ಬಂಡೀಪುರ ರಾಷ್ಟ್ರೀಯ ಹುಲಿ ಸಂರಕ್ಷಿತ ಪ್ರದೇಶದಲ್ಲಿ ರಾತ್ರಿ ಸಫಾರಿ ಮಾಡಿ, ಪರಿಸರ ಪ್ರೇಮಿಗಳ ಆಕ್ರೋಶಕ್ಕೆ ಗುರಿಯಾಗಿದ್ದ ನಟ ಧನ್ವೀರ್ ,ಈಗ ಮತ್ತೊಮ್ಮೆ ಸಂಕಷ್ಟಕ್ಕೆ ಸಿಲುಕಿದ್ದಾರೆ. ಅರಣ್ಯ ಕಾಯ್ದೆ ಉಲ್ಲಂಘಿಸಿದ ಆರೋಪದ ಮೇಲೆ ಈಗ ಬಜಾರ್ ಚಿತ್ರದ ನಾಯಕ ನಟ ಧನ್ವೀರ್ ಗೌಡ ಮೇಲೆ ಎಫ್‌ಐಆರ್ ದಾಖಲಾಗಿದೆ. ಎಫ್‌ಐಆರ್ ಮಾಡಲಾಗಿರುವ ಪ್ರಕರಣಕ್ಕೂ ಬಂಡೀಪುರದಲ್ಲಿ ರಾತ್ರಿ ಸಫಾರಿ ಮಾಡಿದ್ದಪ್ರಕರಣಕ್ಕೂ ಯಾವುದೇ ಸಂಬಂಧವಿಲ್ಲ. ನಾಗರಹೊಳೆ ರಾಷ್ಟ್ರೀಯ ಉದ್ಯಾನವನದ ನಿರ್ದೇಶಕರ ಸೂಚನೆ ಮೇರೆಗೆ ಎಫ್‌ಐಆರ್ ಮಾಡಲಾಗಿದ್ದು, ನಟ ಧನ್ವೀರ್ ಸೇರಿದಂತೆ 6 ಮಂದಿ ವಿರುದ್ದ ಇದೀಗ ಅರಣ್ಯ ಇಲಾಖೆಯಲ್ಲಿ ದೂರು ದಾಖಲಾಗಿದೆ. ನಟ ಧನ್ವೀರ್ ಈ ಪ್ರಕರಣದಲ್ಲಿ ಪ್ರಮುಖ ಆರೋಪಿಯಾಗಿದ್ದು, ಧನ್ವೀರ್ ಜೊತೆ ಗಿದ್ದ 5 ಮಂದಿ ಸೇಹ್ನಿತರಿಗೂ ಇದೀಗ ಸಂಕಷ್ಟ ಎದುರಾಗಿದೆ. ಸ್ಟಾರ್‌ಗಿರಿ ಕಾಡುಪ್ರಾಣಿಗಳ ಮುಂದೆ ನಡೆಯೋಲ್ಲ ಅಂತ ಅರಣ್ಯ ಇಲಾಖೆ ಪರೋಕ್ಷ ಸಂದೇಶ ನೀಡಿದೆ. ಹೌದು, ನಟ ಧನ್ವೀರ್ ಆನೆ ಮೇಲೆ ಕುಳಿತು ದರ್ಬಾರ್ ತೋರಿದಕ್ಕೆ ಅರಣ್ಯಾಧಿಕಾರಿಗಳು ಪ್ರಕರಣ ದಾಖಲಿಸಿದ್ದಾರೆ.
ಸೆಪ್ಟೆಂಬರ್ ತಿಂಗಳಿನ 27ರಂದು ಮತ್ತಿಗೂಡು ಆನೆ ಶಿಬಿರಕ್ಕೆ ಭೇಟಿ ನೀಡಿದ್ದ ನಟ ಧನ್ವೀರ್ ಹಾಗೂ ಗೆಳೆಯರು, ಅಲ್ಲಿನ ಆನೆಗಳನ್ನ ಕಂಡು ಅವುಗಳ ಮೇಲೆ ಏರಿ ಕುಳಿತು ಪೋಟೋ ವಿಡಿಯೋಗೆ ಪೋಸ್ ಕೊಟ್ಟಿದ್ದರು. ಈ ಘಟನೆಯನ್ನ ಗಂಭೀರವಾಗಿ ಪರಿಗಣಿಸಿರುವ ಅರಣ್ಯ ಇಲಾಖೆ ನಟ ಧನ್ವೀರ್ ಮೇಲೆ ಅರಣ್ಯ ಕಾಯ್ದೆ ಉಲ್ಲಂಘನೆ ಆರೋಪದ ಮೇಲೆ ಎಫ್‌ಐಆರ್ ದಾಖಲು ಮಾಡಿದೆ.
View this post on Instagram
ಈ ಕುರಿತು ಪತ್ರಿಕಾ ಪ್ರಕಟಣೆ ನೀಡಿರುವ ನಾಗರಹೊಳೆ ರಾಷ್ಟ್ರೀಯ ಉದ್ಯಾನವನದ ನಿರ್ದೇಶಕರಾದ ಮಹೇಶ್ ಅವರು ಘಟನೆ ಬಗ್ಗೆ ಸ್ಪಷ್ಟನೆ ನೀಡಿದ್ದಾರೆ. ಪ್ರಕಟಣೆಯಲ್ಲಿ ಚಿತ್ರರಂಗದ ತಾರೆಯರು ಎಂದು ಹೇಳಿಕೊಂಡು ಆನೆ ಚೌಕೂರು ವನ್ಯಜೀವಿ ವಲಯಕ್ಕೆ ಅತಿಕ್ರಮ ಪ್ರವೇಶ ಮಾಡಿರುವ ಧನ್ವೀರ್ ಹಾಗೂ ಅವರ ಗೆಳೆಯರ ಮೇಲೆ ಅರಣ್ಯ ಕಾಯ್ದೆ ಉಲ್ಲಂಘಿಸಿದ ಆರೋಪದ ಮೇಲೆ ವನ್ಯಜೀವಿ ಸಂರಕ್ಷಣ ಕಾಯ್ದೆ 1972 ಅಡಿಯಲ್ಲಿ ಅರಣ್ಯ ಮೊಕದ್ದಮ್ಮೆ ದಾಖಲು ಮಾಡಲಾಗಿದೆ ಎಂದು ತಿಳಿಸಿದ್ದಾರೆ.
View this post on Instagram
ಇದನ್ನೂ ಓದಿ: ರಾತ್ರಿ ಫೋನ್ ಮಾಡಿ ಎರಡು ಗಂಟೆ ಜಗ್ಗೇಶ್ ಜೊತೆ ಮಾತನಾಡಿದ ಯುವರತ್ನ ನಿರ್ದೇಶಕ ಸಂತೋಷ್ ಆನಂದ್ ರಾಮ್
6 ಪ್ರಮುಖ ಆರೋಪಗಳ ಮೇಲೆ ಎಫ್‌ಐಆರ್ ದಾಖಲು ಮಾಡಿದ್ದು ಘಟನೆಯಲ್ಲಿ ಧನ್ವೀರ್ ಗೆ ಸಹಕರಿಸಿದ ಎಲ್ಲ ಅರಣ್ಯ ಇಲಾಖೆ ಸಿಬ್ಬಂದಿಗೆ ನೋಟಿಸ್ ನೀಡಲಾಗಿದೆ. ಆ ಸಂದರ್ಭದಲ್ಲಿ ಸ್ಥಳದಲ್ಲಿದ್ದ ಆನೆ ಮಾವುತ, ಕಾವಾಡಿ ಹಾಗು ಉಸ್ತುವಾರಿ ಸಿಬ್ಬಂದಿಗಳಿಗೆ ಕಾರಣ ಕೇಳಿ ನೋಟಿಸ್ ನೀಡಿದ್ದು, ಶೀಘ್ರದಲ್ಲೆ ಉತ್ತರಿಸುವಂತೆ ಸೂಚಿಸಲಾಗಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ