ಬಾಗಲಕೋಟೆ: ಜಿಲ್ಲೆಯಲ್ಲಿ ಹರಿಯುವ ಕೃಷ್ಣಾ ನದಿಯಲ್ಲಿ ನಿತ್ಯ ನೂರಾರು ಜನರು ಮೀನುಗಾರಿಕೆ ಮಾಡುತ್ತಾರೆ. ಮೀನುಗಾರಿಕೆಯಿಂದಲೇ ತಮ್ಮ ನಿತ್ಯ ಜೀವವ ಸಾಗಿಸುತ್ತಾರೆ. ಮಂಗಳವಾರ ಮೀನುಗಾರರು ಹಾಕಿದ್ದ ಬಲೆಗೆ ಬಿದ್ದ ಮೀನು ಎಲ್ಲರನ್ನೂ ಅಚ್ಚರಿ ಪಡಿಸಿದೆ. ಹೌದು ಬಾಗಲಕೋಟೆ ಜಿಲ್ಲೆಯ ಬೀಳಗಿ ತಾಲೂಕಿನ ಕೊರ್ತಿ ಗ್ರಾಮದ ಬಳಿ ಇರುವ ಕೃಷ್ಣಾ ನದಿಗೆ ಅಡ್ಡಲಾಗಿ ಬೃಹತ್ ಸೇತುವೆ ಇದೆ. ಕೊರ್ತಿ ಕೋಲಾರ ಸೇತುವೆ ಅಂದ್ರೆ ಅದು ಮೀನು ಊಟಕ್ಕೆ ಫುಲ್ ಫೇಮಸ್ ಆಗಿದೆ. ಈ ಸೇತುವೆ ಆಸುಪಾಸಿನಲ್ಲಿ ನಿತ್ಯ ನೂರಾರು ಕುಟುಂಬಗಳು ಮೀನುಗಾರಿಕೆ ಮಾಡುತ್ತವೆ. ಮೀನುಗಾರರು ಹಿಡಿದು ಕೊಡುವ ಫ್ರೆಶ್ ಮೀನಿನ ಊಟ ಸವಿಯೊಡಕ್ಕೆ ಬೇರೆ ಬೇರೆ ಊರುಗಳಿಂದ ಜನರು ಇಲ್ಲಿಗೆ ಬರ್ತಾರೆ. ಕೊರ್ತಿ ಗ್ರಾಮದ ಬಳಿ ಎಂದಿನಂತೆ ಮೀನುಗಾರು ನದಿಗೆ ಬಲೆ ಹಾಕಿದ್ದಾರೆ. ಬೆಳಿಗ್ಗೆ ಬಲೆ ಹಾಕಿ ಮದ್ಯಾಹ್ನದ ವೇಳೆಗೆ ಬಲೆ ತೆಗೆಯಲಾಗುತ್ತೆ. ಬಲೆಗೆ ಬಿದ್ದ ಮೀನುಗಳನ್ನ ಸ್ವಚ್ಚ ಗೊಳಿಸಿ ಬ್ರಿಡ್ಜ್ ಬಳಿ ಇರುವ ಹೋಟಲ್ ಗಳಿಗೆ ಮಾರಾಟ ಮಾಡುತ್ತಾರೆ.
ಮೀನುಗಾರರ ಬಲೆಗೆ ಮಂಗಳವಾರ ವಿಶಿಷ್ಟವಾದ ಮೀನು ಬಿದ್ದಿದೆ. ಮೀನನ್ನು ಕಂಡ ಮೀನುಗಾರು ಒಂದು ಕ್ಷಣ ಅಚ್ಚರಿಗೊಂಡಿದ್ದಾರೆ. ಇಂತಹ ಮೀನು ನಾವು ಯಾವತ್ತೂ ನೋಡಿಯೇ ಇಲ್ಲವಲ್ಲ ಅಂತ ಗಾಬರಿಗೊಂಡು ಖುಷಿನೂ ಪಟ್ಟಿದ್ದಾರೆ. ಸಾಮಾನ್ಯವಾಗಿ ನದಿಯಲ್ಲಿ ಸಿಗುವ ಮೀನುಗಳು ಒಂದು ಕೆಜಿ ಯಿಂದ ಅಬ್ಬಬ್ಬಾ ಎಂದರೆ ನಾಲ್ಕು ಐದು ಕೆಜಿ ವರೆಗೆ ತೂಕ ಇರುತ್ತವೆ. ಆದ್ರೆ ಇಂದು ಸಿಕ್ಕ ಮೀನಿನ ಗಾತ್ರ ಬರೋಬ್ಬರಿ 17 ಕೆಜಿ ಇದೆ. ಬೃಹತ್ ಗಾತ್ರದ ಮೀನು ಹಿಡಿಯೋದಕ್ಕೆ ಮೀನುಗಾರು ಹರಸಾಹಸ ಪಟ್ಟಿದ್ದಾರೆ.
ಬರೋಬ್ಬರಿ 17 ಕೆಜಿ ಮೀನು ಹಿಡಿದ ಮೀನುಗಾರರು ಫುಲ್ ಖುಷ್..!
ಕೃಷ್ಣಾ ನದಿಯಲ್ಲಿ ನೂರಾರು ಕುಟುಂಬಗಳು ಮೀನುಗಾರಿಕೆ ಮಾಡುತ್ತವೆ. ಬೆಳಿಗ್ಗೆ ಬಲೆ ಹಾಕಿ ಮಧ್ಯಾಹ್ನ ತೆಗೆಯೋದರಿಂದ ಚಿಕ್ಕ ಚಿಕ್ಕ ಮೀನುಗಳು ಎಲ್ಲ ಸೇರಿ 4 ರಿಂದ 6 ಕೆಜಿ ವರೆಗೆ ಮೀನುಗಳು ಸಿಗುತ್ತವೆ. ಇದರಿಂದ ನಿತ್ಯ 200 ರಿಂದ 500 ವರಿಗೂ ಸಂಪಾದನೆ ಮಾಡುತ್ತಾರೆ. ಕೋಲಾರ ಮತ್ತು ಕೊರ್ತಿ ಗ್ರಾಮ ಸೇರಿ ನೂರಾರು ಜನರು ಮೀನುಗಾರಿಕೆ ಮಾಡುತ್ತಾರೆ. ಕೆಲವೊಮ್ಮೆ ಮೀನುಗಳು ಸಿಗದೆ ಬರಿಗೈಯಲ್ಲಿ ವಾಪಸ್ಸಾಗೋದು ಉಂಟು. ಒಮ್ಮೊಮ್ಮೆ ಜಾಸ್ತಿ ಮೀನುಗಳು ಸಿಕ್ಕು ಹೆಚ್ಚು ಸಂಪಾದನೆ ಮಾಡುತ್ತಾರೆ. ಆದ್ರೆ ಬೃಹತ್ ಗಾತ್ರದ ಅಂದಾಜು 17 ಕೆಜಿ ತೂಕದ ಕಟ್ಲಾ ಎಂಬ ಹೆಸರಿನ ಮೀನು ಸಿಕ್ಕಿದ್ದರಿಂದ ಮೀನುಗಾರರು ಅಚ್ಚರಿಗೊಂಡಿದ್ದಾರೆ.
ಮೀನುಗಾರ ರಮೇಶ್ ಮಡ್ಡಿ ಮಣಿ ಮತ್ತು ಸಾಬು ಮಡ್ಡಿಮಣಿ ಎಂಬುವವರ ಬಲೆಗೆ ಮೀನು ಸಿಕ್ಕಿದೆ. ತಂದೆ ಮಗ ಇಬ್ಬರೂ ಸೇರಿ ಎಂದಿನಂತೆ ಮೀನು ಹಿಡಿಯಲು ಕೃಷ್ಣಾನದಿಗೆ ಇಳಿದಿದ್ದರು ಬೆಳಿಗ್ಗೆ ಹಾಕಿದ್ದ ಬಲೆಯನ್ನು ಚೆಕ್ ಮಾಡುವ ವೇಳೆ ಮೀನು ಪತ್ತೆಯಾಗಿದೆ. ಬಲೆ ಕಿತ್ತುಕೊಂಡು ಹೋಗೋದಕ್ಕೆ ಮೀನು ಪ್ರಯತ್ನ ಮಾಡಿದೆ. ಬಲೆ ಕೂಡ ಹರಿದಿದೆ ಆದರೂ ಮೀನನ್ನು ಹಿಡಿಯುವಲ್ಲಿ ತಂದೆ ಮಗ ಯಶಸ್ವಿಯಾಗಿದ್ದಾರೆ. ದೊಡ್ಡ ದೊಡ್ಡ ಸಮುದ್ರದಲ್ಲಿ ಇಂತಹ ಬೃಹತ್ ಗಾತ್ರದ ಮೀನುಗಳನ್ನು ನೋಡಿದ್ದೆವು ಈಗ ನದಿಯಲ್ಲಿ ಪತ್ತೆಯಾಗಿದೆ. ಬೃಹತ್ ಮೀನು ಸಿಕ್ಕಿದ್ದು ಖುಷಿ ತಂದಿದೆ ಎಂದು ಮೀನುಗಾರ ರಮೇಶ ಖುಷಿ ಹಂಚಿಕೊಂಡಿದ್ದಾನೆ.
(ವರದಿ: ಮಂಜುನಾಥ್ ತಳವಾರ)
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ