Puneeth folk Song- ಗಾಜನೂರಲ್ಲಿ ಹುಟ್ಟಿ ಬೆಳದವನಿಗೆ… ಜನಪದರ ಹಾಡಾದ ಪುನೀತ್ ರಾಜಕುಮಾರ್

Chamarajanagara Folk Song on Puneeth Rajkumar: ಇತ್ತೀಚೆಗೆ ನಮ್ಮನ್ನಗಲಿದ ಪುನೀತ್ ರಾಜಕುಮಾರ್ ಇದೀಗ ಜಾನಪದ ಹಾಡಿನ ಮೂಲಕ ಜನಮನಸ್ಸಿನಲ್ಲಿ ಹಾಸುಹೊಕ್ಕಿದ್ಧಾರೆ. ಚಾಮರಾಜನಗರದ ಗ್ರಾಮೀಣಭಾಗದ ಜನರು ಪುನೀತ್ ಬಗ್ಗೆ ಜನಪದ ಹಾಡು ಕಟ್ಟಿ ಹಾಡುತ್ತಿದ್ಧಾರೆ.

ಪುನೀತ್ ರಾಜಕುಮಾರ್ ಬಗ್ಗೆ ಜಾನಪದ ಗೀತೆ

ಪುನೀತ್ ರಾಜಕುಮಾರ್ ಬಗ್ಗೆ ಜಾನಪದ ಗೀತೆ

  • Share this:
ಚಾಮರಾಜನಗರ, ನ. 30: ಪವರ್ ಸ್ಟಾರ್ ಪುನೀತ್ ರಾಜಕುಮಾರ್ (Power Star Puneeth Rajkumar) ಅಗಲಿ ಒಂದು ತಿಂಗಳಾಯ್ತು.  ತಮ್ಮ ನಟನೆ ಹಾಗು ಯಾರಿಗು ಗೊತ್ತಾಗದಂತೆ ಮಾಡಿದ ಹತ್ತಾರು ಸೇವಾಕಾರ್ಯಗಳಿಂದ (Punith Rajkumar’s social service) ಎಲ್ಲರ ಮನಸ್ಸಿನಲ್ಲಿ ಅಚ್ಚಳಿಯದೆ ಉಳಿದಿದ್ದಾರೆ ಅಪ್ಪು. ಮಕ್ಕಳು, ಯುವಕರು, ವೃದ್ದರು, ಮಹಿಳೆಯರು ಹೀಗೆ ಎಲ್ಲ ವರ್ಗದವರ ಅಚ್ಚು ಮೆಚ್ಚಿನ ನಟರಾಗಿದ್ದ ಹಾಗು ಆದರ್ಶ ವ್ಯಕ್ತಿಯಾಗಿದ್ದ ಪುನೀತ್ ರಾಜಕುಮಾರ್ (Folk song on Puneeth Rajkumar) ಇದೀಗ ಜನಪದವಾಗಿದ್ದಾರೆ.

ಪುನೀತ್ ಸಾವಿನ ಬಗ್ಗೆ ಚಾಮರಾಜನಗರ ಜಿಲ್ಲೆಯಲ್ಲಿ ಜನಪದರು (Folks of Chamarajanagara) ನೋವಿನ ಹಾಡು ರಚಿಸಿಕೊಂಡು ಹಾಡುತ್ತಿದ್ದಾರೆ. “ಹೇಗೆ ಮರೆಯಲಿ ಪುನೀತರಾಜು ನಿನ್ನ... ಮರೆಸಿ ಮಣ್ಣಿನೊಳಗೆ... ಹೇಗೆ ಬಂತಪ್ಪ ನಿನಗೆ ಸಾವು ಎಂದು ಭಾವುಕರಾಗಿ ಹಾಡುತ್ತಿದ್ದಾರೆ. “ಹುಟ್ಟಿ ಬೆಳೆದಿದ್ದು ಎಲ್ಲೋ.. ಸಾವು ಬಂದಿದ್ದು ಎಲ್ಲೋ... ಗಾಜನೂರಿನಲ್ಲಿ ಹುಟ್ಟಿ ಬೆಳೆದವನಿಗೆ ಬೆಂಗಳೂರಿನಲ್ಲಿತ್ತಾ ಸಾವು” ಎಂದು ಪುನೀತ್ ರಾಜಕುಮಾರ್ ಅವರ ಅಗಲಿಕೆಯ ನೋವನ್ನು ಜನಪದದಲ್ಲಿ ಅಭಿವ್ಯಕ್ತಿಸಿದ್ದಾರೆ.

ಪುನೀತ್ ರಾಜಕುಮಾರ್ ಮೇಲಿನ ಅಭಿಮಾನ ಹಾಗು ಅವರ ಬದುಕಿನಿಂದ ಪ್ರೇರಿತರಾಗಿ ಜನಪದ ಹಾಡು ಕಟ್ಟಿದ ಈ ಜಾನಪದ ಕಲಾವಿದರು ಚಾಮರಾಜನಗರದ ರಾಮಸಮುದ್ರದವರು (Ramasamudra village of chamarajanagara). ಪುನೀತ್ ರಾಜಕುಮಾರ್ ಬಗ್ಗೆ ಅಪಾರ ಅಭಿಮಾನ ಪ್ರೀತಿ ಹೊಂದಿರುವ ಸಾವಿತ್ರಮ್ಮ (Savitramma), ಮಣೆಯಮ್ಮ (Maneyamma) ಅವರನ್ನು ಒಳಗೊಂಡ ಜಾನಪದ ಕಲಾವಿದರ ತಂಡ ಸ್ವಂತವಾಗಿ ತಮ್ಮ ನೆಚ್ಚಿನ ನಟನ ಬಗ್ಗೆ ಜನಪದ ಹಾಡು ಕಟ್ಟಿದ್ದಾರೆ.

ಇದನ್ನೂ ಓದಿ: '83' Movie Trailer- ಮೈನವಿರೇಳಿಸುವ '83' ಟ್ರೇಲರ್, ಕಪಿಲ್ ದೇವ್ ಪಾತ್ರದಲ್ಲಿ ರಣವೀರ್; ಕನ್ನಡದಲ್ಲಿ ಕಿಚ್ಚನ ವಾಯ್ಸ್

ಈ ಜಾನಪದ ಕಲಾವಿದರ ತಂಡದಲ್ಲಿ ಇರುವವರಲ್ಲಿ ಯಾರಿಗು ಸಹ ಓದಲು, ಬರೆಯಲು ಬರುವುದಿಲ್ಲ. ಅನಕ್ಷರಸ್ಥರಾದರೂ ಸಹ ಪುನೀತ್ ರಾಜಕುಮಾರ್ ಅವರ ಬದುಕಿನ ಕುರಿತು ಹಾಗು ಹಠಾತ್ ನಿಧನದ ಅಗಲಿಕೆಯ ನೋವಿನ ಬಗ್ಗೆ ತಾವೇ ಸ್ವಂತವಾಗಿ ಜನಪದ ಹಾಡು ರಚಿಸಿದ್ದಾರೆ.

ಮೈಸೂರಿನಲ್ಲಿ ಜಾನಪದ ಉತ್ಸವದಲ್ಲಿ ಹುಟ್ಟಿತ್ತು ಪುನೀತ ಗೀತೆ:

ಇತ್ತೀಚಿಗೆ ಮೈಸೂರು ಜಿಲ್ಲೆ ಹುಣಸೂರಿನಲ್ಲಿ ನಡೆದ ಜಾನಪದ ಉತ್ಸವವೊಂದರಲ್ಲಿ ಇವರು ಪುನೀತ್ ರಾಜಕುಮಾರ್ ಬಗ್ಗೆ ಸ್ಥಳದಲ್ಲಿ ಜಾನಪದ ಹಾಡುಕಟ್ಟಿ ಹಾಡಿದ್ದರು‌‌. ಈ ಜಾನಪದ ಹಾಡಿನ ವಿಡಿಯೋ ಎಲ್ಲ ಕಡೆ ವೈರಲ್ ಆಯ್ತು. ಆಗಿನಿಂದ ಇವರಿಗೆ ಪುನೀತ್ ಪುಣ್ಯಸ್ಮರಣೆ ಕಾರ್ಯಕ್ರಮಗಳಲ್ಲಿ ಹಾಡುವಂತೆ ಕರೆಬರತೊಡಗಿದವು. ಇದರಿಂದ ಉತ್ತೇಜಿತರಾದ ಇವರು ಆ ಜನಪದ ಹಾಡಿಗೆ ಪುನೀತ್ ರಾಜಕುಮಾರ್ ಕುರಿತು ಆಂಶಗಳನ್ನು ಸೇರಿಸಿ ಜನಪದ ಹಾಡಿನ ಅವಧಿ ವಿಸ್ತರಿಸಿದರು.

ಇದನ್ನೂ ಓದಿ: ನಟ Kichcha Sudeepಗೆ ದೇವಸ್ಥಾನ ಕಟ್ಟಿದ್ದ ಅಭಿಮಾನಿಗಳು.. ರಾಜ್ಯದಲ್ಲಿ ಏನಿದು ಹೊಸ ಸಂಪ್ರದಾಯ?

ಇದೀಗ ಪುನೀತ್ ರಾಜಕುಮಾರ್ ಅವರ ಬದುಕಿನ ಬಗ್ಗೆ ಹಾಗು ಅವರ ಅಗಲಿಕೆಯ ಬಗ್ಗೆ 15 ರಿಂದ 20 ನಿಮಿಷಗಳ ಕಾಲ ಹಾಡುತ್ತಿರುವ ಈ ಜನಪದ ಹಾಡು ಎಲ್ಲರ ಗಮನ ಸೆಳೆಯುತ್ತಿದೆ. ಪುನೀತ್ ಪುಣ್ಯಸ್ಮರಣೆ ಕಾರ್ಯಕ್ರಮಗಳಲ್ಲಿ ಪುನೀತ್ ರಾಜಕುಮಾರ್ ಬಗ್ಗೆ ಹಾಡಲು ಈ ಜನಪದ ಕಲಾವಿದರಿಗೆ ಕರೆಗಳು ಬರುತ್ತಿವೆ.

ಇದನ್ನೂ ಓದಿ: ನಮಸ್ಕಾರ.. ನಮಸ್ಕಾರ.. ನಮಸ್ಕಾರ.. : ಮತ್ತೆ ಕಿರುತೆರೆಗೆ ಬಂದ Golden Star Ganesh !

ತಮಗೆ ಮೊದಲಿನಿಂದಲೂ ಪುನೀತ್ ರಾಜಕುಮಾರ್ ಎಂದರೆ ಬಹಳ ಇಷ್ಟ. ಅವರ ಸಮಾಜ ಸೇವಾಕಾರ್ಯಗಳನ್ನು ಕೇಳಿದ ಮೇಲಂತೂ ಅವರ ಮೇಲಿದ್ದ ಅಭಿಮಾನ ಹೆಚ್ಚಾಯ್ತು. ಅವರನ್ನು ಮರೆಯಲು ಸಾಧ್ಯವಾಗದೆ ಅವರ ಬಗ್ಗೆ ಜನಪದ ಹಾಡು ಕಟ್ಟಿ ಹಾಡುತ್ತಿದ್ದೇವೆ ಎನ್ನುತ್ತಾರೆ ಜಾನಪದ ಕಲಾವಿದೆ ಸಾವಿತ್ರಮ್ಮ.

ವರದಿ: ಎಸ್.ಎಂ.ನಂದೀಶ್
Published by:Vijayasarthy SN
First published: