ಮಂಡ್ಯದ ಬಸರಾಳು ಗ್ರಾಪಂ ವ್ಯಾಪ್ತಿಯಲ್ಲಿ ನೊಣಗಳ ಹಾವಳಿ; ಹೈರಾಣಾದ ನಾಲ್ಕೈದು ಹಳ್ಳಿಯ ಜನರು!

ಈ ಗ್ರಾಮಗಳಲ್ಲಿ ಕೊರೋನಾ ಆತಂಕದ ಜೊತೆಗೆ ನೊಣಗಳ ಹಾವಳಿ ಈ ಗ್ರಾಮಗಳ ಜನರನ್ನು ಹೈರಾಣಾಗಿಸಿದೆ. ನೊಣಗಳಿಂದ ಸಾಂಕ್ರಾಮಿಕ ರೋಗ ಹರಡುವ ಆತಂಕ ಎದುರಾಗಿದೆ. ಈಗಲಾದರೂ ಸಂಬಂಧಪಟ್ಟ ಅಧಿಕಾರಿಗಳು ಎಚ್ಚೆತ್ತು ಈ ಊರಿನವರ ಸಮಸ್ಯೆ ಪರಿಹರಿಸಬೇಕಿದೆ. ಇಲ್ಲದಿದ್ದರೆ ಮುಂದೆ ಈ ಭಾಗದಲ್ಲಿ ಅಧಿಕಾರಿಗಳ ನಿರ್ಲಕ್ಷ್ಯವೇ  ಸಾಂಕ್ರಾಮಿಕ ರೋಗಕ್ಕೆ ದಾರಿ ಮಾಡಿಕೊಟ್ಟಂತೆ ಆಗಲಿದೆ.

news18-kannada
Updated:July 17, 2020, 7:13 PM IST
ಮಂಡ್ಯದ ಬಸರಾಳು ಗ್ರಾಪಂ ವ್ಯಾಪ್ತಿಯಲ್ಲಿ ನೊಣಗಳ ಹಾವಳಿ; ಹೈರಾಣಾದ ನಾಲ್ಕೈದು ಹಳ್ಳಿಯ ಜನರು!
ಬೈಕ್​ ಮೇಲೆ ಕುಳಿತಿರುವ ನೊಣಗಳು.
  • Share this:
ಮಂಡ್ಯ: ಒಂದು ಕಡೆ ಆ ಊರುಗಳ ಜನರಿಗೆ ಕೊರೋನಾ ಆತಂಕ ಇದ್ದರೆ ಮತ್ತೊಂದು ಕಡೆ ಊರಿನಲ್ಲಿ ನೊಣಗಳ ಹಾವಳಿಯಿಂದ ಹೊಸ ಸಮಸ್ಯೆ ಉದ್ಭವವಾಗಿದೆ. ಮನೆಯಲ್ಲಿ ಇರಲಾಗದೆ, ಊಟ ಮಾಡಲಾಗದೆ ಆ ಗ್ರಾಮಗಳ ಜನರು ಹೈರಾಣಾಗಿದ್ದಾರೆ. ಸುತ್ತಮುತ್ತಲ ನಾಲ್ಕೈದು ಗ್ರಾಮಗಳ ಜನರು ನೊಣಗಳ ಹಾವಳಿಯಿಂದ ತತ್ತರಿಸಿ ಹೋಗಿದ್ದು, ಬೀದಿಗೆ ಬಂದು ನಿಲ್ಲುವಂತಾಗಿದೆ. 

ಮಂಡ್ಯ ಜಿಲ್ಲೆ ಬಸರಾಳು ಗ್ರಾ.ಪಂ ವ್ಯಾಪ್ತಿಯ ತಿರುಮಲಾಪುರ, ಬಿದರಕಟ್ಟೆ, ಮಾಯಣ್ಣನಕೊಪ್ಪಲು, ಸೇರಿದಂತೆ ಬಸರಾಳು ಗ್ರಾಮದಲ್ಲಿ ನೊಣಗಳ ಹಾವಳಿ ಹೆಚ್ಚಾಗಿದೆ. ಕಳೆದ ಎರಡು ತಿಂಗಳಿಂದ ಈ ಗ್ರಾಮಗಳಲ್ಲಿ ನೊಣಗಳ ಹಾವಳಿ ಆರಂಭವಾಗಿದ್ದು, ಈ ನೊಣಗಳಿಂದ ಊರಿನ‌ ಗ್ರಾಮಸ್ಥರು ಹೈರಾಣಾಗಿದ್ದಾರೆ. ಬಸರಾಳು ಗ್ರಾಮದ ಪಕ್ಕದಲ್ಲಿರುವ ಮಂಜುಶ್ರೀ ಕೋಳಿ ಫಾರಂನ ಅವೈಜ್ಞಾನಿಕ ನಿರ್ವಹಣೆಯಿಂದ ಸುತ್ತಮುತ್ತಲಿನ ಗ್ರಾಮದಲ್ಲಿ ನೊಣಗಳ ಹಾವಳಿ ವಿಪರೀತವಾಗಿದೆ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ.

ಮನೆಯಲ್ಲಿ ಮಲಗಲಾಗದೆ, ಕುಳಿತುಕೊಳ್ಳಲಾಗದೆ, ಸರಿಯಾಗಿ ಊಟ ಮಾಡಲು ಕೂಡ ಆಗದೆ ನೊಣಗಳ ಹಾವಳಿಯಿಂದ ಕಂಗಾಲಾಗಿದ್ದಾರೆ. ‌ಎಲ್ಲೆಂದರಲ್ಲಿ ಎಲ್ಲ ಪದಾರ್ಥಗಳ ಮೇಲೆ ನೂರಾರು ಸಂಖ್ಯೆಯಲ್ಲಿ ಮುತ್ತಿಕೊಳ್ಳುತ್ತಿವೆ. ನೊಣಗಳ ಹಾವಳಿಗೆ ಜನರು ರೋಸಿ ಹೋಗಿದ್ದು, ಮನೆ ಬಿಟ್ಟು ಇದೀಗ ಬೀದಿಯಲ್ಲಿ ಇರುವಂತಾಗಿದ್ದು, ಸಮಸ್ಯೆ ಬಗೆಹರಿಸದ ಅಧಿಕಾರಿಗಳ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ.

ಇನ್ನು ಗ್ರಾಮದ ಸಮೀಪದಲ್ಲಿರುವ ಮಂಜುಶ್ರೀ  ಕೋಳಿ ಫಾರಂ‌ನಿಂದ ಇಷ್ಟೆಲ್ಲಾ ಸಮಸ್ಯೆ ಉದ್ಘವವಾಗಿದ್ದು, ಕೋಳಿ ಫಾರಂನ ಅವೈಜ್ಞಾನಿಕ ನಿರ್ವಹಣೆಯಿಂದ ನೊಣಗಳು ಹೆಚ್ಚಾಗಿವೆ ಎಂದು ಆರೋಪಿಸಲಾಗಿದೆ. ಅಲ್ಲದೇ ಗ್ರಾಮಸ್ಥರು ಕೋಳಿ ಫಾರಂಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದರೂ ಕೂಡ ಕೋಳಿ ಫಾರಂ ಮಾಲೀಕರು ಜನರ ಮೇಲೆ ದಬ್ಬಾಳಿಕೆ ನಡೆಸಿದ್ದಾರೆ ಎನ್ನಲಾಗಿದೆ. ಈ ಬಗ್ಗೆ ತಾಲೂಕು ಆಡಳಿತಕ್ಕೆ ದೂರು ನೀಡಿದರೂ ಅಧಿಕಾರಿಗಳು ಯಾವುದೇ ಕ್ರಮ ಕೈಗೊಂಡಿರಲಿಲ್ಲ. ಕಡೆಗೆ ಸುತ್ತಮುತ್ತಲ ಗ್ರಾಮಸ್ಥರು ಪಂಚಾಯ್ತಿಗೆ ಬೀಗ ಹಾಕುವ ಎಚ್ಚರಿಕೆ ನೀಡಿದ ಬಳಿಕ ಇದೀಗ ಕ್ರಮಕ್ಕೆ ಮುಂದಾಗಿದ್ದು ಕೋಳಿ ಫಾರಂ ಮಾಲೀಕರಿಗೆ ನೋಟೀಸ್ ನೀಡಿ ನೊಣಗಳ ಹಾವಳಿ ಇರುವ ಗ್ರಾಮಗಳಿಗೆ ಔಷಧಿ ಸಿಂಪಡಿಸುವುದಾಗಿ ಹೇಳಿದ್ದಾರೆ.

ಆಹಾರದ ಮೇಲೆ ಕುಳಿತಿರುವ ನೊಣಗಳು.


ಇದನ್ನು ಓದಿ: ರಾಜಸ್ಥಾನದ ರಾಜಕೀಯ ಬೆಳವಣಿಗೆ ಮಾದರಿಗೆ ನಾವೇ ಕಾರಣ, ಇದಕ್ಕೆ ನಾನು ಹೆಮ್ಮೆ ಪಡುತ್ತೇನೆ; ಎಚ್.ವಿಶ್ವನಾಥ್
ಒಟ್ಟಾರೆ ಈ ಗ್ರಾಮಗಳಲ್ಲಿ ಕೊರೋನಾ ಆತಂಕದ ಜೊತೆಗೆ ನೊಣಗಳ ಹಾವಳಿ ಈ ಗ್ರಾಮಗಳ ಜನರನ್ನು ಹೈರಾಣಾಗಿಸಿದೆ. ನೊಣಗಳಿಂದ ಸಾಂಕ್ರಾಮಿಕ ರೋಗ ಹರಡುವ ಆತಂಕ ಎದುರಾಗಿದೆ. ಈಗಲಾದರೂ ಸಂಬಂಧಪಟ್ಟ ಅಧಿಕಾರಿಗಳು ಎಚ್ಚೆತ್ತು ಈ ಊರಿನವರ ಸಮಸ್ಯೆ ಪರಿಹರಿಸಬೇಕಿದೆ. ಇಲ್ಲದಿದ್ದರೆ ಮುಂದೆ ಈ ಭಾಗದಲ್ಲಿ ಅಧಿಕಾರಿಗಳ ನಿರ್ಲಕ್ಷ್ಯವೇ  ಸಾಂಕ್ರಾಮಿಕ ರೋಗಕ್ಕೆ ದಾರಿ ಮಾಡಿಕೊಟ್ಟಂತೆ ಆಗಲಿದೆ.
Published by: HR Ramesh
First published: July 17, 2020, 7:13 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading