HOME » NEWS » District » FIGHT BETWEEN HUSBAND AND WIFE IN GRAMA PANCHAYAT ELECTION RHHSN RSK

ಪಂಚಾಯಿತಿ ಸದಸ್ಯರಾಗಲು ಒಂದೇ ವಾರ್ಡಿನಲ್ಲಿ ಗಂಡ -ಹೆಂಡತಿ ನಡುವೆ ಫೈಟ್; ಇಬ್ಬರು ಒಟ್ಟೊಟ್ಟಿಗೆ ಹೋಗಿ ಮತಯಾಚನೆ

ಇನ್ನು ಇದೇ ವಾರ್ಡ್ ನಿಂದ ಇನ್ನೂ 9 ಜನರು ಸ್ಪರ್ಧಿಗಳು ಕಣದಲ್ಲಿದ್ದು, ಜನರು ಮಾತ್ರ ಯಾರಿಗೆ ಮತ ನೀಡಿ, ಯಾರ ಕೈ ಹಿಡಿಯುತ್ತಾರೋ ಎನೋದನ್ನು ಕಾದು ನೋಡಬೇಕಾಗಿದೆ. ಒಟ್ಟಿನಲ್ಲಿ ಒಂದೇ ವಾರ್ಡಿನಿಂದ ಗಂಡ- ಹೆಂಡತಿ ಇಬ್ಬರು ಚುನಾವಣೆಗೆ ಸ್ಪರ್ಧಿಸಿ ಸೆಣಸಾಡುತ್ತಿರುವುದು ಎಲ್ಲರನ್ನು ಉಬ್ಬೇರಿಸುವಂತೆ ಮಾಡಿದೆ.

news18-kannada
Updated:December 16, 2020, 6:27 PM IST
ಪಂಚಾಯಿತಿ ಸದಸ್ಯರಾಗಲು ಒಂದೇ ವಾರ್ಡಿನಲ್ಲಿ ಗಂಡ -ಹೆಂಡತಿ ನಡುವೆ ಫೈಟ್; ಇಬ್ಬರು ಒಟ್ಟೊಟ್ಟಿಗೆ ಹೋಗಿ ಮತಯಾಚನೆ
ಒಟ್ಟಿಗೆ ಮತಯಾಚಿಸುತ್ತಿರುವ ಗಂಡ-ಹೆಂಡತಿ.
  • Share this:
ಕೊಡಗು :  ಗ್ರಾಮ ಪಂಚಾಯಿತಿ ಚುನಾವಣೆ ಅಂದರೆ ಹೀಗೆ, ತಂದೆ- ಮಗ, ಅಣ್ಣ-ತಮ್ಮ ಎದುರಾಳಿಗಳಾಗಿ ಕಣಕ್ಕೆ ಇಳಿಯುವುದು ಸಹಜ. ಅದರಂತೆ ಇಲ್ಲೂ ಸಹ ಗಂಡನ ವಿರುದ್ಧವಾಗಿಯೇ ಹೆಂಡತಿಯೇ ಪ್ರತಿಸ್ಪರ್ಧಿಯಾಗಿ ಚುನಾವಣೆ ಅಖಾಡಕ್ಕೆ ಇಳಿದಿದ್ದಾರೆ. ಹೌದು, ಕೊಡಗು ಜಿಲ್ಲೆ ಸೋಮವಾರಪೇಟೆ ತಾಲ್ಲೂಕಿನ ಏಳನೇ ಹೊಸಕೋಟೆ ಗ್ರಾಮ ಪಂಚಾಯಿತಿ ಇಂತಹ ಅಪರೂಪದ ಘಟನೆಗೆ ಸಾಕ್ಷಿಯಾಗಿದೆ.

ಪಂಚಾಯಿತಿಯ ಎರಡನೇ ವಾರ್ಡ್ ಆದ ಕಂಬಿಬಾಣೆಯಲ್ಲಿ ಕಿಶೋರ್ ಅವರು ಸಾಮಾನ್ಯ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದಾರೆ. ಅದೇ ವಾರ್ಡಿನಿಂದಲೇ ಅವರ ಪತ್ನಿ ಶ್ರೀಜಾ ಕೂಡ ಸಾಮಾನ್ಯ ಅಭ್ಯರ್ಥಿಯಾಗಿ ಸ್ಪರ್ಧೆಗೆ ಇಳಿದಿದ್ದಾರೆ. 22 ರಂದು ನಡೆಯುವ ಮೊದಲ ಹಂತದ ಚುನಾವಣೆಯಲ್ಲಿ ಗಂಡ- ಹೆಂಡತಿ ಇಬ್ಬರು ತಮ್ಮ ಅದೃಷ್ಟ ಪರೀಕ್ಷೆಗೆ ಮುಂದಾಗಿದ್ದಾರೆ. ಇಬ್ಬರೂ ಒಂದೇ ವಾರ್ಡಿನಿಂದ ಸ್ಪರ್ಧಿಸಿರುವ ಬಗ್ಗೆ ಪ್ರಶ್ನಿಸಿದರೆ ಮನೆಯಲ್ಲಿ ಅಷ್ಟೇ ನಾವು ಪತಿ- ಪತ್ನಿ. ಹೊರಗೆ ಚುನಾವಣಾ ಕಣದಲ್ಲಿ ನಾವಿಬ್ಬರು ಪ್ರತಿಸ್ಪರ್ಧಿಗಳು. ಜನರಿಗೆ ಯಾರ ಮೇಲೆ ಒಲವಿದೆಯೋ ಅವರಿಗೆ ಮತ ಹಾಕಿ ಗೆಲ್ಲಿಸುತ್ತಾರೆ. ಇಬ್ಬರಲ್ಲಿ ಯಾರು ಗೆದ್ದರೂ ಸಂತೋಷವೇ. ಆದರೆ ಜನರಿಗೆ ಯಾರು ಬೇಕಾಗಿದೆಯೋ ಅವರನ್ನು ಆಯ್ಕೆ ಮಾಡುತ್ತಾರೆ. ಹೀಗಾಗಿ ನಾವಿಬ್ಬರು ಪ್ರಾಮಾಣಿಕವಾಗಿ ಮತಯಾಚನೆ ಮಾಡುತ್ತಿದ್ದೇವೆ ಎನ್ನುತ್ತಾರೆ ಅಭ್ಯರ್ಥಿ ಕಿಶೋರ್.

ಇದನ್ನು ಓದಿ: ಬೆಂಗಳೂರಿನ ಶಾಂತಿನಗರದ ಅಧಿಪತ್ಯಕ್ಕಾಗಿ ಡಾನ್ ಲಿಂಗರಾಜ್ ಕೊಲೆ; ಹತ್ಯೆಯ ಹಿಂದಿದೆ ರೋಚಕ ಕಥೆ

ಮತ್ತೊಂದು ವಿಶೇಷವೆಂದರೆ ಇಬ್ಬರು ಒಟ್ಟೊಟ್ಟಿಗೆ ಹೋಗಿ ಮತಯಾಚನೆ ಮಾಡುತ್ತಿದ್ದು, ಇಬ್ಬರು ನಮಗೆ ಮತ ನೀಡಿ ಅಂತ ಕೇಳುತ್ತಿದ್ದಾರೆ. ಇದು ಮತದಾರರಿಗೆ ಒಂದು ರೀತಿ ಪೀಕಲಾಟಕ್ಕೆ ಸಿಲುಕಿಸುವಂತಾಗಿ. ಯಾರಿಗೆ ಮತಹಾಕಬೇಕು ಎನ್ನೋ ಸವಾಲನ್ನು ತಂದೊಡ್ಡಿದೆ. ಕಿಶೋರ್ ಮತ್ತು ಶ್ರೀಜಾ ಅವರು ತಮ್ಮ ವಾರ್ಡಿನ ಪ್ರತೀ ಮತದಾರರ ಮನೆಗೆ ಭೇಟಿ ನೀಡುತ್ತಿದ್ದು, ಅವರ ಮನೆಗಳ ಸಮಸ್ಯೆಗಳನ್ನು ಆಲಿಸುತ್ತಿದ್ದಾರೆ. ನಮಗೆ ಒಂದು ಮತ ನೀಡಿ ನಿಮ್ಮ ಸಮಸ್ಯೆಗಳನ್ನು ನಾವು ಬಗೆಹರಿಸುತ್ತೇವೆ ಎನ್ನೋ ಭರವಸೆ ನೀಡುತ್ತಿದ್ದಾರೆ.

ಇನ್ನು ಇದೇ ವಾರ್ಡ್ ನಿಂದ ಇನ್ನೂ 9 ಜನರು ಸ್ಪರ್ಧಿಗಳು ಕಣದಲ್ಲಿದ್ದು, ಜನರು ಮಾತ್ರ ಯಾರಿಗೆ ಮತ ನೀಡಿ, ಯಾರ ಕೈ ಹಿಡಿಯುತ್ತಾರೋ ಎನೋದನ್ನು ಕಾದು ನೋಡಬೇಕಾಗಿದೆ. ಒಟ್ಟಿನಲ್ಲಿ ಒಂದೇ ವಾರ್ಡಿನಿಂದ ಗಂಡ- ಹೆಂಡತಿ ಇಬ್ಬರು ಚುನಾವಣೆಗೆ ಸ್ಪರ್ಧಿಸಿ ಸೆಣಸಾಡುತ್ತಿರುವುದು ಎಲ್ಲರನ್ನು ಉಬ್ಬೇರಿಸುವಂತೆ ಮಾಡಿದೆ.
Published by: HR Ramesh
First published: December 16, 2020, 6:27 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories