HOME » NEWS » District » FLOOD OF THE BHEEMA RIVER IN LAND OF VIJAYAPURA MANY VILLAGES ARE SURROUNDED BY WATER PEOPLES LIFE SHATTERED MVSV HK

ಬಸವ ನಾಡಿನಲ್ಲೀಗ ಭೀಮಾ ಪ್ರವಾಹ : ಹಲವು ಗ್ರಾಮಗಳು ಜಲಾವೃತ, ಜನಜೀವನ ತತ್ತರ

ವಿಜಯಪುರ ಜಿಲ್ಲೆಯ ಕೊನೆಯ ಹಳ್ಳಿ ದೇವಣಗಾಂವ ಗ್ರಾಮಕ್ಕೂ ಪ್ರವಾಹದ ಸಂಕಷ್ಟ ಎದುರಾಗಿದೆ. ಭೀಮಾ ತೀರದ ದೇವಣಗಾಂವ ಭೀಮಾ ನದಿ ನೀರು ಗ್ರಾಮಕ್ಕೆ ನುಗ್ಗಿದೆ. 25 ಕ್ಕೂ ಹೆಚ್ಚು ಮನೆಗಳಿಗೆ ನೀರು ನುಗ್ಗಿದ್ದು ಗ್ರಾಮಸ್ಥರು ಆತಂಕದಲ್ಲಿದ್ದಾರೆ

news18-kannada
Updated:October 17, 2020, 7:28 AM IST
ಬಸವ ನಾಡಿನಲ್ಲೀಗ ಭೀಮಾ ಪ್ರವಾಹ : ಹಲವು ಗ್ರಾಮಗಳು ಜಲಾವೃತ, ಜನಜೀವನ ತತ್ತರ
ಭೀಮಾ ನದಿ ಪ್ರವಾಹ
  • Share this:
ವಿಜಯಪುರ(ಅಕ್ಟೋಬರ್​. 17): ವಿಜಯಪುರ ಜಿಲ್ಲೆಯಲ್ಲಿ ಈಗ ಭೀಮಾ ನದಿಯ ಅಬ್ಬರ ಶುರುವಾಗಿದೆ.  ಮಹಾರಾಷ್ಟ್ರದಲ್ಲಿ ಸುರಿದ ಧಾರಾಕಾರ ಮಳೆಯಿಂದಾಗಿ 6 ಲಕ್ಷಕ್ಕೂ ಹೆಚ್ಚು ಕ್ಯೂಸೆಕ್ ನೀರು ಹರಿದು ಬರುತ್ತಿದೆ. ಇದರಿಂದಾಗಿ ಚಡಚಣ, ಇಂಡಿ, ಸಿಂದಗಿ ತಾಲೂಕುಗಳ ಹಲವಾರು ಗ್ರಾಮಗಳು ಜಲಾವೃತವಾಗಿವೆ. ಚಡಚಣ ತಾಲೂಕಿನ ಹಳೆ ಉಮರಾಣಿ ಬಂದೇನವಾಜ್ ದರ್ಗಾ ಜಲಾವೃತವಾಗಿದೆ.  ಹಳೆಯ ಮತ್ತು ಹೊಸ ಉಮರಾಣಿ ನಡುವಿನ ರಸ್ತೆ ಸಂಪರ್ಕ ಕಡಿತಗೊಂಡಿದ್ದು, 50 ಜನರನ್ನು ಕಾಳಜಿ ಕೇಂದ್ರಕ್ಕೆ ಸ್ಥಳಾಂತರಿಸಲಾಗಿದೆ.  ಹೊಳಿ ಸಂಖ ಗ್ರಾಮವನ್ನು ಭೀಮಾ ನದಿ ನೀರು ಸುತ್ತುವರೆದಿದೆ. ಇತ್ತ ಸಿಂದಗಿ ತಾಲೂಕಿನ ತಾರಾಪುರ ಗ್ರಾಮವನ್ನು ಭೀಮಾ ನದಿ ನಾಲ್ಕು ದಿಕ್ಕುಗಳಿಂದ ಸುತ್ತುವರೆದಿದೆ. ಸಿಂದಗಿ ತಹಶೀಲ್ದಾರ್ ಸಂಜೀವಕುಮಾರ ದಾಸರ ಮತ್ತು ಆಲಮೇಲ ಪಿಎಸ್ಐ ನಿಂಗಪ್ಪ ಪೂಜಾರಿ ನೇತೃತ್ವದಲ್ಲಿ ಹಲವಾರು ಜನರನ್ನು ನಾಡದೋಣಿಯ ಮೂಲಕ ರಕ್ಷಿಸಲಾಗಿದೆ. 

ಬಾಣಂತಿಯರು, ಮಕ್ಕಳು, ವೃದ್ಧರನ್ನು ಸುರಕ್ಷಿತ ಪ್ರದೇಶಕ್ಕೆ ಸ್ಥಳಾಂತರಿಸಲಾಗಿದೆ.ಭೀಮಾ ನದಿ ಪ್ರವಾಹದಿಂದ ವಿಜಯಪುರ ಜಿಲ್ಲೆಯಲ್ಲಿ ತಾರಾಪುರ ಗ್ರಾಮದಲ್ಲಿ ಬಾಣಂತಿಯೊಬ್ಬಳು ಗೋಳಾಡಿದ ಘಟನೆ ನಡೆದಿದೆ. ತಾರಾಪುರ ಗ್ರಾಮದಲ್ಲಿ ಪರದಾಡಿದ ಬಾಣಂತಿಯು ಮನೆ ಎದುರೆ ಪ್ರವಾಹ ಬಂದರು ಹೊರ ಬರದೆ ನಮಗೆ ಶಾಶ್ವರ ಪರಿಹಾರ ಬೇಕು ಎಂದು ಬಾಣಂತಿ ಗೀತಾ ಒತ್ತಾಯಿಸಿದ್ದಾಳೆ.

ವಿಜಯಪುರ ಜಿಲ್ಲೆಯ ಕೊನೆಯ ಹಳ್ಳಿ ದೇವಣಗಾಂವ ಗ್ರಾಮಕ್ಕೂ ಪ್ರವಾಹದ ಸಂಕಷ್ಟ ಎದುರಾಗಿದೆ. ಭೀಮಾ ತೀರದ ದೇವಣಗಾಂವ ಭೀಮಾ ನದಿ ನೀರು ಗ್ರಾಮಕ್ಕೆ ನುಗ್ಗಿದೆ. ಪ್ರವಾಹದ ನೀರಿನಿಂದ ಗ್ರಾಮದ ಆಂಜನೇಯ, ಅಂಬೀಗರ ಚೌಡಯ್ಯ ದೇಗುಲಗಳು ಜಲಾವೃತವಾಗಿವೆ. 25 ಕ್ಕೂ ಹೆಚ್ಚು ಮನೆಗಳಿಗೆ ನೀರು ನುಗ್ಗಿದ್ದು ಗ್ರಾಮಸ್ಥರು ಆತಂಕದಲ್ಲಿದ್ದಾರೆ. ಕ್ಷಣಕ್ಷಣಕ್ಕೂ ಪ್ರವಾಹ ಏರುತ್ತಿರುವ ಹಿನ್ನೆಲೆ ಆತಂಕ ಎದುರಾಗಿದೆ.  ಭೀಮಾ ತೀರದ ಶಂಬೇವಾಡ, ಕುಮಸಗಿ ಗ್ರಾಮಗಳಲ್ಲೂ ಪ್ರವಾಹದ ನೀರು ನುಗ್ಗುವ ಆತಂಕ ಎದುರಾಗಿದೆ.

ಇದನ್ನೂ ಓದಿ : ನೆರೆ ಪ್ರದೇಶಕ್ಕೆ ಕಂದಾಯ ಸಚಿವರ ಭೇಟಿ ಕಾಟಾಚಾರದ ಪ್ರವಾಸ: ಎಚ್​ಡಿ ಕುಮಾರಸ್ವಾಮಿ ಟೀಕೆ

ಜಮೀನಿನಲ್ಲಿ ಬೆಳೆದಿದ್ದ ತೊಗರಿ, ಹತ್ತಿ ಬೆಳೆಗಳು ಸಂಪೂರ್ಣ ಹಾಳಾಗಿದ್ದ ದಿಕ್ಕು ತೋಚದಂತಾಗಿದೆ, ಸಾಲ ಮಾಡಿ ಬೆಳೆ ಬೆಳೆದಿದ್ದೇವು ಈಗ ಪ್ರವಾಹ ಬಂದು ಎಲ್ಲವನ್ನೂ ಕೊಚ್ಚಿಕೊಂಡು ಹೋಗಿದ್ದು ನಮ್ಮ ಬದುಕು ಹಾಳಾಗಿದೆ. ಸರಕಾರ ತಕ್ಷಣವೇ ಪರಿಹಾರ ಘೋಷಿಸಲಿ ಎಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.

ಮಹಾರಾಷ್ಟ್ರದ ಉಜನಿ ಜಲಾಶಯದಿಂದ ಬಿಡಲಾದ 5.40 ಲಕ್ಷ ಕ್ಯೂಸೆಕ್ ನೀರು ಬಿಡುಗಡೆ ಮಾಡಲಾಗುತ್ತಿರುವದರಿಂದ ಚಡಚಣ ತಾಲೂಕಿನ ಉಮರಜ ಗ್ರಾಮದ ಪ್ರಸಿದ್ಧ ದೇವಾಸ್ಥಾನವಾದ ಶೀ ರೇವಣ ಸಿದ್ಧೇಶ್ವರ ದೇವಾಲಯಕ್ಕೂ ಜಲ ದಿಗ್ಭಂಧನ ಹಾಕಿದ್ದಲ್ಲದಡ, ಉಮರಜ ಗ್ರಾಮಕ್ಕೂ ನೀರು ಸುತ್ತುವರೆಯುವ ಆತಂಕ ಎದುರಾಗಿ ಗ್ರಾಮಸ್ಥರು ಮನೆಗಳನ್ನು ತೊರೆದು ಎತ್ತರದ ಪ್ರದೇಶಕ್ಕೆ ಜನ, ಜಾನುವಾರುಗಳೊಂದಿಗೆ ತೆರಳುತ್ತಿದ್ದಾರೆ. ಈ ಮಧ್ಯೆ ಕೆಲ ಯುವಕರು ಕಬ್ಬಿನ ಗದ್ದೆಯಲ್ಲಿ ಸಿಲುಕಿದ್ದ ಬೈಕ್ ಹೊತ್ತು ತಂದಿದ್ದಾರೆ.

ಭೀಮಾ ನದಿಯಲ್ಲಿ ಹರಿದು ಹೋಗುತ್ತಿದ್ದ ದೋಣಿ ಹಿಡಿಯಲು 9 ಜನ ಯುವಕರು ಪ್ರಾಣದ ಹಂಗು ತೊರೆದು ಪ್ರವಾಹಕ್ಕೆ ಹಾರಿದ್ದಾರೆ. ಸೊಂಟಕ್ಕೆ ಗಾಳಿ ತುಂಬಿದ ಟ್ಯೂಬ್ ಕಟ್ಟಿಕೊಂಡು ಪ್ರವಾಹಕ್ಕಿಳಿದ ಯುವಕರು ದೋಣಿಯನ್ನು ಹಿಡಿದಿದ್ದಾರೆ. ಈ ಘಟನೆ ವಿಜಯಪುರ ಜಿಲ್ಲೆಯ ಇಂಡಿ ತಾಲೂಕಿನ ಬರಗುಡಿ ಗ್ರಾಮದಲ್ಲಿ ನಡೆದಿದೆ. ಗ್ರಾಮದಲ್ಲಿ ನದಿ ದಾಟಲು ಇದ್ದ ದೋಣಿ, ಭೀಮಾ ನದಿಯಲ್ಲಿ ಹರಿದುಕೊಂಡು ಹೋಗಿತ್ತು. ಈ ದೋಣಿ ತರಲು ಯುವಕರು ಪ್ರಾಣ ಒತ್ತೆ ಇಟ್ಟು ಭೀಮಾ ನದಿಗೆ ಹಾರಿ ಹುಚ್ಚಾಟ ನಡೆಸಿದ್ದಾರೆ‌.ಇದನ್ನೂ ಓದಿ : ಭೀಮೆಯಲ್ಲಿ ಪ್ರವಾಹ ; ಸೂರಿಗಾಗಿ ಮೇಲ್ಛಾವಣಿ ಏರಿ ಕುಳಿತ ಅಜ್ಜಿ ; ಮೂರು ದಿನಗಳಿಂದಲೂ ಉಪವಾಸ

ಈ  ಯುವಕರ ಹುಚ್ಚಾಟಕ್ಕೆ ಬರಗುಡಿ ಗ್ರಾಮಸ್ಥರು ತಬ್ಬಿಬ್ಬಾಗಿದ್ದಾರೆ. ಕೊನೆಗೂ ಪ್ರಾಣ ಒತ್ತೆ ಇಟ್ಟು ದೋಣಿ ಹಿಡಿದಿದ್ದಾರೆ. ದೋಣಿ ಹಿಡಿದು ತಂದವರಿಗೆ 15 ಸಾವಿರ ರೂಪಾಯಿ ಬಹುಮಾನ ಕೊಡಲಾಗುತ್ತೆ ಎಂಬ ವದಂತಿ ಹಿನ್ನೆಲೆಯಲ್ಲಿ ಹಣದಾಸೆಗೆ ದೋಣಿ ಹಿಡಿಯಲು ಯುವಕರು ಹುಚ್ಚಾಟ ನಡೆಸಿದ್ದಾರೆ‌.

ವಿಜಯಪುರ ಜಿಲ್ಲೆಯಲ್ಲಿ ಸುರಿದ ಭೀಕರ ಮಳೆಯಿಂದಾಗಿ ಡೋಣಿ ನದಿಯ‌ ನಡುಗಡ್ಡೆಯಲ್ಲಿ ಸಿಲುಕಿದ್ದ ಏಳು ಜನರನ್ನು ರಕ್ಷಿಸಲಾಗಿದೆ. ತಾಳಿಕೋಟೆ ಪಟ್ಟಣದ ಬಳಿ ಡೋಣಿ‌ ನದಿಯ‌ ನಡುಗಡ್ಡೆಯಲ್ಲಿ ಸಿಲುಕಿದ್ದ ಮಹಾರಾಷ್ಟ್ರ ಮೂಲದ ಗಂಡ, ಹೆಂಡತಿ ಹಾಗೂ ಐವರು ಮಕ್ಕಳಿದ್ದ ಕುಟುಂಬ ನಡುಗಡ್ಡೆಯಲ್ಲಿ ಇದ್ದಿಲು ತಯಾರಿಸಲು ಆಗಮಿಸಿದ್ದರು.

ನದಿಯಲ್ಲಿ ಪ್ರವಾಹ ಬಂದ ನಂತರವೂ ಅಲ್ಲಿಯೇ ಉಳಿದು ಕೊಂಡಿದ್ದರು. ಆದರೆ, ಪ್ರವಾಹ ಏರಿಕೆಯಾಗುತ್ತಲೇ ಪ್ರವಾಹ ಭಯದಿಂದ ಕಂದಾಯ ಇಲಾಖೆ ಅಧಿಕಾರಿಗಳಿಗೆ ಕರೆ ಮಾಡಿ ಸಹಾಯಕ್ಕೆ ಮೊರೆ ಇಟ್ಟಿದ್ದರು. ಆಗ ಸ್ಥಳಕ್ಕೆ ವಿಜಯಪುರ ಉಪವಿಭಾಗಾಧಿಕಾರಿ ಬಲರಾಮ ಲಮಾಣಿ ಮತ್ತು ಅಗ್ನಿಶಾಮಕ ದಳದ ಸಿಬ್ಬಂದಿ ತೆರಳಿದ್ದರು‌. ಅಗ್ನಿಶಾಮಕ ದಳ‌ ಸಿಬ್ಬಂದಿ ಈಜುವುದರ ಮೂಲಕ 7 ಜನರನ್ನು ರಕ್ಷಿಸಿ ಕರೆ ತಂದಿದ್ದಾರೆ.
Published by: G Hareeshkumar
First published: October 17, 2020, 7:28 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories