• Home
  • »
  • News
  • »
  • district
  • »
  • Floating Church: ಹಾಸನದ ಈ ಚರ್ಚ್ ನೀರಿನ ಮೇಲೆ ತೇಲುತ್ತಿದೆ, ನಿಮ್ಮ ಮುಂದಿನ ಟ್ರಿಪ್​ಗೆ ಇಲ್ಲಿಗೆ ಹೋಗಬಹುದು ನೋಡಿ!

Floating Church: ಹಾಸನದ ಈ ಚರ್ಚ್ ನೀರಿನ ಮೇಲೆ ತೇಲುತ್ತಿದೆ, ನಿಮ್ಮ ಮುಂದಿನ ಟ್ರಿಪ್​ಗೆ ಇಲ್ಲಿಗೆ ಹೋಗಬಹುದು ನೋಡಿ!

ನೀರಿನಿಂದ ಆವೃತವಾದ ಚರ್ಚ್

ನೀರಿನಿಂದ ಆವೃತವಾದ ಚರ್ಚ್

Floating Church of Hassan: ನೀರಿನಿಂದ ಆವೃತವಾದ ಚರ್ಚ್ ನೊಂದಿಗೆ ಸೆಲ್ಫಿ ಕ್ಲಿಕ್ಕಿಸಿಕೊಂಡು  ಪ್ರವಾಸಿಗರು ಖುಷಿಪಡುತ್ತಿದ್ದಾರೆ. ಈಗ ಮುಂಗಾರು ಆರ್ಭಟಿಸುತ್ತಿರುವ ಸಮಯ, ಎಲ್ಲೆಲ್ಲೂ ಹಸಿರು ಕಂಗೊಳಿಸುತ್ತಿದ್ದರೆ, ಕಣ್ಣು ಹಾಯಿಸಿದಲ್ಲೆಲ್ಲಾ ಜುಳು ಜುಳು ನೀರಿನ ನರ್ತನ ಜನರನ್ನು ಮುದಗೊಳಿಸುತ್ತಿದೆ.

ಮುಂದೆ ಓದಿ ...
  • Share this:

ಹಾಸನ: ಹಾಸನ ಜಿಲ್ಲೆ ಹಲವು ವೈಶಿಷ್ಟ್ಯಗಳಿಗೆ ಹೆಸರುವಾಸಿಯಾಗಿದೆ. ಬೇಲೂರು, ಹಳೇಬೀಡು, ಶ್ರವಣಬೆಳಗೊಳದಲ್ಲಿ ಇತಿಹಾಸ ಪ್ರಸಿದ್ಧ ದೇವಾಲಯಗಳಿವೆ. ಅದರಲ್ಲಿ ಹಾಸನ ತಾಲ್ಲೂಕಿನ ಗೊರೂರಿನಲ್ಲಿರುವ ಶೆಟ್ಟಿಹಳ್ಳಿ ಚರ್ಚ್ ಕೂಡ ಒಂದು. ಮಳೆಗಾಲ ಅಂದರೆ ಹಾಗೆ, ಪ್ರಕೃತಿಯ ಚೆಲುವನ್ನು ದಿನದಿಂದ ದಿನಕ್ಕೆ ಬದಲು ಮಾಡಿ ಬಿಡುತ್ತದೆ. ಒಂದೊಂದು ರೀತಿಯಲ್ಲಿ ಹೊಸತನದಿಂದ ಕಂಗೊಳಿಸುವಂತೆ ಮಾಡುತ್ತದೆ. ಇಂಥ ನಿಸರ್ಗ ಸಿರಿಯನ್ನು ಕಣ್ತುಂಬಿಕೊಳ್ಳುವುದೇ ರುದ್ರ ರಮಣೀಯ. ಬೇಸಿಗೆಯಲ್ಲಿ ಬರಡಾಗಿ ಭಣಗುಡುವ ಹಳ್ಳಕೊಳ್ಳ, ಜಲಾಶಯಗಳ ಹಿನ್ನೀರು, ಮಳೆಗಾಲದಲ್ಲಿ ಒಡಲು ತುಂಬಿಕೊಂಡು ಸಂಭ್ರಮಿಸುವ ರೀತಿಯೇ ಬೇರೆ. ಹಾಗೇಯೇ ಹಾಸನದ ಹೇಮಾವತಿ ಹಿನ್ನೀರಿನಲ್ಲಿರುವ ಐತಿಹಾಸಿಕ ಚರ್ಚ್ ನೀರಿನಲ್ಲಿ ಮುಳುಗಿ ತೇಲುವಂತೆ ಭಾಸವಾಗುತ್ತಿದೆ. ಈ ದೃಶ್ಯ ಪ್ರವಾಸಿಗರನ್ನು ತನ್ನತ್ತ ಕೈಬೀಸಿ ಕರೆಯುತ್ತಿದೆ. ನೀರಿನಲ್ಲಿ ಮುಳುಗಿರುವ ಚರ್ಚ್ ನ ವಿಹಂಗಮ ನೋಟ, ತೇಲಿದಂತೆ ಭಾಸವಾಗುವ ಪ್ರಾರ್ಥನಾಲಯ ಕಣ್ತುಂಬಿಕೊಳ್ಳಲು  ಪ್ರವಾಸಿಗರ ದಂಡೆ ಹರಿದುಬರುತ್ತಿದೆ.


ನೀರಿನಿಂದ ಆವೃತವಾದ ಚರ್ಚ್ ನೊಂದಿಗೆ ಸೆಲ್ಫಿ ಕ್ಲಿಕ್ಕಿಸಿಕೊಂಡು  ಪ್ರವಾಸಿಗರು ಖುಷಿಪಡುತ್ತಿದ್ದಾರೆ. ಈಗ ಮುಂಗಾರು ಆರ್ಭಟಿಸುತ್ತಿರುವ ಸಮಯ, ಎಲ್ಲೆಲ್ಲೂ ಹಸಿರು ಕಂಗೊಳಿಸುತ್ತಿದ್ದರೆ, ಕಣ್ಣು ಹಾಯಿಸಿದಲ್ಲೆಲ್ಲಾ ಜುಳು ಜುಳು ನೀರಿನ ನರ್ತನ ಜನರನ್ನು ಮುದಗೊಳಿಸುತ್ತಿದೆ. ಹಾಸನ ಜಿಲ್ಲೆಯ ಜೀವನದಿ ಹೇಮಾವತಿ ಅಣೆಕಟ್ಟೆ ಈ ಬಾರಿ ಭರ್ತಿಯಾಗಿದೆ. ಹೇಮಾವತಿ ಜಲಾಶಯದ ಹಿನ್ನೀರಿನಲ್ಲಿರುವ ಹಳೆಯ ಕಾಲದ ಚರ್ಚ್ ಮುಳುಗಿದ್ದು, ಮಿನಿ ಹಡಗು ನೀರಿನಲ್ಲಿ ಮುಳುಗುತ್ತಿರುವಂತೆ ಕಾಣುತ್ತಿದೆ. ಐತಿಹಾಸಿಕ ಚರ್ಚ್ ಈಗ ಎಲ್ಲರ ಆಕರ್ಷಣೆಯ ಕೇಂದ್ರ ಬಿಂದುವಾಗಿದೆ. ದೂರದಿಂದ ನೋಡಿದ್ರೆ ತೇಲುತ್ತಿರುವಂತೆ ಭಾಸವಾಗುವ ನಯನ ಮನೋಹರವಾದ ಪ್ರಾರ್ಥನಾಲಯಕ್ಕೆ ಫ್ಯಾಮಿಲಿ ಹಾಗೂ ಸ್ನೇಹಿತರ ಜೊತೆ ಬಂದು ಹೋಗುತ್ತಿದ್ದಾರೆ. ಅದರಲ್ಲೂ ವೀಕೆಂಡ್ ದಿನಗಳಲ್ಲಿ ಇಲ್ಲಿಗೆ ಹೆಚ್ಚಾಗಿ ಪ್ರವಾಸಿಗರು ಬರುತ್ತಿದ್ದು, ಚರ್ಚ್ ಬ್ಯಾಗ್ರೌಂಡ್ ನಲ್ಲಿ ಸೆಲ್ಪೀ ಕ್ಲಿಕ್ಕಿಸಿಕೊಳ್ಳುವ ಮೂಲಕ ಎಂಜಾಯ್ ಮಾಡುತ್ತಿದ್ದಾರೆ.


ಇದನ್ನೂ ಓದಿ: Maruti Suzuki Price Hike: ಸೆಪ್ಟೆಂಬರ್ ತಿಂಗಳಿಂದ ಮಾರುತಿ ಸುಜುಕಿ ಕಾರುಗಳ ಬೆಲೆ ಹೆಚ್ಚಳ, ಯಾವ ಕಾರ್ ರೇಟ್ ಎಷ್ಟು ಜಾಸ್ತಿ? ಫುಲ್ ಡೀಟೆಲ್ಸ್


ಸುತ್ತಲೂ ಹರಡಿಕೊಂಡಿರುವ ತಿಳಿನೀರಿನ ರಾಶಿ, ಹಸಿರು ಹೊದ್ದು ಮಲಗಿರುವ ಬೆಟ್ಟಗುಡ್ಡಗಳ ಸಾಲಿನ ನಡುವೆ ಆಕರ್ಷಣೀಯ ದೃಶ್ಯ ಮತ್ತಷ್ಟು ಮುದಗೊಳಿಸುತ್ತಿದೆ. ಸತತ ಮೂರು ವರ್ಷ ಚರ್ಚ್ ನೀರಿನಿಂದ ಆವೃತವಾಗುತ್ತಿದೆ. ಇಟ್ ಈಸ್ ಸೋ ಬ್ಯೂಟಿ ಅಂತ ಪ್ರವಾಸಿಗರು ಸಂತಸ ಪಡುತ್ತಿದ್ದಾರೆ. ಸ್ವಾತಂತ್ರ್ಯ ಪೂರ್ವ ಅಂದ್ರೆ 1860 ರಲ್ಲಿ ಬ್ರಿಟಿಷ್ ಪಾದ್ರಿಗಳು ನಿರ್ಮಿಸಿದ್ದಾರೆಂದು ಹೇಳಲಾಗುವ ಗೋಥಿಕ್ ವಾಸ್ತು ಶಿಲ್ಪ ಶೈಲಿಯ ಈ ಸುಂದರ ವಿನ್ಯಾಸದ ಚರ್ಚ್ ಹೇಮಾವತಿ ಜಲಾಶಯ ತುಂಬಿದಾಗ ನೀರಿನಲ್ಲಿ ಮುಳುಗಿದರೆ, ಬೇಸಿಗೆಯಲ್ಲಿ ಏಕಾಂಗಿಯಾಗಿರುತ್ತದೆ.


ಈ ತಾಣದಲ್ಲಿ ಕನ್ನಡ, ತಮಿಳು ಸೇರಿದಂತೆ ಬೇರೆ ಭಾಷೆಯ ಹತ್ತಾರು ಸಿನಿಮಾಗಳ ಶೂಟಿಂಗ್ ನಡೆದಿದೆ. ಹಾಡುಗಳ ಚಿತ್ರೀಕರಣವಾಗಿದೆ. ಜಿಲ್ಲೆಯ ಪ್ರಮುಖ ಆಕರ್ಷಣೀಯ ತಾಣಗಳಲ್ಲಿ ಒಂದಾಗಿರುವ ಶೆಟ್ಟಿಹಳ್ಳಿ ಚರ್ಚ್ ವಾತಾವರಣವನ್ನು ಅಭಿವೃದ್ಧಿ ಪಡಿಸುವ ಯಾವುದೇ ಕೆಲಸ, ಯಾರಿಂದಲೂ ಆಗಿಲ್ಲ. ಶ್ರವಣಬೆಳಗೊಳ, ಬೇಲೂರು, ಹಳೇಬೀಡಿಗೆ ಬರುವವರು, ಮುಂಗಾರಿನಲ್ಲಿ ಕಂಗೊಳಿಸುವ ಚರ್ಚ್ ನೋಡಲು ಬಂದರೆ ಖುಷಿಗೆ ಎಂದೂ ಮೋಸವಾಗದು.


ನ್ಯೂಸ್​​​18 ಕನ್ನಡ ಕಳಕಳಿ: ಕೊರೋನಾ ಪಾಸಿಟಿವ್ಕೇಸ್ಗಳ ಸಂಖ್ಯೆ ರಾಜ್ಯದಲ್ಲಿ ತಗ್ಗಿದೆಯಾದರೂ ಸೋಂಕಿನ ಅಪಾಯದಿಂದ ಸಂಪೂರ್ಣವಾಗಿ  ಇನ್ನೂ ಯಾರೂ ಸುರಕ್ಷಿತರಲ್ಲ. ಹೀಗಾಗಿ ಪ್ರತಿಯೊಬ್ಬರು ಕೋವಿಡ್​​ ನಿಯಮಗಳಾದ ಮಾಸ್ಕ್​​ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಮರೆಯಬಾರದು. ಆದಷ್ಟು ಶೀಘ್ರವೇ ಲಸಿಕೆ ಪಡೆದು ಸೋಂಕಿನ ವಿರುದ್ಧದ ಯುದ್ಧದಲ್ಲಿ ಪ್ರತಿಯೊಬ್ಬರು ಕೈ ಜೋಡಿಸಬೇಕು. ತಮ್ಮ ತಮ್ಮ ಸರದಿ ಬಂದಾಗ ತಪ್ಪದೇ ಲಸಿಕೆ ಪಡೆಯಬೇಕು. ಈಗಿನ ಪರಿಸ್ಥಿತಿಯಲ್ಲಿ ಲಸಿಕೆ ಒಂದೇ ಸೋಂಕಿನ ವಿರುದ್ಧ ಹೋರಾಡುವ ಮಾರ್ಗವಾಗಿದೆ. ಅತ್ಯಗತ್ಯವಿದ್ದರೆ ಮಾತ್ರವೇ ಮನೆಯಿಂದ ಹೊರಗೆ ಹೋಗುವ ಅಭ್ಯಾಸ ರೂಢಿಸಿಕೊಳ್ಳಬೇಕು.

Published by:Soumya KN
First published: