ಸಚಿವರು, ಶಾಸಕರನ್ನು ತರಾಟೆಗೆ ತೆಗೆದುಕೊಂಡ ಪ್ರವಾಹದಿಂದ ಮನೆ ಕಳೆದುಕೊಂಡ ಸಂತ್ರಸ್ತರು!

2019 ಮಹಾಮಳೆ ಮಲೆನಾಡಿಗರ ಬದುಕನ್ನೂ ಅಕ್ಷರಶಃ ಮೂರ ಬಟ್ಟೆ ಮಾಡಿದೆ. ಅದರಲ್ಲೂ ಜಿಲ್ಲೆಯಲ್ಲಿ 5 ಮನೆಗಳು, ಸುಮಾರು 40 ಎಕರೆ ಪ್ರದೇಶ ಸಂಪೂರ್ಣ ಕೊಚ್ಚಿ ಹೋಗಿದ್ದು ಇದೇ ಮಲೆಮನೆ ಗ್ರಾಮದಲ್ಲಿ.

ಸಚಿವರು, ಶಾಸಕರನ್ನು ತರಾಟೆಗೆ ತೆಗೆದುಕೊಂಡ ಸಂತ್ರಸ್ತರು.

ಸಚಿವರು, ಶಾಸಕರನ್ನು ತರಾಟೆಗೆ ತೆಗೆದುಕೊಂಡ ಸಂತ್ರಸ್ತರು.

  • Share this:
ಚಿಕ್ಕಮಗಳೂರು: ಎರಡು ವರ್ಷ ಕಳೆದ್ರು ಮನೆ ಕಟ್ಟಿ ಕೊಟ್ಟಿಲ್ಲ, ಶಾಶ್ವತ ಪರಿಹಾರ ಕೊಟ್ಟಿಲ್ಲ ಎಂದು ಸ್ಥಳಕ್ಕೆ ಭೇಟಿ ನೀಡಿದ್ದ ಉಸ್ತುವಾರಿ ಸಚಿವ ಹಾಗೂ ಶಾಸಕರಿಗೆ ಸಂತ್ರಸ್ಥರು ತರಾಟೆ ತೆಗೆದುಕೊಂಡಿರುವ ಘಟನೆ ಚಿಕ್ಕಮಗಳೂರು ಜಿಲ್ಲೆ ಮೂಡಿಗೆರೆ ತಾಲೂಕಿನ ಮಲೆಮನೆಯಲ್ಲಿ ನಡೆದಿದೆ.

ಮಲೆಮನೆ ಗ್ರಾಮದ ಸಂತ್ರಸ್ಥರು ಚಿಕ್ಕಮಗಳೂರು ಉಸ್ತುವಾರಿ ಸಚಿವ ಅಂಗಾರ, ಮೂಡಿಗೆರೆ ಶಾಸಕ ಎಂ.ಪಿ ಕುಮಾರಸ್ವಾಮಿಯನ್ನ ತರಾಟೆಗೆ ತೆಗೆದುಕೊಂಡಿದ್ದಾರೆ. 2019ರ ಮಹಾಮಳೆಯ ಹೊಡೆತಕ್ಕೆ ಮಲೆಮನೆ ಗ್ರಾಮದ 5 ಮನೆಗಳು, ಸುಮಾರು 40 ಎಕರೆ ಜಮೀನು ನಾಮಾವಶೇಷ ಆಗಿದ್ವು. ಗುಡ್ಡಗಳು ಸ್ಫೋಟಗೊಂಡ ಪರಿಣಾಮ ಗ್ರಾಮದ ಮನೆಗಳನ್ನ ಸೇರಿದಂತೆ ಆಸ್ತಿಯನ್ನ ಅಪೋಶನ ಪಡೆದಿದ್ವು. ಈ ವೇಳೆ ಜನರು ಜೀವ ಉಳಿಸಿಕೊಂಡಿದ್ದೇ ಹೆಚ್ಚು, ಅಂದಿನಿಂದಲೂ ಈ ಸಂತ್ರಸ್ತರು ಹೊಸ ಜೀವನ ಕಟ್ಟಿಕೊಡಲು ಪರದಾಟ ನಡೆಸ್ತಾನೇ ಇದ್ದಾರೆ.

ಬಾಡಿಗೆ ಮನೆಗೆ ಹೋಗಿ, ಹಣ ಕೊಡ್ತೀವಿ ಅಂದಿತ್ತು ಸರ್ಕಾರ. ಒಂದು ವರ್ಷದೊಳಗೆ ಮನೆ, ಬದಲಿ ಜಮೀನನ್ನ ಕೊಟ್ಟು ಹೊಸ ಬದುಕನ್ನ ಕಟ್ಟಿಕೊಡ್ತೀವಿ ಅಂತೇಳಿದ ಜನಪ್ರತಿನಿಧಿಗಳು ಕಾಲ ದೂಡುತ್ತಲೇ ಇದ್ದಾರೆ. ಇನ್ನೂ ಕಾಲ ಕೂಡಿ ಬಂದಿಲ್ಲ. ಬಾಡಿಗೆ ಹಣವನ್ನೂ ಸರ್ಕಾರ ಹಾಕಿಲ್ಲ. ಅಂದಿನಿಂದಲೂ ಈ ಸಂತ್ರಸ್ತರು ಜೀವನ ದೂಡಲು ನಡೆಸುತ್ತಿರುವ ಸರ್ಕಸ್ ಅಷ್ಟಿಷ್ಟಲ್ಲ. ಹಾಗಾಗೀ ಉಸ್ತುವಾರಿ ಸಚಿವ ಅಂಗಾರ, ಶಾಸಕ ಎಂ.ಪಿ ಕುಮಾರಸ್ವಾಮಿ ಗ್ರಾಮಕ್ಕೆ ಹೋದಾಗ ಸಹಜವಾಗಿಯೇ ಸಂತ್ರಸ್ತರ ಸಹನೆಯ ಕಟ್ಟೆ ಒಡೆದು ಹೋಗಿತ್ತು.

ಪ್ರವಾಹದ ಬಳಿಕ ಮೂರನೇ ಮಳೆಗಾಲ ಸುರಿಯುತ್ತಿದ್ರೂ ಮಲೆಮನೆ ಸಂತ್ರಸ್ತರಿಗೆ ಪರ್ಯಾಯ ಬದುಕು ಕಟ್ಟಿಕೊಡುವ ಕೆಲಸ ಆಗಿಲ್ಲ. ಹಾಗಾಗಿಯೇ ಯಾಕೆ ಬಂದ್ರಿ ಸರ್.. ನಾವು ಸತ್ತಿದ್ದೀವಾ..? ಇಲ್ಲಾ ಬದ್ಕಿದ್ದೀವಾ ಅಂತಾ ನೋಡಲು ಬಂದ್ರಾ..? ನಮಗೆ ಪರ್ಯಾಯ ವ್ಯವಸ್ಥೆ ಕಲ್ಪಿಸೋಕೆ ನಿಮಗೆ ಆಗಲ್ವಾ ಅಂತಾ ಸಂತ್ರಸ್ತರು ತಮ್ಮ ಸಿಟ್ಟನ್ನ ಹೊರಹಾಕಿದ್ರು. ಈ ವೇಳೆ ಸಂತ್ರಸ್ತರನ್ನ ಸಮಧಾನ ಪಡಿಸಿದ ಜಿಲ್ಲಾ ಉಸ್ತುವಾರಿ ಸಚಿವ ಅಂಗಾರ, ಹಿಂದಿನದ್ದು ನನಗೆ ಗೊತ್ತಿಲ್ಲ, ಈ ವಿಚಾರ ಇದೀಗ ನನ್ನ ಗಮನಕ್ಕೆ ಬಂದಿದೆ. ಖಂಡಿತಾ ನಿಮಗೆ ಸೂಕ್ತ ವ್ಯವಸ್ಥೆ ಕಲ್ಪಿಸುತ್ತೇವೆ ಅನ್ನೋ ಭರವಸೆ ನೀಡಿದರು.

ಇದನ್ನು ಓದಿ: ಮಕ್ಕಳ ಶಿಕ್ಷಣ ಕಿತ್ತುಕೊಂಡ ಕೊರೋನಾ; ಕಳೆದ ವರ್ಷ 33 ಲಕ್ಷ ವಿದ್ಯಾರ್ಥಿಗಳಿಗೆ ಶಿಕ್ಷಣವೇ ಇಲ್ಲ!

2019 ಮಹಾಮಳೆ ಮಲೆನಾಡಿಗರ ಬದುಕನ್ನೂ ಅಕ್ಷರಶಃ ಮೂರ ಬಟ್ಟೆ ಮಾಡಿದೆ. ಅದರಲ್ಲೂ ಜಿಲ್ಲೆಯಲ್ಲಿ 5 ಮನೆಗಳು, ಸುಮಾರು 40 ಎಕರೆ ಪ್ರದೇಶ ಸಂಪೂರ್ಣ ಕೊಚ್ಚಿ ಹೋಗಿದ್ದು ಇದೇ ಮಲೆಮನೆ ಗ್ರಾಮದಲ್ಲಿ. ಎಲ್ಲವನ್ನೂ ಕಳೆದುಕೊಂಡವರಿಗೆ  ಪರ್ಯಾಯ ವ್ಯವಸ್ಥೆ ಕಲ್ಪಿಸಬೇಕಿದ್ದ, ಜನಪ್ರತಿನಿಧಿಗಳು, ಸಂತ್ರಸ್ತರಿಗೆ ಕುಂಟು ನೆಪ ಹೇಳಿ ಸಾಗು ಹಾಕ್ತಾನೆ ಇದ್ದಾರೆ. ಸರ್ಕಾರದ- ಜನಪ್ರತಿನಿಧಿಗಳ ಧೋರಣೆಯಿಂದ ಆಕ್ರೋಶಗೊಂಡಿರುವ ಸಂತ್ರಸ್ತರು, ಬದುಕು ಕಟ್ಟಿಕೊಡಿ, ಆಗಲ್ಲ ಅಂದ್ರೆ ಹೇಳಿ ಇಲ್ಲೇ ಮಡಿಯುತ್ತೇವೆ ಅಂತಾ ಸಚಿವರು, ಶಾಸಕರನ್ನ ಸರಿಯಾಗಿಯೇ ಕ್ಲಾಸ್ ತೆಗೆದುಕೊಳ್ಳುವ ಮೂಲಕ ಆಕ್ರೋಶ ಹೊರಹಾಕಿದ್ದಾರೆ. ಸದ್ಯ ಜಿಲ್ಲಾ ಉಸ್ತುವಾರಿ ಸಚಿವರಾದ ಅಂಗಾರ, ಮಲೆಮನೆ ಸಂತ್ರಸ್ಥರ ಬದುಕು ಕಟ್ಟಿಕೊಡುವ ಮಾತನಾಡಿದ್ದು, ಎಷ್ಟರಮಟ್ಟಿಗೆ ತಮ್ಮ ಮಾತನ್ನ ಉಳಿಸಿಕೊಳ್ಳುತ್ತಾರೆ ಅನ್ನೋದನ್ನ ಕಾದು ನೋಡಬೇಕು.

ನ್ಯೂಸ್​​​18 ಕನ್ನಡ ಕಳಕಳಿ: ಕೊರೋನಾ ಪಾಸಿಟಿವ್​ ಕೇಸ್​ಗಳ ಸಂಖ್ಯೆ ರಾಜ್ಯದಲ್ಲಿ ತಗ್ಗಿದೆಯಾದರೂ ಸೋಂಕಿನ ಅಪಾಯದಿಂದ ಸಂಪೂರ್ಣವಾಗಿ  ಇನ್ನೂ ಯಾರೂ ಸುರಕ್ಷಿತರಲ್ಲ. ಹೀಗಾಗಿ ಪ್ರತಿಯೊಬ್ಬರು ಕೋವಿಡ್​​ ನಿಯಮಗಳಾದ ಮಾಸ್ಕ್​​ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಮರೆಯಬಾರದು. ಆದಷ್ಟು ಶೀಘ್ರವೇ ಲಸಿಕೆ ಪಡೆದು ಸೋಂಕಿನ ವಿರುದ್ಧದ ಯುದ್ಧದಲ್ಲಿ ಪ್ರತಿಯೊಬ್ಬರು ಕೈ ಜೋಡಿಸಬೇಕು. ಅನಗತ್ಯವಾಗಿ ಯಾರೂ ಮನೆಯಿಂದ ಹೊರಗೆ ಬಾರದೆ ಮನೆಯಲ್ಲೇ ಇದ್ದು ಮುನ್ನೆಚ್ಚರಿಕೆ ವಹಿಸಬೇಕಿದೆ.
Published by:HR Ramesh
First published: