HOME » NEWS » District » FLYING SNAKE FOUND IN MYSURU RH

ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ಹಾರುವ ಅಪರೂಪದ ಹಾವು ಪ್ರತ್ಯಕ್ಷ!

ಈ ಹಿಂದೆ ಮೈಸೂರಿನ ಕೈಗಾರಿಕಾ ಪ್ರದೇಶದಲ್ಲಿ ಒಮ್ಮೆ ಹಾರುವ ಹಾವು ಕಾಣಿಸಿಕೊಂಡಿತ್ತು. ಇದೀಗ ನಗರದ ಹೃದಯ ಭಾಗದ ಮನೆಯೊಂದರಲ್ಲಿ ಕಾಣಿಸಿಕೊಂಡಿದೆ. 

news18-kannada
Updated:June 6, 2020, 3:24 PM IST
ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ಹಾರುವ ಅಪರೂಪದ ಹಾವು ಪ್ರತ್ಯಕ್ಷ!
ಮೈಸೂರಿನಲ್ಲಿ ಕಾಣಿಸಿಕೊಂಡ ಹಾರುವ ಹಾವು.
  • Share this:
ಮೈಸೂರು: ಮೈಸೂರಿನ ಅಗ್ರಹಾರದ ರಾಮಾನುಜ ರಸ್ತೆ ಮನೆಯೊಂದರ ಬಳಿ ಹಾರುವ ಅಪರೂಪದ ಹಾವೊಂದು ಕಾಣಿಸಿಕೊಂಡಿದೆ.

ಎರಡು ದಿನಗಳ ಹಿಂದೆ ರಾಮಾನುಜ ರಸ್ತೆಯಲ್ಲಿರುವ ವೆಂಕಟರಮಣ ಎಂಬುವರ ಮನೆ ಬಳಿ ಈ ಅಪರೂಪದ ಹಾವು ಕಾಣಿಸಿಕೊಂಡಿದೆ. ಮರದಿಂದ ಹಾರಿ ನೆಲಕ್ಕೆ ಬಿದ್ದು ಮತ್ತೆ ನೆಲದಿಂದ ಹಾರಿ ಮನೆಯ ಬಾಗಿಲಿಗೆ ಹಾವು ಜೋತು ಹಾಕಿಕೊಂಡಿದೆ. ಹಾರುವ ಹಾವನ್ನು ಕಂಡು‌ ಮನೆ ಮಂದಿ ಚಕಿತರಾಗಿದ್ದರು. ಬಳಿಕ ಹಾವು ಮನೆಯ ಪಕ್ಕದಲ್ಲಿ ಗಿಡಗಳ ಬಳಿಗೆ ಹೋಗಿದೆ.

ಸಹಜವಾಗಿ ಪಶ್ವಿಮಘಟ್ಟದ ಕಾಡಿನಲ್ಲಿ ಹಾರುವ ಹಾವುಗಳು ಜೀವಿಸುತ್ತವೆ. ಎತ್ತರದ ಮರಗಳಿಂದ ಚಿಕ್ಕಮರಗಳಿಗೆ ಈ ಹಾವುಗಳು ಹಾರುತ್ತವೆ. ಹಾರುವಾಗ ಕರಾರುವಕ್ಕಾಗಿ ಆಯತಪ್ಪದೆ ಮರದಿಂದ ಮರಕ್ಕೆ ಈ ಹಾವುಗಳು ಜಿಗಿಯುತ್ತವೆ. ವಿಷಪೂರಿತವಲ್ಲದ ಹಾರುವ ಹಾವು ಅಪರೂಪದ ಪ್ರಭೇದಕ್ಕೆ ಸೇರಿದೆ.ಈ ಹಿಂದೆ ಮೈಸೂರಿನ ಕೈಗಾರಿಕಾ ಪ್ರದೇಶದಲ್ಲಿ ಒಮ್ಮೆ ಹಾರುವ ಹಾವು ಕಾಣಿಸಿಕೊಂಡಿತ್ತು. ಇದೀಗ ನಗರದ ಹೃದಯ ಭಾಗದ ಮನೆಯೊಂದರಲ್ಲಿ ಕಾಣಿಸಿಕೊಂಡಿದೆ.

ಇದನ್ನು ಓದಿ: ನಿರಾಣಿ ಷುಗರ್ಸ್ ತೆಕ್ಕೆಗೆ ಪಾಂಡವಪುರದ PSSK ಸಕ್ಕರೆ ಕಾರ್ಖಾನೆ; 40 ವರ್ಷಗಳ ಗುತ್ತಿಗೆಯ ಹಿಂದಿದೆ ರಾಜಕೀಯ ಲೆಕ್ಕಾಚಾರ
First published: June 6, 2020, 3:24 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading