ಪ್ರವಾಹದಿಂದ ಆಗಿರುವ ಹಾನಿ ಬಗ್ಗೆ ಬೆಳಗಾವಿ ಜಿಲ್ಲೆಯ ನಾಲ್ಕು ಸಚಿವರಿಗೆ ಇಲ್ಲ ಕಾಳಜಿ...!

ಭಾರೀ ಮಳೆಯಿಂದ ಮನೆಗಳನ್ನು ಕಳೆದುಕೊಂಡು ಅನೇಕರು ಪರಿಹಾರ ಕೇಂದ್ರ ಸೇರುವಂತಹ ಸ್ಥಿತಿ ನಿರ್ಮಾಣವಾಗಿದೆ. ಆದರೆ, ಜಿಲ್ಲೆಯ ಸಚಿವರು ಮಾತ್ರ ಯಾವುದೇ ಪ್ರವಾಹ ಪೀಡಿತ ಸ್ಥಳಕ್ಕೆ ಈ ವರೆಗೆ ಭೇಟಿ ನೀಡಿಲ್ಲ

ಜಲಾವೃತಗೊಂಡಿರುವ ಹಲವು ಗ್ರಾಮಗಳು

ಜಲಾವೃತಗೊಂಡಿರುವ ಹಲವು ಗ್ರಾಮಗಳು

  • Share this:
ಬೆಳಗಾವಿ(ಆಗಸ್ಟ್​.22): ಮಹಾರಾಷ್ಟ್ರ ಪಶ್ಚಿಮ ಘಟಗಳ ಪ್ರದೇಶದಲ್ಲಿ ಭಾರೀ ಮಳೆ ಹಿನ್ನೆಲೆಯಲ್ಲಿ ಬೆಳಗಾವಿ ಜಿಲ್ಲೆಯ ಜನರಿಗೆ ಸಂಕಷ್ಟ ಎದುರಾಗಿದೆ. ಕಷ್ಟು ಪಟ್ಟ ಬೆಳೆದ ಬೆಳೆ ಹಾನಿಯಾಗಿದ್ದು, ಇನ್ನೂ ಅನೇಕರು ಮನೆಯಗಳನ್ನು ಕಳೆದುಕೊಂಡಿದ್ದಾರೆ. ಆದರೆ, ಈವರೆಗೆ ಜಿಲ್ಲೆಯ ನಾಲ್ವರು ಸಚಿವರ ಪೈಕಿ ಒಬ್ಬರು ಪ್ರವಾಹ ಪೀಡಿತ ಪ್ರದೇಶಗಳಿಗೆ ಭೇಟಿ ನೀಡಿಲ್ಲ ಎನ್ನವುದು ಜನರ ಬಗ್ಗೆ ಇರುವ ಕಾಳಜಿಯನ್ನು ತೋರಿಸುತ್ತದೆ.

ರಾಜ್ಯದಲ್ಲಿಯೇ ಬೆಳಗಾವಿ ರಾಜಕಾರಣ ಅತ್ಯಂತ ಪ್ರಖ್ಯಾತಿಯನ್ನು ಗಳಿಸಿದೆ. ಸರ್ಕಾರವನ್ನು ಬಿಳಿಸುವ ಶಕ್ತಿಯನ್ನು ಇಲ್ಲಿನ ಪ್ರಮುಖ ನಾಯಕರು ಹೊಂದಿದ್ದು, ಅದನ್ನು ಅನೇಕ ಸಂದರ್ಭದಲ್ಲಿ ಸಾಬೀತು ಸಹ ಮಾಡಿದ್ದಾರೆ. ಇಷ್ಟೊಂದು ಪ್ರಭಾವ ಹೊಂದಿರುವ ನಾಯಕರು ಜನರ ಸಂಕಷ್ಟ ಸಂದರ್ಭದಲ್ಲಿ ಸ್ಪಂದಿಸದೇ ಇರುವುದು ಜಿಲ್ಲೆಯ ಜನರ ಆಕ್ರೋಶಕ್ಕೆ ಇದೀಗ ಗುರಿಯಾಗಿದೆ.

ಕೃಷ್ಣ, ದೂಧಗಂಗಾ, ವೇದಗಂಗಾ, ಮಾರ್ಕಂಡಯ್ಯ, ಮಲಪ್ರಭಾ, ಘಟಪ್ರಭಾ ಹಾಗೂ ಬಳ್ಳಾರಿ ನಾಲಾದಿಂದ ಜಿಲ್ಲೆಯ ಅನೇಕ ಕಡೆಗಳಲ್ಲಿ ಬೆಳೆಗಳ ಹಾನಿ ಸಂಭವಿಸಿದೆ. ಜತೆಗೆ ಭಾರೀ ಮಳೆಯಿಂದ ಮನೆಗಳನ್ನು ಕಳೆದುಕೊಂಡು ಅನೇಕರು ಪರಿಹಾರ ಕೇಂದ್ರ ಸೇರುವಂತಹ ಸ್ಥಿತಿ ನಿರ್ಮಾಣವಾಗಿದೆ. ಆದರೆ, ಜಿಲ್ಲೆಯ ಸಚಿವರು ಮಾತ್ರ ಯಾವುದೇ ಪ್ರವಾಹ ಪೀಡಿತ ಸ್ಥಳಕ್ಕೆ ಈ ವರೆಗೆ ಭೇಟಿ ನೀಡಿಲ್ಲ.

ಉಪಮುಖ್ಯಮಂತ್ರಿ ಲಕ್ಷ್ಮಣ ಸವದಿ, ಜಲಸಂಪನ್ಮೂಲ ಸಚಿವ ರಮೇಶ್ ಜಾರಕಿಹೊಳಿ, ಸಕ್ಕರೆ ಸಚಿವ ಶ್ರೀಮಂತ ಪಾಟೀಲ್ ಹಾಗೂ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಶಶಿಕಲಾ ಜೊಲ್ಲೆ ಬೆಂಗಳೂರಿನಲ್ಲಿಯೇ ಉಳಿದುಕೊಂಡಿದ್ದಾರೆ. ಇನ್ನೂ ಕಂದಾಯ ಸಚಿವ ಆರ್. ಅಶೋಕ್​​ ಸಹ ಕೇವಲ ಬೆಂಗಳೂರಿಗೆ ಸಮೀತರಾಗಿದ್ದಾರೆ.

ಇದನ್ನೂ ಓದಿ : ಮಹಾರಾಷ್ಟ್ರದ ಪಶ್ಚಿಮ ಘಟ್ಟ ಪ್ರದೇಶದಲ್ಲಿ ವರುಣನ ಅಬ್ಬರ ; ಗೋಕಾಕ್ ಫಾಲ್ಸ್, ಗೋಡಚನಮಲ್ಕಿ ಜಲಾಶಯಕ್ಕೆ ಜೀವ ಕಳೆ..!

ಇತ್ತೀಚಿಗೆ ಉಂಟಾಗಿರುವ ಪ್ರವಾಹ ಪರಿಸ್ಥಿತಿಯಿಂದ ಜಿಲ್ಲೆಯಲ್ಲಿ 43,300 ಹೆಕ್ಟರ್ ಪ್ರದೇಶದಲ್ಲಿ ಬೆಳೆದ ಬೆಳೆಗಳಿಗೆ ಹಾನಿಯಾಗಿದೆ. ಜಿಲ್ಲೆಯಲ್ಲಿ 6.88 ಲಕ್ಷ ಹೆಕ್ಟರ್ ಪ್ರದೇಶದಲ್ಲಿ ಬಿತ್ತನೆ ಗುರಿ ಹೊಂದಲಾಗಿತ್ತು, ಬಹುತೇಕ ಬಿತ್ತನೆಯಾಗಿದೆ. ಜಿಲ್ಲೆಯ ಕಬ್ಬು, ಮುಸುಕಿನ ಜೋಳ, ಹೆಸರು ಕಾಳು, ಸೋಯಾಬೀನ್, ಸೂರ್ಯಕಾಂತಿ, ಶೇಂಗಾ, ಹತ್ತಿ, ಸಜ್ಜೆ ಬೆಳೆಗಳಿಗೆ ಹಾನಿಯಾಗಿದೆ. ಬೆಳೆಹಾನಿ ಬಗ್ಗೆ ಈಗಾಗಲೇ ಸಮೀಕ್ಷೆ ಆರಂಭವಾಗಿದೆ.

ಈ ಬಗ್ಗೆ ಬೆಳಗಾವಿಯಲ್ಲಿ ಮಾತನಾಡಿದ ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ, ಕಂದಾಯ ಸಚಿವ ಆರ್ ಅಶೋಕ ಬೆಂಗಳೂರಿಗೆ ಮಾತ್ರ ಸಿಮೀತರಾಗಿದ್ದಾರೆ. ಪ್ರವಾಹ, ಬರಗಾಲ ಸಂದರ್ಭದಲ್ಲಿ ಕಂದಾಯ ಇಲಾಖೆಯ ಜವಾಬ್ದಾರಿ ಅತ್ಯಂತ ಪ್ರಮುಖವಾಗಿ ಇರುತ್ತದೆ. ಆದರೇ ಸಚಿವರು ಒಮ್ಮೆಯೂ ಜಿಲ್ಲೆಗೆ ಭೇಟಿ ನೀಡಿಲ್ಲ. ಆರ್. ಅಶೋಕ್ ಅಷ್ಟೇ ಅಲ್ಲ ಅನೇಕರು ಕೇವಲ ಬೆಂಗಳೂರಿಗೆ ಸಿಮೀತರಾಗಿದ್ದಾರೆ. ಜಿಲ್ಲೆಯ ಸಚಿವರು ಒಟ್ಟಾಗಿ ಕೆಲಸ ಮಾಡುವಲ್ಲಿ ವಿಫಲರಾಗಿದ್ದಾರೆ ಎಂದು ಆರೋಪಿಸಿದ್ದಾರೆ.
Published by:G Hareeshkumar
First published: