ಕೊರೋನಾ ಆತಂಕದ ನಡುವೆ ಆನೇಕಲ್​​ನಲ್ಲಿ ಯಶಸ್ವಿಯಾಗಿ ನಡೆದ ಎಸ್​ಎಸ್​ಎಲ್​​ಸಿ ಪರೀಕ್ಷೆ

ಪ್ರತಿಯೊಬ್ಬ ವಿದ್ಯಾರ್ಥಿಗೂ ಗೇಟ್ ಬಳಿ ಥರ್ಮಲ್ ಸ್ಕ್ಯಾನರ್ ಮೂಲಕ ಟೆಸ್ಟ್ ಮಾಡಿ ಸ್ಯಾನಿಟೈಸರ್ ಹಾಗೂ ಮಾಸ್ಕ್ ವಿತರಿಸಿ ಪರೀಕ್ಷಾ ಕೊಠಡಿಗೆ ಕಳುಹಿಸುವ ವ್ಯವಸ್ಥೆ ಮಾಡಲಾಗಿತ್ತು.

ಎಸ್​ಎಸ್​ ಎಲ್​​​ಸಿ ವಿದ್ಯಾರ್ಥಿಗಳು

ಎಸ್​ಎಸ್​ ಎಲ್​​​ಸಿ ವಿದ್ಯಾರ್ಥಿಗಳು

  • Share this:
ಆನೇಕಲ್(ಜೂ.25): ಕೊರೋನಾ ವೈರಸ್‌ ಆತಂಕದ ನಡುವೆಯೇ ಈ ಸಾಲಿನ ಎಸ್ ಎಸ್ ಎಲ್ ಸಿ ಪರೀಕ್ಷೆ ರಾಜ್ಯಾದ್ಯಂತ ಇಂದಿನಿಂದ ಆರಂಭವಾಗಿದೆ. ಬೆಂಗಳೂರು ಹೊರವಲಯ ಆನೇಕಲ್ ತಾಲೂಕಿನಾದ್ಯಂತ ಒಟ್ಟು 19 ಕೇಂದ್ರಗಳಲ್ಲಿ  5903 ವಿದ್ಯಾರ್ಥಿಗಳು ಎಸ್​ ಎಸ್​ಎಲ್​​ಸಿ ಪರೀಕ್ಷೆಗೆ ಹಾಜರಾಗಿದ್ದರು.

135 ಹೊರ ರಾಜ್ಯದ ವಿದ್ಯಾರ್ಥಿಗಳಿಗೆ ಪರೀಕ್ಷೆ ಬರೆಯಲು ಅವಕಾಶ ನೀಡಲಾಗಿತ್ತು. ಅದರಲ್ಲಿ 132 ಮಂದಿ ಹಾಜರಾಗಿದ್ದು, 3 ಮಂದಿ ಗೈರು ಹಾಜರಾಗಿದ್ದಾರೆ. 6086 ವಿದ್ಯಾರ್ಥಿಗಳಲ್ಲಿ 5903 ವಿದ್ಯಾರ್ಥಿಗಳು ಹಾಜರಾಗಿ ಪರೀಕ್ಷೆ ಬರೆದಿದ್ದಾರೆ. ಅಂದರೆ ಶೇ 96 ರಷ್ಟು ವಿದ್ಯಾರ್ಥಿಗಳು ಕೋವಿಡ್ ಆತಂಕದ ನಡುವೆ ಪರೀಕ್ಷೆ ಹಾಜರಾಗಿದ್ದರು. ಇನ್ನೂ ವಿದ್ಯಾರ್ಥಿಗಳ ಆರೋಗ್ಯದ ದೃಷ್ಟಿಯಿಂದ ಪರೀಕ್ಷಾ ಕೇಂದ್ರಗಳಲ್ಲಿ ಹೆಚ್ಚಿನ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಲಾಗಿತ್ತು.

ಆನೇಕಲ್​​ ಕರ್ನಾಟಕ ಪಬ್ಲಿಕ್ ಸ್ಕೂಲ್, ಸಂತ ಜೋಸೆಫ್ ಶಾಲೆ ಹಾಗು ಸರ್ಕಾರಿ ಹೊಸ ಮಾದರಿ ಪಾಠಶಾಲೆ, ವಿಧಾತ ಸ್ಕೂಲ್, ಎಸ್ ಎಫ್ ಎಸ್ ಸೇರಿದಂತೆ ತಾಲೂಕಿನ ಒಟ್ಟು 19  ಪರೀಕ್ಷಾ ಕೇಂದ್ರಗಳ ಬಳಿ ವಿದ್ಯಾರ್ಥಿಗಳು ಸರತಿ ಸಾಲಿನಲ್ಲಿ ನಿಂತು ಪರೀಕ್ಷಾ ಕೊಠಡಿಗೆ ಬರುವ ಪ್ರತಿಯೊಬ್ಬ ವಿದ್ಯಾರ್ಥಿಗೂ ಗೇಟ್ ಬಳಿ ಥರ್ಮಲ್ ಸ್ಕ್ಯಾನರ್ ಮೂಲಕ ಟೆಸ್ಟ್ ಮಾಡಿ ಸ್ಯಾನಿಟೈಸರ್ ಹಾಗೂ ಮಾಸ್ಕ್ ವಿತರಿಸಿ ಪರೀಕ್ಷಾ ಕೊಠಡಿಗೆ ಕಳುಹಿಸುವ ವ್ಯವಸ್ಥೆ ಮಾಡಲಾಗಿತ್ತು.

ಪರೀಕ್ಷಾ ಕೇಂದ್ರದ ಎದುರು ಸ್ಕೌಟ್ಸ್ ಅಂಡ್ ಗೈಡ್ಸ್ ವಿದ್ಯಾರ್ಥಿಗಳಿಂದ ಮಾಹಿತಿ ಹಾಗೂ ಸಾಮಾಜಿಕ ಅಂತರ ಕಾಯ್ದುಕೊಳ್ಳುವ ನಿಟ್ಟಿನಲ್ಲಿ ನಿಯೋಜನೆ ಮಾಡಲಾಗಿತ್ತು. ಆದರೆ ಜಿಗಣಿ ನಿತ್ಯಾನಂದ ಸ್ವಾಮಿ ಶಾಲಾ ಆವರಣದಲ್ಲಿ ವಿದ್ಯಾರ್ಥಿಗಳನ್ನು ಕರೆದುಕೊಂದು ಬಂದಿದ್ದ ಪೋಷಕರು ಸಾಮಾಜಿಕ ಅಂತರ ಕಾಯ್ದುಕೊಳ್ಳದೆ ಗುಂಪು ಗುಂಪಾಗಿ ನಿಂತಿದ್ದರು ಇದನ್ನು ನೋಡಿದ ಪೊಲೀಸರು ಸಾಮಾಜಿಕ ಅಂತರ ಕಾಯ್ದುಕೊಳ್ಳುವಂತೆ ಸೂಚನೆ ನೀಡಿದರು.

ಇದನ್ನೂ ಓದಿ : ರೈಲ್ವೆ ಕಂಬಿಗಳ ಬ್ಯಾರಿಕೇಡ್ ಕೆಳಗೆ ಸಿಲುಕಿದ ಕಾಡಾನೆ ವಿಡಿಯೋ ವೈರಲ್

ಅಲ್ಲದೆ ಆನೇಕಲ್ ತಮಿಳುನಾಡು ಗಡಿಗೆ ಹೊಂದಿಕೊಂಡಂತಿರುವ ತಮಿಳುನಾಡಿನ ಡೆಂಕಣಿಕೋಟೆ ಹೊಸೂರು ಗುಮ್ಮಳಾಪುರ ಮುಂತಾದ ಕಡೆಗಳಿಂದ ಹೊರ ರಾಜ್ಯದ 135 ಮಂದಿ ವಿದ್ಯಾರ್ಥಿಗಳು ಪರೀಕ್ಷೆಗೆ ನೋಂದಾಯಿಸಿಕೊಂಡಿದ್ದರು. 132 ಮಂದಿ ವಿದ್ಯಾರ್ಥಿಗಳು ಮಾತ್ರ ಹಾಜರಾಗಿದ್ದು, 3 ಮಂದಿ ಮಾತ್ರ ತಮಿಳುನಾಡಿನಲ್ಲಿ ಕೊರೋನಾ ಹೆಚ್ಚಿರುವ ಕಾರಣ  ವಿದ್ಯಾರ್ಥಿಗಳಿಗೆ ಪ್ರತ್ಯೇಕ ಕೊಠಡಿಯಲ್ಲಿ ಪರೀಕ್ಷೆ ಬರೆಯಲು ತಾಲೂಕು ಆಡಳಿತ ಹಾಗೂ ಶಿಕ್ಷಣ ಇಲಾಖೆ ಅನುವು ಮಾಡಿಕೊಟ್ಟಿತು.

ಒಟ್ಟಿನಲ್ಲಿ ಕೊರೋನಾ ನಡುವೆಯು ಇಂದು ನಡೆದ ಎಸ್​ಎಸ್​ಎಲ್​​ಸಿ ಪರೀಕ್ಷೆ ಯಾವುದೇ ಗೊಂದಲ ಮತ್ತು ಅಹಿತರ ಘಟನೆ ನಡೆಯದಂತೆ ಜರುಗಿದ್ದು, ಕೆಲವು ಕಡೆ ಮಾತ್ರ ಸ್ಯಾನಿಟೈಸರ್​ ಮತ್ತು ಮಾಸ್ಕ್ ನೀಡಲು ನಿಲ್ಲಿಸಿದ್ದ ಸರದಿ ಸಾಲಿನಲ್ಲಿ ಸಾಮಾಜಿಕ ಅಂತರ ಪಾಲನೆಯಾಗಿರಲಿಲ್ಲ. ಹಾಗಾಗಿ ನಾಳೆ ನಡೆಯುವ ಪರೀಕ್ಷೆ ವೇಳೆ ಇದು ಮರುಕಳಿಸದಂತೆ ಶಿಕ್ಷಣ ಇಲಾಖೆ ಮುಂಜಾಗ್ರತೆ ವಹಿಸಬೇಕಿದೆ.
First published: