ಒಂದು ತಿಂಗಳ ಇಎಮ್‌ಐ ಪಾವತಿ ತಡ ಮಾಡದಿದ್ದಕ್ಕೆ ಕಂತಿಗಿಂತ ಹೆಚ್ಚಿನ ದಂಡ ವಸೂಲಿ ಮಾಡಿದ ಬ್ಯಾಂಕ್

ಲಾಕ್‌ಡೌನ್‌ ಇದ್ದಿದ್ದರಿಂದ ಕಳೆದ ಎರಡು ತಿಂಗಳಿಂದ ಕ್ಷೌರದ ಅಂಗಡಿ ತೆರೆದಿಲ್ಲ. ಎಪ್ರಿಲ್‌ ತಿಂಗಳ ಸಾಲದ ಇಎಮ್‌ಐ ಕೂಡ ಪಾವತಿಸಿಲ್ಲ. ಇಎಮ್‌ಐ ವಿಳಂಬ ಮಾಡಿದ್ದಕ್ಕೆ ಕರ್ನಾಟಕ ಬ್ಯಾಂಕ್‌ 590 ರೂಪಾಯಿಯಂತೆ ಒಟ್ಟು ಏಳು ಬಾರಿ 4130 ರೂಪಾಯಿ ದಂಡ ವಿಧಿಸಿದೆ

news18-kannada
Updated:May 29, 2020, 7:15 AM IST
ಒಂದು ತಿಂಗಳ ಇಎಮ್‌ಐ ಪಾವತಿ ತಡ ಮಾಡದಿದ್ದಕ್ಕೆ ಕಂತಿಗಿಂತ ಹೆಚ್ಚಿನ ದಂಡ ವಸೂಲಿ ಮಾಡಿದ ಬ್ಯಾಂಕ್
ಪ್ರಾತಿನಿಧಿಕ ಚಿತ್ರ
  • Share this:
ಹುಬ್ಬಳ್ಳಿ: ಬ್ಯಾಂಕ್‌ ಸಾಲದ ಇಎಮ್‌ಐ ಕಟ್ಟಲು ವಿಳಂಬ ಮಾಡಿದ್ದಕ್ಕೆ ಒಂದು ತಿಂಗಳಲ್ಲಿ ಏಳು ಬಾರಿ ದಂಡ ವಿಧಿಸಿರುವ ಘಟನೆ ಹುಬ್ಬಳ್ಳಿಯಲ್ಲಿ ನಡೆದಿದೆ‌. ಸಂಗಮೇಶ್ ಹಡಪದ ಎಂಬುವವರು ಗೋಕುಲ ರಸ್ತೆಯಲ್ಲಿ ಹೇರ್‌ ಕಟ್ಟಿಂಗ್‌ ಸಲೂನ್ ನಡೆಸುತ್ತಿದ್ದಾರೆ. ಇವರು ಸಲೂನ್‌ಗೆ ಫರ್ನಿಚರ್‌ ಖರೀದಿಸಲು 25 ಸಾವಿರ ರೂಪಾಯಿ ಸಾಲ ಮಾಡಿದ್ದರು. ಪ್ರತಿ ತಿಂಗಳು 3100 ರೂಪಾಯಿ ಇಎಮ್‌ಐ ಕಟ್ಟುತ್ತಿದ್ದರು.

ಕರ್ನಾಟಕ ಬ್ಯಾಂಕ್‌ನಲ್ಲಿ ಸಂಗಮೇಶ್‌ ಹಡಪದ್‌ ಅವರ ಖಾತೆ ಇದ್ದು ಸಾಲದ ಇಎಮ್‌ಐ ಪ್ರತಿ ತಿಂಗಳು ಕಟ್‌ ಆಗುತ್ತಿತ್ತು. ಲಾಕ್‌ಡೌನ್‌ ಇದ್ದಿದ್ದರಿಂದ ಕಳೆದ ಎರಡು ತಿಂಗಳಿಂದ ಕ್ಷೌರದ ಅಂಗಡಿ ತೆರೆದಿಲ್ಲ. ಎಪ್ರಿಲ್‌ ತಿಂಗಳ ಸಾಲದ ಇಎಮ್‌ಐ ಕೂಡ ಪಾವತಿಸಿಲ್ಲ. ಇಎಮ್‌ಐ ವಿಳಂಬ ಮಾಡಿದ್ದಕ್ಕೆ ಕರ್ನಾಟಕ ಬ್ಯಾಂಕ್‌ 590 ರೂಪಾಯಿಯಂತೆ ಒಟ್ಟು ಏಳು ಬಾರಿ 4130 ರೂಪಾಯಿ ದಂಡ ವಿಧಿಸಿದೆ. ಪ್ರಶ್ನಿಸಿದ್ರೆ ಬ್ಯಾಂಕ್‌ ಅಧಿಕಾರಿಗಳು ಸಂಗಮೇಶ್‌ ಹಡಪದ್‌ಗೆ ಸೂಕ್ತ ಕಾರಣ ನೀಡಿಲ್ಲ.

ಇದನ್ನೂ ಓದಿ: ಜೂನ್ ಅಂತ್ಯದೊಳಗೆ ರಾಜ್ಯ ಸಂಪುಟ ವಿಸ್ತರಣೆ; ಹೆಚ್ಚುವರಿಯಾಗಿ ನಾಲ್ವರಿಗೆ ಸಚಿವ ಸ್ಥಾನ ಸಾಧ್ಯತೆ?

ಇಎಮ್‌ಐ ವಿಳಂಭ ಮಾಡಿದ್ದಕ್ಕೆ ದಂಡ ಕಟ್ಟಲಾಗಿದೆ ಎಂದಷ್ಟೇ ಹೇಳಿ ಕಳಿಸಿದ್ದಾರೆ. ಇಷ್ಟೊಂದು ದಂಡ ಯಾಕೆ ಎಂದರೆ ಸ್ಪಷ್ಟ ಉತ್ತರ ನೀಡಿಲ್ಲ. ಮೊದಲೇ ದುಡಿಮೆಯಿಲ್ಲದೆ ಕಂಗಾಲಾಗಿರುವ ಸಂಗಮೇಶ್‌ ಹಡಪದ ದಂಡದ ಮೊತ್ತ ನೋಡಿ ಚಿಂತೆಗೀಡಾಗಿದ್ದಾರೆ. ಕಂತಿನ ಹಣಕ್ಕಿಂತ ಹೆಚ್ಚಿನ ದಂಡ ವಿಧಿಸಿರುವ ಬ್ಯಾಂಕ್‌ಗೆ ಹಿಡಿಶಾಪ ಹಾಕುತ್ತಿದ್ದಾರೆ.

ಇದನ್ನೂ ಓದಿ: ಬಿಜೆಪಿಯಲ್ಲಿ ಮತ್ತೆ ಭಿನ್ನಮತೀಯರ ಕಹಳೆ; ಕೊರೋನಾ ಸಂಕಷ್ಟದಲ್ಲೂ ಬಿಎಸ್‌ವೈ ಸ್ಥಾನಕ್ಕೆ ಸಂಚಕಾರ?

ಜೇಬಲ್ಲಿದ್ದ ಅಲ್ಪಸ್ವಲ್ಪ ಹಣವನ್ನು ಕಸಿದುಕೊಂಡ ಬ್ಯಾಕ್‌ ವಿರುದ್ಧ ಕಿಡಿಕಾರುತ್ತಿದ್ದಾರೆ. ತಮ್ಮ ಹಣವನ್ನು ವಿನಾಕಾರಣ ಕಟ್ ಮಾಡಿರುವ ಬ್ಯಾಂಕ್‌ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುವಂತೆ ರಾಜ್ಯ ಸರ್ಕಾರಕ್ಕೆ ಮನವಿ ಮಾಡಿದ್ದಾರೆ.
First published: May 29, 2020, 7:13 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading