ಗಂಡ ಮಾಡಿದ ಸಾಲಕ್ಕೆ ಹೆಂಡತಿಯನ್ನು ಕೂಡಿಹಾಕಿ ಕಿರುಕುಳ ನೀಡಿದ ಫೈನಾನ್ಸ್

ಮಹಿಳೆಯನ್ನು ಕೂಡಿಹಾಕಿರುವುದಲ್ಲದೇ, ಮೂತ್ರ ವಿಸರ್ಜನೆಗೂ ಹೊರಗೆ ಬಿಟ್ಟಿಲ್ಲ. ಈ ಘಟನೆ ಇದೇ 24ರಂದು ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

 • Share this:
  ಯಾದಗಿರಿ(ಆ.31): ಖಾಸಗಿ ಫೈನಾನ್ಸ್​ಗಳು ಕಷ್ಟಕಾಲದಲ್ಲಿ ಸಾಲ ಕೊಡುತ್ತವೆ ಸರಿ. ಆದರೆ ಕೊಟ್ಟ ಸಾಲ ವಾಪಸ್ ಕೊಡದಿದ್ದಾಗ ಎಂಥ ಹೇಯ ಕೃತ್ಯ ಎಸಗಲು ಹಿಂದೆ-ಮುಂದೆ ನೋಡಲ್ಲ. ಹೌದು, ಇದಕ್ಕೆ ನಿದರ್ಶನ ಎಂಬಂತೆ ಯಾದಗಿರಿಯಲ್ಲಿ ಒಂದು ಪೈಶಾಚಿಕ ಕೃತ್ಯ ನಡೆದಿದೆ. ಗಂಡ ಮಾಡಿದ ಸಾಲಕ್ಕೆ ಹೆಂಡತಿಯನ್ನು ಕೂಡಿ ಹಾಕಿ ಕಿರುಕುಳ ನೀಡಿದ್ದಾರೆ. ಶಿವಶಂಕರ್ ಫೈನಾನ್ಸ್​​ನಿಂದ ಈ ಕೃತ್ಯ ನಡೆದಿದೆ. ಖಾಸಗಿ ಫೈನಾನ್ಸ್​ಗಳು ಸಾಲಗಾರರಿಗೆ ಹೆಚ್ಚು ಮಾನಸಿಕ ಹಿಂಸೆ ನೀಡುತ್ತಿವೆ. 

  ಯಾದಗಿರಿಯಲ್ಲಿ ಬಡ್ಡಿ ವ್ಯವಹಾರ ಮಿತಿ ಮೀರಿದ್ದು, ಶಿವಶಂಕರ್​ ಫೈನಾನ್ಸ್​​​ನವರು ಸಾಲಗಾರರ ಕುಟುಂಬಕ್ಕೆ ಕಿರುಕುಳ ನೀಡುತ್ತಿದ್ದಾರೆ. ಈ ಘಟನೆ ಯಾದಗಿರಿಯ ಅಜೀಜ್ ಕಾಲೋನಿಯಲ್ಲಿ ನಡೆದಿದೆ. ಮಹ್ಮದ್ ಎನ್ನುವವರು ಶಿವಶಂಕರ್ ಫೈನಾನ್ಸ್​ನಿಂದ 3 ಲಕ್ಷ ರೂ. ಸಾಲ ಪಡೆದಿದ್ದರು. ಸಮಯಕ್ಕೆ ಸರಿಯಾಗಿ ಅಸಲು ಮತ್ತು ಬಡ್ಡಿಯನ್ನೂ ಕಟ್ಟಿದ್ದರು. ಹೀಗಿದ್ದರೂ ಸಹ ಫೈನಾನ್ಸ್​​ನವರು ಹೆಚ್ಚು ಬಡ್ಡಿ ನೀಡುವಂತೆ ಸಾಲಗಾರರಿಗೆ ಒತ್ತಾಯಿಸುತ್ತಿದ್ದರು. ಇದಕ್ಕೆ ದಂಪತಿ ಒಪ್ಪದ ಕಾರಣಕ್ಕೆ ಫೈನಾನ್ಸ್​ ಮಾಲೀಕ ಸಾಲಗಾರ ಮಹ್ಮದ್​ ಹೆಂಡತಿ ರಿಜ್ವಾನ್​ ಬೇಗಂಳನ್ನು ತನ್ನ ಕಚೇರಿಗೆ ಕರೆದುಕೊಂಡು ಹೋಗಿ ಒತ್ತೆಯಾಳಾಗಿಸಿಕೊಂಡಿದ್ದಾನೆ.

  ಇದನ್ನೂ ಓದಿ:ಜಾಗತಿಕ ಷೇರು ಮಾರುಕಟ್ಟೆಯ ಪ್ರಭಾವಕ್ಕೊಳಗಾದ ಭಾರತೀಯ ಮಾರುಕಟ್ಟೆ; ಇಂದು ಗಮನಹರಿಸಬಹುದಾದ ಕೆಲವು ಸ್ಟಾಕ್‌ಗಳು ಇಲ್ಲಿವೆ..!

  ಮಹಿಳೆಯನ್ನು ಕೂಡಿಹಾಕಿರುವುದಲ್ಲದೇ, ಮೂತ್ರ ವಿಸರ್ಜನೆಗೂ ಹೊರಗೆ ಬಿಟ್ಟಿಲ್ಲ. ಈ ಘಟನೆ ಇದೇ 24ರಂದು ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. ಶಿವಶಂಕರ್, ಚಂದ್ರಕಲಾ, ಶಿವಮ್ಮ ಮತ್ತು ಪಾರ್ವತಿ ಎಂಬುವವರು ಈ ಕೃತ್ಯ ಎಸಗಿದ್ದಾರೆ. ಫೈನಾನ್ಸ್​​ ಕಚೇರಿಯಲ್ಲಿ ಕೂಡಿಹಾಕಿ ನಂತರ ಸಂಜೆ 7.30ಕ್ಕೆ ಮಹಿಳೆಯನ್ನು ಬಿಡುಡೆ ಮಾಡಿದ್ದಾರೆ.

  ಉಳಿದ ಸಾಲ ಕೊಡುತ್ತೇವೆ ಎಂದು ಹೇಳಿದ ಬಳಿಕ ಮಹಿಳೆ ಮನೆಗೆ ಹೋಗಲು ಬಿಟ್ಟಿದ್ದಾರೆ. ಹಣ ಕೊಟ್ಟರೆ ಸರಿ ಇಲ್ಲದಿದ್ದರೆ ಕೊಲೆ ಮಾಡುತ್ತೇವೆ ಎಂದು ಫೈನಾನ್ಸ್​ನವರು ಜೀವ ಬೆದರಿಕೆಯನ್ನೂ ಸಹ ಹಾಕಿದ್ದರು ಎಂದು ತಿಳಿದು ಬಂದಿದೆ. ನಂತರ ಘಟನೆ ನಡೆದ ಮರುದಿನವೇ ಆರೋಪಿಗಳಿಬ್ಬರನ್ನು ಬಂಧಿಸಲಾಗಿದೆ. ಶಿವಶಂಕರ್, ಶಿವಮ್ಮ ಬಂಧಿತ ಆರೋಪಿಗಳು. ಈ ಬಗ್ಗೆ ಮಹಿಳಾ ಠಾಣೆಯಲ್ಲಿ ಇದೇ 25 ರಂದು ಪ್ರಕರಣ ದಾಖಲಾಗಿದೆ.

  ಇದನ್ನೂ ಓದಿ:ಮದುವೆಗೆ ತಪ್ಪದೇ ಬರ್ತೀವಿ ಅಂತೇಳಿ, ಬಾರದೆ ಕೈ ಕೊಟ್ಟ ಅತಿಥಿಗಳಿಗೆ ಊಟದ ಬಿಲ್ ಕಳಿಸಿದ ದಂಪತಿ..!  ನ್ಯೂಸ್​​​18 ಕನ್ನಡ ಕಳಕಳಿ: ಕೊರೋನಾ ಪಾಸಿಟಿವ್​ ಕೇಸ್​ಗಳ ಸಂಖ್ಯೆ ರಾಜ್ಯದಲ್ಲಿ ತಗ್ಗಿದೆಯಾದರೂ ಸೋಂಕಿನ ಅಪಾಯದಿಂದ ಸಂಪೂರ್ಣವಾಗಿ ಇನ್ನೂ ಯಾರೂ ಸುರಕ್ಷಿತರಲ್ಲ. ಹೀಗಾಗಿ ಪ್ರತಿಯೊಬ್ಬರು ಕೋವಿಡ್​​ ನಿಯಮಗಳಾದ ಮಾಸ್ಕ್​​ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಮರೆಯಬಾರದು. ಆದಷ್ಟು ಶೀಘ್ರವೇ ಲಸಿಕೆ ಪಡೆದು ಸೋಂಕಿನ ವಿರುದ್ಧದ ಯುದ್ಧದಲ್ಲಿ ಪ್ರತಿಯೊ ಬ್ಬರು ಕೈ ಜೋಡಿಸಬೇಕು. ಲಾಕ್​​ಡೌನ್​ ನಿಯಮಗಳನ್ನು ಕಟ್ಟುನಿಟ್ಟಿನಿಂದ ಪಾಲಿಸಿ ಸೋಂಕಿನಿಂದ ತಮ್ಮನ್ನು ತಾವು ಕಾಪಾಡಿಕೊಳ್ಳುವ ಪ್ರತಿಜ್ಞೆ ತೆಗೆದುಕೊಳ್ಳಬೇಕು. ನಾವು ಸುರಕ್ಷಿತವಾಗಿ ಇದ್ದು, ನಮ್ಮಿಂದ ಇತರರಿಗೆ ಸೋಂಕು ಹಬ್ಬದಂತೆ ಜವಾಬ್ದಾರಿ ಯುತವಾಗಿ ನಡೆದುಕೊಳ್ಳಬೇಕು.
  Published by:Latha CG
  First published: