HOME » NEWS » District » FISHERMEN WHO DIED IN UDUPI BOAT ACCIDENT DEMANDED FOR RELIEF MAK

ಉಡುಪಿ ದೋಣಿ ಅವಘಡದಲ್ಲಿ ಮೃತಪಟ್ಟ ಮೀನುಗಾರರಿಗೆ ಪರಿಹಾರಕ್ಕಾಗಿ ಒತ್ತಾಯ

ತಮ್ಮ ಮನೆಯ ಯಜಮಾನ ಇನ್ನೇನು ಮೀನು ತರುತ್ತಾರೆ ಎಂದು ಕಾದುಕುಳಿತಿದ್ದ ಹೆಂಡತಿ ‌ಮಕ್ಕಳು ಯಜಮಾನನ ಮೃತದೇಹ‌‌ ಕಂಡು ಕಣ್ಣೀರಲ್ಲಿ ದಿನದೂಡುತ್ತಿದ್ದಾರೆ. ಒಂದೆಡೆ ಮನೆಯ ಆಧಾರ ಸ್ಥಂಬವೂ ಇಲ್ಲ‌, ಇನ್ನೋಂದೆಡೆ ದಿನ ದೂಡೋದೇ ಹರಹಾಸಹಪಡುವ ಕಷ್ಟದ ದಿನಗಳು ಬಂದೆರಗಿದೆ.

news18-kannada
Updated:August 22, 2020, 7:19 AM IST
ಉಡುಪಿ ದೋಣಿ ಅವಘಡದಲ್ಲಿ ಮೃತಪಟ್ಟ ಮೀನುಗಾರರಿಗೆ ಪರಿಹಾರಕ್ಕಾಗಿ ಒತ್ತಾಯ
ಸಾಂದರ್ಭಿಕ ಚಿತ್ರ
  • Share this:
ಉಡುಪಿ: ಆ ಒಂದು ಭಾನುವಾರ ಮೀನುಗಾರರಿಗೆ ಕರಾಳ‌ ದಿನವಾಗಿತ್ತು. ಒಂದು ಹೊತ್ತಿನ ಊಟಕ್ಕೆ ಸಮುದ್ರದ ಮಧ್ಯದಲ್ಲಿ  ಜೀವವನ್ನೇ ಕೈಯಲ್ಲಿ ಹಿಡಿದು ಮೀನುಗಾರಿಕೆ‌ ನಡೆಸುವ ಮೀನುಗಾರರು ನೀರುಪಾಲಾದ ದುರ್ಘಟನೆ ಸಂಭವಿಸಿದ ದಿನ.‌ ಹೌದು,‌ ಉಡುಪಿ ಜಿಲ್ಲೆಯ ಬೈಂದೂರು ತಾಲೂಕಿನ‌ ಕಿರಿಮಂಜೇಶ್ವರದಲ್ಲಿ ನಾಡದೋಣಿ‌ಯಲ್ಲಿ ಮೀನುಗಾರಿಕೆಗೆ ತೆರಳಿ ಮರಳುತ್ತಿದ್ದ ವೇಳೆ‌ ಬೋಟು ಬಂಡೆಗೆ ಡಿಕ್ಕಿ ಹೊಡೆದು 12ಮೀನುಗಾರರಲ್ಲಿ ನಾಲ್ಕು ‌ಮೀನುಗಾರರು ಸಾವನ್ನಪ್ಪಿದ್ದರು. 

ತಮ್ಮ ಕುಟುಂಬದ ಲಾಲನೆ ಪಾಲನೆ ಮಾಡುವ ಅದೆಷ್ಟೋ ಕನಸನ್ನ ಕಂಡಿದ್ದ ಮೀನುಗಾರರು ಕಳೆದ ಭಾನುವಾರ ಭಾರೀ ಅಲೆಗೆ ಸಿಲುಕಿ ಜೀವವನ್ನೇ ಕಳೆದುಕೊಂಡಿದ್ದರು. ಇನ್ನೇನು ಸಿಕ್ಕ ಮೀನುಗಳನ್ನ ಕಡಲಿಗೆ ತಂದು ಮಾರಿ ಹಣ ಸಂಪಾದಿಸಬೇಕು. ಮನೆಯಲ್ಲಿ ಕಾದು‌ ಕುಳಿತಿರುವ ತಮ್ಮ ಹೆತ್ತವರು, ಹೆಂಡತಿ‌ ಮಕ್ಕಳ ನಗು ಮುಖ ನೋಡಬೇಕೆಂದು ಬರುತ್ತಿದ್ದ ಆ 12ಮಂದಿ ಮೀನುಗಾರರಲ್ಲಿ ಲಕ್ಷ್ಮಣ ಖಾರ್ವಿ,‌ ನಾಗ ಖಾರ್ವಿ, ಮಂಜುನಾಥ ಖಾರ್ವಿ, ಶೇಖರ ಖಾರ್ವಿ‌ ಎಂಬ ಈ 4 ಮೀನುಗಾರರು ಬಾರದ ಲೋಕಕ್ಕೆ ತೆರಳಿದ್ದರು.

ಇದನ್ನೂ ಓದಿ : ಚೀನಿಯರ ವೀಸಾ ಮತ್ತು ಭಾರತದಲ್ಲಿನ ಡ್ಯ್ರಾಗನ್ ದೇಶದ ಶಿಕ್ಷಣ ಸಂಸ್ಥೆಗಳ ಪರಿಶೀಲನೆಗೆ ಮುಂದಾದ ಕೇಂದ್ರ ಸರ್ಕಾರ

ತಮ್ಮ ಮನೆಯ ಯಜಮಾನ ಇನ್ನೇನು ಮೀನು ತರುತ್ತಾರೆ ಎಂದು ಕಾದುಕುಳಿತಿದ್ದ ಹೆಂಡತಿ ‌ಮಕ್ಕಳು ಯಜಮಾನನ ಮೃತದೇಹ‌‌ ಕಂಡು ಕಣ್ಣೀರಲ್ಲಿ ದಿನದೂಡುತ್ತಿದ್ದಾರೆ. ಒಂದೆಡೆ ಮನೆಯ ಆಧಾರ ಸ್ಥಂಬವೂ ಇಲ್ಲ‌, ಇನ್ನೋಂದೆಡೆ ದಿನ ದೂಡೋದೇ ಹರಹಾಸಹಪಡುವ ಕಷ್ಟದ ದಿನಗಳು ಬಂದೆರಗಿದೆ.

ಹೀಗಾಗಿ ಸರ್ಕಾರದಿಂದ ದೊಡ್ಡ ಮಟ್ಟದ ಸಹಾಯಧನ ಸಿಗುವ ನಿರೀಕ್ಷೆಯಲ್ಲಿ ಈ ನಾಲ್ಕು ಮೀನುಗಾರ ಕುಟುಂಬವಿದೆ. ‌ಇನ್ನು ಮೀನುಗಾರ ಸಂಘಗಳು, ಮೃತ‌ ಮೀನುಗಾರರ ಸ್ನೇಹಿತರು ಕೂಡ ಧನಸಹಾಯ ಮಾಡಲು ಮುಂದಾಗಿದ್ದಾರೆ. ಹೀಗಾಗಿ ಸರ್ಕಾರ ಕೂಡ ಅತೀ ಶೀಘ್ರದಲ್ಲಿ ಮೀನುಗಾರರಿಗೆ ನೆರವಾಗಬೇಕು, ಪರಹಾ‌ರ‌‌ ಕೊಡಬೇಕು ಅನ್ನೋ ಒತ್ತಾಯ ಕೇಳಿಬರ್ತಾಯಿದೆ. ಈ ಬಗ್ಗೆ ಸ್ಥಳೀಯ‌‌ ಶಾಸಕ ಸುಕುಮಾರ್‌ ಶೆಟ್ಟಿ ಕೂಡ ಮೃತ ಮೀನುಗಾರ ಕುಟುಂಬಕ್ಕೆ ‌ಗರಿಷ್ಟ ಪರಿಹಾರ ಕೊಡಬೇಕು ಅಂತ ಸರ್ಕಾರಕ್ಕೆ ಒತ್ತಾಯಿಸಿದ್ದಾರೆ.
Published by: MAshok Kumar
First published: August 22, 2020, 7:19 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories