• ಹೋಂ
  • »
  • ನ್ಯೂಸ್
  • »
  • ಜಿಲ್ಲೆ
  • »
  • ಜಾನಪದ ಅಕಾಡೆಮಿ ರಾಜ್ಯ ಪ್ರಶಸ್ತಿ ಪ್ರಕಟ: ಡಾ.ಬಸವರಾಜ ಸಬರದ, ಡಾ.ಗಾಯಿತ್ರಿನಾವಡ ಅವರಿಗೆ ಜಾನಪದ ತಜ್ಞ ಪ್ರಶಸ್ತಿ

ಜಾನಪದ ಅಕಾಡೆಮಿ ರಾಜ್ಯ ಪ್ರಶಸ್ತಿ ಪ್ರಕಟ: ಡಾ.ಬಸವರಾಜ ಸಬರದ, ಡಾ.ಗಾಯಿತ್ರಿನಾವಡ ಅವರಿಗೆ ಜಾನಪದ ತಜ್ಞ ಪ್ರಶಸ್ತಿ

ಜಾನಪದ ತಜ್ಞ ಪ್ರಶಸ್ತಿ ಪಡೆದವರು.

ಜಾನಪದ ತಜ್ಞ ಪ್ರಶಸ್ತಿ ಪಡೆದವರು.

ಕರ್ನಾಟಕ ಜಾನಪದ ಅಕಾಡೆಮಿ 1980 ರಿಂದ 2019ರವರೆಗೆ 963 ಜಾನಪದ ಕಲಾವಿದರಿಗೆ ಹಾಗು  105 ಮಂದಿ ವಿದ್ವಾಂಸರು ಸೇರಿದಂತೆ 1068 ಮಂದಿಗೆ ಗೌರವ ಪ್ರಶಸ್ತಿಗಳನ್ನು ನೀಡಿ ಗೌರವಿಸಿದೆ ಎಂದು ಜಾನಪದ ಅಕಾಡೆಮಿ ಅಧ್ಯಕ್ಷೆ ಮಾತಾ ಮಂಜಮ್ಮ ಜೋಗತಿ ತಿಳಿಸಿದರು.

  • Share this:

ಚಾಮರಾಜನಗರ (ಜನವರಿ 04)  ಕರ್ನಾಟಕ ಜಾನಪದ ಅಕಾಡೆಮಿ 2020ನೇ ಸಾಲಿನ ರಾಜ್ಯಮಟ್ಟದ ವಾರ್ಷಿಕ ಗೌರವ ಪ್ರಶಸ್ತಿ ಮತ್ತು ಜಾನಪದ ತಜ್ಞ ಪ್ರಶಸ್ತಿ ಆಯ್ಕೆ ಪಟ್ಟಿ  ಪ್ರಕಟಿಸಿದೆ. ಚಾಮರಾಜನಗರದಲ್ಲಿ ಜಾನಪದ ಅಕಾಡೆಮಿ ಅಧ್ಯಕ್ಷೆ ಮಾತಾ ಬಿ.ಮಂಜಮ್ಮ ಜೋಗತಿ ಪ್ರಶಸ್ತಿಗೆ ಆಯ್ಕೆಯಾದವರ ಪಟ್ಟಿ ಬಿಡುಗಡೆ ಮಾಡಿದ್ದಾರೆ. ಪ್ರಮುಖವಾಗಿ  ಡಾ.ಜೀ.ಶಂ.ಪ.  ಜಾನಪದ ತಜ್ಞ ಪ್ರಶಸ್ತಿಗೆ ಮಂಗಳೂರಿನ ಡಾ,ಗಾಯತ್ರಿನಾವಡ, ಹಾಗು  ಡಾ.ಗದ್ದಗೀಮಠ  ಜಾನಪದ ಪ್ರಶಸ್ತಿಗೆ ಕಲಬುರ್ಗಿ ವಿಶ್ವವಿದ್ಯಾನಿಲಯದ ನಿವೃತ್ತ ಪ್ರಾಧ್ಯಾಪಕ ಡಾ.ಬಸವರಾಜು ಸಬರದ ಆಯ್ಕೆಯಾಗಿದ್ದಾರೆ.


ಉಳಿದಂತೆ ರಾಜ್ಯದ ಮೂವತ್ತು ಜಿಲ್ಲೆಗಳ 30 ಹಿರಿಯ ಜಾನಪದ ಕಲಾವಿದರು  ವಾರ್ಷಿಕ ಗೌರವ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ, ಜಾನಪದ ತಜ್ಞ ಪ್ರಶಸ್ತಿ ಪುರಸ್ಕೃತರಿಗೆ  ತಲಾ 50 ಸಾವಿರ ರೂಪಾಯಿ ನಗದು ಹಾಗು ಸ್ಮರಣ ಫಲಕ ಮತ್ತು ವಾರ್ಷಿಕ ಗೌರವ ಪ್ರಶಸ್ತಿ ಪುರಸ್ಕೃತರಿಗೆ  ತಲಾ 25 ಸಾವಿರ ರೂಪಾಯಿ ನಗದು ಹಾಗು ಸ್ಮರಣ ಫಲಕವನ್ನು ನೀಡಿ ಗೌರವಿಸಲಾಗುವುದು ಎಂದು ಜಾನಪದ ಅಕಾಡೆಮಿ ಅಧ್ಯಕ್ಷೆ ಮಾತಾ ಬಿ.ಮಂಜಮ್ಮ ಜೋಗತಿ ತಿಳಿಸಿದರು. ಪ್ರಶಸ್ತಿ ಪ್ರದಾನ ಸಮಾರಂಭ ಫೆಬ್ರವರಿ ತಿಂಗಳಲ್ಲಿ ಚಾಮರಾಜನಗರದಲ್ಲಿ ನಡೆಯಲಿದೆ ಎಂದು ಅವರು ತಿಳಿಸಿದರು.


ಕರ್ನಾಟಕ ಜಾನಪದ ಅಕಾಡೆಮಿ 1980 ರಿಂದ 2019ರವರೆಗೆ 963 ಜಾನಪದ ಕಲಾವಿದರಿಗೆ ಹಾಗು  105 ಮಂದಿ ವಿದ್ವಾಂಸರು ಸೇರಿದಂತೆ 1068 ಮಂದಿಗೆ ಗೌರವ ಪ್ರಶಸ್ತಿಗಳನ್ನು ನೀಡಿ ಗೌರವಿಸಿದೆ ಎಂದು ಜಾನಪದ ಅಕಾಡೆಮಿ ಅಧ್ಯಕ್ಷೆ ಮಾತಾ ಮಂಜಮ್ಮ ಜೋಗತಿ ತಿಳಿಸಿದರು.


ಇದನ್ನು ಓದಿ: ರಾಜ್ಯದಲ್ಲಿ 2023ರಲ್ಲಿ ಜೆಡಿಎಸ್​ ಪಕ್ಷ ಸ್ವತಂತ್ರ್ಯವಾಗಿ ಸರ್ಕಾರ ರಚಿಸಲಿದೆ; ಹೆಚ್​.ಡಿ. ಕುಮಾರಸ್ವಾಮಿ ಭರವಸೆ


ಜಾನಪದ ತಜ್ಞ ಪ್ರಶಸ್ತಿ ಪಡೆದವರು


ಡಾ.ಜೀ.ಶಂ.ಪ  ಜಾನಪದ ತಜ್ಞ ಪ್ರಶಸ್ತಿಗೆ ಮಂಗಳೂರಿನ ಡಾ.ಗಾಯತ್ರಿ ನಾವಡ  ಹಾಗೂ ಡಾ.ಗದ್ದಗೀಮಠ ಜಾನಪದ ತಜ್ಞ ಪ್ರಶಸ್ತಿ ಗೆ ಕಲಬುರ್ಗಿ ವಿ.ವಿ.ಯ ನಿವೃತ್ತ ಪ್ರಾಧ್ಯಾಪಕ ಡಾ.ಬಸವರಾಜು ಸಬರದ ಆಯ್ಕೆ


ಪ್ರಶಸ್ತಿ ಪಡೆದವರು


ಜಾನಪದ ಗಾಯನ ಎಂಕೆ ಸಿದ್ದರಾಜು ಬೆಂಗಳೂರು
ಸೋಬಾನೆ ಪದ ಹೊನ್ನಗಂಗಮ್ಮ ಬೆಂಗಳೂರು ಗ್ರಾಮಾಂತರ
ತಮಟೆವಾದನ ತಿಮ್ಮಯ್ಯ ರಾಮನಗರ
ಭಜನೆತತ್ವ ಕೆ.ಎನ್.ಚೆಂಗಪ್ಪ ಕೋಲಾರ
ಕೀಲುಕುದುರೆ ನಾರಾಯಣಪ್ಪ ಚಿಕ್ಕಬಳ್ಳಾಪುರ
ವೀರಭದ್ರನ ಕುಣಿತಸಿ.ವಿ.ವೀರಣ್ಣ ತುಮಕೂರು
ಸೋಬಾನೆ ಹಾಡುಗಾರಿಕೆ ಭಾಗ್ಯಮ್ಮ ದಾವಣಗೆರೆ
ಮದುವೆ ಹಾಡು ಕೆಂಚಮ್ಮ ಚಿತ್ರದುರ್ಗ
ಜಾನಪದ ಹಾಡುಗಾರಿಕೆ ಕೆ.ಯುವರಾಜು ಶಿವಮೊಗ್ಗ
ಕಂಸಾಳೆ ಹಾಡುಗಾರಿಕೆ ಕುಮಾರಸ್ವಾಮಿ ಮೈಸೂರು
ಕೋಲಾಟ ಭೂಮಿಗೌಡ ಮಂಡ್ಯ
ಹಾಡುಗಾರಿಕೆ ಗ್ಯಾರಂಟಿ ರಾಮಣ್ಣ ಹಾಸನ
ಚೌಡಿಕೆ ಪದ ಭೋಗಪ್ಪ ಎಂ.ಸಿ.ಚಿಕ್ಕಮಗಳೂರು
ಗೊಂಬೆ ಕುಣಿತ ಗೋಪಾಲಕೃಷ್ಣ, ದಕ್ಷಿಣ ಕನ್ನಡ
ಕರಗ ಕೋಲಾಟ ರಮೇಶ್ ಕಲ್ಮಾಡಿ ಉಡುಪಿ
ಬೊಳೋಪಾಟ್ :ಕೆ.ಕೆ.ಪೊನ್ನಪ್ಪ, ಕೊಡಗು
ಸೋಬಾನೆ ಪದ ಹೊನ್ನಮ್ಮ, ಚಾಮರಾಜನಗರ
ತತ್ವಪದ ಮುತ್ತಪ್ಪ ಅಲ್ಲಪ್ಪ ಸವದಿ ಬೆಳಗಾವಿ
ತತ್ವಪದ ಮಲ್ಲೇಶಪ್ಪ ಫಕೀರಪ್ಪ ತಡಸದ ಧಾರವಾಡ
ಡೊಳ್ಳಿನ ಹಾಡುಗಾರಿಕೆ ಸುರೇಶ ರಾಮಚಂದ್ರ ಜೋಶಿ ವಿಜಯಪುರ
ತತ್ವಪದ ಮತ್ತು ಭಜನೆ ಕೃಷ್ಣಪ್ಪ ಮಲ್ಲಪ್ಪ ಬೆಣ್ಣೂರ ಬಾಗಲಕೋಟೆ
ಲಾವಣಿ ಪದ ಸಹದೇವಪ್ಪ ಈರಪ್ಪ ನಡಗೇರಾ, ಉತ್ತರಕನ್ನಡ
ತತ್ವಪದ  ಬಸವರಾಜ ತಿರುಕಪ್ಪಶಿಗ್ಗಾಂವಿ ಹಾವೇರಿ
ಪುರವಂತಿಕೆ ಮುತ್ತಪ್ಪ ರೇವಣಪ್ಪ ರೋಣದ ಗದಗ
ಹಲಗೆವಾದನ ಸಾಯಬಣ್ಣ , ಕಲಬುರ್ಗಿ
ಚಕ್ರಿಭಜನೆ ವೈಜಿನಾಥಯ್ಯ ಬೀದರ್
ಹಗಲುವೇಷ ಜಂಬಣ್ಣ ರಾಯಚೂರು
ಗೋಂದಲಿಗರು ತಿಪ್ಪಣ್ಣ ಅಂಬಾಜಿ ಸುಗತೇಕರ
ಕೊಪ್ಪಳ ಗೋಂದಳಿ ಪದ: ಗೋಂದಳಿ ರಾಮಪ್ಪ ಬಳ್ಳಾರಿ
ಮದುವೆ ಹಾಡು ಗೋಗಿ ಬಸವಲಿಂಗಮ್ಮ ಯಾದಗಿರಿ


ವರದಿ : ಎಸ್.ಎಂ.ನಂದೀಶ್ 

top videos
    First published: