ಡಿಸಿಸಿ ಬ್ಯಾಂಕ್ ಗೆ ಐವರು ಸದಸ್ಯರ ಅವಿರೋಧ ಆಯ್ಕೆ : ಬಿಜೆಪಿ, ಕಾಂಗ್ರೆಸ್ ನಡುವೆ ಜಿದ್ದಾಜಿದ್ದಿ

ಇಂದು ನಾಮಪತ್ರ ಪರಿಶೀಲನಾ ಕಾರ್ಯ ಪೂರ್ಣಗೊಂಡಿದ್ದು, ಮೂರು ಜನರ ನಾಮಪತ್ರ ತಿರಸ್ಕೃತಗೊಂಡಿವೆ. ಒಟ್ಟು 27 ಜನರಿಂದ ನಾಮಪತ್ರ ಸಲ್ಲಿಕೆಯಾಗಿತ್ತು. ಅಂತಿಮವಾಗಿ 24 ಅಭ್ಯರ್ಥಿಗಳು ಅಖಾಡದಲ್ಲಿ ಉಳಿದಂತಾಗಿದೆ

ಕಲಬುರ್ಗಿ - ಯಾದಗಿರಿ ಡಿಸಿಸಿ ಬ್ಯಾಂಕ್

ಕಲಬುರ್ಗಿ - ಯಾದಗಿರಿ ಡಿಸಿಸಿ ಬ್ಯಾಂಕ್

  • Share this:
ಕಲಬುರ್ಗಿ (ನವೆಂಬರ್​. 22): ಕಾಂಗ್ರೆಸ್ ಪಾರಮ್ಯವಿದ್ದ ಕಲಬುರ್ಗಿ - ಯಾದಗಿರಿ ಡಿಸಿಸಿ ಬ್ಯಾಂಕ್ ನಲ್ಲಿ ಕಮಲ ಅರಳಿಸಲು ಇನ್ನಿಲ್ಲದ ಕಸರತ್ತು ನಡೆಸಲಾಗಿದೆ. ರಾಜ್ಯದಲ್ಲಿ ಬಿಜೆಪಿ ಅಧಿಕಾರದಲ್ಲಿರುವುದರಿಂದಾಗಿ ಶತಾಯ ಗತಾಯ ಅಧಿಕಾರ ಚುಕ್ಕಾಣಿ ಹಿಡಿಯಬೇಕೆಂದು ಬಿಜೆಪಿ ನಾಯಕರು ಪ್ರಯತ್ನ ನಡೆಸಿದ್ದಾರೆ. ಇದರ ನಡುವೆಯೇ ನಾಲ್ಕು ಸ್ಥಾನಗಳಿಗೆ ಅವಿರೋಧ ಆಯ್ಕೆ ನಡೆದಿದೆ. ಇನ್ನೊಂದು ಸ್ಥಾನವೂ ಅವಿರೋಧವಾಗಿ ಆಯ್ಕೆಯಾಗಿದ್ದು, ಅಧಿಕೃತ ಘೋಷಣೆ ಬಾಕಿ ಇದೆ. ಈ ಐದು ಸ್ಥಾನಗಳ ಪೈಕಿ ನಾಲ್ಕು ಕಾಂಗ್ರೆಸ್ ಆದ್ರೆ, ಒಂದು ಸ್ಥಾನ ಬಿಜೆಪಿಯದ್ದಾಗಿದೆ. ಎ ವರ್ಗದಿಂದ ಪ್ರಾಥಮಿಕ ಕೃಷಿ ಸಹಕಾರ ಸಂಘಗಳ ಕ್ಷೇತ್ರದಿಂದ ಕಲಬುರ್ಗಿ ತಾಲೂಕಿನಿಂದ ಶರಣಬಸಪ್ಪ ಪಾಟೀಲ, ಯಾದಗಿರಿ ತಾಲೂಕಿನಿಂದ ಸಿದ್ಧರಾಮರೆಡ್ಡಿ ಕೌಳೂರು, ಸುರಪುರ ತಾಲೂಕಿನಿಂದ ಬಾಪುಗೌಡ ದುಂಡಪ್ಪಗೌಡ ಹಾಗೂ ಸೇಡಂ ತಾಲೂಕಿನಿಂದ ನಂದಕಿಶೋರರೆಡ್ಡಿ ಜನಾರ್ಧನರೆಡ್ಡಿ ಅವಿರೋಧ ಆಯ್ಕೆಯಾಗಿದ್ದಾರೆ. ಅಫಜಲಪುರ ಕ್ಷೇತ್ರದ ಅಭ್ಯರ್ಥಿ ಮಹಾಂತಗೌಡ ಪಾಟೀಲ ಸಹ ಅವಿರೋಧವಾಗಿ ಆಯ್ಕೆಯಾಗಿದ್ದು, ಅಧಿಕೃತ ಘೋಷಣೆಯೊಂದೇ ಬಾಕಿ ಉಳಿದಿದೆ. 

ಇಂದು ನಾಮಪತ್ರ ಪರಿಶೀಲನಾ ಕಾರ್ಯ ಪೂರ್ಣಗೊಂಡಿದ್ದು, ಮೂರು ಜನರ ನಾಮಪತ್ರ ತಿರಸ್ಕೃತಗೊಂಡಿವೆ. ಒಟ್ಟು 27 ಜನರಿಂದ ನಾಮಪತ್ರ ಸಲ್ಲಿಕೆಯಾಗಿತ್ತು. ಅಂತಿಮವಾಗಿ 24 ಅಭ್ಯರ್ಥಿಗಳು ಅಖಾಡದಲ್ಲಿ ಉಳಿದಂತಾಗಿದೆ. ನಾಮಪತ್ರ ವಾಪಸ್ ಪಡೆಯಲು ನಾಳೆ ಅಂತಿಮ ದಿನವಾಗಿದೆ. ನವೆಂಬರ್ 29 ರಂದು ಚುನಾವಣೆ ನಡೆಯಲಿದೆ. 13 ಕ್ಷೇತ್ರಗಳ ಪೈಕಿ 8 ಕ್ಷೇತ್ರಗಳಿಗೆ ಚುನಾವಣೆ ನಡೆಯಲಿದೆ.

ಜೇವರ್ಗಿ ತಾಲೂಕಿನಿಂದ ಕೇದಾರಲಿಂಗಯ್ಯ ಹಿರೇಮಠ, ಸುರಪುರ ತಾಲೂಕಿನಿಂದ ಸುರೇಶ್ ಸಜ್ಜನ್, ಕಲಬುರ್ಗಿ ತಾಲೂಕಿನಿಂದ ಸೋಮಶೇಖರ ಗೋನಾಯಕ್, ಶಹಾಪುರ ತಾಲೂಕಿನಿಂದ ಸಿದ್ರಾಮರೆಡ್ಡಿ, ಕಲಬುರ್ಗಿಯಿಂದ ಸಾವಿತ್ರಿಬಾಯಿ ಕುಳಗೇರಿ ಸೇರಿ 24 ಅಭ್ಯರ್ಥಿಗಳು ಅಂತಿಮ ಕಣದಲ್ಲಿದ್ದಾರೆ.

ಇದನ್ನೂ ಓದಿ : ಸಿಎಂ ಬಿ ಎಸ್ ಯಡಿಯೂರಪ್ಪಗೆ ದತ್ತಾತ್ರೇಯನ ಶಾಪ ಇದೆ, ಶಾಪ ವಿಮೋಚನೆಗೆ ದತ್ತಪೀಠಕ್ಕೆ ಬರಬೇಕು: ಗಂಗಾಧರ್ ಕುಲಕರ್ಣಿ

ಈ ಪೈಕಿ ಐವರು ಅವಿರೋಧ ಆಯ್ಕೆಯಾಗಿರುವುದರಿಂದಾಗಿ ಅಖಾಡದಲ್ಲಿ 19 ಜನ ಉಳಿದಂತಾಗಿದೆ. ಹೀಗಾಗಿ ಉಳಿದ ಸ್ಥಾನಗಳಿಗೆ ತೀವ್ರ ಪೈಪೋಟಿ ನಡೆದಿದೆ. ಈ ಮುಂಚೆ ಕಾಂಗ್ರೆಸ್ ಪ್ರಾಬಲ್ಯವನ್ನು ಹೊಂದಿದ್ದ ಡಿಸಿಸಿ ಬ್ಯಾಂಕ್ ಆಡಿಳಿತ ಚುಕ್ಕಾಣಿಯನ್ನು ಹಿಡಿಯಲು ಆಡಳಿತಾರೂಢ ಬಿಜೆಪಿ ತೀವ್ರ ಕಸರತ್ತು ನಡೆಸಿದೆ.

ಶತಾಯಗತಾಯ ಗೆಲ್ಲುವ ತಂತ್ರ ರೂಪಿಸಲಾರಂಭಿಸಿದೆ. ಮತ್ತೊಂದೆಡೆ ಜೆಡಿಎಸ್ ಪಕ್ಷದ ಕೆಲ ಅಭ್ಯರ್ಥಿಗಳೂ ತೀವ್ರ ಪೈಪೋಟಿಯೊಡ್ಡಿದ್ದಾರೆ. ಹೀಗಾಗಿ ಡಿಸಿಸಿ ಬ್ಯಾಂಕ್ ನ ಚುನಾವಣೆ ತೀವ್ರ ಕುತೂಹಲ ಕೆರಳಿಸಿದೆ.
Published by:G Hareeshkumar
First published: