• Home
  • »
  • News
  • »
  • district
  • »
  • Banana Crop: ಸಮೃದ್ಧವಾಗಿ ಬೆಳೆದು ನಿಂತಿದ್ದ ಬಾಳೆ ಗಿಡಗಳು ಬೆಂಕಿಗೆ ಆಹುತಿ...!

Banana Crop: ಸಮೃದ್ಧವಾಗಿ ಬೆಳೆದು ನಿಂತಿದ್ದ ಬಾಳೆ ಗಿಡಗಳು ಬೆಂಕಿಗೆ ಆಹುತಿ...!

ಕರಗಲಾಗಿರುವ ಬಾಳೆ

ಕರಗಲಾಗಿರುವ ಬಾಳೆ

ಕಪ್ಪತ್ತಗುಡ್ಡದ ಅಂಚಿನಲ್ಲಿರು ಹುಲ್ಲುಗಾವಲು ಪ್ರದೇಶಕ್ಕೆ, ಹಚ್ಚಿರುವ ಬೆಂಕಿ ಪಕ್ಕದ ಜಮೀನಿನ ಬದುವಿಗೆ ನಿಂದ ಆಕಸ್ಮಿಕವಾಗಿ ಇವರ ಬಾಳೆ ತೋಟಕ್ಕೆ ತಾಕಿದೆ. 

  • Share this:

ಗದಗ (ಮಾ. 14):  ಜಿಲ್ಲೆ ಮುಂಡರಗಿ ತಾಲೂಕಿನ ಹಿರೇವಡ್ಡಟ್ಟಿ ಗ್ರಾಮದ ರೈತ ಮಹಿಳೆ ರೇಣುಕಾ ಬಾಳು ಬಂಗಾರವಾಗುತ್ತೇ ಎನ್ನುವ ದೃಷ್ಟಿಯಿಂದ ಲಕ್ಷಾಂತರ ರೂಪಾಯಿ ಖರ್ಚು ಮಾಡಿ ಬಾಳೆ ಬೆಳೆದಿದ್ದಾಳೆ.  ಕಷ್ಟಪಟ್ಟು ಬೆವರು ಸುರಿಸಿ ಬಂಗಾರದಂತಹ ಬಾಳೆ ಫಸಲು ಇನ್ನೇನು ಕೈ ಸೇರಲಿತ್ತು.  ಆದ್ರೆ ವಿಧಿಯಾಟವೇ ಬೇರೆಯಾಗಿದೆ‌. ಸಮೃದ್ಧವಾಗಿ ಬೆಳೆದು ಕಟಾವು ಹಂತಕ್ಕೆ ಬಂದು ನಿಂತಿದ್ದ ಬಾಳೆಗೆ ಆಕಸ್ಮಿಕವಾಗಿ ಬೆಂಕಿ ಬಿದ್ದ ಪರಿಣಾಮ ಆರು ಎಕರೆಯಲ್ಲಿ ಬೆಳದಿದ್ದ ಬೆಳೆ ಸಂಪೂರ್ಣವಾಗಿ ಸುಟ್ಟು ಭಸ್ಮವಾಗಿದೆ. ಹೀಗಾಗಿ ಬಾಳು ಬಂಗಾರ ಆಗುತ್ತೇ ಅಂದು ಕೊಂಡಿದ ಮಹಿಳೆಗೆ ಬರ ಸಿಡಿಲು ಬಡಿದಂತಾಗಿದೆ‌. ‌ಇಂದ್ರಿಂದ ಕಣ್ಣೀರನಲ್ಲಿ ಕೈ ತೊಳೆಯುತ್ತಿದ್ದಾಳೆ ರೈತ ಮಹಿಳೆ ರೇಣುಕಾ ಉಪ್ಪಾರ.


ಹೌದು ಆಕಸ್ಮಿಕವಾಗಿ ಹತ್ತಿಕೊಂಡಿದ್ದ ಬೆಂಕಿ ಬಾಳೆ ತೋಟವನ್ನೆ ಸರ್ವ ನಾಶ ಮಾಡಿದೆ. ಹಿರೇವಡ್ಡಟ್ಟಿ ಗ್ರಾಮದ ನಿವಾಸಿಯಾದ ರೇಣುಕಾ ಉಪ್ಪಾರ ಎನ್ನುವವರಿಗೆ ಆರು ಎಕರೆ ಜಮೀನಿನಲ್ಲಿ ಬೆಳೆದ ಬಾಳೆ ಸುಟ್ಟು ಭಸ್ಮವಾಗಿದೆ. ಈ ಹಿಂದೆ ಒಣ ಬೇಸಾಯ ಮಾಡ್ತಾಯಿದ್ದ ಈ ರೈತ ಕುಟುಂಬ ಕಳೆದ ವರ್ಷದಿಂದ ಬಾಳೆ ತೋಟವನ್ನು ಮಾಡಿಕೊಂಡು ಜೀವನ ನಡೆಸುತ್ತಿದ್ದರು. ಈ ಭಾರಿ ಬಾಳೆ ಕಟಾವಿಗೆ ಬಂದಿದ್ದು, ಇನ್ನೆನ್ನೂ ಕಟಾವು ಮಾಡಬೇಕು ಅಂತಾ ಲೆಕ್ಕಾಚಾರದಲ್ಲಿದ್ದಾಗ ಆಕಸ್ಮಿಕವಾಗಿ ಬೆಂಕಿಗೆ ಆಹುತಿಯಾಗಿದೆ. plಬೆಂಕಿ‌ಯ ಕಿಡಿ ನೋಡು ನೋಡುವಷ್ಟರಲ್ಲಿಯೇ ಮುಗಿಲೆತ್ತರಕ್ಕೆ ಅಬ್ಬರಿಸಿ ಇಡೀ ಬಾಳೆ ತೋಟವನ್ನ ಸುತ್ತುವರೆದು ಸುಟ್ಟು ಭಸ್ಮ ಮಾಡಿದೆ.


ಸ್ಥಳಕ್ಕೆ ಅಗ್ನಿಶಾಮಕ ಸಿಬ್ಬಂದಿ ದೌಡಾಯಿಸಿ ಬೆಂಕಿಯನ್ನ ನಂದಿಸಿದ್ದಾದರೂ ಪ್ರಯೋಜನವಾಗಿಲ್ಲ.  ರೈತನ ಧರ್ಮಪತ್ನಿ ರೇಣುಕಾ, ಬಾಳೆ ಗಿಡಗಳನ್ನು ನನ್ನ ಮಕ್ಕಳಿಗಿಂತಲೂ ಹೆಚ್ಚಾಗಿ ಸಾಕಿದ್ದ ಆದರೆ ಅವೆಲ್ಲವೂ ಕಣ್ಮುಂದೆಯೇ ಸುಟ್ಟು ಹೋದದ್ದು ನೋಡಿದ್ರೆ ಜೀವನವೇ ಬೇಡ ಅನ್ನಿಸುತ್ತೆ. ಈ ವ್ಯವಸಾಯ ಬೇಡವೇ ಬೇಡ..ಎಲ್ಲಾದರೂ ಕೂಲಿ ಮಾಡಿ‌ ಬದುಕುತ್ತೇವೆ ಅಂತಾ ಕಣ್ಣೀರು ಹಾಕ್ತಿದ್ದಾರೆ.


ಇದನ್ನು ಓದಿ: KGF ಕುಟುಂಬದ ಪಾರ್ಟಿ; ಇದು ಮುಗಿಯದ ಪಯಣ ಎಂದ ಪ್ರಶಾಂತ್​ ನೀಲ್​​


ಇನ್ನು ಬಾಳೆ ಬೆಳೆ ಜೊತೆಗೆ ಹನಿ‌ ನೀರಾವರಿಗೆ ಅಳವಡಿಸಿದ್ದ ಪೈಪ್ ಲೈನ್ ಸಂಪರ್ಕ ಸಹ ಸಂಪೂರ್ಣ ಸುಟ್ಟು ನಾಶವಾಗಿದೆ. ಬಾಳೆಯಿಂದ ಬಂದ ಒಣಕಸವನ್ನ ಅಪಾರ ಪ್ರಮಾಣದಲ್ಲಿ ಒಂದೆಡೆ ಸೇರಿಸಿದ್ದ ರೈತ, ಸಾವಯವ ಗೊಬ್ಬರಕ್ಕೆ ತಯಾರಿ‌ ನಡೆಸಿದ್ರು. ಬೆಂಕಿಯ ಕೆನ್ನಾಲೆಗೆ ಅದೆಲ್ಲವೂ ಬೂದಿಯಾಗಿದೆ. ಕರೊನಾದಿಂದ ಮೊದಲನೇ ಬೆಳೆಯಲ್ಲಿ‌ ನಷ್ಟ ಅನುಭವಿಸಿದ್ದ ರೈತ ಬಸವಣ್ಣೆಪ್ಪ ಈ ಬೆಳೆಯಲ್ಲಾದ್ರೂ ಲಾಭ ಕಂಡುಕೊಳ್ಳೊಣ ಅಂತ 50 ಕ್ಕೂ ಹೆಚ್ಚು ಟ್ರಿಪ್ ಸಗಣಿ ಗೊಬ್ಬರ, 25 ಕ್ಕೂ ಹೆಚ್ಚು ರಾಸಾಯನಿಕ ಗೊಬ್ಬರದ ಜೊತೆಗೆ ಸಮೃದ್ಧ ಬಾಳೆ ಬೆಳೆಗೆ ಏನೆಲ್ಲ ಬೇಕು ಎಲ್ಲವನ್ನೂ ಧಾರೆಯೆರೆದಿದ್ರೂ. ಆದರೆ ಅದೆಲ್ಲವೂ ಈಗ ಹೋಮ ಮಾಡಿದಂತೆ ಆಗಿದೆ. ಇದ್ರಿಂದ ರೈತನಿಗೆ 25-30 ಲಕ್ಷಕ್ಕೂ ಹೆಚ್ಚು ನಷ್ಟವಾಗಿದ್ದು ಬೇರೆ ಆದಾಯವಿಲ್ಲದ ನಮ್ಮ ಕುಟುಂಬಕ್ಕೆ ವ್ಯವಸಾಯವೇ ಆಧಾರ. ಆದರೆ ಈ ರೀತಿಯ ನೋವು ಯಾರಿಗೂ ಬೇಡ‌ ಅಂತ ಸರ್ಕಾರದ ಪರಿಹಾರಕ್ಕೆ ಅಂಗಲಾಚುತ್ತಿದ್ದಾನೆ.


ಒಟ್ಟಾರೆ ಉತ್ಸಾಹದಿಂದ ಕೃಷಿ ಮಾಡುತ್ತಿದ್ದ ಕುಟುಂಬಕ್ಕೆ ಇದೀಗ ಈ ಘಟನೆ ಸಿಡಿಲು ಬಡಿದಂತಾಗಿದೆ. ಇನ್ನಾದ್ರೂ ಸಂಬಂಧಪಟ್ಟ‌ ಇಲಾಖಾಧಿಕಾರಿ ವರ್ಗ ಆಗಿರೋ ಅನಾಹುತಕ್ಕೆ ಆದಷ್ಟು ಬೇಗ ಪರಿಹಾರ ನೀಡಲಿ. ಬೆಂಕಿ‌ ಅವಘಡದಿಂದ ವ್ಯವಸಾಯವೇ ಬೇಡ ಅಂತಿರೋ ಕುಟುಂಬಕ್ಕೆ ಆತ್ಮಸ್ಥೈರ್ಯ ತುಂಬಿ ಅನ್ನದಾತನ ಬಾಳಿಗೆ ಆಶಾಕಿರಣವಾಗಬೇಕಿದೆ.


(ವರದಿ: ಸಂತೋಷ ಕೊಣ್ಣೂರ)

Published by:Seema R
First published: