೆ ಅರ್ಜಿ ಆಹ್ವಾನ ಮಾಡಿದೆ. ಸದ್ಯ 150 ಮರಗಳನ್ನ ಗುರುತು ಮಾಡಿದ್ದರಿಂದ ಕರ್ನಾಟಕ ಕಾಯ್ದೆ ಪ್ರಕಾರ ಸಾರ್ವಜನಿಕ ಅಭಿಪ್ರಾಯ ಸಂಗ್ರಹಿಸಬೇಕಾಗಿದೆ. ಇದರಿಂದ ಈ ಬಗ್ಗೆ ಅರಣ್ಯ ಇಲಾಖೆ ಪ್ರಕಟಣೆ ಸಹ ಹೊರಡಿಸಿದೆ. ಈ ಮೇಲ್, ಪತ್ರ ಅಥವಾ ನೇರವಾಗಿ ಬಂದು ಆಕ್ಷೇಪಣೆ ಸಲ್ಲಿಸಬಹುದು, ಇದಕ್ಕೆ ಇದೇ 16ರವರೆಗೆ ಅವಕಾಶ ಇದೆ ಅಂತ ಅರಣ್ಯ ಇಲಾಖೆ ಪತ್ರಿಕಾ ಪ್ರಕಟಣೆ ಬಿಡುಗಡೆ ಮಾಡಿದೆ.


ಸದ್ಯ ಸಾರ್ವಜನಿಕರ ಅಭಿಪ್ರಾಯ ಒಂದೆಯಾಗಿದೆ. ನೀವು ಅಭಿವೃದ್ಧಿ ಕೆಲಸ ಮಾಡಿ. ಆದರೆ ಪರಿಸರ ನಾಶ‌ಮಾಡಿ ಅಭಿವೃದ್ಧಿ ಮಾಡುವುದಕ್ಕೆ ನಮ್ಮ ವಿರೋಧ ಅಂತಿದ್ದಾರೆ. ಇಷ್ಟೆಲ್ಲ ವಿರೋಧದ ನಡುವೆಯು ಸರ್ಕಾರ ಯೋಜನೆ ರೂಪಿಸುತ್ತ, ಇಲ್ಲ ಕೈ ಬಿಡುತ್ತ ಎಂಬುದನ್ನು ಕಾದು ನೋಡಬೇಕಿದೆ.

Published by:HR Ramesh
First published:

ಸುದ್ದಿ 18ಕನ್ನಡ ಟ್ರೆಂಡಿಂಗ್

ಮತ್ತಷ್ಟು ಓದು