ಜೋಗ ಜಲಪಾತದ ಬಳಿ ಆತ್ಮಹತ್ಯೆಗೆ ಬೆಂಗಳೂರಿನ ಯುವಕನ ಯತ್ನ ; ಅಗ್ನಿಶಾಮಕ ಸಿಬ್ಬಂದಿಯಿಂದ ರಕ್ಷಣೆ

ಸುಮಾರು ಮೂರು ಗಂಟೆಗಳ ಕಾಲ ಜಲಪಾತದ ಬಳಿ ಕೂತಿದ್ದ ಚೇತನ್ ಕುಮಾರ್. ರಾಣಿ ಫಾಲ್ಸ್ ಬಳಿ ಕುಳಿತುಕೊಳ್ಳುವುದು, ಮಲಗುವುದನ್ನು ಮಾಡುತ್ತಿದ್ದ. ದೂರದಿಂದ ಈತ ಇರುವುದು ಜನರಿಗೆ ಗೊತ್ತಾಗಿದೆ. ತಕ್ಷಣ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.

news18-kannada
Updated:August 26, 2020, 8:59 PM IST
ಜೋಗ ಜಲಪಾತದ ಬಳಿ ಆತ್ಮಹತ್ಯೆಗೆ ಬೆಂಗಳೂರಿನ ಯುವಕನ ಯತ್ನ ; ಅಗ್ನಿಶಾಮಕ ಸಿಬ್ಬಂದಿಯಿಂದ ರಕ್ಷಣೆ
ರಾಣಿ ಫಾಲ್ಸ್​ ತುದಿಯಲ್ಲಿ ಕುಳಿತಿರುವ ಯುವಕ
  • Share this:
ಶಿವಮೊಗ್ಗ(ಆಗಸ್ಟ್​. 26): ಖಿನ್ನತೆಗೆ ಒಳಗಾಗಿದ್ದ ಯುವಕನೋರ್ವ  ಜಿಲ್ಲೆಯ ಸಾಗರ ತಾಲೂಕಿನ ಜೋಗ ಜಲಪಾತದ ಬಳಿ ಆತ್ಮಹತ್ಯೆಗೆ ಯತ್ನಿಸಿದ ಘಟನೆ ನಡೆದಿದೆ. ಆತ್ಮಹತ್ಯೆಗೆ ಯತ್ನಿಸಿದ ಯುವಕನನ್ನು ಬೆಂಗಳೂರು ಮೂಲದ ಚೇತನ್ ಕುಮಾರ್ (35) ಎಂದು ಗುರುತಿಸಲಾಗಿದೆ.

ಕೊರೋನಾ ಹಿನ್ನೆಲೆಯಲ್ಲಿ ಲಾಕ್‍ಡೌನ್ ಆದ ದಿನದಿಂದ ಕೆಲಸ ಇಲ್ಲದ ಕಾರಣ ಚೇತನ್ ಕುಮಾರ್ ಮನೆಯಲ್ಲಿಯೇ ಇರುತ್ತಿದ್ದನಂತೆ. ಈ ವೇಳೆ ತನ್ನನ್ನು ಮನೆಯಲ್ಲಿ ಯಾರು ಮಾತನಾಡಿಸುತ್ತಿರಲಿಲ್ಲ ಎಂದು ಯುವಕ ಪೊಲೀಸರ ಮುಂದೆ ಹೇಳಿಕೊಂಡಿದ್ದಾನೆ.

ಜೋಗದ ರಾಣಿ ಫಾಲ್ಸ್ ತುದಿಯಲ್ಲಿ ಕುಳಿತು ಆತ್ಮಹತ್ಯೆಗೆ ಮುಂದಾಗಿದ್ದ ಚೇತನ್ ಕುಮಾರ್,  ಮನೆಯಲ್ಲಿನ ವಾತಾವರಣದಿಂದ ಬೇಸರಗೊಂಡಿದ್ದ ವ್ಯಕ್ತಿ ಇಂದು ಜೋಗ ಜಲಪಾತಕ್ಕೆ ಬಂದಿದ್ದು. ಸುಮಾರು ಮೂರು ಗಂಟೆಗಳ ಕಾಲ ಜಲಪಾತದ ಬಳಿ ಕೂತಿದ್ದ ಚೇತನ್ ಕುಮಾರ್. ರಾಣಿ ಫಾಲ್ಸ್ ಬಳಿ ಕುಳಿತುಕೊಳ್ಳುವುದು, ಮಲಗುವುದನ್ನು ಮಾಡುತ್ತಿದ್ದ. ದೂರದಿಂದ ಈತ ಇರುವುದು ಜನರಿಗೆ ಗೊತ್ತಾಗಿದೆ. ತಕ್ಷಣ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.

ಇದನ್ನೂ ಓದಿ : ಸಚಿವ ರಮೇಶ್ ಜಾರಕಿಹೊಳಿಗೆ 15 ದಿನ ಗಡುವು ನೀಡಿ ಪ್ರತಿಭಟನೆ ವಾಪಸ್ ಪಡೆದ ಪ್ರವಾಹ ಸಂತ್ರಸ್ತರು.!

ಪೊಲೀಸರು ಹಾಗೂ ಅಗ್ನಿಶಾಮಕ ಸಿಬ್ಬಂದಿ ಸ್ಥಳಕ್ಕೆ ತೆರಳಿ ಯುವಕನ ಮನವೊಲಿಸಿ ಮೇಲಕ್ಕೆ ಕರೆ ತಂದಿದ್ದಾರೆ. ನಂತರ ಜೋಗ ಠಾಣೆಗೆ ಯುವಕನನ್ನು ಕರೆದೊಯ್ದ ಪೊಲೀಸರು ವಿಚಾರಣೆ ನಡೆಸಿದರು.

ಕೊನೆ ಘಳಿಗೆಯಲ್ಲಿ ತನಗೆ ಜ್ಞಾನೋದಯವಾಯಿತು ನಾನು ಆತ್ಮಹತ್ಯೆ ಮಾಡಿಕೊಳ್ಳಬಾರದು ಎಂದು ಮನಸ್ಸಿಗೆ ಬಂದು ವಾಪಾಸ್ ಬಂದಿದ್ದೇನೆ ಎಂದು ಪೊಲೀಸರ ವಿಚಾರಣೆ ವೇಳೆ ತಿಳಿಸಿದ್ದಾನೆ. ಈತನ ಮನೆಯವರಿಗೆ ಪೊಲೀಸರು ವಿಷಯ ತಿಳಿಸಿದ್ದಾರೆ. ಯುವಕನನ್ನು ಸುರಕ್ಷಿತವಾಗಿ ಬೆಂಗಳೂರಿಗೆ ಕಳುಹಿಸುವ ತಯಾರಿ ನಡೆಸಿದ್ದಾರೆ.
Published by: G Hareeshkumar
First published: August 26, 2020, 8:52 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading