ಭಟ್ಕಳದ ಜೆಎಂಎಫ್​ಸಿ ನ್ಯಾಯಾಲಯದಲ್ಲಿ ಬೆಂಕಿ; ದಾಖಲಾತಿಗಳು, ಲಕ್ಷಾಂತರ ಮೌಲ್ಯದ ವಸ್ತುಗಳು ಸುಟ್ಟು ಭಸ್ಮ

ಇನ್ನು ಸ್ಥಳಕ್ಕೆ ಹಿರಿಯ ಸಿವಿಲ್ ನ್ಯಾಯಾಧೀಶ ಜಗದೀಶ ಶಿವಪೂಜಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.  ಘಟನೆ ಸಂಬಂಧ ಭಟ್ಕಳ ನಗರ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.

ಬೆಂಕಿಗಾಹುತಿಯಾಗಿರುವ ನ್ಯಾಯಾಲಯ

ಬೆಂಕಿಗಾಹುತಿಯಾಗಿರುವ ನ್ಯಾಯಾಲಯ

 • Share this:
  ಕಾರವಾರ(ಜು.02): ಭಟ್ಕಳದ ಜೆಎಂಎಫ್​​ಸಿ ನ್ಯಾಯಾಲಯದಲ್ಲಿ ಬೆಂಕಿ ಕಾಣಿಸಿಕೊಂಡಿರುವ ಘಟನೆ ಇಂದು ಮುಂಜಾನೆ ನಡೆದಿದೆ. ಉತ್ತರ ಕನ್ನಡ ಜಿಲ್ಲೆಯ ಭಟ್ಕಳದಲ್ಲಿರುವ ಜೆ.ಎಂ.ಎಫ್​.ಸಿ ನ್ಯಾಯಾಲಯದಲ್ಲಿ  ಬೆಂಕಿ ಅವಘಡ ನಡೆದಿದೆ.

  ನಸುಕಿನ ವೇಳೆ ಶಾರ್ಟ್ ಸರ್ಕ್ಯೂಟ್​​ನಿಂದ ಈ ಘಟನೆ ನಡೆದಿದೆ ಎಂದು ತಿಳಿದು ಬಂದಿದೆ. ಬೆಂಕಿಯ ಕೆನ್ನಾಲಿಗೆಗೆ  ನ್ಯಾಯಾಲಯದಲ್ಲಿದ್ದ ವಸ್ತುಗಳು ಸುಟ್ಟು ಕರಕಲಾಗಿವೆ. ಜೊತೆಗೆ  ಅಪಾರ ಪ್ರಮಾಣದ ದಾಖಲಾತಿಗಳು ಸುಟ್ಟು ಭಸ್ಮವಾಗಿವೆ.

  ವಿಷಯ ತಿಳಿದ ಕೂಡಲೇ  ಅಗ್ನಿಶಾಮಕ ಸಿಬ್ಬಂದಿ ಸ್ಥಳಕ್ಕೆ ಆಗಮಿಸಿ ಬೆಂಕಿ ನಂದಿಸುವ ಕಾರ್ಯದಲ್ಲಿ ತೊಡಗಿದ್ದರು. ಸದ್ಯ ಬೆಂಕಿಯನ್ನು ನಂದಿಸಲಾಗಿದೆ.

  ನ್ಯಾಯಾಲಯದ ಕಟ್ಟಡ ಹಂಚಿನದಾಗಿದ್ರಿಂದ ಹೆಚ್ಚು ಹಾನಿಯಾಗಿದೆ. ಪ್ರಮುಖ ಕಡತಗಳು ಬೆಂಕಿಗಾಹುತಿಯಾದ ಬಗ್ಗೆ ಶಂಕೆ ವ್ಯಕ್ತವಾಗಿದೆ.  ಹತ್ತಾರು ಕಂಪ್ಯೂಟರ್ ಗಳು ಬೆಂಕಿಗಾಹುತಿಯಾಗಿವೆ.  ಕಳೆದ ಎರಡು ದಿನದಿಂದ ಮಳೆ ಪ್ರಮಾಣ ಕಡಿಮೆ ಇದ್ರಿಂದ ಬೆಂಕಿಯ ತೀವ್ರತೆ ಹೆಚ್ಚಾಗಿ ಅತೀ ಹೆಚ್ಚು ಹಾನಿಯಾಗಿದೆ. ಲಕ್ಷಾಂತರ ಮೌಲ್ಯದ ಪಿಠೋಪಕರಣ ನಾಶವಾಗಿದೆ.

  ಇದನ್ನೂ ಓದಿ:ಇದ್ದುದರಲ್ಲೇ ಸಂಸಾರ ತೂಗಿಸಿಕೊಂಡು ಹೋಗುವ ಗೃಹಿಣಿಯರಿಗೆ ಹಣ ಉಳಿಸುವ ಟಿಪ್ಸ್​​ ಇಲ್ಲಿವೆ..!

  ಹಳೆಕಾಲದ ಕಟ್ಟಡವಾಗಿದ್ದರಿಂದ ಬೆಂಕಿಯ ಕೆನ್ನಾಲಿಗೆಗೆ ಕಟ್ಟಡದ ಮುಂಭಾಗ ಚಾವಣಿ ಬೆಂಕಿಗಾಹುತಿಯಾಗಿದೆ. ಮುಂಜಾನೆ 4 ಗಂಟೆಗೆ ಈ ಘಟನೆ ನಡೆದಿದೆ. ಒಂದು ತಾಸು ಕಾರ್ಯಾಚರಣೆ ಬಳಿಕ ಬೆಂಕಿ ತಹಬದಿಗೆ ಬಂದಿದೆ.

  ಇನ್ನು ಸ್ಥಳಕ್ಕೆ ಹಿರಿಯ ಸಿವಿಲ್ ನ್ಯಾಯಾಧೀಶ ಜಗದೀಶ ಶಿವಪೂಜಿ ಭೇಟಿ ನೀಡಿದ್ದಾರೆ. ಜೊತೆಗೆ ಸುನೀಲ್ ನಾಯ್ಕ್ ಭೇಟಿ ಪರಿಶೀಲನೆ ನಡೆಸಿದ್ದಾರೆ. ಘಟನೆ ಸಂಬಂಧ ಭಟ್ಕಳ ನಗರ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.

  (ವರದಿ: ದರ್ಶನ್​ ನಾಯ್ಕ್)
  Published by:Latha CG
  First published: