• ಹೋಂ
  • »
  • ನ್ಯೂಸ್
  • »
  • ಜಿಲ್ಲೆ
  • »
  • ಬೆಂಕಿಯ ಕೆನ್ನಾಲಿಗೆಯಲ್ಲಿ ಬೇಯುತ್ತಿರುವ ಕಪ್ಪತ್ತಗುಡ್ಡ; ರಾತ್ರೋರಾತ್ರಿ ಬೆಂಕಿ ಇಡುವ ಕಿಡಿಗೇಡಿಗಳು

ಬೆಂಕಿಯ ಕೆನ್ನಾಲಿಗೆಯಲ್ಲಿ ಬೇಯುತ್ತಿರುವ ಕಪ್ಪತ್ತಗುಡ್ಡ; ರಾತ್ರೋರಾತ್ರಿ ಬೆಂಕಿ ಇಡುವ ಕಿಡಿಗೇಡಿಗಳು

ಕಪ್ಪತಗುಡ್ಡದಲ್ಲಿ ಕಾಣಿಸಿಕೊಂಡಿರುವ ಬೆಂಕಿ.

ಕಪ್ಪತಗುಡ್ಡದಲ್ಲಿ ಕಾಣಿಸಿಕೊಂಡಿರುವ ಬೆಂಕಿ.

ಕಪ್ಪತ್ತಗುಡ್ಡದ ರಕ್ಷಣೆ ಅರಣ್ಯ ಇಲಾಖೆ ಅಧಿಕಾರಿಗಳು ಹಗಲು ಇರುಳು ಶ್ರಮಿಸುತ್ತಿದ್ದಾರೆ. ಕಪ್ಪತ್ತಗುಡ್ಡಕ್ಕೆ ಬೆಂಕಿ ಬಿದ್ದ ಸಂದರ್ಭದಲ್ಲಿ ಸಿಬ್ಬಂದಿಗಳ ಕೊರತೆಯಿಂದ ಬೇಗನೆ ಬೆಂಕಿ ನಂದಿಸಲು ಆಗುತ್ತಿಲ್ಲ. ಹೀಗಾಗಿ ಅರಣ್ಯ ಇಲಾಖೆ ಸಚಿವರು ಗಮನ ಹರಿಸಿ ಹೆಚ್ಚಿನ ಪ್ರಮಾಣದಲ್ಲಿ ಸಿಬ್ಬಂದಿಗಳನ್ನು ನೇಮಕ ಮಾಡಿಕೊಳ್ಳಬೇಕು ಎನ್ನುವುದು ಸ್ಥಳೀಯರ ಒತ್ತಾಯವಾಗಿದೆ.

ಮುಂದೆ ಓದಿ ...
  • Share this:

ಗದಗ: ಅದು ಉತ್ತರ ಕರ್ನಾಟಕ ಸೈಹಾದ್ರಿ. ಸಸ್ಯಕಾಶಿ ಕಪ್ಪತ್ತಗುಡ್ಡ ಇಲ್ಲಿ ಸಾವಿರಾರು ಔಷಧೀಯ ಸಸ್ಯಗಳ ಸಂಪತ್ತು ಇದೆ. ಆದರೆ ಬೇಸಿಗೆ ಬಂತು ಅಂದ್ರೆ ಸಾಕು ದುರ್ಷ್ಕಮಿಗಳ ಅಟ್ಟಹಾಸ ಕಪ್ಪತ್ತಗುಡ್ಡ ಬೆಂಕಿಯ ಕೆನ್ನಾಲಿಗೆ ಬೆಂದು ಹೋಗುತ್ತಿದೆ. ಹಗಲು-ರಾತ್ರಿ ಎನ್ನದೆ ಔಷಧೀಯ ಸಸ್ಯಗಳ ಕಾಶಿ ಕಪ್ಪತ್ತಗುಡ್ಡ ಬೆಂಕಿಗೆ ಆಹುತಿಯಾಗುತ್ತಿದೆ. ಗದಗ ಜಿಲ್ಲೆಯ ಮುಂಡರಗಿ ತಾಲೂಕಿನ ಡೋಣಿ ಹಾಗೂ ಡೋಣಿ ತಾಂಡೆಯ ಹತ್ತಿರದ ಸುಮಾರು 60 ಹೆಕ್ಟೇರ್ ಪ್ರದೇಶ ಬೆಂಕಿಗೆ ಆಹುತಿಯಾಗಿದೆ. ಬೇಸಿಗೆ ಆರಂಭದಲ್ಲಿ ಕಿಡಗೇಡಿಗಳು ಹತ್ತು ಕಡೆ ಬೆಂಕಿ ಇಟ್ಟಿದ್ದಾರೆ ಎನ್ನಲಾಗುತ್ತಿದೆ.


ಕಪ್ಪತ್ತಗುಡ್ಡ ವನ್ಯಜೀವಿ ಧಾಮ ಪ್ರದೇಶವಾಗಿದೆ. ಈಗಾಗಲೇ ಬೆಂಕಿಗೆ ಆಹುತಿಯಾದ ಪ್ರದೇಶ ಹುಲ್ಲುಗಾವಲಿನಿಂದ ಕೂಡಿತ್ತು. ಇಲ್ಲಿ ಪಕ್ಷಿಗಳು ವಾಸಿಸುತ್ತಿದ್ದವು ಎನ್ನಲಾಗುತ್ತಿದೆ. ಹಗಲು ರಾತ್ರಿ ಎನ್ನದೆ 15 ಕ್ಕೂ ಹೆಚ್ಚು ಗಂಟೆಗಳ ಕಾಲ ಮೂರು ತಂಡಗಳಾಗಿ 80 ಅರಣ್ಯ ಸಿಬ್ಬಂದಿಗಳು ಬೆಂಕಿ ನಂದಿಸಲು ಹರಸಾಹಸಪಟ್ಟಿದ್ದಾರೆ. ಸದ್ಯ ಕಪ್ಪತ್ತಗುಡ್ಡ ಪ್ರದೇಶದಲ್ಲಿ ಬೆಂಕಿ ನಿಯಂತ್ರಣಕ್ಕೆ ಬಂದಿದೆ‌. ಇನ್ನು ಬೇಸಿಗೆ ಕಾಲದಲ್ಲಿ ದುಷ್ಕರ್ಮಿಗಳು ಕಪ್ಪತ್ತಗುಡ್ಡಕ್ಕೆ ಬಿಂಕಿ ಇಡುವ ಕೆಲಸ ಮಾಡುತ್ತಿದ್ದಾರೆ. ಇವರನ್ನು ಮಟ್ಟ ಹಾಕಬೇಕೆಂದು ಅರಣ್ಯ ಇಲಾಖೆ ಮಾಸ್ಟರ್ ಪ್ಲಾನ್ ಮಾಡಿದೆ. ಬೆಂಕಿ ಹಚ್ಚುವ ಕಿಡಿಗೇಡಿಗಳನ್ನು ಹಿಡಿದು ಕೊಟ್ಟವರಿಗೆ ಬಹುಮಾನ ಕೊಡುತ್ತೇವೆ ಅಂತಿದ್ದಾರೆ ಡಿಎಫ್ಓ ಸೂರ್ಯಸೇನ್ ಅವರು ತಿಳಿಸಿದ್ದಾರೆ.


ಇದನ್ನು ಓದಿ: ರಾಷ್ಟ್ರ ರಾಜಕಾರಣಕ್ಕೆ ಸಿದ್ದರಾಮಯ್ಯ ಅವರಂತಹ ನಾಯಕರ ಅಗತ್ಯವಿದೆ: ಎಚ್.ಡಿ.ದೇವೇಗೌಡರ ಅಚ್ಚರಿಯ ಹೇಳಿಕೆ!


ಪ್ರತಿ  ವರ್ಷ ಬೇಸಿಗೆ ಬಂತು ಅಂದ್ರೆ ಸಾಕು ಕಿಡಿಗೇಡಿಗಳು ಈ ಕೃತ್ಯಕ್ಕೆ ಇಳಿದು ಬಿಡುತ್ತಾರೆ. ಕಪ್ಪತ್ತಗುಡ್ಡವನ್ನು ಔಷಧೀಯ ಸಂಜೀವಿನಿ ಅಂತಾರೆ. ಕಪ್ಪತ್ತಗುಡ್ಡ ಪ್ರದೇಶದಲ್ಲಿ ಸಾವಿರಾರು ಔಷಧೀಯ ಗುಣಗಳು ಹೊಂದಿರುವ ಸಸ್ಯ ಪ್ರಬೇಧಗಳು ಇವೆ. ಇಂತಹ ಸಸ್ಯ ಸಂಪತ್ತಿಗೆ ಬೆಂಕಿ ಇಡುವ ಕೆಲಸ ಮಾಡುವವರಿಗೆ ಕಠಣ ಕ್ರಮ ಕೈಗೊಳ್ಳಬೇಕಾಗಿದೆ. ದುಷ್ಕರ್ಮಿಗಳು ಅಟ್ಟಹಾಸಕ್ಕೆ ಸಸ್ಯ ಸಂಜೀವಿನಿ ಸುಟ್ಟು ಭಸ್ಮವಾಗುತ್ತಿದೆ‌. ಹೀಗಾಗಿ ಕಪ್ಪತ್ತಗುಡ್ಡಕ್ಕೆ ಬೆಂಕಿ ಇಡುವವರನ್ನು ಹಿಡಿದು ಕೊಟ್ಟವರಿಗೆ ಐವತ್ತು ಸಾವಿರ ಬಹುಮಾನ ನೀಡಲು ಅರಣ್ಯ ಇಲಾಖೆ ಮುಂದಾಗಿದೆ. ಪ್ರತಿ ವರ್ಷ ನೂರಾರು ಹೆಕ್ಟೇರ್ ಪ್ರದೇಶದಲ್ಲಿ ಬೆಂಕಿಗೆ ಕಪ್ಪತ್ತಗುಡ್ಡ ಆಹುತಿಯಾಗಿ ಸಸ್ಯ ಸಂಪತ್ತು ಹಾನಿಯಾಗುತ್ತಿದೆ. ಹೀಗಾಗಿ ಸಸ್ಯ ಸಂಪತ್ತು ಉಳಿಸಿಕೊಡಿ ಅಂತಾ ಸ್ಥಳೀಯರು ಸಹ ಒತ್ತಾಯಿಸಿದ್ದಾರೆ.


ಒಟ್ಟಾರೆಯಾಗಿ ಕಪ್ಪತ್ತಗುಡ್ಡದ ರಕ್ಷಣೆ ಅರಣ್ಯ ಇಲಾಖೆ ಅಧಿಕಾರಿಗಳು ಹಗಲು ಇರುಳು ಶ್ರಮಿಸುತ್ತಿದ್ದಾರೆ. ಕಪ್ಪತ್ತಗುಡ್ಡಕ್ಕೆ ಬೆಂಕಿ ಬಿದ್ದ ಸಂದರ್ಭದಲ್ಲಿ ಸಿಬ್ಬಂದಿಗಳ ಕೊರತೆಯಿಂದ ಬೇಗನೆ ಬೆಂಕಿ ನಂದಿಸಲು ಆಗುತ್ತಿಲ್ಲ. ಹೀಗಾಗಿ ಅರಣ್ಯ ಇಲಾಖೆ ಸಚಿವರು ಗಮನ ಹರಿಸಿ ಹೆಚ್ಚಿನ ಪ್ರಮಾಣದಲ್ಲಿ ಸಿಬ್ಬಂದಿಗಳನ್ನು ನೇಮಕ ಮಾಡಿಕೊಳ್ಳಬೇಕು ಎನ್ನುವುದು ಸ್ಥಳೀಯರ ಒತ್ತಾಯವಾಗಿದೆ.

  • ವರದಿ: ಸಂತೋಷ ಕೊಣ್ಣೂರ 

First published: