HOME » NEWS » District » FLOOD VICTIMS WHO RETURNED TO PROTEST AFTER A 15 DAYS DEADLINE TO MINISTER RAMESH JARAKIHOLI HK

ಸಚಿವ ರಮೇಶ್ ಜಾರಕಿಹೊಳಿಗೆ 15 ದಿನ ಗಡುವು ನೀಡಿ ಪ್ರತಿಭಟನೆ ವಾಪಸ್ ಪಡೆದ ಪ್ರವಾಹ ಸಂತ್ರಸ್ತರು.!

ಇಂದು ಜಿಲ್ಲಾ ಉಸ್ತುವಾರಿ ಸಚಿವ ರಮೇಶ್ ಜಾರಕಿಹೊಳಿ ಪ್ರತಿಭಟನಾ ಸ್ಥಳಕ್ಕೆ ಭೇಟಿ ನೀಡಿ ಸಂತ್ರಸ್ತರ ಜತೆಗೆ ಮಾತುಕತೆ ನಡೆಸಿದರು. 15 ದಿನದ ಗಡುವು ನೀಡಿದ ಸಂತ್ರಸ್ತರು ಇದೀಗ ಹೋರಾಟವನ್ನು ತಾತ್ಕಾಲಿಕವಾಗಿ ವಾಪಸ್ ಪಡೆದುಕೊಂಡಿದ್ದಾರೆ.

news18-kannada
Updated:August 26, 2020, 7:21 PM IST
ಸಚಿವ ರಮೇಶ್ ಜಾರಕಿಹೊಳಿಗೆ 15 ದಿನ ಗಡುವು ನೀಡಿ ಪ್ರತಿಭಟನೆ ವಾಪಸ್ ಪಡೆದ ಪ್ರವಾಹ ಸಂತ್ರಸ್ತರು.!
ಪ್ರವಾಹ ಸಂತ್ರಸ್ತರು
  • Share this:
ಬೆಳಗಾವಿ(ಆಗಸ್ಟ್​. 26): ಬೆಳಗಾವಿ ಜಿಲ್ಲೆಯಲ್ಲಿ ಕಳೆದ ವರ್ಷದ ಭೀಕರ ಪ್ರವಾಹದಿಂದ ಸಾವಿರಾರು ಮನೆಗಳು ನೆಲಸಮವಾಗಿದ್ದವು. ಆದರೆ, ಇಂದಿಗೂ ಬಿದ್ದ ಮನೆಗಳಿಗೆ ಪರಿಹಾರ ಸಿಕ್ಕಿಲ್ಲ. ತಕ್ಷಣ ಪರಿಹಾರ ಬಿಡುಗಡೆಗೆ ಆಗ್ರಹಿಸಿ ರಾಮದುರ್ಗ ತಹಶೀಲ್ದಾರ್ ಕಚೇರಿ ಮುಂಭಾಗದಲ್ಲಿ ಕಳೆದ 3 ದಿನಗಳಿಂದ ರೈತರು ಧರಣಿ ನಡೆಸುತ್ತಿದ್ದರು. ಇಂದು ಸ್ಥಳಕ್ಕೆ ಭೇಟಿ ನೀಡಿ ಜಿಲ್ಲಾ ಉಸ್ತುವಾರಿ ಸಚಿವ ರಮೇಶ್ ಜಾರಕಿಹೊಳಿಗೆ 15 ದಿನ ಗಡುವು ನೀಡಿ ಪ್ರತಿಭಟನೆಯನ್ನು ವಾಪಸ್​ ಪಡೆದಿದ್ದಾರೆ.

ಕಳೆದ ವರ್ಷದ ಪ್ರವಾಹಕ್ಕೆ ಬೆಳಗಾವಿ ಜಿಲ್ಲೆಯಲ್ಲಿ 58,498 ಮನೆಗಳಿಗೆ ಹಾನಿಯಾಗಿತ್ತು. ಈ ಪೈಕಿ 49 ಸಾವಿರ ಮನೆಗಳನ್ನು ಎ,ಬಿ ಹಾಗೂ ಸಿ ಕೆಟಗೆರಿ ಎಂದು ಗುರುತಿಸಿ ಪರಿಹಾರ ನೀಡಲಾಗಿದೆ. ಆದರೆ, 9 ಸಾವಿರ ಮನೆಗಳಿಗೆ ಇನ್ನೂ ಪರಿಹಾರ ಬಂದಿಲ್ಲ. ರಾಜೀವಗಾಂಧಿ ವಸತಿ ಯೋಜನೆಯ ಸೈಟ್ ಬಂದ್ ಆಗಿರುವ ಕಾರಣ ನೀಡಿದ ಮನೆಗಳಿಗೆ ಪರಿಹಾರ ಸಿಕ್ಕಿಲ್ಲ. ರಾಮದುರ್ಗ ತಾಲೂಕಿನಲ್ಲಿ ಹೀಗೆ 1 ಸಾವಿರಕ್ಕೂ ಹೆಚ್ಚು ಮನೆಗಳು ಬಾಕಿ ಉಳಿದು ಕೊಂಡಿವೆ.

ಕಳೆದ ಒಂದು ವರ್ಷದಿಂದ ನಿರಂತವಾಗಿ ರಾಮದುರ್ಗ ಭಾಗದ ಪ್ರವಾಹ ಸಂತ್ರಸ್ತರು ನಿರಂತರವಾಗಿ ಹೋರಾಟ ನಡೆಸುತ್ತಿದ್ದಾರೆ. ಆದರೇ ಯಾವುದೇ ಪ್ರಯೋಜವಾಗಿಲ್ಲ. ಹೀಗಾಗಿ ಕಳೆದ ಮೂರು ದಿನಗಳಿಂದ ರಾಮದುರ್ಗ ತಹಶೀಲ್ದಾರ್ ಕಚೇರಿ ಮುಂಭಾಗದಲ್ಲಿ ಅಹೋರಾತ್ರಿ ಧರಣಿ ನಡೆಸಿದ್ರು. ಸ್ಥಳಕ್ಕೆ ಶಾಸಕ ಮಹಾದೇವಪ್ಪ ಯಾದವಾಡ, ರಾಜ್ಯಸಭಾ ಸದಸ್ಯ ಈರಣ್ಣ ಕಡಾಡಿ ಭೇಟಿ ನೀಡಿ ಮನವೊಲಿಸುವ ಯತ್ನ ಮಾಡಿದರು ಯಾವುದೇ ಪ್ರಯೋಜವಾಗಿರಲಿಲ್ಲ.

ಮುಖ್ಯಮಂತ್ರಿಗಳ ವೈಮಾನಿಕ ಸಮೀಕ್ಷೆಯನ್ನು ಈ ಭಾಗದ ರೈತರು ಇದನ್ನು ವಿರೋಧ ವ್ಯಕ್ತಪಡಿಸಿದ್ದರು. ಹೀಗಾಗಿ ಸ್ವತಃ ಇಂದು ಜಿಲ್ಲಾ ಉಸ್ತುವಾರಿ ಸಚಿವ ರಮೇಶ್ ಜಾರಕಿಹೊಳಿ ಪ್ರತಿಭಟನಾ ಸ್ಥಳಕ್ಕೆ ಭೇಟಿ ನೀಡಿ ಸಂತ್ರಸ್ತರ ಜತೆಗೆ ಮಾತುಕತೆ ನಡೆಸಿದರು. 15 ದಿನದ ಗಡುವು ನೀಡಿದ ಸಂತ್ರಸ್ತರು ಇದೀಗ ಹೋರಾಟವನ್ನು ತಾತ್ಕಾಲಿಕವಾಗಿ ವಾಪಸ್ ಪಡೆದುಕೊಂಡಿದ್ದಾರೆ.

ಪ್ರತಿಭಟನಾ ವೇದಿಕೆಗೆ ಆಗಮಿಸಿದ ಉಸ್ತುವಾರಿ ಸಚಿವ ರಮೇಶ್ ಜಾರಕಿಹೊಳಿ ಮಾತನಾಡಿ, ಒಂದು ವರ್ಷದಿಂದ ಸಂತ್ರಸ್ತರಿಗೆ ಪರಿಹಾರ ಬಂದಿಲ್ಲ. ಯಾಕೆ ಬಂದಿಲ್ಲ ಎನ್ನುವ ಪ್ರಶ್ನೆಗೆ ನನ್ನ ಬಳಿ ಉತ್ತರ ಇಲ್ಲ. ಪರಿಹಾರ ವಿಚಾರದಲ್ಲಿ ಕಾನೂನಿನ ತೊಡಕು ಇದೆ. ನನಗೆ ಸ್ವಲ್ಪ ಸಮಯ ಕೊಡಿ ಈ ಬಗ್ಗೆ ಸಿಎಂ ಬಿಎಸ್ ಯಡಿಯೂರಪ್ಪ ಜತೆಗೆ ಚರ್ಚೆ ಮಾಡಿ ಸಮಸ್ಯೆ ಇತ್ಯರ್ಥ ಪಡಿಸುತ್ತೇನೆ ಎಂದರು.

ಇದನ್ನೂ ಓದಿ : ಡಿಕೆಶಿ ನಂತರ ಕಟೀಲ್ ಚಿತ್ತ ಕಲ್ಯಾಣ ಕರ್ನಾಟಕದತ್ತ ; ಪಕ್ಷ ಸಂಘಟನೆ ಮುಂದಾದ ಕಮಲ ಪಡೆ

ಪ್ರತಿಭಟನೆಯನ್ನು ವಾಪಸ್ ಪಡೆದ್ರೆ ನನಗೆ ಸಿಎಂ ಮುಂದೆ ನಿಂತು ಮಾತನಾಡಲು ಶಕ್ತಿ ಬರುತ್ತದೆ. ಯಡಿಯೂರಪ್ಪ ಕೈ ಹಿಡಿದು ಕೆಲಸ ಮಾಡಿಸುತ್ತೇನೆ ತಕ್ಷಣ ಪ್ರತಿಭಟನೆ ವಾಪಸ್ ಪಡೆಯಿರಿ ಎಂದು ಮನವಿ ಮಾಡಿದರು. ರಮೇಶ್ ಜಾರಕಿಹೊಳಿ ಮನವಿ ಸ್ಪಂಧಿಸಿದ ಹೋರಾಟಗಾರರು ಪ್ರತಿಭಟನೆಯನ್ನು ವಾಪಸ್ ಪಡೆದರು.

ಬೆಳಗಾವಿ ಜಿಲ್ಲೆಯಲ್ಲಿ 9 ಸಾವಿರಕ್ಕೂ ಹೆಚ್ಚು ಮನೆಗಳು ಇನ್ನೂ ತಾಂತ್ರಿಕ ಕಾರಣದಿಂದ ಪರಿಹಾರ ಸಿಗದೆ ಉದುಕೊಂಡಿವೆ. ರಾಜ್ಯದ ಅನೇಕ ಜಿಲ್ಲೆಯಲ್ಲಿ ಇದೇ ರೀತಿಯ ಸಮಸ್ಯೆ ಇದೆ. ಇದನ್ನು ಸರ್ಕಾರ ಮಟ್ಟದಲ್ಲಿ ಯಾವ ರೀತಿ ಇತ್ಯರ್ಥ ಪಡಿಸುತ್ತಾರೆ ಎಂಬುದು ಕಾದು ನೋಡಬೇಕಿದೆ.
Published by: G Hareeshkumar
First published: August 26, 2020, 7:21 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories