ಕುಂದಾಪುರದ ಫೈನಾನ್ಷಿಯರ್ ಕೊಲೆ; ಯುವಕನ ಡ್ರೀಮ್ಸ್​ಗೆ ಕೊಳ್ಳಿ ಇಟ್ಟನೇ ಸ್ನೇಹಿತ?

ಕುಂದಾಪುರದ ಕೋಟೇಶ್ವರ ಸಮೀಪ ಕಳೆದ ಐದು ವರ್ಷದಿಂದ ಡ್ರೀಮ್ಸ್ ಎಂಬ ಫೈನಾನ್ಸ್ ಕಂಪನಿ ನಡೆಸುತ್ತಿದ್ದ ಅಜೇಂದ್ರ ಶೆಟ್ಟಿ ತನ್ನ ಕಚೇರಿಯಲ್ಲೇ ಬರ್ಬರವಾಗಿ ಕೊಲೆಯಾಗಿದ್ದಾನೆ. ಈತನ ವ್ಯಾವಹಾರಿಕ ಜೊತೆಗಾರನೇ ಹತ್ಯೆಗೈದಿರುವ ಶಂಕೆ ಇದೆ.

ಕೊಲೆಯಾದ ಅಜೇಂದ್ರ ಶೆಟ್ಟಿ

ಕೊಲೆಯಾದ ಅಜೇಂದ್ರ ಶೆಟ್ಟಿ

  • Share this:
ಉಡುಪಿ: ಲಾಕ್ ಡೌನ್ ಮುಗಿಯುತ್ತಿದ್ದ ಹಾಗೆಯೇ ಉಡುಪಿ ಜಿಲ್ಲೆಯ ಕ್ರೈಂ ರೇಟ್ ಕೂಡ ಒಂದೇ ಸಮನೆ ಏರುತ್ತಿದೆ. ಒಂದರ ಹಿಂದೆ ಇನ್ನೊಂದು ಕೊಲೆ ನಡೆಯುತ್ತಿದೆ. ಜಿಲ್ಲೆಯ ಕುಂದಾಪುರ ತಾಲೂಕಿನ ಕೋಟೇಶ್ವರ ಸಮೀಪದ ಫೈನಾನ್ಸ್ ಮಾಲಕನೊಬ್ಬ ಭೀಕರ ರೀತಿಯಲ್ಲಿ ಕೊಲೆಯಾಗಿದ್ದಾನೆ. ತನ್ನದೇ ಫೈನಾನ್ಸ್ ನಲ್ಲಿ ಸೋಫಾಮೇಲೆ ಕುಳಿತವನು ಕತ್ತುಸೀಳಿ ಹಾಕಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾನೆ. ಮೃತ ಅಜೇಂದ್ರ ಶೆಟ್ಟಿ, ಕುಂದಾಪುರ ತಾಲೂಕಿನ ಕೋಟೇಶ್ವರ ಸಮೀಪದ ಕಾಳಾವರ ಎಂಬಲ್ಲಿ ಫೈನಾನ್ಸ್ ವ್ಯವಹಾರ ನಡೆಸುತ್ತಿದ್ದ. ಯಡಾಡಿ ಮತ್ಯಾಡಿ ಕೂಡಲ್ ನಿವಾಸಿಯಾದ ಈತ ಫೈನಾನ್ಸ್ ವ್ಯವಹಾರದಲ್ಲಿ ಉತ್ತಮ ಪ್ರಗತಿ ಕಂಡಿದ್ದ. ಡ್ರೀಮ್ ಫೈನಾನ್ಸ್ ಎನ್ನುವ ಆರ್ಥಿಕ ವ್ಯವಹಾರದ ಸಂಸ್ಥೆಯನ್ನು ಅಜೇಂದ್ರ ಶೆಟ್ಟಿ ಹಾಗೂ ಮೊಳಹಳ್ಳಿ ಮೂಲದ ಅನುಪ್ ಶೆಟ್ಟಿ ಪಾಲುದಾರಿಕೆಯೊಂದಿಗೆ ಕಳೆದ ಐದು ವರ್ಷಗಳಿಂದ ನಡೆಸುತ್ತಿದ್ದರು‌. ಸಾಮಾನ್ಯವಾಗಿ ರಾತ್ರಿ 9 ಗಂಟೆಗೆ ಮನೆ ಸೇರುತ್ತಿದ್ದ ಅಜೇಂದ್ರ ಮೊನ್ನೆ (ಶುಕ್ರವಾರ) ಮಾತ್ರ ತಡರಾತ್ರಿಯಾದರೂ ಮನೆಗೆ ಬಂದಿರಲಿಲ್ಲ.‌ ಹೆದರಿದ ಮನೆಯವರು, ಸ್ನೇಹಿತರು ಹುಡುಕಾಟ ‌ನಡೆಸಿದ್ದಾರೆ. ಅಜೇಂದ್ರ ಸಹೋದರ ಮಹೇಂದ್ರ ಶೆಟ್ಟಿ, ಸ್ನೇಹಿತರಾದ ರಕ್ಷಿತ್, ಜಯಕರ ಹಾಗೂ ಪ್ರಥ್ವೀಷ್ ಹುಡುಕಾಡುತ್ತಾ ಕಾಳಾವರದ ಫೈನಾನ್ಸ್’ಗೆ ಬಂದಾಗ ಎದುರಿನ ಶೆಟರ್ ಮುಚ್ಚಿದ್ದು ಬೀಗ ಹಾಕಿರಲಿಲ್ಲ. ಅನುಮಾನಗೊಂಡು ಶಟರ್ ತೆರೆದು ಒಳಪ್ರವೇಶಿಸಿದಾಗ ಅಜೇಂದ್ರ ಶೆಟ್ಟಿ ರಕ್ತದ ಮಡುವಿನಲ್ಲೇ ಕುಳಿತ ಭಂಗಿಯಲ್ಲಿ ಕೊಲೆಯಾದ‌ ಸ್ಥಿತಿಯಲ್ಲಿ ಪತ್ತೆಯಾಗಿದ್ದಾನೆ.

ತಕ್ಷಣ ಕೋಟೇಶ್ವರ ಖಾಸಗಿ ಆಸ್ಪತ್ರೆಗೆ ಕರೆದೊಯ್ದರಾದರೂ ಪರೀಕ್ಷಿಸಿದ ವೈದ್ಯರು ಮೃತಪಟ್ಟಿರುವುದನ್ನು ಖಚಿತಪಡಿಸಿದ್ದಾರೆ. ಅಜೇಂದ್ರ ಅವರ ಕೆನ್ನೆ, ಕತ್ತು, ಕಾಲಿನ‌ ಭಾಗದಲ್ಲಿ ಇರಿದ ಗಾಯಗಳಾಗಿದೆ. ಹರಿತವಾದ ಆಯುಧ ಡ್ರ್ಯಾಗರ್​ನಿಂದ ಕತ್ತು ಸೀಳಲಾಗಿದೆ. ಕೊಲೆಯಾಗಿರುವ ಅಜೇಂದ್ರ ಶೆಟ್ಟಿ ಹಾಗೂ ಅನುಪ್ ಶೆಟ್ಟಿ ಶುಕ್ರವಾರ ರಾತ್ರಿ ಕಚೇರಿಯಲ್ಲಿ ಒಟ್ಟಿಗೆ ಇದ್ದರು. ಹಣಕಾಸು ವಿಚಾರದಲ್ಲಿ‌ ಮನಸ್ತಾಪ ನಡೆದು ಅನುಪ್ ಕೊಲೆ ಮಾಡಿರಬಹುದೆಂದು‌ ಅಂದಾಜಿಸಲಾಗಿದೆ. ಇದಕ್ಕೆ ಬಲವಾದ ಕಾರಣವೂ ಇದೆ. ಅನೂಪ್ ಹಣ ಕೊಡಲು ಬಾಕಿ ಇದೆ ಎಷ್ಟು ಕೇಳಿದರೂ ಕೊಡುತ್ತಿಲ್ಲ ಅಂತ ಮೃತ ಅಜೇಂದ್ರ ತನ್ನ ತಂದೆ ಹತ್ತಿರ ಎರಡು ದಿನದ ಹಿಂದೆ ಹೇಳಿಕೊಂಡಿದ್ದನಂತೆ. ಇದೇ ಕಾರಣಕ್ಕೆ ಅನೂಪ್ ಕೊಲೆ‌ ಮಾಡಿದ್ದಾನೆ ಅಂತ ಹೇಳಲಾಗುತ್ತಿದೆ.

ಇನ್ನು ಈ ಕೊಲೆ ಪೂರ್ವನಿಯೋಜಿತವಾಗಿತ್ತು ಎನ್ನುವುದಕ್ಕೆ ಹರಿತವಾದ ಆಯುಧ ಡ್ರ್ಯಾಗರ್ ಬಳಸಿರುವುದು ಪುಷ್ಟಿ ನೀಡುತ್ತಿದೆ. ಹಣಕಾಸಿನ ವಿಚಾರದ ಬಗ್ಗೆ ಹೇಳಿದ್ದ. ಆದರೆ ಮನಸ್ತಾಪದ ಬಗ್ಗೆ ಹೇಳಿಕೊಂಡಿರಲಿಲ್ಲ. ಈಗ ಆತನ ಪಾರ್ಟನರ್ ನನ್ನ ತಮ್ಮನನ್ನು ಕೊಲೆ ಮಾಡಿದ್ದಾ‌ನೆ. ಕೊಲೆಗೆ ಸಂಬಂಧಿಸಿದವರಿಗೆ ಕಠಿಣ ಶಿಕ್ಷೆ ಆಗಬೇಕು ಎಂದು ಅಜೇಂದ್ರ ಸಹೋದರ ಮಾಧ್ಯಮದ ಮುಂದೆ ಕಣ್ಣೀರು ಹಾಕಿದ್ದಾರೆ.

ಇದನ್ನೂ ಓದಿ: Corona Wave: ಬೆಂಗಳೂರಿನ ಒಂದೇ ಅಪಾರ್ಟ್ಮೆಂಟ್​ನಲ್ಲಿ 385 ಜನರ ಐಸೋಲೇಶನ್; ಇಡೀ ಬ್ಲಾಕ್ ಸೀಲ್ ಡೌನ್

ಅನುಪ್ ಶೆಟ್ಟಿಯ ಬುಲೆಟ್ ಬೈಕ್ ಫೈನಾನ್ಸ್ ಕಚೇರಿಯ ಎದುರುಗಡೆಯೇ ನಿಂತಿದೆ. ಅಜೇಂದ್ರ ಶೆಟ್ಟಿ ತಿಂಗಳ ಹಿಂದಷ್ಟೆ ಖರೀದಿಸಿದ್ದ ಕಾರಿನಲ್ಲಿ ಅನುಪ್ ಎಸ್ಕೇಪ್ ಆಗಿರುವುದು ಆತನೇ‌ ಕೊಲೆಗಾರ ಎನ್ನುವ ಅನುಮಾನ ಬಲಪಡಿಸಿದೆ. ಮಾತ್ರವಲ್ಲ ಅನುಪ್ ಮೊಬೈಲ್ ಕೂಡ ಸ್ವಿಚ್ಡ್ ಆಫ್ ಇದೆ. ಮೂಲಗಳ ಪ್ರಕಾರ ಉತ್ತರಕನ್ನಡ ಮಾರ್ಗವಾಗಿ ಆರೋಪಿ ಪರಾರಿಯಾಗಿದ್ದಾನೆ ಎನ್ನಲಾಗಿದೆ. ತಡರಾತ್ರಿಯೇ ಘಟನಾ ಸ್ಥಳಕ್ಕೆ ಉಡುಪಿ ಎಸ್ಪಿ ವಿಷ್ಣುವರ್ಧನ್, ಹಿರಿಯ ಪೊಲೀಸ್ ಅಧಿಕಾರಿಗಳು ಭೇಟಿ ನೀಡಿದ್ದು  ಫೋರೆನ್ಸಿಕ್ ತಜ್ಞರ ತಂಡ ಕೃತ್ಯ ನಡೆದ ಸ್ಥಳದಲ್ಲಿ ಪರಿಶೀಲನೆ ನಡೆಸಿದೆ. ಕೊಲೆಗಾರನ ಪತ್ತೆಗೆ ಪೊಲೀಸರು ತಂಡ ರಚಿಸಿ ಬಲೆ‌ಬೀಸಿದ್ದಾರೆ.

ದಾರುಣವಾಗಿ ಕೊಲೆಯಾದ ಅಜೇಂದ್ರ ಶೆಟ್ಟಿ ಬಹಳ ಮೃದು ಸ್ವಭಾವದ ಯುವಕನಂತೆ. ಡ್ರೀಮ್ ಎಂಬ ಕನಸಿನ ಫೈನಾನ್ಸ್ ಮೂಲಕ ಸಹಾಯ ಮಾಡುತ್ತಿದ್ದ.‌ ಫೈನಾನ್ಸ್ ನಲ್ಲಿ ಸಾಲ‌ ಪಡೆದವರಿಗೆ ಎಂದೂ‌ ಕಾಟ ಕೊಟ್ಟಿರಲಿಲ್ಲ. ಆದ್ರೂ ಈ ರೀತಿ‌ ಕೊಲೆ ಮಾಡಿರುವುದು ಗ್ರಾಮವೇ ಬೆಚ್ಚಿ ಬಿದ್ದಿದೆ.

ಯಾರ ಸುದ್ದಿಗೆ ಹೋಗದ ಯುವಕ ಹೀಗೆ ರಕ್ತದ  ಬರ್ಬರವಾಗಿ ಕೊಲೆಯಾಗಿದ್ದಾನಂದ್ರೆ ಎಂಥವರಿಗೂ ನಂಬಲಸಾಧ್ಯ. ಸಹೋದರನೊಂದಿಗೆ ಫ್ಯಾಕ್ಟರಿಯಲ್ಲಿ ಕೆಲಸ ಮಾಡುತ್ತಿದ್ದ ಅಜೇಂದ್ರ ಕಳೆದ 5 ವರ್ಷಗಳಿಂದ ಡ್ರೀಂ ಫೈನಾನ್ಸ್ ನಡೆಸುತ್ತಿದ್ದ. ಸೆಕೆಂಡ್ ಪಿಯುಸಿ ಓದಿ ಫ್ಯಾಕ್ಟರಿ ಯಲ್ಲಿ ಕೆಲಸ‌ ಮಾಡುತ್ತಾ ವ್ಯವಹಾರದಲ್ಲಿ ಭಾರೀ ಪರಿಣತನಾಗಿದ್ದ. ವ್ಯವಹಾರದಲ್ಲಿ ಮೇಲೆ ಬರುತ್ತಾ ಫೈನಾನ್ಸ್ ಆರಂಭಿಸಿ ಸಕ್ಸಸ್ ಕೂಡ ಕಂಡಿದ್ದ‌. ಹೀಗೆ ಬರುಬರುತ್ತಾ ವಿಲಾಸಿ ಜೀವನ, ಹೊಸ ಕಾರು ಖರೀದಿ ಹೀಗೆ ವ್ಯವಹಾರದಲ್ಲಿ ಸಕ್ಸಸ್ ಕೂಡ ಕಾಣುತ್ತಿದ್ದ. ಇದು ಪಾಲುದಾರ ಸ್ನೇಹಿತನ ಕೆಂಗಣ್ಣಿಗೂ ಗುರಿಯಾಗಿದ್ದಿರಬಹುದು ಎನ್ನಲಾಗಿದೆ.

ಇದನ್ನೂ ಓದಿ: 13 ಜಿಲ್ಲೆಯಲ್ಲಿ ಪ್ರವಾಹ, 13 ಸಾವು: ಪರಿಹಾರ ಕೊಟ್ಟಿಲ್ಲ ಎಂದ ಸಿದ್ದರಾಮಯ್ಯಗೆ ಸಿಎಂ ಬೊಮ್ಮಾಯಿ ತಿರುಗೇಟು

ಸತತ ಐದು ವರ್ಷಗಳಿಂದ ಫೈನಾನ್ಸ್ ಉತ್ತಮ ರೀತಿಯಲ್ಲೇ ನಡೆಯುತ್ತಿತ್ತು ಅದ್ಯಾವಾಗ ಸ್ನೇಹಿತರ ನಡುವೆ ಪಾಲುದಾರಿಕೆಯಲ್ಲಿ ವೈಮನಸ್ಸು ಬಂತೋ ಅದಾಗಲೇ ಆಗಾಗ ಜಗಳವೂ ನಡೆಯುತ್ತಿತ್ತು. ಹೀಗೆ ಪಾಲುದಾರನಾಗಿದ್ದ ಅನೂಪ್ ವ್ಯವಹಾರದಲ್ಲಿ ಪಡೆದುಕೊಂಡ ದೊಡ್ಡ ಮೊತ್ತದ ಹಣವನ್ನ ನೀಡದೆ‌ ಕಿರಿಕ್ ಮಾಡುತ್ತಿದ್ದ.‌ ಎಷ್ಟೇ ಬಾರಿ ಕೇಳಿದ್ರೂ ಹಣ ಕೊಡದೆ ಸತಾಯಿಸುತ್ತಿದ್ದನಂತೆ.‌ ಇದು ಕೊಲೆಗೆ ಕಾರಣ ಎಂದು ಸದ್ಯಕ್ಕೆ ಶಂಕಿಸಲಾಗಿದೆ.

ಮನೆಗೆ ನಂದಾದೀಪವಾಗಿದ್ದ ಮಗನನ್ನ ಈ ರೀತಿ ಕೊಲೆ‌ ಮಾಡಿ‌ ಮನೆಯ ನಂದಾದೀಪ ಅಳಿಸಿದ ಅನೂಪ್‌ಗೆ ಕಠಿಣ ಶಿಕ್ಷೆಯಾಗಲೇ ಬೇಕು. ನನ್ನ ಮಗನ‌ ಸೊಂಟ ಮುರಿದಿದ್ರು ನಾವು ನೋಡಿಕೊಳ್ಳುತ್ತಿದ್ದೆವು ಆದ್ರೆ ನಮ್ಮ ಮನೆಗೆ ಎಲ್ಲವೂ ಆಗಿದ್ದ ಮನಗನನ್ನ ಕೊಲೆ‌ ಮಾಡಿರುವುದು ಎಷ್ಟು ಸರಿ ಅಂತ ತಂದೆ ಜಗನ್ನಾಥ ಕಣ್ಣೀರು ಹಾಕಿದ್ದಾರೆ.

ವರದಿ: ಪರೀಕ್ಷಿತ್ ಶೇಟ್
Published by:Vijayasarthy SN
First published: