HOME » NEWS » District » FIRST CORONA DEATH REGISTER IN KODAGU MAK

ಕೊರೋನಾಗೆ ಕೊಡಗಿನಲ್ಲಿ ಮೊದಲ ಬಲಿ; ಶನಿವಾರ ಮೃತಪಟ್ಟಿದ್ದ 58 ವರ್ಷದ ವ್ಯಕ್ತಿಗೆ ತಗುಲಿದ್ದ ಸೋಂಕು

ಸದ್ಯ ಮೃತ ವ್ಯಕ್ತಿಯ ವರದಿ ಬಂದಿದ್ದು, ಆತ ಕೊರೋನಾದಿಂದಲೇ ಮೃತಪಟ್ಟಿರುವುದು ದೃಢವಾಗಿದೆ. ಮತ್ತೊಂದು ಆತಂಕಕಾರಿ ವಿಷಯವೆಂದರೆ, ವ್ಯಕ್ತಿಗೆ ಯಾವುದೇ ಟ್ರಾವಲ್ ಹಿಸ್ಟ್ರಿಯೇ ಇಲ್ಲ. ಯಾವ ಪಟ್ಟಣ, ಊರುಗಳಿಗೂ ಪ್ರಯಾಣಿಸಿಲ್ಲ. ಆದರೂ ಕೊರೋನಾಗೆ ತುತ್ತಾಗಿ ಮೃತಪಟ್ಟಿರುವುದು ಈ ರೋಗ ಸಮುದಾಯಿಕವಾಗಿ ಹರಡುತ್ತಿದೆಯಾ? ಎಂಬ ದಟ್ಟ ಅನುಮಾನ ಮೂಡಿಸಿದೆ.

news18-kannada
Updated:July 6, 2020, 6:41 AM IST
ಕೊರೋನಾಗೆ ಕೊಡಗಿನಲ್ಲಿ ಮೊದಲ ಬಲಿ; ಶನಿವಾರ ಮೃತಪಟ್ಟಿದ್ದ 58 ವರ್ಷದ ವ್ಯಕ್ತಿಗೆ ತಗುಲಿದ್ದ ಸೋಂಕು
ಕೊಡಗಿನಲ್ಲಿ ಕೊರೋನಾದಿಂದ ಮೃತಪಟ್ಟ ವ್ಯಕ್ತಿಯ ಅಂತ್ಯಸಂಸ್ಕಾರ.
  • Share this:
ಕೊಡಗು : ಬೇರೆ ಜಿಲ್ಲೆಗಳಿಗೆ ಹೋಲಿಕೆ ಮಾಡಿದರೆ ಕೊರೋನಾ ಸೋಂಕಿತರ ಸಂಖ್ಯೆ ಕೊಡಗಿನಲ್ಲಿ ಕಡಿಮೆ ಇದ್ದರೂ, ಡೆಡ್ಲಿ ವೈರಸ್ ಜಿಲ್ಲೆಯಲ್ಲಿ ಕೊನೆಗೂ ಮೊದಲ ಬಲಿ ಪಡೆದಿದೆ. ಶನಿವಾರ ಸಂಜೆಯೇ ಮೃತಪಟ್ಟಿದ್ದ ಕುಶಾಲನಗರದ 58 ವರ್ಷದ ವ್ಯಕ್ತಿಗೆ ಕೊರೋನಾ ಸೋಂಕು ಇರುವುದು ದೃಢಪಟ್ಟಿದ್ದು, ಜಿಲ್ಲೆಯ ಜನರನ್ನು ಆತಂಕಕ್ಕೆ ದೂಡಿದೆ.

ಮೃತ ವ್ಯಕ್ತಿಗೆ ಒಂದು ವಾರದಿಂದಲೇ ರೋಗ ಲಕ್ಷಣವಿದ್ದರೂ ಕುಶಾಲನಗರದ ಖಾಸಗೀ ಆಸ್ಪತ್ರೆಯಲ್ಲೇ ಚಿಕಿತ್ಸೆ ಪಡೆಯುತ್ತಿದ್ದರು. ಆದರೆ ಉಸಿರಾಟದ ತೀವ್ರ ತೊಂದರೆ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ನಿನ್ನೆ ಸಂಜೆ ಮಡಿಕೇರಿಯ ಕೋವಿಡ್ ಆಸ್ಪತ್ರೆಗೆ ದಾಖಲಾಗಿದ್ದರು. ಐಸಿಯುನಲ್ಲಿ ಚಿಕಿತ್ಸೆ ನೀಡಲು ವೈದ್ಯರು ಪ್ರಯತ್ನಿಸಿದ್ದಾರೆ. ಆದರೆ, ಚಿಕಿತ್ಸೆ ಫಲಕಾರಿಯಾಗದೆ ಆಸ್ಪತ್ರೆಗೆ ಬಂದ ಅರ್ಧಗಂಟೆಯಲ್ಲೇ ವ್ಯಕ್ತಿ ಮೃತಪಟ್ಟಿದ್ದಾರೆ.

ಕೊರೋನಾ ರೋಗ ಲಕ್ಷಣಗಳು ಇದ್ದಿದ್ದರಿಂದ ವೈದ್ಯರು ಮೃತ ವ್ಯಕ್ತಿಯ ಗಂಟಲ ದ್ರವ ಸಂಗ್ರಹಿಸಿ ಕೊರೋನಾ ಪರೀಕ್ಷೆಗೆ ಕಳುಹಿಸಿದ್ದರು. ವರದಿ ಬರುವುದು ತಡವಾಗಿದ್ದರಿಂದ ಕೊಡಗು ಜಿಲ್ಲಾಡಳಿತ ಇಂದು ಸಂಜೆ ಸರ್ಕಾರದ ಮಾರ್ಗ ಸೂಚಿ ಅನ್ವಯ ಮೃತದೇಹವನ್ನು ಸಂಬಂಧಿಕರಿಗೆ ಹಸ್ತಾಂತರಿಸದೆ ಮಡಿಕೇರಿಯಲ್ಲೇ ಅಂತ್ಯ ಕ್ರಿಯೆ ನೆರವೇರಿಸಿತ್ತು.

ಸದ್ಯ ಮೃತ ವ್ಯಕ್ತಿಯ ವರದಿ ಬಂದಿದ್ದು, ಆತ ಕೊರೋನಾದಿಂದಲೇ ಮೃತಪಟ್ಟಿರುವುದು ದೃಢವಾಗಿದೆ. ಮತ್ತೊಂದು ಆತಂಕಕಾರಿ ವಿಷಯವೆಂದರೆ, ವ್ಯಕ್ತಿಗೆ ಯಾವುದೇ ಟ್ರಾವಲ್ ಹಿಸ್ಟ್ರಿಯೇ ಇಲ್ಲ. ಯಾವ ಪಟ್ಟಣ, ಊರುಗಳಿಗೂ ಪ್ರಯಾಣಿಸಿಲ್ಲ. ಆದರೂ ಕೊರೋನಾಗೆ ತುತ್ತಾಗಿ ಮೃತಪಟ್ಟಿರುವುದು ಈ ರೋಗ ಸಮುದಾಯಿಕವಾಗಿ ಹರಡುತ್ತಿದೆಯಾ? ಎಂಬ ದಟ್ಟ ಅನುಮಾನ ಮೂಡಿಸಿದೆ.

ಇದನ್ನೂ ಓದಿ: ರಾಜ್ಯಕ್ಕೆ ಕೈಕೊಟ್ಟ ಮುಂಗಾರು, ಹಲವೆಡೆ ಬರದ ಛಾಯೆ; ಈವರೆಗೆ ಎಲ್ಲಿಲ್ಲಿ ಎಷ್ಟೆಷ್ಟು ಮಳೆ? ಇಲ್ಲಿದೆ ವರದಿ

ಒಟ್ಟಿನಲ್ಲಿ ಇದುವರೆಗೆ ಕೊಡಗು ಜಿಲ್ಲೆಯಲ್ಲಿ ನಿಯಂತ್ರಣದಲ್ಲಿದ್ದ ಕೊರೋನಾ ಮಹಾಮಾರಿ, ಇದೀಗ ಗಾಳಿ ವೇಗದಲ್ಲಿ ಹಬ್ಬುತ್ತಿದ್ದು ಜಿಲ್ಲೆಯಲ್ಲಿ ಒಟ್ಟು ಕೊರೋನಾ ಪೀಡಿತರ ಸಂಖ್ಯೆ 78 ಕ್ಕೆ ಏರಿಕೆಯಾಗಿದೆ. ಆ ಮೂಲಕ ಜಿಲ್ಲೆಯ ಜನರನ್ನು ಮತ್ತಷ್ಟು ಆತಂಕಕ್ಕೆ ದೂಡಿದೆ.
Published by: MAshok Kumar
First published: July 6, 2020, 6:41 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories