HOME » NEWS » District » FATHER WHO KILLED A BABY GIRL BRUTALLY A HEARTBREAKING EVENT IN CHIKMAGALUR HK

ಹೆಣ್ಣು ಮಗುವೆಂದು ಕೊಂದ ಪಾಪಿ ತಂದೆ : ಚಿಕ್ಕಮಗಳೂರಿನಲ್ಲೊಂದು ಹೃದಯ ವಿದ್ರಾವಕ ಘಟನೆ

ಅನ್ಯಾಯವಾಗಿರುವ ಜನರಿಗೆ ನ್ಯಾಯ ಕೊಡಿಸಲು ಕಪ್ಪು ಕೋರ್ಟ್ ಹಾಕಿರುವ ಈ ನೀಚ, ಬೇರೆಯವರಿಗೆ ನ್ಯಾಯ ಕೊಡಿಸುವುದು ಇರಲಿ, ತಾನೇ ತನ್ನ ಕಂದಮ್ಮನನ್ನ ಕೊಲ್ಲುವ ಮೂಲಕ ತನ್ನ ವೃತ್ತಿಗೂ ಮಸಿ ಬಳಿದಿದ್ದಾನೆ.

news18-kannada
Updated:September 11, 2020, 10:24 PM IST
ಹೆಣ್ಣು ಮಗುವೆಂದು ಕೊಂದ ಪಾಪಿ ತಂದೆ : ಚಿಕ್ಕಮಗಳೂರಿನಲ್ಲೊಂದು ಹೃದಯ ವಿದ್ರಾವಕ ಘಟನೆ
ಆರೋಪಿ ತಂದೆ ಉಮಾಶಂಕರ್​
  • Share this:
ಚಿಕ್ಕಮಗಳೂರು(ಸೆಪ್ಟೆಂಬರ್​.11); ನಾವು ಪ್ರತಿನಿತ್ಯ ಒಂದಲ್ಲೊಂದು ಕೊಲೆ-ಹೊಡೆದಾಟ, ಗಲಾಟೆ-ಘರ್ಷಣೆಯನ್ನ ನೋಡುತ್ತಲೇ ಇರುತ್ತೇವೆ. ಆದರೆ, ಈ ಘಟನೆ ಮಾತ್ರ ನಿಜಕ್ಕೂ ಅಮಾನವೀಯ, ಕ್ರೂರ ಕೃತ್ಯ. ಎಂತಹ ಕಲ್ಲು ಹೃದಯದ ಕಟುಕನು ಕೂಡ ಅಷ್ಟೊಂದು ನಿರ್ದಯವಾಗಿ ಕೊಲೆ ಮಾಡಲು ಮನಸ್ಸು ಮಾಡುವುದಿಲ್ಲ. ಆದರೆ, ಅಪ್ಪ ಎನಿಸಿ ಕೊಂಡ ಆ ನೀಚ ಮಾಡಿರುವ ಕೃತ್ಯ ಕೇಳಿದ್ರೆ ರಕ್ತ ಕುದಿಯುತ್ತೆ. ಅದು ಕೂಡ ಏನೂ ಅರಿಯದ 8 ತಿಂಗಳ ಕಂದಮ್ಮನ ಕೊಂದ ಪರಿ ನಿಜಕ್ಕೂ ಕಣ್ಣೀರು ತರಿಸುತ್ತೆ. ಹೆಣ್ಣು ಮಗುವೆಂದು 8 ತಿಂಗಳ ಮಗುವಿನ ಬಾಯಿಗೆ ಪ್ಲಾಸ್ಟರ್ ಹಾಕಿ, ನೀರು ತುಂಬಿದ ಬಕೆಟ್ ಗೆ ತಲೆಕೆಳಗೆ ಮಾಡಿ ಮುಳುಗಿಸಿ ಮಗುವನ್ನ ಪಾಪಿ ತಂದೆ ಕೊಲೆ ಮಾಡಿರುವ ಘಟನೆ ಚಿಕ್ಕಮಗಳೂರು ಜಿಲ್ಲೆಯ ಕಡೂರು ಪಟ್ಟಣದಲ್ಲಿ ನಡೆದಿದೆ. ಕೇವಲ 8 ತಿಂಗಳಿಗೆ ಜಗತ್ತಿನ ಪರಿವೇ ಇಲ್ಲದೇ ಕಣ್ಮುಚ್ಚಿರುವ ಈ ಕಂದಮ್ಮನ ಹೆಸರು ಲಾವಣ್ಯ. ಹೆಣ್ಣಾಗಿ ಹುಟ್ಟಿದ್ದೇ ಈ ಕಂದಮ್ಮನ ಉಸಿರು ನಿಲ್ಲಲ್ಲು ಕಾರಣವಾಗಿದ್ದು ಮಾತ್ರ ವಿಪರ್ಯಾಸ.

ವಕೀಲ ವೃತ್ತಿ ಮಾಡಿಕೊಂಡಿರುವ ಉಮಾಶಂಕರ್ ಮಗು ಕೊಂದ ಕಿರಾತಕ. ನಿನ್ನೆ ತನ್ನ ಹೆಂಡತಿ ಕೆಲಸಕ್ಕೆ ಹೋಗುವುದನ್ನೇ ಹೊಂಚು ಹಾಕಿ ಕಾಯುತ್ತಿದ್ದ ಪಾಪಿ, ಆ ಬಳಿಕ ಮನೆ ಕೆಲಸಕ್ಕೆ ಇದ್ದ ಹುಡುಗಿಯನ್ನ ನನಗೆ ಬೆನ್ನು ನೋವು ಜಾಸ್ತಿಯಾಗಿದ್ದು, ಮೆಡಿಕಲ್ ಹೋಗಿ ಪಟ್ಟು ತೆಗೆದುಕೊಂಡು ಬಾ ಅಂತಾ ಪುಸಲಾಯಿಸಿ ಹೊರಗೆ ಕಳುಹಿಸಿದ್ದಾನೆ. ಆಕೆ ಬರುವಷ್ಟರಲ್ಲಿ ಮಗುವಿನ ಬಾಯಿಗೆ ಪ್ಲಾಸ್ಟರ್ ಹಾಕಿ, ನೀರು ತುಂಬಿದ ಬಕೆಟ್ ಗೆ ತಲೆಕೆಳಗೆ ಮಾಡಿ ಮುಳುಗಿಸಿದ್ದಾನೆ ಕಟುಕ. ಏನೂ ಅರಿಯದ ಕಂದಮ್ಮ ಒದ್ದಾಡಿ ಒದ್ದಾಡಿ ಕ್ರೂರಿಯನ್ನ ಎದುರಿಸಲಾಗದೇ ಕ್ಷಣಮಾತ್ರದಲ್ಲಿ ಉಸಿರು ಚೆಲ್ಲಿಬಿಟ್ಟಿದೆ.

ಈ ಮಗುವಿನ ತಾಯಿ ಮಂಜುಳಾ ಈ ನೀಚನಿಗೆ ಎರಡನೇ ಹೆಂಡತಿ. ಅದಾಗಲೇ 10 ವರ್ಷದ ಹಿಂದೆಯೇ ಮದುವೆಯಾಗಿ ಒಂದು ಮಗುವಿಗೆ ತಂದೆ ಆಗಿದ್ದ ಈ ಪಾಪಿ. ಈ ನಡುವೆ ಕಳೆದ ಮೂರು ವರ್ಷದ ಹಿಂದೆ ಕಡೂರಿನ ಕೋರ್ಟ್​​ ನಲ್ಲಿ ಡಿ ದರ್ಜೆ ನೌಕರರಾಗಿರುವ ಮಂಜುಳಾ ಎಂಬಾಕೆಯನ್ನ ಪ್ರೀತಿಸಿ ಮತ್ತೊಂದು ಮದುವೆಯಾಗಿದ್ದಾನೆ.

ಇದನ್ನೂ ಓದಿ : ಖಾಸಗಿ ಶಿಕ್ಷಕರಿಗೆ ಸಹಾಯಕ್ಕಾಗಿ ಸರ್ಕಾರದ ಚಿಂತನೆ : ಶಿಕ್ಷಣ ಸಚಿವ ಸುರೇಶ್ ಕುಮಾರ್

ಆಕೆಗೆ ತಾನು ಮೊದಲ ಮದುವೆಯಿಂದ ವಿಚ್ಛೇದನ ಪಡೆದಿರುವುದಾಗಿ ಸುಳ್ಳು ಹೇಳಿ ಮೋಸದಿಂದಲೇ ಮಂಜುಳಾರನ್ನ ಯಮಾರಿಸಿದ್ದಾನೆ. 8 ತಿಂಗಳ ಹಿಂದೆ ಮಂಜುಳಾ ಹೆಣ್ಣು ಮಗುವಿಗೆ ಜನ್ಮ ನೀಡಿದ ಮೇಲೆ ಪ್ರತಿನಿತ್ಯ, ಹೆಣ್ಣು ಮಗುವಿಗೆ ಯಾಕೆ ಜನ್ಮ ನೀಡಿದೆ ಅಂತಾ ಕ್ರೂರಿ ಕಿರುಕುಳ ನೀಡುತ್ತಿದ್ದನಂತೆ. ಆದರೆ, ಈ ಪಾಪಿ ಇಂದಲ್ಲ, ನಾಳೆ ಬದಲಾಗುತ್ತಾನೆ ಅಂತಾ ಕಾಯುತ್ತಿದ್ದ ಮಂಜುಳಾಗೆ ಹೆತ್ತ ಕುಡಿಯ ಉಸಿರನ್ನೇ ನಿಲ್ಲಿಸುತ್ತಾನೆ ಅಂತಾ ಎಂದು ಭಾವಿಸಿಯೇ ಇರಲಿಲ್ಲ.
Youtube Video

ಅನ್ಯಾಯವಾಗಿರುವ ಜನರಿಗೆ ನ್ಯಾಯ ಕೊಡಿಸಲು ಕಪ್ಪು ಕೋರ್ಟ್ ಹಾಕಿರುವ ಈ ನೀಚ, ಬೇರೆಯವರಿಗೆ ನ್ಯಾಯ ಕೊಡಿಸುವುದು ಇರಲಿ, ತಾನೇ ತನ್ನ ಕಂದಮ್ಮನನ್ನ ಕೊಲ್ಲುವ ಮೂಲಕ ತನ್ನ ವೃತ್ತಿಗೂ ಮಸಿ ಬಳಿದಿದ್ದಾನೆ. ಆ ಮಗು ನೀರಿನಲ್ಲಿ ಸಾಯುವ ವೇಳೆ ಬದುಕಲು ಮಾಡಿದ ವ್ಯರ್ಥ್ಯ ಪ್ರಯತ್ನವೆಷ್ಟೋ..? ಸ್ವತಃ ತಂದೆಯೇ ಉಸಿರುಗಟ್ಟಿಸಿ ಕೊಲ್ಲುವಾಗ ,ಅಪ್ಪಾ ಹೆಣ್ಣಾಗಿ ಹುಟ್ಟಿದ್ದೇ ನಾನು ಮಾಡಿದ ತಪ್ಪಾ..? ಅಂತಾ ಆ ಕಂದಮ್ಮ ಕೇಳಿದ ಪ್ರಶ್ನೆ ಈ ನೀಚನ ಮನಸ್ಸಿಗೆ ಕೇಳದೇ ಇದ್ದಿದ್ದು ನಿಜಕ್ಕೂ ದುರಂತ
Published by: G Hareeshkumar
First published: September 11, 2020, 9:03 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ