ಕಪ್ಪತ್ತಗುಡ್ಡದಲ್ಲಿ ಕಳೆದೊಂದು ವಾರದಿಂದ ನಿರಂತರ ಅಗ್ನಿ ಅವಘಡ; ಗಣಿಗಾರಿಕೆ ಮಾಡುವ ಹುನ್ನಾರ?

ಒಂದು ವಾರದಿಂದ ಕಪ್ಪತ್ತಗುಡ್ಡದಲ್ಲಿ ಹಲವು ಕಡೆ ಬೆಂಕಿ ತಗಲಿ ಅಪಾರ ಪ್ರಮಾಣದ ಸಸ್ಯ ಸಂಪತ್ತು ಹಾಳಾಗಿದೆ. ಹೀಗಾಗಿ ಗಣಿಗಾರಿಕೆ ಮಾಡುವ ಹುನ್ನಾರ ಇದರ ಹಿಂದೆ ಅಡಗಿದೆ ಎನ್ನುವ ಆರೋಪ ಜೋರಾಗಿದೆ. ಈವಾಗ ಮತ್ತೊಮ್ಮೆ ಕಪ್ಪತ್ತಗುಡ್ಡ ಉಳುವಿಗಾಗಿ ಜನಶಕ್ತಿ ಒಂದಾಗ ಬೇಕು ಅಂತ ತೋಂಟದಾರ್ಯ ಶ್ರೀಗಳು ಕರೆ ನೀಡಿದ್ದಾರೆ.

ಗದಗದ ಕಪ್ಪತ್ತಗುಡ್ಡದಲ್ಲಿ ಕಳೆದ ವರ್ಷ ಹೊತ್ತಿದ್ದ ಕಾಡ್ಗಿಚ್ಚು. (ಸಂಗ್ರಹ ಚಿತ್ರ)

ಗದಗದ ಕಪ್ಪತ್ತಗುಡ್ಡದಲ್ಲಿ ಕಳೆದ ವರ್ಷ ಹೊತ್ತಿದ್ದ ಕಾಡ್ಗಿಚ್ಚು. (ಸಂಗ್ರಹ ಚಿತ್ರ)

  • Share this:
ಗದಗ: ಅದು ಉತ್ತರ ಕರ್ನಾಟಕದ ಸಹ್ಯಾದ್ರಿ ಕಪ್ಪತ್ತಗುಡ್ಡ, ತನ್ನ ಒಡಲಿನಲ್ಲಿ ಅಪಾರ ಪ್ರಮಾಣದ ಖನಿಜ ಸಂಪತ್ತು, ಸಸ್ಯ ಸಂಪತ್ತು, ಇಟ್ಟುಕೊಂಡಿದೆ. ಆ, ಕಪ್ಪತ್ತಗುಡ್ಡದ ಖನಿಜ ಸಂಪತ್ತು ಮೇಲೆ ಕಣ್ಣು ಹಾಕಿದ. ಗಣಿ ಕುಳಗಳು ಹೇಗಾದರೂ ಮಾಡಿ ಗಣಿಗಾರಿಕೆ ಮಾಡಬೇಕು ಎನ್ನುವ ಹುನ್ನಾರ ನಡೆಸಿದ್ದಾರೆ. ಅವರ ಕುತಂತ್ರದಿಂದಲೇ ಕಪ್ಪತ್ತಗುಡ್ಡಕ್ಕೆ ಬೆಂಕಿ ಬಿಳ್ತಾಯಿದೆ ಎನ್ನುವ ಅನುಮಾನ ದಟ್ಟವಾಗಿ ಕಾಡುತ್ತಿವೆ.

ಹೌದು ಉತ್ತರ ಕರ್ನಾಟಕ ಸಹ್ಯಾದ್ರಿ, ಸಸ್ಯ ಕಾಶಿ ,ವನ್ಯಜೀವಿ ಧಾಮ ಈಗ ಅಳವಿನ ಅಂಚಿಗೆ ಬಂದು ನಿಂತಿದೆ. ಹೌದು ನಿರಂತರವಾದ ಹೋರಾಟದ ಫಲವಾಗಿ ಕಪ್ಪತ್ತಗುಡ್ಡ ವನ್ಯಜೀವಿ ಧಾಮವೆಂದು ಘೋಷಣೆ ಮಾಡಲಾಗಿದೆ. ಆದರೆ ಬೇಸಿಗೆ ಆರಂಭದಲ್ಲಿ ಈ ಭಾರಿ ಕಪ್ಪತ್ತಗುಡಕ್ಕೆ ಭಾರಿ ಪ್ರಮಾಣದಲ್ಲಿ ಬೆಂಕಿ ಹಚ್ಚಲಾಗುತ್ತಿದೆ. ಕಳೆದ ಒಂದು ವಾರದಲ್ಲಿ ಅಪಾರ ಪ್ರಮಾಣದ ಸಸ್ಯ ಸಂಪತ್ತು ಸುಟ್ಟು ಕರಕಲಾಗಿದೆ. ಈ ಬೆಂಕಿ ಹಚ್ಚುವ ಕೆಲಸದ ಹಿಂದೆ ಕಾಣದ ಕೈಗಳ ಕೈವಾಡ ಇದೆ ಎನ್ನುವ ಅನುಮಾನ ದಟ್ಟವಾಗಿದೆ. ಯಾಕೆಂದರೆ ಕಪ್ಪತ್ತಗುಡ್ಡದಲ್ಲಿ ಗಣಿಗಾರಿಕೆ ಮಾಡಬೇಕು ಎನ್ನುವ ಮನೋಭಾವನೆಯಿಂದ, ಸ್ಥಳೀಯರಿಗೆ ಆಸೆ ಆಮಿಷಗಳನ್ನು ಒಡ್ಡಿ, ಬೆಂಕಿ ಹಚ್ಚುವ ಕೆಲಸ ಮಾಡಲಾಗುತ್ತಿದೆ ಎನ್ನುವ ಅನುಮಾನ ಕಾಡ್ತಾಯಿದೆ. ಜನರ ಹಿತವನ್ನು ಕಾಪಾಡಬೇಕಾದ ಜನರೆ ಅಲ್ಲಿ ಗಣಿಗಾರಿಕೆ ಮಾಡಬೇಕು ಎಂದು ಯೋಜನೆ ರೂಪಿಸ್ತಾಯಿರೋದು ಅತ್ಯಂತ ಖಂಡನೆಯ ವಿಷಯ. ಹೀಗಾಗಿ ಜನಪ್ರತಿನಿಧಿಗಳಿಗೆ ಒಳ್ಳೆಯ ಸದ್ಬುದ್ದಿಯನ್ನು ಭಗವಂತನೆ ಕೊಡಬೇಕು ಅಂತಾ ದೇವರಲ್ಲಿ ಪ್ರಾರ್ಥನೆ ಮಾಡಿಕೊಳ್ಳುತ್ತೇನೆ ಅಂತಾರೆ ತೋಂಟದಾರ್ಯ ಮಠದ ಡಾ. ಸಿದ್ಧರಾಮ ಶ್ರೀಗಳು.

ಇದನ್ನು ಓದಿ: ಕನ್ನಡದ ಶಾಲು ಹಾಕಿ ಮನೆಗೆ ಬಂದರೆ ಖುಷಿ ಪಡೋದಾ, ಭಯ ಪಡೋದಾ ಗೊತ್ತಾಗಲ್ಲ; ಕಿಚ್ಚ ಸುದೀಪ್

ಇನ್ನೂ ಕಳೆದ ಕಪ್ಪತ್ತಗುಡ್ಡಕ್ಕೆ ಯಾವಾಗ ಕಂಟಕ ಬರುತ್ತೇ ಆಗ ತೋಂಟದಾರ್ಯ ಶ್ರೀಗಳು ನಿರಂತರವಾಗಿ ಹೋರಾಟ ಮಾಡಿದ್ದಾರೆ. ಈವಾಗ ಮತ್ತೊಮ್ಮೆ ಕಪ್ಪತ್ತಗುಡ್ಡದಲ್ಲಿ ಗಣಿಗಾರಿಕೆ ಮಾಡಬೇಕು ಎನ್ನುವ ಹುನ್ನಾರ ನಡೆಯುತ್ತಿದೆ. ಹೀಗಾಗಿ ಜನಶಕ್ತಿ ಒಂದಾಗಿ ತಮ್ಮ ಸಸ್ಯ ಸಂಪತ್ತು ಉಳಿಸಿಕೊಳ್ಳಬೇಕು ಎಂದು ಕರೆ ನೀಡಿದ್ದಾರೆ. ಇನ್ನೂ ಕಪ್ಪತ್ತಗುಡ್ಡದಲ್ಲಿ ಇತ್ತೀಚಿನ ಹೆಚ್ವಿನ ಪ್ರಮಾಣದ ಬೆಂಕಿ ಬಿಳ್ತಾಯಿರೋದರಿಂದ, ರಾಜ್ಯ ಜೀವ ವೈವಿಧ್ಯ ಮಂಡಳಿ ಅಧ್ಯಕ್ಷ ಅನಂತ ಹೆಗಡೆ ಅಶೀಸರ್ ಅವರು ತೋಂಟದಾರ್ಯ ಮಠದ ಶ್ರೀಗಳೊಂದಿಗೆ ಸುದೀರ್ಘವಾಗಿ ಚರ್ಚೆ ಮಾಡಿದ್ದಾರೆ. ಕಪ್ಪತ್ತಗುಡ್ಡದಲ್ಲಿ ಗಣಿಗಾರಿಕೆ ಮಾಡುವ ಕುರಿತು ನಮ್ಮಲ್ಲಿ ಯಾವುದೇ ಪ್ರಸ್ತಾವನೆ ಇಲ್ಲಾ. ಆದರೆ ಕಪ್ಪತ್ತಗುಡ್ಡಕ್ಕೆ ಬೆಂಕಿ ಯಾರು ಹಚ್ಚುತ್ತಿದ್ದಾರೆ ಅವರನ್ನು ಕಂಡು ಹಿಡಿಯಬೇಕಾಗಿದೆ. ನಾನು ಕೂಡ ಸರ್ಕಾರಕ್ಕೆ ಗಣಿಗಾರಿಕೆ ನಡೆಸಲು ಅವಕಾಶ ಮಾಡಿಕೊಡಬಾರದು ಎಂದು ಸರ್ಕಾರಕ್ಕೆ ಶಿಫಾರಸು ಮಾಡುತ್ತೇನೆ ಅಂತಾರೆ ರಾಜ್ಯ ಜೀವ ವೈವಿಧ್ಯ ಮಂಡಳಿ ಅಧ್ಯಕ್ಷರು ಅನಂತ ಹೆಗಡೆ ಅಶೀಸರ್ ಅವರು.

ಕಳೆದ ಒಂದು ವಾರದಿಂದ ಕಪ್ಪತ್ತಗುಡ್ಡದಲ್ಲಿ ಹಲವು ಕಡೆ ಬೆಂಕಿ ತಗಲಿ ಅಪಾರ ಪ್ರಮಾಣದ ಸಸ್ಯ ಸಂಪತ್ತು ಹಾಳಾಗಿದೆ. ಹೀಗಾಗಿ ಗಣಿಗಾರಿಕೆ ಮಾಡುವ ಹುನ್ನಾರ ಇದರ ಹಿಂದೆ ಅಡಗಿದೆ ಎನ್ನುವ ಆರೋಪ ಜೋರಾಗಿದೆ. ಈವಾಗ ಮತ್ತೊಮ್ಮೆ ಕಪ್ಪತ್ತಗುಡ್ಡ ಉಳುವಿಗಾಗಿ ಜನಶಕ್ತಿ ಒಂದಾಗ ಬೇಕು ಅಂತ ಶ್ರೀಗಳು ಕರೆ ನೀಡಿದ್ದಾರೆ. ಇನ್ನಾದರೂ ರಾಜಕೀಯ ನಾಯಕರು ತಮ್ಮ ಸ್ವಾರ್ಥವನ್ನು ಬಿಟ್ಟು ಕಪ್ಪತ್ತಗುಡ್ಡವನ್ನು ರಕ್ಷಣೆ ಮಾಡ್ತಾರಾ ಎನ್ನುವುದನ್ನು ಕಾದು ನೋಡಬೇಕಾಗಿದೆ.

ವರದಿ: ಸಂತೋಷ ಕೊಣ್ಣೂರ
Published by:HR Ramesh
First published: