• ಹೋಂ
  • »
  • ನ್ಯೂಸ್
  • »
  • ಜಿಲ್ಲೆ
  • »
  • ಮೀನುಗಾರರ ಹೋರಾಟಕ್ಕೆ ಸಿಗದ ಬೆಲೆ; ಬಂದರು ನಿರ್ಮಾಣ ವಿರೋಧಿಸಿ ನಡೆಯುತ್ತಿರುವ ಹೋರಾಟಕ್ಕೆ ಕ್ಯಾರೆ ಎನ್ನದ ಸರ್ಕಾರ

ಮೀನುಗಾರರ ಹೋರಾಟಕ್ಕೆ ಸಿಗದ ಬೆಲೆ; ಬಂದರು ನಿರ್ಮಾಣ ವಿರೋಧಿಸಿ ನಡೆಯುತ್ತಿರುವ ಹೋರಾಟಕ್ಕೆ ಕ್ಯಾರೆ ಎನ್ನದ ಸರ್ಕಾರ

ಬಂದರು ನಿರ್ಮಾಣವಾಗುತ್ತಿರುವ ಸ್ಥಳ.

ಬಂದರು ನಿರ್ಮಾಣವಾಗುತ್ತಿರುವ ಸ್ಥಳ.

ಮೀನುಗಾರಿಕೆಗೆ ಇದ್ದ ಕಡಲತೀರದಿಂದಲೇ ಬಂದರು ಸಂಪರ್ಕಿಸುವ ರಸ್ತೆ ಹಾದು ಹೋಗಲಿದ್ದು ಇಲ್ಲಿ ಬಂದರಿಗೆ ಸಂಬಂಧಿಸಿದ ಕಾರ್ಯಚಟುವಟಿಕೆಗಳು ನಡೆಯಲಿದೆ. ಜತೆಗೆ ಸಾಂಪ್ರದಾಯಿಕ ಮೀನುಗಾರಿಕೆ ನಂಬಿ ಬದುಕಿದ್ದ ಇಲ್ಲಿನ ಮೀನುಗಾರರು ಸಂಪೂರ್ಣವಾಗಿ ಸಾಂಪ್ರದಾಯಿಕ ಮೀನುಗಾರಿಕೆ ಮರೆಯಬಹುದಾದ ಸ್ಥಿತಿ ನಿರ್ಮಾಣವಾಗಲಿದೆ. ಹೀಗೆ ಬಂದರು ನಿರ್ಮಾಣವಾದರೆ ನೂರಾರು ಸಮಸ್ಯೆ ಸೃಷ್ಟಿಯಾಗಲಿದೆ.

ಮುಂದೆ ಓದಿ ...
  • Share this:

ಕಾರವಾರ: ಇತ್ತೀಚಿಗೆ ಕೇಂದ್ರ ಸರಕಾರದ ಖಾಸಗೀಕರಣ ನೀತಿ ವಿರುದ್ದ ಜನ ವಿರೋಧ ವ್ಯಕ್ತಪಡಿಸುತ್ತಿದ್ದಾರೆ. ಈ ಬೆನ್ನಲ್ಲೆ ಎಲ್ಲವೂ ಗೊತ್ತು ಗೊತ್ತಿದ್ದು ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರದಲ್ಲಿ ಮೀನುಗಾರಿಕೆಗೆ ತೊಂದರೆ ಆಗುವ ಹಾಗೆ ಖಾಸಗಿ ಕಂಪನಿಯವರು ಪೋರ್ಟ್ ನಿರ್ಮಾಣ ಮಾಡಲು ಹೊರಟಿದ್ದು ಮೀನುಗಾರರ ಆಕ್ರೋಶದ ಕಟ್ಟೆ ಒಡೆದಿದ್ದು ಮೀನುಗಾರರ ಸಮಸ್ಯೆ ಕೇಳುವವರು ಯಾರು ಇಲ್ಲದಂತಾಗಿದೆ.


ಹೊನ್ನಾವರದ ಕಾಸರಕೋಡಿನಲ್ಲಿ ಎಚ್.ಪಿ.ಪಿ.ಎಲ್ ಖಾಸಗಿ ಕಂಪನಿಯವರು ವಾಣಿಜ್ಯ ಬಂದರು ನಿರ್ಮಾಣ ಮಾಡಲು ಹೊರಟಿದ್ದಾರೆ. ಈಗಾಗಲೇ ಕೇಂದ್ರ ಸರಕಾರದ ಅನುಮತಿಯೊಂದಿಗೆ ಕಾಮಗಾರಿ ಕೂಡಾ ಆರಂಭವಾಗಿದೆ. ಈ ನಡುವೆ ಸಾಕಷ್ಟು ವಿರೋಧ ವ್ಯಕ್ತಪಡಿಸುತ್ತಿರುವ ಇಲ್ಲಿನ ಸ್ಥಳೀಯ ಸಾವಿರಾರು ಮೀನುಗಾರರ ಗೋಳಿಗೆ ಕಿವಿಗೊಡದೆ ಕಾಮಗಾರಿ ಆರಂಭಿಸಿದ್ದು ಮೀನುಗಾರರ ಆಕ್ರೋಷದ ಕಟ್ಟೆ ಒಡೆದಿದೆ. ಇದರ ಜತೆಗೆ ಯಾವೊಬ್ಬ ಶಾಸಕ ಆಗಿರಲಿ, ಜನಪ್ರತಿನಿಧಿ ಕೂಡ ಮೀನುಗಾರರ ಪರವಾಗಿ ನಿಲ್ಲದಿರೋದು ದುರಂತವಾಗಿದೆ. ಇನ್ನೂ ಈಗ ಆರಂಭಿಸಲಾದ ಪೋರ್ಟ್ ಕಾಮಗಾರಿ ಪಕ್ಕದಲ್ಲೇ ಕೇಂದ್ರ ಸರಕಾರದಿಂದ ಮಾನ್ಯತೆ ಪಡೆದ ಬ್ಲೂ ಪ್ಲಾಗ್ ಕಡಲತೀರ ಇದೆ. ಇದಕ್ಕೆ ದಕ್ಕೆ ಆಗುವ ಎಲ್ಲ ಲಕ್ಷಣವೂ ಇದೆ. ಹೀಗೆ ಹತ್ತು ಹಲವು ಸಮಸ್ಯೆ ಇದ್ದರೂ ಕೂಡಾ ಖಾಸಗಿ ಕಂಪನಿಯವರಾಗಲಿ ಅಥವಾ ಬಂದರು ಇಲಾಖೆಯಾಗಲಿ ಮೀನುಗಾರರ ಸಂಕಷ್ಟ ಆಲಿಸದೆ ಪರಿಹಾರದ ಬಗ್ಗೆಯೂ ಮಾತನಾಡದೆ ಏಕಾಏಕಿ ಕಾಮಗಾರಿ ಆರಂಭಿಸಿದ್ದು ಮೀನುಗಾರರ ಜತೆ ಚೆಲ್ಲಾಟವಾಡುವಂತಿದೆ.


ಮೀನುಗಾರರ ಹೋರಾಟಕ್ಕೆ ಬೆಲೆ ಇಲ್ವಾ?


ಕಳೆದ ಹತ್ತಾರು ದಿನದಿಂದ ನಿರಂತರವಾಗಿ ಹೊನ್ನಾವರ ಮೀನುಗಾರರು ವಾಣಿಜ್ಯ ಬಂದರು ನಿರ್ಮಾಣ ವಿರೋಧಿಸಿ ಹೋರಾಟ ನಡೆಸುತ್ತಲೇ ಬರುತ್ತಿದ್ದಾರೆ. ಆದರೆ ಇವರಿಗೆ ದಿಕ್ಕು ತಪ್ಪಿಸುವ ಕೆಲಸ ಸಂಬಂಧಿಸಿದ ಬಂದರು ಇಲಾಖೆಯಿಂದ ನಡೆಯುತ್ತಿದೆಯಂತೆ. ಬಂದರು ನಿರ್ಮಾಣವಾದರೆ ಉದ್ಯೋಗ ಸೃಷ್ಟಿ ಆಗುತ್ತೆ, ಸ್ಥಳೀಯ ಮೀನುಗಾರರಿಗೆ ಉದ್ಯೋಗ ನೀಡುವ ಭರವಸೆ  ಆದ್ರೆ ಬಂದರು ಇಲಾಖೆಯಲ್ಲಿ ಕಾರ್ಯ ನಿರ್ವಹಿಸುವ ನೈಪುಣ್ಯತೆ ಸ್ಥಳೀಯ ಮೀನುಗಾರಿಗಿಲ್ಲ. ತಮ್ಮ ಕಸುಬಿಗೆ ಕತ್ತರಿ ಹಾಕಿ ಬೇರೆ ಉದ್ಯೋಗದ ಆಸೆ ತೋರಿಸಿ ಮೀನುಗಾರರ ದಿಕ್ಕು ತಪ್ಪಿಸಿ ಸರಕಾರ ಖಾಸಗಿ ಕಂಪನಿಯವರಿಗೆ ಬಂದರು ನಿರ್ಮಾಣ ಮಾಡಲು ಅನುಮತಿ ನೀಡಿದ್ದು ಖಂಡನೀಯ ಅಂತಾರೆ ಸ್ಥಳೀಯ ಮೀನುಗಾರರು.


ಇದನ್ನು ಓದಿ: ಗ್ರೀನ್ ಕಾರ್ಡ್ ವಿತರಣೆ ಮೇಲಿನ ನಿಷೇಧ ತೆರವು, ಅಮೆರಿಕದಲ್ಲಿರುವ ಲಕ್ಷಾಂತರ ಭಾರತೀಯರಿಗೆ ರಿಲೀಫ್


ಬಂದರು ನಿರ್ಮಾಣವಾದರೆ ಹೊನ್ನಾವರದಲ್ಲಿ ಮೀನುಗಾರರ ಬದುಕಿನ‌ ಮೇಲೆ ಹೇಗೆ ಕೆಟ್ಟ ಪರಿಣಾಮ ಬೀರುವುದು ಎನ್ನೋ ಬಗ್ಗೆ ಸರಕಾರದ ಕಿವಿಗೆ ಕೇಳುವ ಹಾಗೆ ಪ್ರತಿಭಟನೆ ಹೋರಾಟ ಮಾಡಿದರೂ ಸರಕಾರ ಮಾತ್ರ ಇದಕ್ಕೂ ತಮಗೂ ಯಾವುದೇ ಸಂಬಂಧ ಇಲ್ಲ ಎಂಬಂತೆ ಕಣ್ಣುಮುಚ್ಚಿ ಕುಳಿತಿದೆ ಅಂತಾರೆ ಮೀನುಗಾರರು.


ವಾಣಿಜ್ಯ ಬಂದರು ನಿರ್ಮಾಣವಾದ್ರೆ ಏನು ಸಮಸ್ಯೆ?


ಈಗ ನಿರ್ಮಾಣವಾಗುತ್ತಿರುವ ವಾಣಿಜ್ಯ ಬಂದರು ಮೀನುಗಾರಿಕೆಯ ಕಸುಬನ್ನೇ ಕಸಿದುಕೊಳ್ಳಲಿದೆ ಅಂತಾರೆ ಮೀನುಗಾರರು. ಮೀನುಗಾರಿಕೆಗೆ ಇದ್ದ ಕಡಲತೀರದಿಂದಲೇ ಬಂದರು ಸಂಪರ್ಕಿಸುವ ರಸ್ತೆ ಹಾದು ಹೋಗಲಿದ್ದು ಇಲ್ಲಿ ಬಂದರಿಗೆ ಸಂಬಂಧಿಸಿದ ಕಾರ್ಯಚಟುವಟಿಕೆಗಳು ನಡೆಯಲಿದೆ. ಜತೆಗೆ ಸಾಂಪ್ರದಾಯಿಕ ಮೀನುಗಾರಿಕೆ ನಂಬಿ ಬದುಕಿದ್ದ ಇಲ್ಲಿನ ಮೀನುಗಾರರು ಸಂಪೂರ್ಣವಾಗಿ ಸಾಂಪ್ರದಾಯಿಕ ಮೀನುಗಾರಿಕೆ ಮರೆಯಬಹುದಾದ ಸ್ಥಿತಿ ನಿರ್ಮಾಣವಾಗಲಿದೆ. ಹೀಗೆ ಬಂದರು ನಿರ್ಮಾಣವಾದರೆ ನೂರಾರು ಸಮಸ್ಯೆ ಸೃಷ್ಟಿಯಾಗಲಿದೆ.

Published by:HR Ramesh
First published: