HOME » NEWS » District » FOR CORONA EFFECT SWEET BABY CORN GROWERS WHO ARE IN TROUBLE HK

ಕೊರೋನಾ ಎಫೆಕ್ಟ್ ; ಸಂಕಷ್ಟಕ್ಕೆ ಸಿಲುಕಿದ ಸ್ವೀಟ್ ಬೇಬಿಕಾರ್ನ್ ಬೆಳೆಗಾರರು

ಕೊರೋನಾ ಭೀತಿಯಿಂದಾಗಿ ಜನರು ಮನೆಯಿಂದ ಹೊರಬರುತ್ತಿಲ್ಲ. ಹಾಗಾಗಿ ಈಗಲೂ ಕೂಡ ನಮ್ಮ ಬೇಬಿ ಕಾರ್ನ್ ಬೆಳೆಯನ್ನ ಕೊಳ್ಳುವವರು ಮುಂದೆ ಬರುತ್ತಿಲ್ಲ.

news18-kannada
Updated:June 13, 2020, 11:59 AM IST
ಕೊರೋನಾ ಎಫೆಕ್ಟ್ ; ಸಂಕಷ್ಟಕ್ಕೆ ಸಿಲುಕಿದ ಸ್ವೀಟ್ ಬೇಬಿಕಾರ್ನ್ ಬೆಳೆಗಾರರು
ಬೆಳೆಗಾರರು
  • Share this:
ರಾಮನಗರ(ಜೂ. 13): ಈ ಹಳ್ಳಿಯ ಸ್ವೀಟ್ ಬೇಬಿಕಾರ್ನ್ ಬೆಂಗಳೂರು, ಮೈಸೂರು ಸೇರಿದಂತೆ ತಮಿಳುನಾಡು, ಕೇರಳ, ಆಂಧ್ರಪ್ರದೇಶ ಸೇರಿದಂತೆ ವಿವಿಧ ಪ್ರಮುಖ ನಗರಗಳ ಖ್ಯಾತ ಹೋಟೆಲ್​​ಗಳಲ್ಲಿ ವಿಶೇಷ ಚಾಟ್ಸ್‌ಗಳಲ್ಲಿ ಬಳಸಲಾಗುತ್ತಿತ್ತು. ಆದರೆ, ಕಳೆದ ಎರಡು ತಿಂಗಳಿನಿಂದ ಕೊರೋನಾ ಹೆಮ್ಮಾರಿಗೆ ಸಿಲುಕಿ ಹೊಲಗಳಲ್ಲೇ ಕೊಳೆಯುತ್ತಿದೆ. ಬೆಳೆ ಬೆಳೆದಿರುವ ರೈತರು ಕಂಗಾಲಾಗಿದ್ದಾರೆ. 

ಜಿಲ್ಲೆಯ ಚನ್ನಪಟ್ಟಣ ತಾಲೂಕಿನ ಸುಳ್ಳೇರಿ ಗ್ರಾಮ ಸೇರಿದಂತೆ ಅಕ್ಕಪಕ್ಕದಲ್ಲಿನ ಹತ್ತಾರು ಗ್ರಾಮಗಳಲ್ಲಿ ಸರಿಸುಮಾರು 500 ಎಕರೆಗೂ ಹೆಚ್ಚು ಸ್ವೀಟ್ ಬೇಬಿ ಕಾರ್ನ್ ಬೆಳೆಯನ್ನ ಬೆಳೆಯುತ್ತಾರೆ. ಈ ಭಾಗದ ರೈತರು. ಆದರೆ, ಕಳೆದ ಎರಡು ತಿಂಗಳಿನಿಂದ ಇಲ್ಲಿಯ ರೈತರು ಕೊರೋನಾ ಏಟಿಗೆ ತತ್ತರಿಸಿದ್ದಾರೆ. ಮೊದಲೆಲ್ಲ ದಿನಕ್ಕೆ ಬೆಂಗಳೂರು, ಮೈಸೂರು ಸೇರಿದಂತೆ ಹಲವೆಡೆಗೆ 2 ಟನ್‌ಗೂ ಹೆಚ್ಚು ಸ್ವೀಟ್ ಬೇಬಿಕಾರ್ನ್ ರಫ್ತಾಗುತ್ತಿತ್ತು. ಆದರೆ, ಕಳೆದ ಎರಡು ತಿಂಗಳಿಂದ ರೈತರು ಬೆಳೆದಿರುವ ಬೆಳೆ ಸಂಪೂರ್ಣ ಹೊಲಗಳಲ್ಲೇ ಕೊಳೆಯುತ್ತಿದೆ.

ಇನ್ನು ಈ ಸ್ವೀಟ್ ಬೇಬಿಕಾರ್ನ್ ಮುಖ್ಯವಾಗಿ ರಾಜ್ಯ ಹಾಗೂ ಹೊರ ರಾಜ್ಯದ ಪ್ರಮುಖ ಹೋಟೆಲ್​​ ಹಾಗೂ ಚಾಟ್ಸ್ ಸೆಂಟರ್​ಗಳಲ್ಲಿ ತಿನಿಸುಗಳಿಗೆ ಬಳಸಲಾಗುತ್ತಿತ್ತು. ಆದರೆ, ಕೊರೋನಾ ಲಾಕ್ ಡೌನ್ ಗೆ ಎಲ್ಲಾ ಹೋಟೆಲ್​​, ಚಾಟ್ಸ್ ಸೆಂಟರ್​ಗಳು ಬಂದ್ ಆದ ಕಾರಣ ಅದು ಸ್ಥಗಿತವಾಯಿತು. ಇನ್ನು ಕಳೆದ ಕೆಲ ದಿನಗಳಿಂದ ರಾಜ್ಯ ಹಾಗೂ ಕೆಲ ಹೊರ ರಾಜ್ಯಗಳಲ್ಲಿಯೂ ಸಹ ಕೊರೋನಾ ಲಾಕ್‌ಡೌನ್ ತೆರವು ಮಾಡಲಾಗಿದೆ.

ಹೋಟೆಲ್​​ ಸೇರಿದಂತೆ ಚಾಟ್ಸ್ ಸೆಂಟರ್​ ಕೂಡ ಓಪನ್ ಆಗಿವೆ. ಆದರೆ, ಕೊರೋನಾ ಭೀತಿಯಿಂದಾಗಿ ಜನರು ಮನೆಯಿಂದ ಹೊರಬರುತ್ತಿಲ್ಲ. ಹಾಗಾಗಿ ಈಗಲೂ ಕೂಡ ನಮ್ಮ ಬೇಬಿ ಕಾರ್ನ್ ಬೆಳೆಯನ್ನ ಕೊಳ್ಳುವವರು ಮುಂದೆ ಬರುತ್ತಿಲ್ಲ.

ಒಟ್ಟಾರೆ ಇಷ್ಟು ದಿನಗಳ ಕಾಲ ಸ್ವೀಟ್ ಬೇಬಿಕಾರ್ನ್ ಬೆಳೆಯಿಂದಾಗಿ ಉತ್ತಮ ಜೀವನ ಸಾಗಿಸುತ್ತಿದ್ದ ಈ ಭಾಗದ ರೈತರು ಕೊರೋನಾ ಏಟಿಗೆ ಸಿಲುಕಿ ನರಳುತ್ತಿದ್ದಾರೆ. ಹಾಗಾಗಿ ರಾಜ್ಯ ಸರ್ಕಾರ ಕೂಡಲೇ ಸೂಕ್ತ ಕ್ರಮ ವಹಿಸಬೇಕೆಂದು ಬೆಳೆಗಾರರು ಒತ್ತಾಯಿಸಿದ್ದಾರೆ.
First published: June 13, 2020, 11:52 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories