ಉಡುಪಿ ಜಿಲ್ಲಾಧಿಕಾರಿ ಜಗದೀಶ್, 9 ಪಿಡಿಒಗಳ ವಿರುದ್ದ FIR ದಾಖಲು; ಮತ್ತೊಮ್ಮೆ ಮುನ್ನೆಲೆಗೆ ಬಂದ ಬೆಳ್ಳಿ ಕಿರೀಟ, ಗದೆ ನೀಡಿದ ಬೀಳ್ಕೊಡುಗೆ

ಆರ್ ಟಿ ಐ ಕಾರ್ಯಕರ್ತ ನಾರಾಯಣಸ್ವಾಮಿ ಇದೇ ವಿಚಾರಕ್ಕೆ  ಕೋಲಾರ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ಮೊರೆ ಹೋಗಿ ಭ್ರಷ್ಟಾಚಾರ ನಿಗ್ರಹ ದಳದಿಂದ ತನಿಖೆ ನಡೆಸಲು‌ ದೂರು ದಾಖಲು ಮಾಡಿದ್ದರು. 

news18-kannada
Updated:July 1, 2020, 12:13 PM IST
ಉಡುಪಿ ಜಿಲ್ಲಾಧಿಕಾರಿ ಜಗದೀಶ್, 9 ಪಿಡಿಒಗಳ ವಿರುದ್ದ FIR ದಾಖಲು; ಮತ್ತೊಮ್ಮೆ ಮುನ್ನೆಲೆಗೆ ಬಂದ ಬೆಳ್ಳಿ ಕಿರೀಟ, ಗದೆ ನೀಡಿದ ಬೀಳ್ಕೊಡುಗೆ
ಬೀಳ್ಕೊಡುಗೆ ವೇಳೆ ಬೆಳ್ಳಿ ಕಿರೀಟ ಮತ್ತು ಗದೆ ಕೊಟ್ಟಿರುವ ದೃಶ್ಯ
  • Share this:
ಕೋಲಾರ(ಜು.01): ಕೋಲಾರ ಜಿಲ್ಲಾ ಪಂಚಾಯಿತಿ ಸಿಇಓ ಆಗಿ ದಕ್ಷ ಅಧಿಕಾರಿ ಎಂದೇ ಗುರುತಿಸಿಕೊಂಡಿದ್ದ, ಈಗಿನ ಉಡುಪಿ ಜಿಲ್ಲಾಧಿಕಾರಿ ಜಗದೀಶ್ ಅವರ ಮೇಲೆ ಕೋಲಾರ ಎಸಿಬಿಯಲ್ಲಿ ದೂರು ದಾಖಲಾಗಿದೆ.  ಸಿಇಓ ಸ್ಥಾನದಿಂದ ಜಿಲ್ಲಾಧಿಕಾರಿಯಾಗಿ ವರ್ಗಾವಣೆ ಬಳಿಕ, ಜಿಲ್ಲೆಯ ಪಿಡಿಓಗಳ ಸಂಘ ಹಾಗೂ ಇತರೆ ಅಧಿಕಾರಿಗಳು ಆಯೋಜಿಸಿದ್ದ ಬೀಳ್ಕೊಡುಗೆ ಕಾರ್ಯಕ್ರಮದಲ್ಲಿ ಕಾನೂನು ಬಾಹಿರವಾಗಿ ಉಡುಗೊರೆಯನ್ನು ಸ್ವೀಕರಿಸಿದ ಆರೋಪ ಇದಾಗಿದೆ.

2019ನೇ ವರ್ಷದ ಆಗಸ್ಟ್ 23 ರಂದು ಕೋಲಾರ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ವಿವಿಧ ಪಂಚಾಯಿತಿ ಪಿಡಿಓ‌ಗಳು, ಇಒ ಸೇರಿದಂತೆ ಹಲವರು ಜಗದೀಶ್ ರವರಿಗೆ ಬೆಳ್ಳಿಯ ಗದೆ, ಕಿರೀಟ ಚಿನ್ನದ ಉಂಗುರವನ್ನು ನೀಡಿ ಸನ್ಮಾನಿಸಿ ಬೀಳ್ಕೊಟ್ಟಿದ್ದು ವಿವಾದಕ್ಕೆ ಕಾರಣವಾಗಿತ್ತು. ಅಧಿಕಾರಿಗಳು ಅಕ್ರಮವಾಗಿ ಹಣ ಸಂಗ್ರಹಿಸಿ ವಸ್ತುಗಳನ್ನ ಕೊಂಡು ತಂದಿದ್ದಾಗಿ ಕಳೆದ ವರ್ಷವೇ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ಟೀಕೆಗಳು‌ ಕೇಳಿಬಂದಿದ್ದವು. ಬಳಿಕ ಪಿಡಿಓ ಜಿಲ್ಲಾ ಸಂಘದ ಅಧ್ಯಕ್ಷ್ಯ ಸಂಪರಾಜ್ ಪತ್ರಿಕಾಗೋಷ್ಠಿ ನಡೆಸಿ‌ ಉಡುಗೊರೆಯಾಗಿ ನೀಡಿದ ವಸ್ತುಗಳು‌ ಅಸಲಿಯದ್ದಲ್ಲ. ಬದಲಾಗಿ ಬಾಡಿಗೆಗೆ ತಂದಿದ್ದು ಎಂದು ಸಮಜಾಯಿಷಿ ನೀಡಿದ್ದರು.

ಆದರೀಗ ಆರ್ ಟಿ ಐ ಕಾರ್ಯಕರ್ತ ನಾರಾಯಣಸ್ವಾಮಿ ಇದೇ ವಿಚಾರಕ್ಕೆ  ಕೋಲಾರ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ಮೊರೆ ಹೋಗಿ ಭ್ರಷ್ಟಾಚಾರ ನಿಗ್ರಹ ದಳದಿಂದ ತನಿಖೆ ನಡೆಸಲು‌ ದೂರು ದಾಖಲು ಮಾಡಿದ್ದರು. ಇದೀಗ ನ್ಯಾಯಾಲಯ ವಿಚಾರಣೆ ನಂತರ ಜಗದೀಶ್ ಸೇರಿದಂತೆ, ಕಾರ್ಯಕ್ರಮ ಆಯೋಜನೆ ಮಾಡಿದ್ದ ಅಧಿಕಾರಿಗಳ ಮೇಲೆ  ಕೋಲಾರ ಭ್ರಷ್ಟಾಚಾರ ನಿಗ್ರಹ ದಳದಲ್ಲಿ ದೂರು‌ ದಾಖಲಿಸಲು ಕೋರ್ಟ್ ಆದೇಶಿಸಿದೆ. ಅದರಂತೆ ದೂರು‌ ದಾಖಲಾಗಿದೆ.

ಚಾಮರಾಜನಗರದ ಕೋವಿಡ್ ಪ್ರಯೋಗಾಲಯ ಸೀಲ್​ಡೌನ್​; ವರದಿ ವಿಳಂಬದಿಂದ ಶಂಕಿತರಲ್ಲಿ ಆತಂಕ

9 ಪಿಡಿಓಗಳು, ಓರ್ವ ತಾಲೂಕು ಪಂಚಾಯ್ತಿ ಇಒ  ವಿರುದ್ದ ದೂರು ದಾಖಲು,

ಕೋಲಾರ ಜಿಲ್ಲೆಯ ಹಿಂದಿನ ನಿರ್ಗಮಿತ ಜಿಲ್ಲಾ ಪಂಚಾಯಿತಿ ಸಿಇಒ ಜಗದೀಶ್ ರವರಿಗೆ ಬೀಳ್ಕೊಡುಗೆ ಕಾರ್ಯಕ್ರಮ ಆಯೊಜಿಸಿದ್ದ ಪಿಡಿಒಗಳಾದ,  ಕೆ.ಮಹೇಶ್‌ಕುಮಾರ್, ಪಿ.ನಾರಾಯಣಪ್ಪ, ಎಂ.ರಾಮಕೃಷ್ಣ, ವಿ.ಶಂಕರ್, ಎನ್.ಸಂಪರಾಜ್, ಎಸ್.ಜಿ.ಹರೀಶ್ ಕುಮಾರ್, ಎಂ.ಸೋಮಶೇಖರ್, ಅಶ್ವತ್ಥ ನಾರಾಯಣ, ಎಂ.ಸುರೇಶ್‌ಕುಮಾರ್ ಹಾಗೂ ಶ್ರೀನಿವಾಸಪುರ ತಾಪಂ  ಇಒ ಎಸ್.ಆನಂದ್ ವಿರುದ್ಧ  ಎಸಿಬಿಯು ಐಪಿಸಿ ಕಲಂ 465, 467, 468 472ರ ಅನ್ವಯ ಎಫ್‌ಐಆರ್ ದಾಖಲಾಗುತ್ತಿದ್ದಂತೆ,  ಇದೀಗ ಪ್ರಕರಣ ಮತ್ತೆ ಮುನ್ನಲೆಗೆ ಬಂದಂತಾಗಿದೆ.
ಒಟ್ಟಿನಲ್ಲಿ ಕಾರ್ಯಕ್ರಮದಲ್ಲಿ ಬಳಸಿದ‌ ಬೆಳ್ಳಿ ವಸ್ತುಗಳು ಅಸಲಿಯದ್ದಲ್ಲ ಎಂದು‌ ಈ ಹಿಂದೆಯೆ ಹೇಳಿಕೆ ನೀಡಿರುವ ಪಂಚಾಯಿತಿ ಅಧಿಕಾರಿಗಳು, ಇದೀಗ ತ‌ನಿಖೆ ಎದುರಿಸುವುದಾಗಿ ತಿಳಿಸಿದ್ದಾರೆ.
First published:July 1, 2020
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading