ಹಕ್ಕಿ ಜ್ವರದ ಭೀತಿ; ವಿದೇಶಿ ಹಕ್ಕಿಗಳಿಂದ ಗದಗ ಜಿಲ್ಲೆಯಲ್ಲಿ ಹೆಚ್ಚಿದ ಆತಂಕ!

ದೇಶ ಹಾಗೂ ರಾಜ್ಯದಲ್ಲಿ ಹಕ್ಕಿ ಜ್ವರದ ಭೀತಿ ಆರಂಭವಾಗಿದ್ದರಿಂದ ಗದಗ ಜಿಲ್ಲೆಯಲ್ಲಿ ಕೂಡಾ ಹೈ ಅಲರ್ಟ್ ಘೋಷಣೆ ಮಾಡಲಾಗಿದೆ. ವಿದೇಶದಿಂದ ಬರುವ ಹಕ್ಕಿಗಳ ಮೇಲೆ ಅರಣ್ಯ ಇಲಾಖೆ ವಿಶೇಷ ತಂಡವನ್ನು ರಚನೆ ಮಾಡಿಕೊಂಡು ನಿಗಾ ವಹಿಸಿದೆ.

ವಿದೇಶದಿಂದ ಗದಗಕ್ಕೆ ಆಗಮಿಸಿರುವ ಹಕ್ಕಿಗಳು.

ವಿದೇಶದಿಂದ ಗದಗಕ್ಕೆ ಆಗಮಿಸಿರುವ ಹಕ್ಕಿಗಳು.

  • Share this:
ಗದಗ: ವಿದೇಶಿಯ ಹಕ್ಕಿಗಳು ಸಾವಿರಾರು ಕಿಲೋಮೀಟರ್ ದೂರದಿಂದ ಗದಗ ಜಿಲ್ಲೆಗೆ ಆಗಮಿಸುತ್ತವೆ. ಅತಿಥಿಯಾಗಿ ಬರುವ ಅವುಗಳಿಗೆ ತೊಂದರೆಯಾಗದಂತೆ ಇಲ್ಲಿನ ಜನ ನೋಡಿಕೊಳ್ತಾರೆ. ಸ್ವಚ್ಛಂದವಾಗಿ ಹಾರಾಡ್ತಾ ಇಲ್ಲಿಯೇ ಒಳ್ಳೆಯ ಆಹಾರ ಸೇವನೆ ಮಾಡಿಕೊಂಡು, ಕೆಲವು ತಿಂಗಳ ಕಾಲ ವಾಸ್ತವ್ಯ ಹೂಡಿ ಮತ್ತೆ ತಮ್ಮ ತಾಯ್ನಾಡಿಗೆ ಹೋಗುತ್ತವೆ. ಆದರೆ, ಹೀಗೆ ಬರುವ ಅತಿಥಿಗಳಿಂದ ಈ ಭಾರಿ ಗದಗ ಜಿಲ್ಲೆಯ ಜನರ ಆತಂಕಕ್ಕೆ ಕಾರಣವಾಗಿದೆ. ಗದಗ ಜಿಲ್ಲೆ ಶಿರಹಟ್ಟಿ ತಾಲೂಕಿನ ಮಾಗಡಿ ಕೆರೆಗೆ ಪ್ರತಿವರ್ಷ ವಿದೇಶಿ ಹಕ್ಕಿಗಳು ಆಗಮಿಸುತ್ತವೆ. ಈ ಭಾರಿಯು ಸುಮಾರು 10 ಸಾವಿರಕ್ಕೂ ಹೆಚ್ಚು ಸಂಖ್ಯೆಯಲ್ಲಿ ಸಾವಿರಾರು ಕಿಲೋಮೀಟರ್ ನಿಂದ ಮಾಗಡಿ ಕೆರೆಗೆ ಆಗಮಿಸಿವೆ. ಮಂಗೊಲಿಯಾ, ಆಸ್ಟ್ರೇಲಿಯಾ, ಜಪಾನ, ಪಾಕಿಸ್ತಾನದ ಲಡಾಕ್ ಹೀಗೆ ಅನೇಕ ದೇಶದ ಪಕ್ಷಿಗಳು ಇಲ್ಲಿಗೆ ಆಗಮಿಸುತ್ತವೆ.

ಆ ದೇಶದ ಹವಾಮಾನವೇ ಈ ಪಕ್ಷಿಗಳು ಇಲ್ಲಿಗೆ ಬರಲು ಕಾರಣ. ಬಾರ್ ಹಡೆಡ್ ಗೂಸ್, ಬ್ರಾಮಿಣಿ ಡೆಕ್, ಬ್ಲಾಕ್ ಐಬಿಸ್, ಇಟಲ್ ಗಿಬ್ಸ್, ರೆಡ್ ಥಾರ್ಟ,ಪಾಂಟೆಡ್ ಸ್ಪಾರ್ಕ ಸೇರಿದಂತೆ ಅನೇಕ ಜಾತಿಯ ಪಕ್ಷಿಗಳು ಇಲ್ಲಿಗೆ ಆಗಮಿಸುತ್ತವೆ. ಈ ಪಕ್ಷಿಗಳ ಹಾರಾಟ, ಕೂಗಾಟ ಅಂದ ಚೆಂದ ಸವಿಯಲು ಸಾಕಷ್ಟು ಪಕ್ಷಿ ಪ್ರಿಯರು ಆಗಮಿಸುತ್ತಾರೆ. ಆದರೆ, ಈ ಭಾರಿ ಹೀಗೆ ಬಂದಿರೋ ಪಕ್ಷಗಳಿಂದ ಹಕ್ಕಿ ಜ್ವರದ ಭೀತಿ ಎದುರಾಗಿದೆ. ಮಾಗಡಿ ಗ್ರಾಮಸ್ಥರು ಸೇರಿದಂತೆ ಜಿಲ್ಲೆಯ ಜನರಲ್ಲಿ ಹಕ್ಕಿ ಜ್ವರದ ಭೀತಿ ಎದುರಾಗಿರೋದರಿಂದ ಕಟ್ಟೆಚ್ಚರ ವಹಿಸುವಂತೆ ಸ್ಥಳೀಯರು ಒತ್ತಾಯ ಮಾಡಿದ್ದಾರೆ..

ಇನ್ನೂ ದೇಶ ಹಾಗೂ ರಾಜ್ಯದಲ್ಲಿ ಹಕ್ಕಿ ಜ್ವರದ ಭೀತಿ ಆರಂಭವಾಗಿದ್ದರಿಂದ ಗದಗ ಜಿಲ್ಲೆಯಲ್ಲಿ ಕೂಡಾ ಹೈ ಅಲರ್ಟ್ ಘೋಷಣೆ ಮಾಡಲಾಗಿದೆ. ವಿದೇಶದಿಂದ ಬರುವ ಹಕ್ಕಿಗಳ ಮೇಲೆ ಅರಣ್ಯ ಇಲಾಖೆ ವಿಶೇಷ ತಂಡವನ್ನು ರಚನೆ ಮಾಡಿಕೊಂಡು ನಿಗಾ ವಹಿಸಿದೆ. ಮಾಗಡಿ ಕೆರೆಯ ಬಳಿ ಸಿಬ್ಬಂದಿಗಳನ್ನು ನಿಯೋಜನೆ ಮಾಡಿ ಅವುಗಳ ಆರೋಗ್ಯ ಹಾಗೂ ರೋಗಕ್ಕೆ ತುತ್ತಾಗಿ ಸಾವನ್ನಪ್ಪಿದ್ರೆ, ಕೂಡಲೇ ಮಾಹಿತಿ ನೀಡುವಂತೆ ಆದೇಶ ಮಾಡಲಾಗಿದೆ.

ಇದನ್ನೂ ಓದಿ: ಕೊವೀಡ್ ‌ಲಸಿಕೆ ಡ್ರೈರನ್ ಗೆ ಯಾದಗಿರಿಯಲ್ಲಿ ಸಿದ್ದತೆ; ಜಿಲ್ಲೆಯ 6 ಕೇಂದ್ರಗಳಲ್ಲಿ ಲಸಿಕೆ ವಿತರಣೆಗೆ ತಾಲೀಮು

ಇನ್ನೂ ಗದಗ ತಾಲೂಕಿನ ಬಿಂಕದಕಟ್ಟಿ ಮೃಗಾಲಯದಲ್ಲಿರುವ ಹಕ್ಕಿಗಳ ಸೈನಿಟೆಚರ್ ಮಾಡಿ ಪ್ರತ್ಯೇಕವಾಗಿ ನಿಗಾ ವಹಿಸಲಾಗಿದೆ. ವಿದೇಶ ಹಕ್ಕಿಗಳಿಗೆ ಯಾವುದೇ ರೀತಿಯಿಂದ ಆರೋಗ್ಯದಲ್ಲಿ ಏರುಪೇರು ಆಗಿಲ್ಲಾ. ಹಾಗಾಗಿ ನಮ್ಮ ಇಲಾಖೆ ಅಧಿಕಾರಿಗಳು ಅವುಗಳ ಮೇಲೆ ನಿಗಾವಹಿಸಿದ್ದಾರೆ ಅಂತಾರೆ ಗದಗ ಜಿಲ್ಲಾ ಅರಣ್ಯ ಇಲಾಖೆಯ ಉಪ ಸಂರಕ್ಷಣಾ ಅಧಿಕಾರಿ ಸೂರ್ಯಸೇನ್.

ಒಟ್ಟಲ್ಲಿ ಪ್ರತಿವರ್ಷ ವಿದೇಶ ಹಕ್ಕಿಗಳ ಕಲರವ ನೋಡಿ ಫುಲ್ ಎಂಜಾಯ ಮಾಡ್ತಾಯಿದ್ದ ಜನ್ರು ಈ ಭಾರಿ ಆತಂಕ್ಕೆ ಒಳಗಾಗಿದ್ದಾರೆ. 10 ಸಾವಿರಕ್ಕೂ ಹೆಚ್ಚು ಪಕ್ಷಿಗಳು ಆಗಮಿಸಿದ್ದರಿಂದ ಏನಾದರೂ ಸ್ವಲ್ಪ ಹೆಚ್ವು ಕಡಿಮೆಯಾದ್ರು ಅಪಾಯ ಗ್ಯಾರಂಟಿ. ಹೀಗಾಗಿ ಗದಗ ಅರಣ್ಯ ಇಲಾಖೆ ಭಾರಿ ಕಟ್ಟೆಚ್ಚರ ವಹಿಸಿದೆ.
Published by:MAshok Kumar
First published: