HOME » NEWS » District » FIGHT BETWEEN NIMBALKAR AND PATIL FOR DCC BANK DIRECTOR POSITION RESORT POLITICS CSB HK

ಡಿಸಿಸಿ ಬ್ಯಾಂಕ್ ನಿರ್ದೇಶಕ ಸ್ಥಾನಕ್ಕೆ ಅಂಜಲಿ ನಿಂಬಾಳ್ಕರ್- ಪಾಟೀಲ್ ನಡುವೆ ಫೈಟ್; ರೆಸಾರ್ಟ್ ರಾಜಕಾರಣ

news18-kannada
Updated:November 4, 2020, 10:56 PM IST
ಡಿಸಿಸಿ ಬ್ಯಾಂಕ್ ನಿರ್ದೇಶಕ ಸ್ಥಾನಕ್ಕೆ ಅಂಜಲಿ ನಿಂಬಾಳ್ಕರ್- ಪಾಟೀಲ್ ನಡುವೆ ಫೈಟ್; ರೆಸಾರ್ಟ್ ರಾಜಕಾರಣ
ಶಾಸಕಿ ಅಂಜಲಿ ನಿಂಬಾಳ್ಕರ್ ಹಾಗೂ ಮಾಜಿ ಶಾಸಕ ಅರವಿಂದ ಪಾಟೀಲ್
  • Share this:
ಬೆಳಗಾವಿ(ನವೆಂಬರ್. 04): ಬೆಳಗಾವಿಯಲ್ಲಿ ನಡೆದ ಪಿ ಎಲ್ ಡಿ ಬ್ಯಾಂಕ್ ಚುನಾವಣೆ ಸಮ್ಮಿಶ್ರ ಸರ್ಕಾರದ ಅಸ್ತಿತ್ವಕ್ಕೆ ಪಟ್ಟು ತಂದಿದ್ದು ಹಳೆಯ ವಿಚಾರ. ಸದ್ಯ ಜಿಲ್ಲೆಯಲ್ಲಿ ಡಿಸಿಸಿ ಬ್ಯಾಂಕ್ ಚುನಾವಣೆ ಜಿದ್ದಾ ಜಿದ್ದಿನಿಂದ ನಡೆಯುತ್ತಿದೆ. ಆರ್​ಎಸ್​​ಎಸ್​​ ಬಿಜೆಪಿ ವರಿಷ್ಠರು ಜಿಲ್ಲೆಯ ಪ್ರಮುಖರಿಗೆ ಸೂಚನೆ ಹಿನ್ನೆಲೆಯಲ್ಲಿ 16 ನಿರ್ದೇಶಕ ಸ್ಥಾನಗಳ ಪೈಕಿ 13 ಜನ ನಿರ್ದೇಶಕರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಇನ್ನೂಳಿದ ಮೂರು ಕ್ಷೇತ್ರಗಳ ಪೈಕಿ ಖಾನಾಪುರದಲ್ಲಿ ತೀವ್ರ ಸ್ಪರ್ಧೆ ಏರ್ಪಟ್ಟಿದೆ. ಈಗಾಗಲೇ ಮತ ಚಲಾವಣೆ ಹಕ್ಕು ಹೊಂದಿರುವ ಪಿಕೆಪಿಎಸ್ ಅಧ್ಯಕ್ಷರನ್ನು ರೆಸಾರ್ಟ್ ಕಳುಹಿಸಲಾಗಿದೆ. ಯಾರ ಕೈ ಮೇಲಾಗಲಿದೆ ಎಂಬುದು ಇಡೀ ಜಿಲ್ಲೆಯಲ್ಲಿಯೆ ಕುತೂಹಲ ಹುಟ್ಟಿಸಿದೆ. ಖಾನಾಪುರದಿಂದ ನಡೆಯುವ ನಿರ್ದೇಶಕ ಸ್ಥಾನಕ್ಕೆ ಶಾಸಕಿ ಡಾ. ಅಂಜಲಿ ನಿಂಬಾಳ್ಕರ್, ಎಂಇಎಸ್ ಮಾಜಿ ಶಾಸಕ ಅರವಿಂದ ಪಾಟೀಲ್ ನಡುವೆ ಫೈಟ್ ನಡೆಯುತ್ತಿದೆ.

ಇನ್ನೂ ಜಿಲ್ಲೆಯ ಪ್ರಮುಖ ನಾಯಕರಾದ ಡಿಸಿಎಂ ಲಕ್ಷ್ಮಣ ಸವದಿ, ಸಚಿವ ರಮೇಶ್ ಜಾರಕಿಹೊಳಿ ಹಾಗೂ ಮಾಜಿ ಸಚಿವ ಉಮೇಶ್ ಕತ್ತಿ ಮೂರು ಜನ ಅರವಿಂದ ಪಾಟೀಲ್ ಗೆ ಬೆಂಬಲ ನೀಡಿದ್ದಾರೆ. ಬಹಿರಂಗವಾಗಿ ಖಾನಾಪುರದಲ್ಲಿ ನಮ್ಮ ಅಭ್ಯರ್ಥಿ ಅರವಿಂದ ಪಾಟೀಲ್ ಎಂದು ಘೋಷಣೆ ಮಾಡಿದ್ದಾರೆ. ಎಂಇಎಸ್ ಶಾಸಕನ್ನು ಬೆಂಬಲಿಸಿದ್ದು, ಅನೇಕರು ಟೀಕೆ ಮಾಡಿದ್ದಾರೆ. ಆದರೇ ಸಹಕಾರ ಕ್ಷೇತ್ರ ಚುನಾವಣೆಗೆ ಪಕ್ಷ, ಜಾತಿ ಹಾಗೂ ಭಾಷೆ ಬರಲ್ಲ ಎಂದು ನಾಯಕರು ಸಮರ್ಥನೆ ಮಾಡಿಕೊಂಡಿದ್ದಾರೆ.

ಶಾಸಕಿ ಅಂಜಲಿ ನಿಂಬಾಳ್ಕರ್ ಹಾಗೂ ಅರವಿಂದ ಪಾಟೀಲ್ ಈಗಾಗಲೇ ಪಿಕೆಪಿಎಸ್ ಅಧ್ಯಕ್ಷರನ್ನು ಕರೆದುಕೊಂಡು ಹೋಗಿ ರೆಸಾರ್ಟ್ ಸೇರಿಕೊಂಡಿದ್ದಾರೆ. 51 ಜನರಿಗೆ ಮತದಾನ ಮಾಡುವ ಅವಕಾಶವಿದೆ. ಎಲ್ಲರನ್ನು ಅಭ್ಯರ್ಥಿಗಳು ಮಹರಾಷ್ಟ್ರದ ರೆಸಾರ್ಟ್​​ಗೆ ಶಿಫ್ಟ್ ಮಾಡಿದ್ದಾರೆ. ಇದೇ ತಿಂಗಳ 6ರಂದು ಚುನಾವಣೆ ನಡೆಯಲಿದ್ದು, ಅಂದೇ ಫಲಿತಾಂಶ ಹೊರ ಬಿಳಲಿದೆ. ಅಂದು ಮೂರು ನಿರ್ದೇಶಕ ಸ್ಥಾನಕ್ಕೆ ಚುನಾವಣೆ ನಡೆಯಲಿದ್ದು, ಯಾರು ಗೆಲ್ಲಲಿದ್ದಾರೆ ಎಂಬುದು ಕುತೂಹಲ ಹುಟ್ಟಿಸಿದೆ.

ಇದನ್ನೂ ಓದಿ : ಪಾಠ ಮಾಡಬೇಕಾದ ಶಿಕ್ಷಕನಿಂದ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪತ್ರದ ನಕಲು : ತಪ್ಪು ಮಾಡಿ ಟೀಕೆಗೆ ಗುರಿಯಾದ ಶಿಕ್ಷಕ

ನಂತರ ಡಿಸಿಸಿ ಬ್ಯಾಂಕ್ ಅಧ್ಯಕ್ಷ - ಉಪಾಧ್ಯಕ್ಷ ಆಯ್ಕೆ ಮತ್ತೆ ಕಸರತ್ತು ನಡೆಯಲಿದೆ. ಈಗಾಗಲೇ ಅನೇಕರು ಇದಕ್ಕಾಗಿ ಆಕಾಂಕ್ಷಿಗಳು ಇದ್ದಾರೆ. ಇನ್ನೂ ಕಳೆದ ಸಲದ ಅಧ್ಯಕ್ಷ ರಮೇಶ್ ಕತ್ತಿ ಪ್ರಮುಖರು. ಇದಕ್ಕಾಗಿ ಜಿಲ್ಲೆಯ ನಾಯಕರ ನಡುವೆ ಯಾವ ರೀತಿಯ ಹೋರಾಟ ನಡೆಯಲಿದೆ ಎಂಬುದು ಕೂತಹಲಕ್ಕೆ ಕಾರಣವಾಗಿದೆ.

ಡಿಸಿಸಿ ಬ್ಯಾಂಕ್ ನಲ್ಲಿ ಸದ್ಯ ನಿರ್ದೇಶಕರಾಗಿ ಡಿಸಿಎಂ ಲಕ್ಷ್ಮಣ ಸವದಿ, ಚಿಕ್ಕೋಡಿ ಸಂಸದ ಅಣ್ಣಾಸಾಬ್ ಜೊಲ್ಲೆ, ಮಾಜಿ ಸಂಸದ ರಮೇಶ್ ಕತ್ತಿ, ವಿಧಾನಸಭೆ ಡೆಪ್ಯುಟಿ ಸ್ಪೀಕರ್ ಆನಂದ್ ಮಾಮನಿ, ಶಾಸಕರಾದ ಮಹಾಂತೇಶ್ ದೊಡ್ಡಗೌಡರ ಆಯ್ಕೆಯಾಗಿದ್ದಾರೆ. ಜಿಲ್ಲೆಯಲ್ಲಿ ಡಿಸಿಸಿ ಬ್ಯಾಂಕ್ ಎಷ್ಟು ಮುಖ್ಯ ಎಂಬುದು ಇದರಿಂದಲೇ ಗೊತ್ತಾಗಲಿದೆ.
Published by: G Hareeshkumar
First published: November 4, 2020, 10:27 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories