ಇಂದಿರಾ ಕ್ಯಾಂಟೀನ್ ಯೋಜನೆಗೆ ಆರ್ಥಿಕ ಸಂಕಷ್ಟ ; ಗುತ್ತಿಗೆ ಪಡೆದವರಿಗೆ ಬಿಡುಗಡೆಯಾಗದ ಹಣ

ಸರಕಾರದಿಂದ ಅನುದಾನ ಬಿಡುಗಡೆಯಾಗುತ್ತದೆ ಎಂದು ನಂಬಿಕೊಂಡ ಗುತ್ತಿಗೆದಾರರು ಕ್ಯಾಂಟೀನ್ ನಡೆಸುತ್ತಿದ್ದಾರೆ. ಈ ಮಧ್ಯೆ ಜಿಲ್ಲೆಯಲ್ಲಿ ಒಟ್ಟು ನಿತ್ಯ 9,300 ಊಟ ಹಾಗು ತಿಂಡಿ ಟೋಕನ್ ನೀಡಲಾಗುತ್ತಿತ್ತು. ಆದರೆ, ಈಗ ಜಿಲ್ಲೆಯಲ್ಲಿ 2,250 ಟೋಕನ್ ಗಳನ್ನು ಕಡಿಮೆ ಮಾಡಲು ಜಿಲ್ಲಾಡಳಿತ ಸೂಚಿಸಿದೆ.

ಇಂದಿರಾ ಕ್ಯಾಂಟೀನ್

ಇಂದಿರಾ ಕ್ಯಾಂಟೀನ್

  • Share this:
ರಾಯಚೂರು(ಅಕ್ಟೋಬರ್​. 12): ಸಿದ್ದರಾಮಯ್ಯ ಅವರ ಸರಕಾರದ ಮಹತ್ವಾಕಾಂಕ್ಷಿ ಯೋಜನೆಯಾದ ಇಂದಿರಾ ಕ್ಯಾಂಟೀನ್ ಯೋಜನೆಯು ಈಗ ಆರ್ಥಿಕ ಸಂಕಷ್ಟ ಎದುರಿಸುವಂತಾಗಿದೆ. 2017 ರಲ್ಲಿ ಸಿದ್ದರಾಮಯ್ಯ ಅವರು ಮೊದಲು ಬೆಂಗಳೂರು ನಂತರ ರಾಜ್ಯದ ಇತರ ಕಡೆ ಇಂದಿರಾ ಕ್ಯಾಂಟೀನ್ ಹೆಸರಿನಲ್ಲಿ ಕ್ಯಾಂಟೀನ್ ಆರಂಭಿಸಿ ಮುಂಜಾನೆ 5 ರೂಪಾಯಿಗೆ ತಿಂಡಿ, ಮಧ್ಯಾಹ್ನ, ಸಂಜೆ 10 ರೂಪಾಯಿಗೆ ಊಟ ನೀಡುವ ಯೋಜನೆ ಆರಂಭಿಸಿದ್ದರು. ಇಲ್ಲಿ ನಿರ್ಗತಿಕರು, ಬಡವರು, ವಿದ್ಯಾರ್ಥಿಗಳು ಇಂದಿರಾ ಕ್ಯಾಂಟೀನ್ ನಲ್ಲಿಯ ಕಡಿಮೆ ದರದಲ್ಲಿ ತಿಂಡಿ ಹಾಗು ಊಟ ಸಿಗುತ್ತಿರುವದರಿಂದ ಬಡವರಿಗೆ ಅನುಕೂಲವಾಗುತ್ತಿತು. ಆದರೆ, ಈಗ ಇಲ್ಲಿ ಬರು ಬರುತ್ತಾ ಬಂದ್ ಆಗುತ್ತದೆಯೋ ಎಂಬ ಆತಂಕ ಸುರುವಾಗಿದೆ. ಇಂದಿರಾ ಕ್ಯಾಂಟೀನ್ ನಡೆಸಲು ಗುತ್ತಿಗೆ ಪಡೆದವರಿಗೆ ಪ್ರತಿ ಜಿಲ್ಲೆಯಲ್ಲಿಯೂ ಜನವರಿಯಿಂದ ಇಲ್ಲಿಯವರೆಗೂ ಅನುದಾನ ಬಿಡುಗಡೆಯಾಗಿಲ್ಲ, ರಾಯಚೂರು ಜಿಲ್ಲೆಯಲ್ಲಿ ರಾಯಚೂರು ನಗರದಲ್ಲಿ 3, ದೇವದುರ್ಗಾ, ಲಿಂಗಸಗೂರು, ಸಿಂಧನೂರು ಹಾಗು ಮಾನವಿಯಲ್ಲಿ ತಲಾ ಒಂದರಂತೆ ಒಟ್ಟು 7 ಇಂದಿರಾ ಕ್ಯಾಂಟಿನ್ ಗಳಿವೆ.

ಇಂದಿರಾ ಕ್ಯಾಂಟೀನ್ ನಡೆಸುತ್ತಿರುವ ಗುತ್ತಿಗೆದಾರರಿಗೆ ಈಗ 2.28 ಕೋಟಿ ರೂಪಾಯಿ ಬಾಕಿ ಇದೆ. ತಾಲೂಕಾ ಕೇಂದ್ರದ ನಾಲ್ಕು ಕ್ಯಾಂಟಿನ್ ಗಳಿಗೆ ಜನವರಿಯಿಂದ ಅನುದಾನ ನೀಡಲಿಲ್ಲ. ರಾಯಚೂರು ನಗರದಲ್ಲಿ 3 ಕ್ಯಾಂಟಿನ್ ಗಳಿಗೆ ಎಪ್ರಿಲ್ ನಂತರ ಅನುದಾನ ನೀಡಿಲ್ಲ. ಇಂದಿರಾ ಕ್ಯಾಂಟೀನ್ ನನ್ನು ಪೌರಾಡಳಿತ ನಿರ್ದೇಶನಾಯಲದಿಂದ ನಡೆಸುತ್ತಿದ್ದರೂ ಅದಕ್ಕೆ ಕಾರ್ಮಿಕ ಇಲಾಖೆಯು ಶೇ 30 ರಷ್ಟು ವಂತಿಗೆ ನೀಡಬೇಕು. ಕಾರ್ಮಿಕ ಇಲಾಖೆಯು ಇಂದಿರಾ ಕ್ಯಾಂಟೀನ್ ಆರಂಭವಾದಗಿನಿಂದ ಇಲ್ಲಿಯೆವರೆಗೂ ಅನುದಾನ ನೀಡಿಲ್ಲ.

ಸರಕಾರದಿಂದ ಅನುದಾನ ಬಿಡುಗಡೆಯಾಗುತ್ತದೆ ಎಂದು ನಂಬಿಕೊಂಡ ಗುತ್ತಿಗೆದಾರರು ಕ್ಯಾಂಟೀನ್ ನಡೆಸುತ್ತಿದ್ದಾರೆ. ಈ ಮಧ್ಯೆ ಜಿಲ್ಲೆಯಲ್ಲಿ ಒಟ್ಟು ನಿತ್ಯ 9,300 ಊಟ ಹಾಗು ತಿಂಡಿ ಟೋಕನ್ ನೀಡಲಾಗುತ್ತಿತ್ತು. ಆದರೆ, ಈಗ ಜಿಲ್ಲೆಯಲ್ಲಿ 2,250 ಟೋಕನ್ ಗಳನ್ನು ಕಡಿಮೆ ಮಾಡಲು ಜಿಲ್ಲಾಡಳಿತ ಸೂಚಿಸಿದೆ. ಕೆಲವು ಕಡೆ ಊಟ ಹಾಗು ತಿಂಡಿಗೆ ಬೇಡಿಕೆ ಇದ್ದು ಟೋಕನ್ ಗಳ ಕಡಿತ ಮಾಡಿದ್ದರಿಂದ ಅವರಿಗೆ ಊಟ ಸಿಗುತ್ತಿಲ್ಲ. ಬಡವರಿಗೆ ಅನುಕೂಲವಾಗಿರುವ ಇಂದಿರಾ ಕ್ಯಾಂಟೀನ್ ಟೋಕನ್ ಗಳ ಕಡಿತಗೊಳಿಸಬಾರದು ಎಂದು ಜನರ ಆಗ್ರಹವಾಗಿದೆ. ಈ ಯೋಜನೆಯ ಅನುದಾನವನ್ನು ಸಕಾಲಕ್ಕೆ ಪಾವತಿಸಬೇಕೆಂದು ಗುತ್ತಿಗೆದಾರರು ಆಗ್ರಹಿಸಿದ್ದಾರೆ.

ಇದನ್ನೂ ಓದಿ : ದಸರಾ ಗಜಪಡೆಗೆ ರಾಜಾತೀಥ್ಯ: ಹೇಗಿದೆ ಗೊತ್ತಾ ಆನೆಗಳು ತಿನ್ನೋ ಆಹಾರದ ಮೇನು!

ಈ ಮಧ್ಯೆ ಈಗಿನ ಸರಕಾರವು ಸಹ ಹಿಂದಿನ‌ ಸರಕಾರದ ಯೋಜನೆಗಳಿಗೆ ಮಹತ್ವ ನೀಡುತ್ತಿಲ್ಲ ಎನ್ನುವ ಆರೋಪವು ಇದೆ. ಬಿ ಎಸ್ ಯಡಿಯೂರಪ್ಪನವರ ಸರಕಾರ ಬಂದ ತಕ್ಷಣ ಇಂದಿರಾ ಕ್ಯಾಂಟಿನ್ ಮುಚ್ಚುತ್ತಾರೆ ಎಂಬ ವದಂತಿಯೂ ಇತ್ತು. ಆದರೆ, ಇಂದಿರಾ ಕ್ಯಾಂಟೀನ್ ಮುಚ್ಚುವುದಿಲ್ಲ ಎಂದು ಯಡಿಯೂರಪ್ಪ ಹೇಳಿದ್ದಾರೆ. ಇದರಿಂದ ಈ ವಿವಾದಕ್ಕೆ ತೆರೆ ಬಿದ್ದಿತ್ತು.

ಈ ಮಧ್ಯೆ ಕೊರೋನಾ ಲಾಕ್ ಡೌನ್ ಹಿನ್ನೆಲೆ ಸರಕಾರಕ್ಕೆ ಆರ್ಥಿಕ ಸಂಕಷ್ಟವಿರುವ ಕಾರಣವೂ ಇಂದಿರಾ ಕ್ಯಾಂಟೀನ್ ಗಳಿಗೆ ಅನುದಾನ ಬಿಡುಗಡೆಯಾಗಿಲ್ಲ ಎನ್ನಲಾಗುತ್ತಿದೆ. ಇಂದಿರಾ ಕ್ಯಾಂಟೀನ್ ಹೆಸರು ಬದಲಾಯಿಸಬೇಕು ಎನ್ನುವ ಪ್ರಸ್ತಾಪವು ಒಮ್ಮೆ ಕೇಳಿ ಬಂದಿತ್ತು. ಈ ಎಲ್ಲಾಗಳ ಮಧ್ಯೆ ರಾಜ್ಯದಾದ್ಯಂತ ಇರುವ ಇಂದಿರಾ ಕ್ಯಾಂಟೀನ್ ಗಳಿಗೆ ಅನುದಾನ ನೀಡದೆ ಇರುವುದು ಗುತ್ತಿಗೆದಾರರು ಬರುವ ದಿನಗಳಲ್ಲಿ ಕ್ಯಾಂಟೀನ್ಮುಚ್ಚಿದರೂ ಅಚ್ಚರಿ ಪಡಬೇಕಾಗಿಲ್ಲ. ಸರಕಾರ ಬಡವರ ಪರವಾದ ಈ ಯೋಜನೆಯನ್ನು ಬಂದ್ ಮಾಡಬಾರದು ಎಂಬ ಆಗ್ರಹ ಕೇಳಿ ಬಂದಿದೆ.
Published by:G Hareeshkumar
First published: